Ultimate magazine theme for WordPress.

bone health tips 100 ವರ್ಷ ದವರೆಗೂ ಬರಲ್ಲ

0 13,647

bone health tips ಆರೋಗ್ಯವನ್ನು ಉತ್ತಮ ಪಡಿಸಲು, ಆಕ್ಟಿವ್ ಆಗಿರಲು, ರೋಗನಿರೋಧಕಶಕ್ತಿಯನ್ನು ಹೆಚ್ಚು ಮಾಡಲು, ಕೂದಲು ಉದುರುವಿಕೆಯನ್ನು ತಡೆಗಟ್ಟಲು, ಮೂಳೆಯನ್ನ ಗಟ್ಟಿಮಾಡಲು, ಸೋಮಾರಿ ತನವನ್ನು ದೂರಮಾಡಲು ಪವರ್ಫುಲ್ ಮನೆಮದ್ದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ. ಐದು ಬಾದಾಮಿಯನ್ನು ತೆಗೆದುಕೊಳ್ಳಿ ಅದರಲ್ಲಿ ಕ್ಯಾಲ್ಸಿಯಂ, ಮೆಗ್ನೇಷಿಯಂ,

ಕಾಪರ್, ವಿಟಮಿನ್ ಕೆ, ಪ್ರೊಟೀನ್, ಜಿಂಕ್ ಹೀಗೆ ಎಲ್ಲಾ ರೀತಿಯ ನ್ಯೂಟ್ರಿಯನ್ಸ್ಗಳು ಇವೆ. ಈ ಎಲ್ಲಾ ಅಂಶಗಳು ನಮ್ಮ ಮೂಳೆಗಳು ಗಟ್ಟಿಯಾಗಲು ಸಹಾಯ ಮಾಡುತ್ತವೆ. ಬಾದಾಮಿಯನ್ನು ಒಳ್ಳೆಯ ಕೊಲೆಸ್ಟ್ರಾಲ್ ಎಂದು ಹೇಳಬಹುದು ಏಕೆಂದರೆ ಕೊಲೆಸ್ಟ್ರಾಲ್ಅನ್ನು ಮೇಂಟೈನ್ ಮಾಡುತ್ತದೆ. ಸಕ್ಕರೆ ಕಾಯಿಲೆ ಮತ್ತು ರಕ್ತದ ಒತ್ತಡ ಇರುವವರಿಗೆ ಕೂಡ ತುಂಬಾ ಒಳ್ಳೆಯದು.

ಹೃದಯದ ಆರೋಗ್ಯಕ್ಕೂ ಒಳ್ಳೆಯದು. ಐದು ಬಾದಾಮಿಯ ಜೊತೆ ಎರಡು ಗೋಡಂಬಿಯನ್ನು ತೆಗೆದುಕೊಳ್ಳೋಣ. ಗೋಡಂಬಿಯು ನಿಶ್ಯಕ್ತಿಯನ್ನು ಕಡಿಮೆಮಾಡುತ್ತದೆ. ಮತ್ತು ಗಸಗಸೆಯನ್ನು ತೆಗೆದುಕೊಳ್ಳೋಣ. ಗಸಗಸೆಯು ನಮ್ಮ ಮೂಳೆಗಳನ್ನು ಗಟ್ಟಿ ಮಾಡುತ್ತದೆ. ಯಾರಿಗೆ ನಿದ್ರಾಹೀನತೆ ಇದೆ ಅಂತಹವರಿಗೆ ನಿದ್ರೆ ಬರುತ್ತದೆ ಮತ್ತು ನಮ್ಮ ಮೈಂಡ್ ಅನ್ನು ಕೂಲಾಗಿ ಇರುವಂತೆ ಮಾಡುತ್ತದೆ. bone health tips

ಕೆಲವರಿಗೆ ಸ್ವಲ್ಪ ಟೆನ್ಷನ್ ಮಾಡಿಕೊಂಡರೂ ತಲೆ ನೋವು ಬರುತ್ತಿರುತ್ತದೆ ಅಂತಹವರು ಗಸಗಸೆಯನ್ನು ಬಳಸುತ್ತಾ ಬಂದರೆ ತಲೆನೋವು ಕಡಿಮೆಯಾಗುತ್ತದೆ. ಅದರಲ್ಲೂ ಗಸಗಸೆ ಮಹಿಳೆಯರಿಗೆ ತುಂಬಾ ಒಳ್ಳೆಯದು. ಜೊತೆಗೆ ಒಣಕೊಬ್ಬರಿಯನ್ನು ತೆಗೆದುಕೊಳ್ಳೋಣ, ಒಣಕೊಬ್ಬರಿಯು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಮ್ಮ ಮೂಳೆಗಳನ್ನು ಸ್ಟ್ರಾಂಗ್ ಮಾಡುತ್ತದೆ ಮತ್ತು ಎನರ್ಜಿಯನ್ನು ಕೊಡುತ್ತದೆ.

ನಮ್ಮ ಇಡೀ ದೇಹ ಮ್ಯಾಯಿಶ್ಚರಾಗಿಲು ಸಹಾಯ ಮಾಡುತ್ತದೆ. ಕೈಕಾಲುಗಳಲ್ಲಿ ನೋವು ಬರುತ್ತಿದ್ದರೆ ಅದನ್ನೆಲ್ಲಾ ಕಡಿಮೆ ಮಾಡುವ ಗುಣ ಈ ಒಣಕೊಬ್ಬರಿಗೆ ಇದೆ. ಎರಡು ಪೀಸ್ ಒಣಕೊಬ್ಬರಿಯನ್ನು ತೆಗೆದುಕೊಳ್ಳೋಣ, ಸ್ವಲ್ಪ ಪ್ರಮಾಣದಲ್ಲಿ ಜಾಯಿಕಾಯಿಯನ್ನು ತೆಗೆದುಕೊಳ್ಳೋಣ. ಜಾಯಿಕಾಯಿಯಲ್ಲಿ ಆಂಟಿಆಕ್ಸಿಡೆಂಟ್ ಇದೆ. ಇದು ಕ್ಯಾನ್ಸರ್, ಹಾರ್ಟ್ ಪ್ರಾಬ್ಲಂ, ಲಿವರ್ ಸಮಸ್ಯೆಗಳು ಬರದ ಹಾಗೇ ಮಾಡುತ್ತದೆ. bone health tips

ನಂತರ ಖರ್ಜೂರವನ್ನು ತೆಗೆದುಕೊಳ್ಳೋಣ, ಖರ್ಜೂರದಲ್ಲಿ ಮೈಕ್ರೋನ್ಯೂಟ್ರಿಯನ್ಸ್ಗಳು ಇವೆ. ಇದು ನಮ್ಮ ಮೂಳೆಯನ್ನು ಗಟ್ಟಿಮಾಡಲು ನರದ ದೌರ್ಬಲ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಮಕ್ಕಳಿಗೆ ಕೊಡಲೇಬೇಕು. ಖರ್ಜೂರದಲ್ಲಿ ಕಬ್ಬಿಣದ ಅಂಶವಿದೆ. ಯಾರಲ್ಲಿ ರಕ್ತಹೀನತೆ ಇದೆ ಅವರು ಖರ್ಜೂರವನ್ನು ತಿನ್ನಲೇಬೇಕು. ಅದರಲ್ಲೂ ವಯಸ್ಸಾದವರಿಗೆ ಮೂಳೆ ಸವಕಳಿಯಾಗಬಾರದೆಂದರೆ ಖರ್ಜೂರವನ್ನು ತಿನ್ನುತ್ತಲೇ ಇರಬೇಕು. ಎರಡು ಖರ್ಜೂರವನ್ನು ತೆಗೆದುಕೊಳ್ಳೋಣ.

ಈ ಎಲ್ಲಾ ಪದಾರ್ಥಗಳಿಗೆ ನೀರನ್ನು ಹಾಕಿ ನೆನಸಿ ಇಡಬೇಕು. ಎರಡು ಗಂಟೆ ಈ ಪದಾರ್ಥ ನೆನೆದರೂ ಸಾಕು. ರಾತ್ರಿ ನೆನೆಸಿಟ್ಟರೆ ಒಳ್ಳೆಯದು. ಇದನ್ನು ಮಿಕ್ಸಿಯಲ್ಲಿ ಚೆನ್ನಾಗಿ ಪೇಸ್ಟ್ ತಯಾರಿ ಮಾಡಿಕೊಳ್ಳಬೇಕು. ನಂತರ ಸ್ಟವ್ ಮೇಲೆ ಒಂದು ಲೋಟ ಹಾಲನ್ನು ಹಾಕಿ ಬಿಸಿ ಮಾಡಿಕೊಳ್ಳಬೇಕು. ಇದಕ್ಕೆ ತಯಾರಿ ಮಾಡಿಕೊಂಡ ಪೇಸ್ಟ್ಅನ್ನು ಸೇರಿಸಬೇಕು. ಈ ಪೇಸ್ಟ್ ಹಾಕಿದ ಮೇಲೆ ಒಂದು ಸಲ ಕುದಿ ಬಂದರೆ ಸಾಕು, ಖರ್ಜೂರವನ್ನು ಸೇರಿಸಿರುವುದರಿಂದ ಸಿಹಿ ಸಾಕಾಗುತ್ತದೆ.

ಇದಕ್ಕೆ ಇನ್ನು ಸ್ವಲ್ಪ ಸಿಹಿ ಬೇಕಾದರೆ ಕಲ್ಲು ಸಕ್ಕರೆಯನ್ನು ಸೇರಿಸಬಹುದು. ಬಿಸಿಯಾಗಿರುವಾಗಲೇ ಈ ಹಾಲನ್ನು ಕುಡಿದರೆ ಒಳ್ಳೆಯದು. ಪದೇ ಪದೇ ಸುಸ್ತು, ಸೊಂಟನೋವು ಬರುತ್ತಿದ್ದರೆ ಈ ಹಾಲು ತುಂಬಾ ಒಳ್ಳೆಯದು. ಮಕ್ಕಳ ಮೂಳೆ ಗಟ್ಟಿಯಾಗಲು, ಮೆದುಳಿನ ಬೆಳವಣಿಗೆಗೆ ತುಂಬಾ ಒಳ್ಳೆಯದು. ಈ ಹಾಲನ್ನು ಬೆಳಿಗ್ಗೆ ಇಲ್ಲವೇ ರಾತ್ರಿ ಊಟ ಆದ ನಂತರ ಮಲಗುವ ಅರ್ಧ ಗಂಟೆ ಮುನ್ನ ಕುಡಿದರು ಒಳ್ಳೆಯದು. ಇನ್ನು ಈ ಹಾಲನ್ನು ಎಷ್ಟು ದಿವಸ ಬೇಕಾದರೂ ಕುಡಿಯಬಹುದು. ಇದು ಕಣ್ಣು, ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. bone health tips

Leave A Reply

Your email address will not be published.