Ultimate magazine theme for WordPress.

lucky indoor plants ಈ ಅದೃಷ್ಟದ ಸಸ್ಯಗಳು ಮನೆಯಲ್ಲಿದ್ದರೆ

0 3,689

lucky indoor vastu plants astrology ಮನೆಯಲ್ಲಿ ಯಾವ ಗಿಡಗಳನ್ನ ಇಡುವುದರಿಂದ ಲಕ್ಷ್ಮಿ ಆಕರ್ಷಣೆ ಮಾಡಬಹುದು? ಮನೆಯಲ್ಲಿ ಯಾವ ಗಿಡಗಳನ್ನ ಇಟ್ಟರೇ ಲಕ್ಷ್ಮಿ ಹೊರಟು ಹೋಗುತ್ತಾಳೆ? ಈ ಗಿಡಗಳನ್ನ ನಿಮ್ಮ ಮನೆಯಿಂದ ಯಾರಿಗೂ ಕೊಡಬೇಡಿ ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ.ಪ್ರಕೃತಿಯಲ್ಲಿ ಗಿಡಮರ ಪಾತ್ರಗಳ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ.

ಮನುಷ್ಯರ, ಪ್ರಾಣಿ, ಪಕ್ಷಿಗಳ ಉಸಿರಾಟ ಸಾಧ್ಯವಿಲ್ಲವೆಂದು ಹೇಳಬಹುದು. ಪ್ರಕೃತಿಯಲ್ಲಿ ಪ್ರಾಣಿಗಳ ಉಳಿವಿಗೆ ಜೀವಜಲದಂತಿರುವ ಹಸಿರು ಸಸ್ಯಗಳ ಬಗ್ಗೆ ಏಕೆ ಇಷ್ಟೊಂದು ವಿವರಣೆ ಏಕೆಂದರೆ ಈ ಸಸ್ಯಗಳಲ್ಲಿ ಕೆಲವು ನಿಮ್ಮ ಮನೆಯಲ್ಲಿದ್ದರೇ ಲಕ್ಷ್ಮಿ ಆಕರ್ಷಣೆಯನ್ನು ಮಾಡುತ್ತದೆ. ಎಷ್ಟೋ ಸಲ ನಾವು ನಮ್ಮ ಮನೆಯನ್ನ ಸಣ್ಣ ಗಿಡಗಳಿಂದ ಅಲಂಕಾರ ಮಾಡುತ್ತೇವೆ. lucky

ಅದರಲ್ಲೂ ನಮಗೆ ಯಾರಾದರೂ ಉಡುಗೊರೆಯಾಗಿ ಕೊಟ್ಟಂತಹ ಮತ್ತು ನಾವೇ ತಂದಂತಹ ಅಲಂಕಾರಿಕ ಸಸ್ಯಗಳನೆಲ್ಲಾ ತಪ್ಪಾದ ದಿಕ್ಕಿನಲ್ಲಿಟ್ಟು ತೊಂದರೆಗಳನ್ನ ಮೈಮೇಲೆ ಎಳೆದುಕೊಳ್ಳುತ್ತೇವೆ. ಇದರ ಬಗ್ಗೆ ನೀವು ಯೋಚನೆ ಮಾಡಿರೋದೇ ಇಲ್ಲ. ವಾಸ್ತುಶಾಸ್ತ್ರದಲ್ಲಿ ಅಲಂಕಾರಿಕ ಸಸ್ಯಗಳನ್ನ ಎಲ್ಲಿ ಇಡಬೇಕು? ಎಲ್ಲಿ ಇಡಬಾರದು? ಎಲ್ಲಿ ಇಟ್ಟರೇ ಹಣ ಬರುತ್ತದೆ?

ಎಲ್ಲಿ ಇಟ್ಟರೆ ಧನಹಾನಿ ಎಂದು ಹೇಳುತ್ತಾರೆ. ಮೊದನೆಯದಾಗಿ ಮುಳ್ಳಿನ ಗಿಡಗಳಲ್ಲಿ ತುಂಬಾ ಫೇಮಸ್ ಆಗಿರುವ ಸಸ್ಯ ಕ್ಯಾಕ್ಟಸ್. ಈ ಸಸ್ಯವನ್ನ ಮನೆಯಲ್ಲಿ ಅಥವಾ ಆಫೀಸ್ ನಲ್ಲಿ ಇಟ್ಟುಕೊಳ್ಳುವುದಕ್ಕೆ ತುಂಬಾ ಜನರು ಇಷ್ಟಪಡುತ್ತಾರೆ. ವಾಸ್ತುಪ್ರಕಾರ ಈ ಗಿಡವನ್ನು ಇಟ್ಟುಕೊಳ್ಳಬಾರದು. ಏಕೆಂದರೆ ಈ ಮುಳ್ಳಿನ ಗಿಡ ರಾಹುವನ್ನ ಆಕರ್ಷಣೆ ಮಾಡುತ್ತದೆ lucky

ಮತ್ತು ನಮ್ಮ ಅಕ್ಕಪಕ್ಕ ನೆಗೆಟಿವ್ ಎನರ್ಜಿಯನ್ನು ಹುಟ್ಟುಹಾಕುತ್ತದೆ ಮತ್ತು ನಿಮ್ಮ ಮನಸ್ಸಿನ ಮೇಲೆಯೂ ತುಂಬಾ ನೆಗೆಟಿವ್ ಪ್ರಭಾವವನ್ನು ಬೀರುತ್ತದೆ. ಇಂತಹ ಗಿಡಗಳು ಮನಸ್ಸಿನಲ್ಲಿ ಆಕ್ರೋಶವನ್ನು ಬೆಳೆಸುತ್ತದೆ. ಏಳಿಗೆಗೆ ಅಡ್ಡಗಾಲನ್ನು ಹಾಕುತ್ತವೆ. ನಿಮಗೆ ನೀವು ಸ್ವತಃ ನಿರ್ಣಯವನ್ನು ತೆಗೆದುಕೊಳ್ಳುವಂತಹದ್ದನ್ನು ಕಡಿಮೆಮಾಡುತ್ತಾ ಹೋಗುತ್ತದೆ. ಒಂದೊಂದು ಸಲ ನೀವು ಮಾಡಿರುವಂತಹ ನಿರ್ಣಯ ಕೂಡ ತಪ್ಪಾಗಿ

ನಿಮ್ಮ ಜೀವನದಲ್ಲಿ ಕಷ್ಟವನ್ನು ಎದುರಿಸಬೇಕಾಗುತ್ತದೆ. ಮನೆಯಲ್ಲಿ ತುಂಬಾ ಜಗಳ ಶುರುವಾಗುತ್ತದೆ. ಇಂತಹ ಮುಳ್ಳಿನ ಗಿಡಗಳನ್ನು ಯಾವತ್ತೂ ಮನೆಯಲ್ಲಿಟ್ಟುಕೊಳ್ಳಬಾರದು. ಕೆಲವೊಂದು ಸಾರಿ ನಿಮ್ಮನ್ನು ಕಷ್ಟದಲ್ಲಿ ನೂಕುವುದಕ್ಕೆ ಜನ ನಿಮಗೆ ಬೇಕು ಎಂದು ಈ ಗಿಡವನ್ನು ನಿಮಗೆ ಕೊಡುತ್ತಾರೆ. ಆ ಸಮಯದಲ್ಲಿ ನೀವು ಇಂತಹ ಗಿಫ್ಟ್ ಗಳನ್ನು ತೆಗೆದುಕೊಳ್ಳಬೇಡಿ.

ಎರಡನೇಯದು ಮಿಲಿ ಹೂವಿನ ಗಿಡ. ಈ ಗಿಡವೂ ತುಂಬಾನೇ ಸುಂದರವಾಗಿ ಮತ್ತು ಗುಲಾಬಿ ಕಲರ್ ನಲ್ಲಿ ಇರುತ್ತದೆ. ಇದರ ಎಲೆಗಳಲ್ಲಿ ಒಂದು ಬಿಳಿಯಾದಂತಹ ದ್ರವ್ಯ ಬರುತ್ತದೆ. ಈ ಮಿಲಿ ಗಿಡದ ಹೂವು ಪಾತಾಳದಲ್ಲಿ ಸಿಗುವಂತಹದ್ದುಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಪಾತಾಳದಲ್ಲಿರುವ ದಾನವರಿಗೆ ಅತೀಪ್ರಿಯವಾದಂತಹ ಹೂವು ಇದಾಗಿದೆ.

ನಾವು ಈ ಸಸ್ಯವನ್ನು ಮನೆಯಲ್ಲಿಟ್ಟುಕೊಂಡರೇ ಮನೆಯ ವಾತಾವರಣ ನೆಗೆಟಿವ್ ಆಗುತ್ತದೆ. ಅಲ್ಲದೇ ಇದೇ ಗಿಡವನ್ನು ನಾವು ಯಾರಿಗಾದರೂ ಕೊಟ್ಟರೂ ಅಥವಾ ನಾವು ಇದನ್ನು ಯಾರ ಹತ್ತಿರವಾದರೂ ತೆಗೆದುಕೊಂಡರೂ ಕೂಡ ನಮ್ಮಲ್ಲಿ ನೆಗೆಟಿವ್ ಹೆಚ್ಚಾಗಿ ಆರ್ಥಿಕ ಸ್ಥಿತಿ ಹದಗೆಡುತ್ತದೆ, ಸಾಲ ಹೆಚ್ಚಾಗುತ್ತದೆ.
ಮನಿಪ್ಲಾಂಟ್ ಗಿಡವು ಹೆಸರೇ ಸೂಚಿಸುವಂತೆ ಹಣದ ಗಿಡವಾಗಿದೆ. lucky

ಈ ಗಿಡವು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುವುದಕ್ಕೆ ಪಾಸಿಟಿವ್ ಎನರ್ಜಿಯನ್ನು ನೀಡುತ್ತದೆ. ವಾಸ್ತುಶಾಸ್ತ್ರದಲ್ಲಿ ಮನಿಪ್ಲಾಂಟ್ ಅನ್ನು ಬಹಳ ವಿಶೇಷವಾಗಿ ಪರಿಗಣಿಸಲಾಗಿದೆ. ಮನಿಪ್ಲಾಂಟ್ ಇಡುವ ದಿಕ್ಕು ಸರಿಯಾಗಿದ್ದರೇ ನಿಮ್ಮ ಪರ್ಸ್, ವ್ಯಾನಿಟಿ ಬ್ಯಾಗ್, ಹಣ ಇಡುವಂತಹ ಸ್ಥಳ ದುಡ್ಡಿನಿಂದ ತುಂಬಿರುತ್ತದೆಂದು ಹೇಳಲಾಗುತ್ತದೆ. ಮನಿಪ್ಲಾಂಟ್ ಗಿಡವನ್ನು ಆಗ್ನೇಯ ದಿಕ್ಕಿನಲ್ಲಿಡಬೇಕು. lucky

ಆಸಕ್ತಿಕರ ವಿಷಯವೇನೆಂದರೆ ಈ ಗಿಡವನ್ನು ನಾವಾಗಿಯೇ ಖರೀದಿ ಮಾಡಿ ತಂದರೇ ಇದರ ಪ್ರಭಾವ ಇರುವುದಿಲ್ಲ. ಈ ಗಿಡವನ್ನು ಕದ್ದು ತಂದರೇ ಅದರ ಶುಭ ಪರಿಣಾಮ ಕೊಡುತ್ತದೆಂಬ ಮಾತಿದೆ. ಇದರ ಎಲೆ ಮುರಿದರೂ ಕೂಡ ಏನೂ ನಷ್ಟವಾಗುವುದಿಲ್ಲ. ಈ ಗಿಡವನ್ನು ನಾವು ಯಾರಿಗೂ ಕೊಡಬಾರದು ಮತ್ತು ತೆಗೆದುಕೊಳ್ಳಬಾರದು. ನಮ್ಮ ಮನೆಗೆ ಲಕ್ಷ್ಮಿದೇವಿಯನ್ನು ಆಕರ್ಷಿಸಲು ಒಂದು ಗಿಡವನ್ನು ತಪ್ಪದೇ ಇಟ್ಟುಕೊಳ್ಳಬೇಕು. lucky

ಅದು ಯಾವುದು ಎಂದರೆ ತುಳಸಿಗಿಡ. ತುಳಸಿ ಗಿಡ ಇದ್ದಲ್ಲಿ ಶ್ರೀಮನ್ನಾರಾಯಣಾ ಇದ್ದೇ ಇರುತ್ತಾನೆ. ಶ್ರೀಮನ್ನಾರಾಯಣಾ ಇದ್ದಲ್ಲಿ ಶ್ರೀ ಲಕ್ಷ್ಮಿಮಾತೇ ಬಂದೇ ಬರುತ್ತಾಳೆ. ಹಾಗಾಗಿ ಜೀವನದಲ್ಲಿ ಎಂದಿಗೂ ಹಣದ ಕೊರೆತೆಯಾಗಬಾರದೆಂದು ಬಯಸುವವರು ಮನೆ ಎದುರು ತುಳಸಿ ಗಿಡವನ್ನು ನೆಡಲೇಬೇಕು ಮತ್ತು ಪ್ರತಿದಿನ ಅದರ ಮುಂದೆ ಸಂಜೆ ದೀಪವನ್ನು ಬೆಳಗಿಸಲು ಮರೆಯಬೇಡಿ.

ದಿನನಿತ್ಯ ಲಕ್ಷ್ಮಿ ಅಷ್ಟೋತ್ತರ ನಾಮ ಓದುವುದು ಅತ್ಯಂತ ಶ್ರೇಷ್ಠ. ಮಾತೇ ಮಹಾಲಕ್ಷ್ಮಿಯನ್ನು ಆಕರ್ಷಿಸುವಂತಹ ಮತ್ತೊಂದು ಸಸ್ಯವೆಂದರೆ ಜಡ್ ಸಸ್ಯ. ಇದು ಸಣ್ಣ ದುಂಡಗಿನ ಎಲೆಯೊಂದಿಗೆ ಮನೆಗೆ ಪಾಸಿಟಿವ್ ಎನರ್ಜಿಯನ್ನು ನೀಡುತ್ತದೆ. ಇದನ್ನು ಅದೃಷ್ಟದ ಸಸ್ಯವೆಂದು ಕರೆಯಲಾಗುತ್ತದೆ. ಈ ಅದೃಷ್ಟದ ಸಸ್ಯವನ್ನು ಮನೆ ಅಥವಾ ಕಛೇರಿಯಲ್ಲಿ ಇರಿಸಬಹುದು. lucky

ಜಡ್ ಸಸ್ಯ ನಮ್ಮ ಜೀವನದಲ್ಲಿ ಬೆಳವಣಿಗೆ ಮತ್ತು ಏಳಿಗೆಯನ್ನು ಸಂಕೇತಿಸುತ್ತದೆ. ಬಾತ್ ರೂಂನಲ್ಲಿ ಜಡ್ ಸಸ್ಯವನ್ನು ಇಡಬಾರದು. ಇದು ಸಿಕ್ಕಪಟ್ಟೆ ನೆಗೆಟಿವ್ ಪರಿಣಾಮವನ್ನು ಕೊಡಬಾರದು. ಮನೆಯ ಹೊರಗಡೆ ಅಥವಾ ಹಾಲ್ ನಲ್ಲಿ ಈ ಗಿಡವನ್ನು ಇಡಬಹುದು. ಅರೆಕಾಪಾಂ ಸಸ್ಯಗಳು ಆರೋಗ್ಯ, ಶಾಂತಿ, ಸಂಮೃದ್ಧಿಗೆ ಕಾರಣವಾಗುತ್ತವೆ.

ಮನೆಯಲ್ಲಿರುವ ನೆಗೆಟಿವ್ ಎನರ್ಜಿಯನ್ನು ಹೋಗಲಾಡಿಸುತ್ತದೆ ಮತ್ತು ಧನಾತ್ಮಕತೆಯನ್ನು ಆಕರ್ಷಿಸುತ್ತದೆ. ಈ ಅರೆಕಾಪಾಂ ಎಲೆಯನ್ನ ಮನೆಯಲ್ಲಿ ಎಲ್ಲಿ ಬೇಕಾದರೂ ಇಡಬಹುದು. ಈ ಸಸ್ಯಗಳು ಮಾಲಿನ್ಯಕಾರಕಗಳನ್ನು ತೆಗೆದುಹಾಕುವಂತಹ ಸಾಮರ್ಥ್ಯವನ್ನು ಹೊಂದಿವೆ. ಜೋಳದ ಸಸ್ಯ ಅಥವಾ ಪಾರ್ಚೂನ್ ಸಸ್ಯವನ್ನು ಸಾಮಾನ್ಯವಾಗಿ ಅದೃಷ್ಠಕ್ಕಾಗಿ ಬೆಳೆಸುವಂತಹ ಸಸ್ಯ.

ಈ ಸಸ್ಯವು ಒಳಾಂಗಣ ಸಸ್ಯವಾಗಿದ್ದು ನಿಮಗೆ ಅದೃಷ್ಠವನ್ನು ತಂದುಕೊಡುತ್ತವೆ. ಏಷ್ಯಾದ ದೇಶಗಳಲ್ಲಿ ಜೋಳದ ಗಿಡಗಳನ್ನು ಅದೃಷ್ಠದ ಸಂಕೇತವೆಂದು ಹೇಳಲಾಗುತ್ತದೆ. ಮನೆಯಲ್ಲಿ ಸಸ್ಯ ಹರಳಿದರೇ ಸಂಪತ್ತು, ಅದೃಷ್ಠವನ್ನು ಪಡೆಯುತ್ತಾರೆ. ಕಾರ್ನ್ ಸಸ್ಯಗಳು ಗಾಳಿಯಿಂದ ಕೆಟ್ಟ ಅಂಶಗಳನ್ನು ತೆಗೆದು ಹಾಕುವುದರಿಂದ ಗಾಳಿಯನ್ನು ಶುದ್ಧೀಕರಿಸುತ್ತದೆ. lucky

Leave A Reply

Your email address will not be published.