Monday Born ಹುಟ್ಟಿನಿಂದಲೇ ಇಂತಹ ಅತೀಂದ್ರಿಯ ಶಕ್ತಿಗಳು
Monday Born Secrets ಸೋಮವಾರ ಹುಟ್ಟಿದವರ ಲಕ್ಷಣಗಳು ಹೇಗಿರುತ್ತದೆ? ಇವರು ಯಾವ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಕಾಣುತ್ತಾರೆ? ಇವರು ಆರೋಗ್ಯಕ್ಕೆ ಸಂಬಂಧಪಟ್ಟಂತೆ ಯಾವ ರೀತಿ ಜಾಗೃತಿಯನ್ನು ವಹಿಸಬೇಕಾಗುತ್ತದೆ? ಇವರ ಅದೃಷ್ಠ ಸಂಖ್ಯೆ ಯಾವುದು? ಇವರು ಯಾವ ದಿನ ಕೆಲಸವನ್ನು ಪ್ರಾರಂಭ ಮಾಡಿದರೇ ಒಳಿತಾಗುತ್ತದೆ? ಇವರು ಯಾವ ದೇವರನ್ನು ಪೂಜೆ ಮಾಡಬೇಕು? ಇವೆಲ್ಲವನ್ನೂ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. Monday Born
ಸೋಮವಾರ ಹುಟ್ಟಿದವರ ಲಕ್ಷಣಗಳೇನೆಂದರೆ ಇವರಿಗೆ ವಾಕ್ ಚಾತುರ್ಯ ತುಂಬಾ ಹೆಚ್ಚಾಗಿರುತ್ತದೆ. ಮಾತಿನಲ್ಲಿ ಚತುರತೆ ಇರುವುದರಿಂದ ಬೇರೆಯವರನ್ನು ಸುಲಭವಾಗಿ ಮೋಡಿ ಮಾಡುವ ಸ್ವಭಾವ ಇವರದಾಗಿರುತ್ತದೆ. ಹಾಗೆಯೇ ಬೇರೆಯವರ ಮನಸ್ಸು ಯಾವ ರೀತಿ ಇರುತ್ತದೆಯೋ ಅದೇ ರೀತಿ ಮಾತನಾಡುವ ವಾಕ್ ಚಾತುರ್ಯವನ್ನು ಹೊಂದಿರುತ್ತಾರೆ, Monday
ಆದ್ದರಿಂದ ತುಂಬಾ ಜನರನ್ನು ಇವರತ್ತ ಆಕರ್ಷಣೆ ಮಾಡುತ್ತಾರೆ. ಇವರಿಗೆ ಹೆಚ್ಚು ಜ್ಞಾನವಿರುವುದರಿಂದ ಎಷ್ಟೇ ಕಷ್ಟದ ಕೆಲಸ ಕೊಟ್ಟರೂ ಅದನ್ನು ಸುಲಭವಾಗಿ ಮಾಡಿ ಮುಗಿಸುತ್ತಾರೆ. ಇವರು ಬೇಗ ಯಾರನ್ನು ನಂಬುವುದಿಲ್ಲ, ಒಂದು ಸಾರಿ ನಂಬಿದರೇ ಅವರನ್ನೇ ಅವರ ಜೀವನದಲ್ಲೇ ಮರೆಯುವುದಿಲ್ಲ. ಅವರಿಗೋಸ್ಕರ ಏನನ್ನಾದರೂ ಮಾಡಲು ತಯಾರು ಇರುತ್ತಾರೆ. Monday Born
ಇವರಿಗೂ ಸಹ ಒಳ್ಳೆಯ ಸ್ನೇಹಿತರು ಇರುತ್ತಾರೆ. ಇವರಿಗೇ ವಿಷಯಗಳ ತಿಳಿದುಕೊಳ್ಳುವ ಆಸಕ್ತಿಯೂ ಹೆಚ್ಚಾಗಿರುತ್ತದೆ. ಇವರು ಏಕಾಂತವಾಗಿ ಇರಲು ಇಷ್ಟಪಡುತ್ತಾರೆ. ಸ್ವಚ್ಛತೆಯ ಕಡೆಗೆ ಹೆಚ್ಚು ಗಮನ ಕೊಡುತ್ತಾರೆ. ಇವರಿಗೆ ಅತೀಂದ್ರಿಯ ಶಕ್ತಿಗಳು ತುಂಬಾ ಹೆಚ್ಚಾಗಿರುತ್ತದೆ. ಇವರು ಪ್ರತಿ ವಿಷಯ ಮತ್ತು ಕೆಲಸಗಳನ್ನು ಪ್ರತಿ ಮೂಲೆ ಮೂಲೆಗಳಲ್ಲೂ ಸಹ ಆಲೋಚನೆ ಮಾಡಿ ಆ ಕೆಲಸಗಳನ್ನ ಮಾಡುತ್ತಾರೆ. Monday Born
ಇವರು ಯಾವಾಗಲೂ ಭವಿಷ್ಯ ಮತ್ತು ಭೂತಕಾಲದ ವಿಷಯಗಳನ್ನ ಸ್ಮರಿಸುತ್ತಿರುತ್ತಾರೆ. ಇವರು ಚಂಚಲ ಸ್ವಭಾವದವರಾಗಿರುವುದರಿಂದ ಇವರ ಮನಸ್ಸು ಒಂದು ಕಡೆ ನಿಲ್ಲೋದಿಲ್ಲ. ಜೊತೆಗೆ ಒಂದೇ ಕಡೆ ಒಂದು ಕೆಲಸ ಮಾಡುವುದಿಲ್ಲ. ಬೇರೆ ಬೇರೆ ರೀತಿಯಾಗಿ ಬೇರೆ ಬೇರೆ ಕೆಲಸ ಮತ್ತು ಆಲೋಚನೆಯನ್ನು ಮಾಡುತ್ತಿರುತ್ತಾರೆ. ಯಾವಾಗಲೂ ಕನಸುಗಳನ್ನ ಕಾಣುತ್ತಾ ಇವರದೇ ಆದ ಲೋಕದಲ್ಲಿ ಜೀವಿಸುತ್ತಾರೆ. ಆ ಕನಸ್ಸುಗಳನ್ನ ನನಸು ಮಾಡಿಕೊಳ್ಳಲು ಕಷ್ಟವನ್ನು ಪಡುವವರಾಗಿರುತ್ತಾರೆ. Monday Born
ಇವರು ಯಾವ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಕಾಣುತ್ತಾರೆಂದರೆ ಹಾಲಿನ ವ್ಯಾಪಾರ ಚೆನ್ನಾಗಿ ಆಗಿಬರುತ್ತದೆ. ಹತ್ತಿ ವ್ಯಾಪಾರ, ಕೂಲ್ ಡ್ರಿಂಗ್ಸ್, ಕಾಫಿ, ಟೀ ವ್ಯಾಪಾರ ಏಳಿಗೆ ತರುತ್ತದೆ. ಹಾಗೆಯೇ ಇವರಿಗೆ ಕಲಾ ಕ್ಷೇತ್ರ ಒಗ್ಗುತ್ತದೆ ಇದರಲ್ಲಿ ಅಭಿವೃದ್ಧಿಯನ್ನು ಕಾಣುತ್ತಾರೆ. ರಚನೆಕಾರರಾಗುವ ಅವಕಾಶಗಳು ಇವರಿಗೆ ಬರುತ್ತದೆ.
ಆರೋಗ್ಯದ ಬಗ್ಗೆ ಯಾವ ರೀತಿಯ ಜಾಗೃತೆಯನ್ನು ವಹಿಸಬೇಕೆಂದರೆ
ನರಕ್ಕೆ ಸಂಬಂಧಪಟ್ಟಂತೆ ಹೆಚ್ಚು ಜಾಗೃತೆವಹಿಸಿದರೆ ಒಳ್ಳೆಯದು. ಸೋಮವಾರಕ್ಕೆ ಅಧಿಪತಿಯು ಚಂದ್ರನಾಗಿರುವುದರಿಂದ, ಚಂದ್ರನು ಮಹಾಲಕ್ಷ್ಮಿದೇವಿಯನ್ನು ಪೂಜಿಸುತ್ತಿರುತ್ತಾನೆ. ಸೋಮವಾರ ಹುಟ್ಟಿದವರು ಲಕ್ಷ್ಮಿದೇವಿಯನ್ನು ಆರಾಧನೆ ಮಾಡಿದರೇ ಒಳ್ಳೆಯದು. ನೀವು ಮನೆಯಿಂದ ಹೊರಗಡೆ ಹೋಗಬೇಕಾದರೇ ಓಂ ಶ್ರೀಂ ನಮಃ ಎಂಬ ಮಂತ್ರವನ್ನು 11 ಸಲ ಹೇಳಿಕೊಂಡು ಮನೆಯಿಂದ ಹೊರಗಡೆ ಹೋದರೇ ಒಳಿತಾಗುತ್ತದೆ. Monday Born