Ultimate magazine theme for WordPress.

Top 10 ರಾಜ್ಯದಲ್ಲಿ ಹೆಚ್ಚು ದುಡಿಯುವ 10 ದೇವರು ಯಾರು?

0 153

Top 10 temples with Highest Revenue ರಾಜ್ಯದಲ್ಲಿ ಹೆಚ್ಚು ದುಡಿಯುವ 10 ದೇವರು ಯಾರು?ರಾಜ್ಯದಲ್ಲಿ ಹೆಚ್ಚು ಆದಾಯ ಇರುವ ದೇಗುಲಗಳು ಯಾವುವು? ಸರ್ಕಾರದ ಬೊಕ್ಕಸಕ್ಕೆ ದೇವಸ್ಥಾನಗಳಿಂದ ಎಷ್ಟು ಕೋಟಿ ಹರಿದು ಬರುತ್ತಿದೆ? ಆದಾಯದಲ್ಲಿ ಟಾಪ್ 10 ಸ್ಥಾನವನ್ನು ಹೊಂದಿರುವ ದೇವಾಲಯಗಳು ಯಾವುವು? ಎಲ್ಲವನ್ನೂ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ನಮ್ಮ ರಾಜ್ಯದಲ್ಲಿ ಇತಿಹಾಸ ಪ್ರಸಿದ್ಧವಾದ ದೇವಾಲಯಗಳು ಇವೆ. ಹಲವು ದೇವಾಸ್ಥಾನಗಳು ಇತಿಹಾಸದಿಂದ ಪ್ರಸಿದ್ಧಿ ಪಡೆದಿವೆ. ಕೆಲವು ದೇವಸ್ಥಾನಗಳನ್ನು ಜನ ಪ್ರವಾಸಿಗರಾಗಿ ನೋಡಲು ಬಂದರೆ

ಇನ್ನು ಕೆಲವು ದೇವಸ್ಥಾನಗಳಿಗೆ ಭಕ್ತರಾಗಿ ಬರುತ್ತಾರೆ ಕಾಣಿಕೆ ಹರಕೆಗಳನ್ನು ತೀರಿಸಿ ಹೋಗುತ್ತಾರೆ. ದೊಡ್ಡ ಮಟ್ಟದಲ್ಲಿ ಕಾಣಿಕೆ ಹರಿದು ಬರುತ್ತದೆ. ಕೆಲವು ದೇವಸ್ಥಾನಗಳಲ್ಲಿ ನೂರಾರು ಲೆಕ್ಕದ ಆದಾಯವಿದೆ. ರಾಜ್ಯದ ಬಹುತೇಕ ದೇವಸ್ಥಾನಗಳು ಸರ್ಕಾರದ ಮುಜರಾಯಿ ಇಲಾಖೆಯ ಅಧೀನದಲ್ಲಿದ್ದು ಎಲ್ಲಾ ಆದಾಯ ಸರ್ಕಾದ ಬೊಕ್ಕಸಕ್ಕೆ ಹೋಗುತ್ತದೆ. ಹಾಗಾದರೇ ಸರ್ಕಾರಕ್ಕೆ ದೊಡ್ಡ ಪ್ರಮಾಣದಲ್ಲಿ ಆದಾಯವನ್ನು ತಂದುಕೊಡುವ ಟಾಪ್ 10 ದೇವಾಲಯಗಳು ಯಾವುವು ಎಂದರೆ

ಕುಕ್ಕೆ ಸುಬ್ರಹ್ಮಣ್ಯ: ಕರಾವಳಿ ಭಾಗದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯ. ಕಡಬ ತಾಲ್ಲೂಕಿನ ಈ ದೇವಸ್ಥಾನಕ್ಕೆ ದರ್ಶನ ಪಡೆಯಲು ಮತ್ತು ಹರಕೆ ತೀರಿಸಲು ಪ್ರತಿದಿನ ಲಕ್ಷಾಂತರ ಭಕ್ತರು ಬರುತ್ತಾರೆ. ಹೀಗಾಗಿ ಈ ದೇವಸ್ಥಾನಕ್ಕೆ ಬರುವ ಕಾಣಿಕೆ ಪ್ರಮಾಣವು ದೊಡ್ಡದಾಗಿದೆ. ಆದಾಯದಲ್ಲಿ ನಂಬರ್ 1 ಸ್ಥಾನದಲ್ಲಿದೆ. 2022-23ರ ಅವಧಿಯಲ್ಲಿ ಈ ದೇವಸ್ಥಾನ 123.64 ಕೋಟಿಯಷ್ಟು ಆದಾಯಗಳಿಸಿದೆ. ಅದರಲ್ಲಿ 63.77 ಕೋಟಿಯಷ್ಟು ಖರ್ಚಾಗಿದೆ. Top 10

ಕೊಲ್ಲೂರು ಮೂಕಾಂಬಿಕೆ: ಈ ಪಟ್ಟಿಯಲ್ಲಿ ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕೆ ಎರಡನೇ ಸ್ಥಾನದಲ್ಲಿದ್ದಾರೆ. ಇಲ್ಲಿಗೆ ರಾಜ್ಯ ಮತ್ತು ಬೇರೆ ರಾಜ್ಯದ ಭಕ್ತರು ಬರುತ್ತಾರೆ. ಕಳೆದ ವರ್ಷ ಈ ದೇವಸ್ಥಾನದ ಆದಾಯ 59.47 ಕೋಟಿ ರೂಪಾಯಿಯಷ್ಟು ಇತ್ತು. ಅದೇ ರೀತಿ 33.32 ಕೋಟಿಯಷ್ಟು ದೇಗುಲಕ್ಕೆ ಖರ್ಚಾಗಿದೆ.

ಮೈಸೂರು ಚಾಮುಂಡೇಶ್ವರಿ: ಅರಮನೆ ನಗರಿ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ ಇತಿಹಾಸ ಪ್ರಸಿದ್ಧವಾಗಿದೆ. ನಾಡ ದೇವತೆಯಾಗಿರುವ ಈ ತಾಯಿ ನೋಡಲು ಭಕ್ತರು ಸಾಗರೋಪಾದಿಯಲ್ಲಿ ಬರುತ್ತಿರುತ್ತಾರೆ. ದಸರಾ, ನವರಾತ್ರಿ, ಆಷಾಡದಂತಹ ಸಮಯದಲ್ಲಿ ಭಕ್ತರು ಹೆಚ್ಚಾಗಿ ಬರುತ್ತಿರುತ್ತಾರೆ. 2022-23ರ ಅವಧಿಯಲ್ಲಿ 52.40 ಕೋಟಿ ರೂಪಾಯಿಯಷ್ಟು ಆದಾಯಗಳಿಸಿದ್ದು, ಅಷ್ಟೇ ಪ್ರಮಾಣದಲ್ಲಿ ಖರ್ಚು ಕೂಡ ಆಗಿದೆ. Top 10

ಯಡಿಯೂರು ಸಿದ್ಧಲಿಂಗೇಶ್ವರ: ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಯಡಿಯೂರು ದೇವಸ್ಥಾನ ಕೂಡ ತುಂಬಾ ಪ್ರಸಿದ್ಧವಾಗಿದೆ. ಇದು ಕೂಡ ದೊಡ್ಡ ಮಟ್ಟದಲ್ಲಿ ಭಕ್ತರ ಗುಂಪನ್ನು ಹೊಂದಿದ್ದು, ಅಪಾರ ಪ್ರಮಾಣದ ಕಾಣಿಕೆಯನ್ನು ಸಂಗ್ರಹಿಸುತ್ತದೆ. ಕಳೆದ ವರ್ಷ 36.48 ಕೋಟಿಯಷ್ಟು ಇತ್ತು ಅದೇ ರೀತಿ 35.65 ಕೋಟಿಯಷ್ಟು ದೇವಾಲಯಕ್ಕೆ ಖರ್ಚಾಗಿದೆ. Top 10

ಕಟೀಲು ದುರ್ಗಾಪರಮೇಶ್ವರಿ: ದಕ್ಷಿಣ ಕನ್ನಡದ ಮತ್ತೊಂದು ಪ್ರಸಿದ್ಧ ದೇವಾಲಯವೆಂದರೆ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ. ನಂದಿನಿ ನದಿ ತೀರದಲ್ಲಿರುವ ಈ ದೇವಸ್ಥಾನ ಈ ಭಾಗದ ಜನರ ಆರಾಧ್ಯ ದೈವ. ಇಲ್ಲಿಗೆ ರಾಜ್ಯದ ಮೂಲೆಯಿಂದ ಲಕ್ಷಾಂತರ ಜನರು ಬರುತ್ತಾರೆ. ಕಳೆದ ಸಾಲಿನಲ್ಲಿ ಈ ದೇಗುಲದ ಆದಾಯ 32.10 ಕೋಟಿಯಷ್ಟು ಇತ್ತು. ಅದೇ ರೀತಿ 25.97 ಕೋಟಿಯಷ್ಟು ಸಾಲ ಕೂಡ ಇತ್ತು.

ನಂಜನಗೂಡು ಶ್ರೀಕಂಠೇಶ್ವರ: ಇತಿಹಾಸ ಪ್ರಸಿದ್ಧ ದೇವಾಲಯವಾದ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಬರುತ್ತಾರೆ. ಶ್ರೀಕಂಠೇಶ್ವರನನ್ನು ಕೋಟಿ ಒಡೆಯ ಎಂದು ಕರೆಯಲಾಗುತ್ತದೆ. 2022-23ರ ಅವಧಿಯಲ್ಲಿ ಈ ದೇವಾಲಯಕ್ಕೆ 26.71 ಕೋಟಿಯಷ್ಟು ಆದಾಯ ಹರಿದು ಬಂದಿತ್ತು. 18.74 ಕೋಟಿಯಷ್ಟು ಖರ್ಚು ಕೂಡ ಆಗಿತ್ತು.

ರೇಣುಕಾ ಎಲ್ಲಮ್ಮ: ಇದನ್ನು ಸವದತ್ತಿ ಎಲ್ಲಮ್ಮ ಎಂದು ಕರೆಯಲಾಗುತ್ತದೆ. ಬೆಳಗಾವಿಯಲ್ಲಿ ನೆಲೆನಿಂತಿರುವ ಈ ತಾಯಿ ಉತ್ತರ ಕರ್ನಾಟಕ ಜನತೆಯ ಆರಾಧ್ಯ ದೈವ. ಇಲ್ಲಿಗೆ ಇಡೀ ರಾಜ್ಯದಿಂದ ಅಪಾರ ಪ್ರಮಾಣದ ಭಕ್ತರು ಬರುತ್ತಾರೆ. ಈ ದೇಗುಲ ಕಳೆದ ವರ್ಷ 22.52 ಕೋಟಿಯಷ್ಟು ಆದಾಯ ಗಳಿಸಿತ್ತು. ಅದೇ ರೀತಿ 11.51 ಕೋಟಿಯಷ್ಟು ಖರ್ಚು ಕೂಡ ಆಗಿತ್ತು. Top 10

ಮಂದಾರ್ತಿ ದುರ್ಗಾಪರಮೇಶ್ವರಿ: ಉಡುಪಿ ಜಿಲ್ಲೆಯಲ್ಲಿರುವ ಈ ದೇವಸ್ಥಾನ ಕೂಡ ತುಂಬಾ ಪ್ರಸಿದ್ಧಿಯಾಗಿದೆ. ಇಲ್ಲಿಗೆ ನಿತ್ಯವೂ ಸಾವಿರಾರು ಭಕ್ತರು ಬರುತ್ತಾರೆ. 2022-23ರ ಅವಧಿಯಲ್ಲಿ 14.55 ಕೋಟಿಯಷ್ಟು ಆದಾಯವನ್ನು ಗಳಿಸಿತ್ತು. 13.02 ಕೋಟಿಯಷ್ಟು ದೇವಾಲಯಕ್ಕೆ ವೆಚ್ಚವಾಗಿದೆ.

ಘಾಟಿ ಸುಬ್ರಹ್ಮಣ್ಯ: ದೊಡ್ಡ ಬಳ್ಳಾಪುರದಲ್ಲಿರುವ ಈ ದೇವಸ್ಥಾನ ನೂರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಇಲ್ಲಿ ಸುಬ್ರಹ್ಮಣ್ಯ ಮತ್ತು ಲಕ್ಷ್ಮಿನರಸಿಂಹ ದೇವರು ಇದ್ದು ದೊಡ್ಡ ಪ್ರಮಾಣದ ಭಕ್ತರು ಬರುತ್ತಾರೆ. 2022-23ರ ಅವಧಿಯಲ್ಲಿ 12.25 ಕೋಟಿಯಷ್ಟು ಆದಾಯ ಗಳಿಸಿದ್ದು7.40 ಕೋಟಿಯಷ್ಟು ವೆಚ್ಚ ಹೊಂದಿದೆ.

ಬನಶಂಕರಿ: ಬೆಂಗಳೂರಿನ ಅತ್ಯಂತ ದೊಡ್ಡ ಮತ್ತು ಪ್ರಸಿದ್ಧ ದೇವಾಸ್ಥಾನಗಳಲ್ಲಿ ಬನಶಂಕರಿ ಅಮ್ಮನವರ ದೇವಾಸ್ಥಾನ ಒಂದಾಗಿದೆ. ಇಲ್ಲಿಗೆ ಪ್ರತಿದಿನ ಸಾವಿರಾರು ಭಕ್ತರು ಬರುತ್ತಾರೆ. ಕಳೆದ ಸಾಲಿನಲ್ಲಿ ಈ ದೇಗುಲ 10.58ಕೋಟಿಯಷ್ಟು ಆದಾಯ ಗಳಿಸಿದ್ದು, 19.41 ಕೋಟಿಯಷ್ಟು ವೆಚ್ಚ ಹೊಂದಿದೆ.
ರಾಜ್ಯದಲ್ಲಿ ಮುಜರಾಯಿ ಇಲಾಖೆಗೆ ಒಳಪಡದ ಏಕೈಕ ದೇವಸ್ಥಾನ ಎಂದರೆ ಧರ್ಮಸ್ಥಳ. ಇದು ಕೂಡ ಅತೀ ಹೆಚ್ಚು ಆದಾಯ ಗಳಿಸುವ ದೇವಸ್ಥಾನಗಳ ಪೈಕಿ ಒಂದಾಗಿದೆ. ಇದು ಪೆರ್ಗಡೆ ವಂಶಸ್ಥರ ಕಂಟ್ರೋಲ್ ನಲ್ಲಿದೆ. ಸದ್ಯ ಅದೇ ವಂಶದ ವೀರೇಂದ್ರ ಹೆಗ್ಗಡೆಯವರು ಇಲ್ಲಿನ ಧರ್ಮಾಧಿಕಾರಿಯಾಗಿದ್ದಾರೆ. ಇದನ್ನು ಕೂಡ ಮುಜರಾಯಿ ಇಲಾಖೆಗೆ ಸೇರಿಸುವ ಪ್ರಯತ್ನ ನಡೆದಿದ್ದರೂ ಇಲ್ಲಿಯವರೆವಿಗೂ ಸಾಧ್ಯವಾಗಿಲ್ಲ.Top 10

Leave A Reply

Your email address will not be published.