Ultimate magazine theme for WordPress.

Coconut Pooja Facts ದೇವರಿಗೆ ತೆಂಗಿನ ಕಾಯಿ

0 2,963

Coconut Pooja Facts In Kannadatopten ಸ್ನೇಹಿತರೇ ನಮ್ಮ ಸಂಪ್ರದಾಯದಲ್ಲಿ ಮುಖ್ಯವಾಗಿ ಯಾವುದೇ ಶುಭಕಾರ್ಯಗಳು ಜರುಗಿದರೂ ನಾವು ಪೂಜೆಗೆ ಬೇಕಾಗುವ ವಸ್ತುಗಳು ಅರಿಶಿಣ, ಕುಂಕುಮ, ಹೂಗಳು ಮತ್ತು ತೆಂಗಿನಕಾಯಿ ಅಂದರೆ ತೆಂಗಿನಕಾಯಿಗೆ ಹೆಚ್ಚಿನ ಆದ್ಯತೆ ಇದೆ. ಏಕೆಂದರೆ ಏನೂ ಇರಲಿಲ್ಲವೆಂದರೆ ತೆಂಗಿನಕಾಯಿ ಹೊಡೆದು ಪೂಜೆಯನ್ನು ಮುಗಿಸುತ್ತಾರೆ. ಅದು ಚಿಕ್ಕ ಪೂಜೆಯಾಗಿರಲಿ

ಅಥವಾ ದೊಡ್ಡ ಪೂಜೆಯಾಗಿರಲಿ ತೆಂಗಿನ ಕಾಯಿ ಇಲ್ಲದೇ ಪೂಜೆಗಳು ಆಗುವುದೇ ಇಲ್ಲ. ಇನ್ನು ಸಾಮಾನ್ಯವಾಗಿ ತೆಂಗಿನಕಾಯಿಗೆ ಅನಾದಿ ಕಾಲದಿಂದಲೂ ಒಂದು ಧಾರ್ಮಿಕ ಪ್ರಾಶಸ್ತ್ಯ ಹೊಂದಿರುವ ಕಾಯಿ ಎನ್ನಲಾಗುತ್ತದೆ. ತೆಂಗಿನಕಾಯಿಯನ್ನು ಮನುಷ್ಯನ ತಲೆ ಎಂತಲೂ ಭಾವಿಸುತ್ತೇವೆ. ಏಕೆಂದರೆ ತೆಂಗಿನಕಾಯಿಯ ಮೇಲೆ ಇರುವ ಬೇರುಗಳು ಮನುಷ್ಯನ ಕೂದಲುಗಳು, Coconut Pooja

ಗುಂಡಿನ ಆಕಾರ ಮನುಷ್ಯನ ಮುಖ, ತೆಂಗಿನ ಕಾಯಿಯೊಳಗಿರುವ ನೀರು ರಕ್ತ. ಒಳಗಿನ ಕೊಬ್ಬರಿ ಮನಸ್ಸಿನ ಸಂಕೇತ. ಆದರೆ ಇವೆಲ್ಲವನ್ನು ಸೇರಿಸಿ ತೆಂಗಿನಕಾಯಿಯನ್ನು ದೇವರಿಗೆ ಶ್ರದ್ಧಾ ಭಕ್ತಿಗಳಿಂದ ಹೊಡೆದರೆ ಮನುಷ್ಯ ತನ್ನನ್ನು ತಾನು ಸಮರ್ಪಿಸಿಕೊಳ್ಳುತ್ತಾನೆ. ಹೀಗೆ ಮನೆಯಲ್ಲಿ ಪೂಜೆಯಾಗಲಿ ಅಥವಾ ದೇವಾಲಯಗಳಲ್ಲಿ ಪೂಜೆಯಾಗಲಿ ಪೂಜೆ ಮಾಡುವಾಗ ಮಾತ್ರ ಖಂಡಿತವಾಗಿ ತೆಂಗಿನಕಾಯಿಯನ್ನು ಹೊಡೆಯುತ್ತೀವಿ. Coconut Pooja

ಇನ್ನು ತೆಂಗಿನಕಾಯಿ ತುಂಬಾ ಚೆನ್ನಾಗಿದ್ದರೆ ಕೊಬ್ಬರಿ ಬೆಳ್ಳಗಿದ್ದರೆ ತೀರ್ಥ ತುಂಬಾ ಸಿಹಿಯಾಗಿರುತ್ತದೆ. ಆದ್ದರಿಂದ ಮನಸ್ಸಿಗೆ ಸಂತೋಷವಾಗುತ್ತದೆ. ಇನ್ನು ತೆಂಗಿನಕಾಯಿ ಹೊಡೆಯುವಾಗ ಸಾಮಾನ್ಯವಾಗಿ ನಾವು ಯಾವುದೋ ಒಂದು ಬಯಕೆಯನ್ನು ಮನದಲ್ಲಿ ಇಟ್ಟುಕೊಂಡು ತೆಂಗಿನಕಾಯಿ ಹೊಡೆಯುತ್ತೀವಿ ಆ ತೆಂಗಿನಕಾಯಿಯ ಒಳಗಡೆ ಹೂ ಬಂದಿದ್ದರೇ ಅದು ಹೊಸದಾಗಿ ಮದುವೆಯಾಗಿದ್ದವರಿಗೆ Coconut Pooja

ಸಂತಾನ ಯೋಗವನ್ನು ತಿಳಿಸುತ್ತದೆ. ಸಾಮಾನ್ಯವಾಗಿ ತೆಂಗಿನಕಾಯಿ ಹೊಡೆಯುವಾಗ ನಾನಾ ಬಗೆಯ ಆಲೋಚನೆಗಳು ಬರುತ್ತಿರುತ್ತವೆ. ಹೊಡೆದಾಗ ಹೂ ಬಂದರೆ ಕೆಟ್ಟರೇ ಉದ್ದ ಹೊಡೆದರೆ ಅಡ್ಡ ಹೊಡೆದರೆ ಹೀಗೆ ಏನು ಹೊಡೆದರೇ ಏನಾಗುತ್ತೋ ಸ್ವಲ್ಪ ಸಂಶಯಗಳು ಮನದಲ್ಲಿ ಕಾಡುವುದುಂಟು ಹೀಗೆ ಒಂದು ವೇಳೆ ಮನೆಯಲ್ಲಿ ಪೂಜೆ ಮಾಡುವಾಗ ಮನೆಯಲ್ಲಿ ಶುಭಕಾರ್ಯ ಜರುಗಿದಾಗ

ಆ ಕಾಯಿ ಹೊಡೆದಾಗ ಅದರಲ್ಲಿ ಹೂ ಬಂತು ಎಂದರೆ ಒಳ್ಳೆಯದು ಎನ್ನುತ್ತಾರೆ. ಮುಖ್ಯವಾಗಿ ಹೊಸದಾಗಿ ಮದುವೆಯಾದವರಿಗೆ ಸಂತಾನ ಭಾಗ್ಯ ಸೂಚಿಸುತ್ತದೆ. ಇನ್ನು ಒಂದು ತೆಂಗಿನಕಾಯಿ ನೀವು ಒಂದು ವೇಳೆ ಉದ್ದವಾಗಿ ಹೊಡೆದರೆ ನೀವು ಎತ್ತರೆತ್ತರವಾಗಿ ಬೆಳೆಯುವುದನ್ನು ಸೂಚಿಸುತ್ತದೆ. ಮನೆಯಲ್ಲಿ ಸೊಸೆಗಾಗಲಿ ಮಗಳಿಗಾಗಲಿ ಸಂತಾನ ಯೋಗ ಬರುತ್ತದೆ ಎಂಬ ಸೂಚನೆಯಂತೆ Coconut Pooja

ಇನ್ನು ಸರಿಸಮವಾದ ಭಾಗದಲ್ಲಿ ತೆಂಗಿನಕಾಯಿ ಹೊಡೆದರೆ ಅದು ಶುಭಸೂಚನೆ. ಮನೆಯಲ್ಲಿ ಒಳ್ಳೆಯ ಕಾರ್ಯಗಳು ಜರುಗುತ್ತವೆ ಎನ್ನಲಾಗುತ್ತದೆ. ಇನ್ನು ಸಾಮಾನ್ಯವಾಗಿ ತೆಂಗಿನಕಾಯಿ ಹೊಡೆದಾಗ ಕೆಟ್ಟು ಹೋಗಿದ್ದರೆ ಬಹಳಷ್ಟು ಸಂಶಯಗಳು ಮನಸ್ಸಿನಲ್ಲಿ ಕಾಡುತ್ತದೆ. ಏಕೆಂದರೆ ಅದು ಭಗವಂತನಿಗೆ ಅರ್ಪಿಸಿದ ಕಾಯಿ ಅದು ಕೆಟ್ಟು ಹೋಯಿತು ಅದರಿಂದ ಏನು ದೋಷ ಬರುತ್ತದೋ ಅಥವಾ ಏನು ಕೆಡುಕು ಜರುಗುತ್ತದೋ ಅಥವಾ

ಏನು ಹಾನಿಯಾಗುತ್ತದೋ ಎಂಬಿತ್ಯಾದಿ ಆಲೋಚನೆಗಳು ಮನಸ್ಸಿನಲ್ಲಿ ಸುಳಿದು ಭಯವನ್ನು ಏರ್ಪಡಿಸುತ್ತದೆ. ಒಂದು ವೇಳೆ ಮನೆಯಲ್ಲಿ ತೆಂಗಿನಕಾಯಿ ಕೊಳೆತಿದ್ದನ್ನು ಹೊಡೆದರೆ ಅದರ ಪ್ರಕಾರ ಯಾವುದೇ ಭಯ ಪಡುವ ಅವಶ್ಯಕತೆ ಇಲ್ಲ. ಸಾಮಾನ್ಯವಾಗಿ ಹಾಗೇ ಹೊಡೆದಾಗ ನಾವು ಅದನ್ನು ಪಕ್ಕಕ್ಕೆ ಇಟ್ಟು ಪೂಜೆಯಿಂದ ಎದ್ದು ಕೈಕಾಲು ಮುಖ ತೊಳೆದುಕೊಂಡು ಮತ್ತೊಂದು ತೆಂಗಿನಕಾಯಿ ತೆಗೆದುಕೊಂಡು

ಹೊಡೆದು ನೈವೇದ್ಯವನ್ನು ಮುಗಿಸಬೇಕು. ಇನ್ನು ಒಂದು ವೇಳೆ ಕೆಟ್ಟಿ ಹೋಗಿದೆ ಎಂದರೆ ದೇವರ ಮೇಲಿಂದ ದೃಷ್ಠಿ ಹೋಗಿದೆ ಎಂದು ಅರ್ಥಮಾಡಿಕೊಳ್ಳಬೇಕು. ಸಾಮಾನ್ಯವಾಗಿ ಕೆಟ್ಟು ಹೋಗಿರುವ ತೆಂಗಿನಕಾಯಿ ಹೊಡೆದರೆ ಸಾಕಷ್ಟು ಸಂಶಯಗಳು ಬರುತ್ತವೆ ಎಂತಹ ಸಂಶಯ ಪಡಬೇಕಿಲ್ಲ ಅದರಿಂದ ಒಳ್ಳೆಯದೇ ಆಗುತ್ತದೆ ನಿಮಗೆ ಮನೆಯ ಮತ್ತು ದೇವರ ದೃಷ್ಠಿಹೋಗಿದೆ Coconut Pooja

ಎಂದು ಭಾವಿಸುತ್ತಾ ಮತ್ತೊಂದು ತೆಂಗಿನಕಾಯಿ ಹೊಡಿಯಬೇಕು. ಇನ್ನು ಪುರಾಣಗಳಲ್ಲಿ ಹೇಳಿರುವಂತೆ ಶ್ರದ್ಧಾಭಕ್ತಿಗಳಿಂದ ಭಗವಂತನಿಗೆ ಕೇವಲ ಜಲವನ್ನು ಅರ್ಪಿಸಿದರೂ ಸಾಕು ದೇವರು ಸಂತುಷ್ಟನಾಗುತ್ತಾನೆ. ಅದರಲ್ಲಿ ಹಣ್ಣಾಗಲಿ, ಹೂವಾಗಲಿ, ಎಲೆಯಾಗಲಿ, ಪತ್ರೆಯಾಗಲಿ ಇನ್ನು ತೆಂಗಿನಕಾಯಿಯಾಗಲಿ, ನಾವು ಮಾಡುವ ಪೂಜೆಯಲ್ಲಿ ಶ್ರದ್ಧಾ ಮತ್ತು ಭಕ್ತಿಗಳಿರಬೇಕು.

ತಂದಿರುವ ವಸ್ತುಗಳು ಹೇಗಿದ್ದರೂ ಪರವಾಗಿಲ್ಲ ಹೇಳುವುದುಂಟು. ಅಂದರೆ ತಂದಿರುವ ವಸ್ತುಗಳು ಎಲ್ಲವೂ ಸಾಮಾನ್ಯವಾಗಿ ಕೆಟ್ಟದಾಗಿರುವುದಿಲ್ಲ ಒಂದು ವೇಳೆ ಇಂತಹ ಕೆಲಸಗಳು ಅಥವಾ ವಸ್ತುಗಳು ನಮ್ಮ ಕೈಗೆ ಬಂದಿರುತ್ತವೆ. ಅದರಿಂದ ಯಾವುದೇ ಅನುಮಾನ ಪಡಬೇಕಾಗಿಲ್ಲ. ಇನ್ನು ಹಾಗೇನಾದರೂ ಆಗಿತ್ತು ಎಂದರೆ ಅದನ್ನು ತೆಗೆದು ಮತ್ತೊಂದು ಬಳಸಿ ಪೂಜೆಯನ್ನು ಮುಗಿಸಬಹುದೆಂದು ಹೇಳುತ್ತಾರೆ ಶಾಸ್ತ್ರಕಾರರು.

Leave A Reply

Your email address will not be published.