Ultimate magazine theme for WordPress.

Draupadi ದ್ರೌಪದಿ ಬಗ್ಗೆ ಈ ರಹಸ್ಯ ವಿಷಯಗಳನ್ನು ನೀವು

0 137

Draupadi Secrets About Mahabharata Draupadi ಮಹಾಭಾರತ ವಿಶ್ವಪ್ರಸಿದ್ಧ ಹಾಗೂ ಧಾರ್ಮಿಕ, ಚಾರಿತ್ರಿಕ ಗ್ರಂಥಗಳಲ್ಲಿ ಒಂದು. ವಿಶ್ವ ಮಾನ್ಯತೆ ಪಡೆದಿರುವ ಇದರಲ್ಲಿ ಎಷ್ಟೋ ಆಸಕ್ತಿಕರ ಕತೆಗಳಿವೆ. ಅವುಗಳಲ್ಲಿ ದ್ರೌಪದಿ ಬಗೆಗಿನ ವಿಷಯಗಳು ಸೇರುತ್ತವೆ. ದ್ರೌಪದಿ ಮಹಾಭಾರತದ ಒಂದು ಕ್ಲಿಷ್ಟಕರವಾದಂತಹ ಪಾತ್ರ. ಅದರಲ್ಲಿ ಉಲ್ಲೇಖವಾಗಿರುವಂತಹ ದ್ರೌಪದಿ ಕೂಡ ಒಬ್ಬಳು. ದ್ರೌಪದಿ ಮರ್ಯಾದೆ

ಹಾಗೂ ಗೌರವಗಳಿಗಾಗಿ ಕೌರವರ ರಕ್ತದಿಂದ ಕುರುಕ್ಷೇತ್ರದ ದಾಹವನ್ನು ತೀರಿಸಿದಂತಹ ಮಹಿಳೆ. ಎಷ್ಟೋ ಜನರ ಪ್ರಕಾರ ಕುರುಕ್ಷೇತ್ರ ಯುದ್ದ ನಡೆಯುವುದಕ್ಕೆ ದ್ರೌಪದಿಯೇ ಕಾರಣ ಎಂಬುದು ಕೆಲವರ ಅಭಿಪ್ರಾಯವಾಗಿದೆ. ಈ ದ್ರೌಪದಿಯ ವಿಷಯಗಳು ನಿಮಗೆ ಸೋಜಿಗವನ್ನು ಉಂಟು ಮಾಡುತ್ತವೆ. ಈ ದ್ರೌಪದಿಯ ಬಗ್ಗೆ ಕೆಲವು ಸಂಗತಿಗಳನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

ದ್ರೌಪದಿ ಏಕೆ ಜನಿಸಿದಳು ಎಂಬುದರ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿಲ್ಲ. ಈ ದ್ರೌಪದಿ ಪಾಂಚಾಲ ದೇಶದ ರಾಜನಾಗಿದ್ದಂತಹ ರಾಜ ದೃಪದನ ಮಗಳು. ಈಕೆ ಹುಟ್ಟುವ ಮೊದಲು ರಾಜನಾಗಿದ್ದಂತಹ ದೃಪದ ಹಾಗೂ ಗುರು ದ್ರೋಣಾಚಾರ್ಯ ಇವರಿಬ್ಬರು ಪರಸ್ಪರ ಸ್ನೇಹಿತರಾಗಿದ್ದವರು, ಆದರೇ ಯಾವುದೇ ಕಾರಣದಿಂದ ಶತೃಗಳು ಆಗುತ್ತಾರೆ. Draupadi

ಒಂದು ಕಡೆ ಗುರುವಿದ್ಯಾಭ್ಯಾಸ ಮುಗಿಸಿಕೊಂಡಿದ್ದ ಇವರು ಕಾರಣಾಂತರಗಳಿಂದ ಬೇರೆ ಬೇರೆಯಾದಾಗ ಮುಂದೆ ಬಡತನದಿಂದ ಬೇಸತ್ತ ದ್ರೋಣ ಗೆಳೆಯನಾದ ದೃಪದನ ಬಳಿ ಏನಾದರೂ ಸಹಾಯವನ್ನು ಪಡೆಯಲು ಬಂದಾಗ ಅಧಿಕಾರದ ಮದದಲ್ಲಿದ್ದ ದೃಪದ ಅಸಹಾಯಕನಾದ ದ್ರೋಣನನ್ನು ಅವಮಾನಿಸಿದ್ದ, ಇದರಿಂದ ಕೋಪಗೊಂಡಂತಹ ದ್ರೋಣ ಸೇಡನ್ನು ಇಟ್ಟುಕೊಂಡು ತಕ್ಕ ಸಮಯಕ್ಕಾಗಿ ಕಾಯುತ್ತಾನೆ. Draupadi

ಈ ಮಧ್ಯೆ ಹಸ್ತಿನಾವತಿಗೆ ಬಂದು ಕೌರವ ಮತ್ತು ಪಾಂಡವ ಕುಮಾರರಿಗೆ ಗುರುವಾಗುತ್ತಾನೆ. ಮುಂದೆ ಗುರು ದ್ರೋಣರಿಗೆ ದಕ್ಷಿಣೆಯಾಗಿ ಏನು ಕೊಡಬೇಕೆಂದು ಬಂದಾಗ ತನ್ನ ಹಳೆಯ ಸೇಡನ್ನು ನೆನೆಸಿಕೊಂಡು ಪಾಂಚಾಲ ದೇಶದ ರಾಜನಾದ ದೃಪದನನ್ನು ಸದೆ ಬಡಿದು ನನ್ನ ಕಾಲಿಗೆ ಬೀಳುವಂತೆ ಮಾಡಿದರೆ ಅದೇ ನೀವು ನನಗೆ ಕೊಡುವ ಗುರು ದಕ್ಷಿಣೆ ಎಂದು ಅವರನ್ನು ಪಾಂಚಾಲ ದೇಶದ ಮೇಲೆ ಯುದ್ಧ ಮಾಡಲು ಉತ್ತೇಜಿಸುತ್ತಾನೆ.

ನಂತರ ಪಾಂಚಾಲ ದೇಶಕ್ಕೆ ತೆರಳಿ ಯುದ್ಧವನ್ನು ಮಾಡಿ, ಕೊನೆಗೆ ಅರ್ಜುನ ದೃಪದನನ್ನು ದ್ರೋಣಾಚಾರ್ಯರ ಪಾದದ ಬಳಿ ಕೆಡುವುತ್ತಾನೆ. ಇದರಿಂದ ಅವಮಾನಿತನಾಗಿ ದೃಪದ ಮನೆಗೆ ಬಂದುಅಗ್ನಿದೇವನ ಪ್ರಾರ್ಥನೆ ಮಾಡಿ, ಮುಂದೆ ಯುದ್ಧದಲ್ಲಿ ಈ ದ್ರೋಣನನ್ನು ಕೊಲ್ಲುವಂತಹ ಧೀರ ಮಗನನ್ನು ವರದ ರೂಪದಲ್ಲಿ ಕರುಣಿಸು ಎನ್ನುವಂತೆ ಬೇಡಿಕೊಳ್ಳುತ್ತಾನೆ. Draupadi

ಆಗ ಜನಿಸಿದವನೇ ದ್ಯುಮನ ಮಹಾಭಾರತದ ಯುದ್ದದಲ್ಲಿ ಗುರು ದ್ರೋಣರ ತಲೆಯನ್ನು ಕತ್ತರಿಸುತ್ತಾನೆ. ಅರ್ಜುನನ ಪರಾಕ್ರಮದಿಂದ ಸೋತಿದ್ದರೂ ಮುಂದೆ ಅವನ ಕೈ ಹಿಡಿಯುವ ಹುಡುಗಿಯು ನನ್ನ ಮಗಳಾಗಿ ಹುಟ್ಟಲಿ ಎಂದು ಅಗ್ನಿಯಲ್ಲಿ ವರ ಕೇಳಿಕೊಂಡವನೇ ಈ ದೃಪದ. ಆಗ ಜನಿಸಿದವಳೇ ದ್ರೌಪದಿ ಅವಳಿಗೆ ಅಗ್ನಿಹೋತ್ರಿ ಎಂಬ ಹೆಸರು ಇದೆ. ದ್ರೌಪದಿ ಜನನವಾಗಿದ್ದು ಈ ಕಾರಣದಿಂದ ಎಂದು ಹೇಳಲಾಗುತ್ತದೆ. Draupadi

ದ್ರೌಪದಿ ಏಕೆ ಐವರು ಗಂಡಂದಿರನ್ನು ಮದುವೆಯಾದಳು: ದೌಪದಿಯ ಸ್ವಯಂವರದ ಸಮಯದಲ್ಲಿ ಪಾಂಡವರು ವನವಾಸದಲ್ಲಿದ್ದರು. ಬ್ರಾಹ್ಮಣರ ವೇಷದಲ್ಲಿದ್ದ ಇವರಿಗೆ ದೂರದ ಪಾಂಚಾಲದಲ್ಲಿ ನಡೆಯುತ್ತಿದ್ದ ದ್ರೌಪದಿಯ ಸ್ವಯಂವರದ ಬಗ್ಗೆ ಗೊತ್ತಾಗುತ್ತದೆ. ತಾಯಿಯಾದ ಕುಂತಿಯ ಅನುಮತಿಯನ್ನು ಪಡೆದು, ಅದೇ ಊರಿನ ಇತರ ಬ್ರಾಹ್ಮಣರ ಜೊತೆ ಇವರು ಪಾಂಚಾಲಕ್ಕೆ ಹೋಗುತ್ತಾರೆ. Draupadi

ಅಲ್ಲಿ ಅರ್ಜುನ ದೃಪದ ಇಟ್ಟಿರುವಂತಹ ಎಲ್ಲಾ ಶರತ್ತುಗಳನ್ನು ಸ್ವಯಂವರದ ಪರೀಕ್ಷೆಗಳನ್ನು ಗೆದ್ದು, ದ್ರೌಪದಿಯ ಕೈಯನ್ನು ಹಿಡಿಯುತ್ತಾನೆ. ನಂತರ ದ್ರೌಪದಿಯನ್ನು ತಮ್ಮ ಮನೆಗೆ ಕರೆತರುವ ಪಾಂಡವರು ತಾಯಿಯಾದ ಕುಂತಿಯನ್ನು ಉದ್ದೇಶಿಸಿ ಅಮ್ಮ ನಾವು ನಿನಗಾಗಿ ಅಮೂಲ್ಯವಾದ ಉಡುಗೊರೆಯನ್ನು ತಂದಿದ್ದೇವೆ ಎಂದು ಹೇಳುತ್ತಾರೆ.

ಮಕ್ಕಳು ತಂದಿರುವ ಆ ಕಾಣಿಕೆ ಏನು ಎಂದು ನೋಡದೇ ಇರುವ ಆ ಕುಂತಿ ನೀವು ತಂದಿರುವ ಕಾಣಿಕೆ ನನಗೆ ಏಕೆ ನೀವು ತಂದಿರುವ ಕಾಣಿಕೆಯನ್ನು ನೀವೆಲ್ಲರೂ ಸಮಾನವಾಗಿ ಹಂಚಿಕೊಳ್ಳಿ ಎಂದು ಹೇಳುತ್ತಾಳೆ. ತಾಯಿಯ ಮಾತಿಗೆ ಮರುಮಾತನಾಡದೇ ದ್ರೌಪದಿಯನ್ನು ಒಬ್ಬೊಬ್ಬರಾಗಿ ಮದುವೆಯಾಗುತ್ತಾರೆ. ದ್ರೌಪದಿ ಆರಂಭದಲ್ಲಿ ಅಡ್ಡಿಪಡಿಸಿದರೂ ಕೂಡ ಹಿರಿಯರ ಸಲಹೆ ಮೇರೆಗೆ ಎಲ್ಲರನ್ನು ಒಪ್ಪಿ ಮದುವೆಯಾಗುತ್ತಾಳೆ.

ಮದುವೆಗೆ ದ್ರೌಪದಿ ಹಾಕಿರುವಂತಹ ಶರತ್ತುಗಳು: ದ್ರೌಪದಿ ಈ ಐದು ಜನರನ್ನು ಮದುವೆಯಾಗುವ ಸಂದರ್ಭ ಬಂದಾಗ ಆಕೆ ಪ್ರಾರಂಭದಲ್ಲಿ ಇದಕ್ಕೆ ಒಪ್ಪಿಕೊಳ್ಳಲಿಲ್ಲ. ಆ ಬಳಿಕ ಪಾಂಡವರಿಗೆ ಒಂದು ಶರತ್ತನ್ನು ಹಾಕಿದಳು. ಅದೇನೆಂದರೆ ನಿಮ್ಮಲ್ಲಿ ಯಾರೂ ಇನ್ನೊಂದು ಮದುವೆಯಾಗಿ ಅಂತಃಪುರಕ್ಕೆ ಕರೆತರಬಾರದು. ಇಂದ್ರಪ್ರಸ್ಥ ಸಾಮ್ರಾಜ್ಯಕ್ಕೆ ನನ್ನ ಬಿಟ್ಟು ಬೇರೆ ಯಾವ ರಾಣಿಯೂ ಇರಬಾರದು ಎಂಬ ಮಾತನ್ನು ಪಾಂಡವರಿಂದ ಪಡೆದು ನಂತರ ಮದುವೆಗೆ ಸಿದ್ಧಳಾಗುತ್ತಾಳೆ.

ಕಳೆದ ಜನ್ಮದಲ್ಲಿ ದ್ರೌಪದಿ ಪಡೆದಿದಂತಹ ವರ ಏನು? : ದ್ರೌಪದಿ ಪಾಂಡವರನ್ನು ಕೈ ಹಿಡಿದು ಕುಂತಿ ಇದ್ದ ಕುಟೀರಕ್ಕೆ ಬಂದಾಗ ಮಕ್ಕಳು ನನಗಾಗಿ ಕಾಣಿಕೆ ತಂದಿದ್ದು ಜೀವವಿರುವ ಹೆಣ್ಣು ಎಂದು ಅರ್ಥ ಮಾಡಿಕೊಂಡ ಕುಂತಿ ಕೂಡ ಸೋಜಿಗವನ್ನು ಪಡುತ್ತಾಳೆ. Draupadi

ನನ್ನಿಂದಾಗಿ ಈ ಐವರನ್ನು ಮದುವೆಯಾಗಬೇಕಾಯಿತಲ್ಲ ಎಂದು ವೇದನೆ ಪಡುವಾಗ ಪ್ರತ್ಯಕ್ಷನಾಗುವ ಶ್ರೀಕೃಷ್ಣ ಇದೆಲ್ಲವೂ ಕಳೆದ ಜನ್ಮದಲ್ಲಿ ದ್ರೌಪದಿ ಪಡೆದಂತಹ ವರದ ಪ್ರಭಾವದಿಂದ ಆಗಿದೆ ಎಂದು ಹೇಳುತ್ತಾನೆ. ಕಳೆದ ಜನ್ಮದಲ್ಲಿ ದ್ರೌಪದಿ ಒಂದು ಮುನಿ ಕುಟೀರದಲ್ಲಿ ಜನಿಸಿದಳು. ಆಕೆ ನನಗೆ ಐದು ಗುಣಗಳಿರುವ ಗಂಡನೇ ಬೇಕು ಎಂದು ಶಿವನ ಕುರಿತು ತಪಸ್ಸನ್ನು ಆಚರಿಸಿದ್ದಳು.

ಆಗ ಪ್ರತ್ಯಕ್ಷನಾದ ಶಿವ ಐದು ಗುಣಗಳು ಒಬ್ಬನಲ್ಲಿ ಇರಲು ಸಾಧ್ಯವಿಲ್ಲ ಹೀಗಾಗಿ ಈ ಜನ್ಮದಲ್ಲಿ ನಿನ್ನ ಅಭಿಲಾಷೆ ಹೀಡೆರಲು ಸಾಧ್ಯವಿಲ್ಲ ಮುಂದಿನ ಜನ್ಮದಲ್ಲಿ ದ್ರೌಪದಿಯಾಗಿ ಜನಿಸಿದಾಗ ಐದು ಗುಣಗಳಿರುವ ಐದು ಗಂಡಂದಿರು ಸಿಗುತ್ತಾರೆಂದು ಹೇಳಿದ್ದ ಶಿವ ಅದರ ಫಲವೇ ದ್ರೌಪದಿ ಐವರು ಪಾಂಡವರನ್ನು ಕೈ ಹಿಡಿದಿದ್ದು.

ಮಹಾಸತಿ ಸಾದ್ವಿಗೆ ಇರಬೇಕಾಗಿರುವ ಲಕ್ಷಣಗಳೇನು: ದ್ವಾಪರ ಯುಗದಲ್ಲಿ ಐದು ಜನ ವೀರಪುರುಷರನ್ನು ಮದುವೆಯಾದಂತಹ ದ್ರೌಪದಿಯ ಸಾದ್ವಿಯ ಸನ್ನಡತೆ ಹಾಗೂ ಆಕೆಗೆ ಇರಬೇಕಾದ ಲಕ್ಷಣಗಳೇನು ಸ್ವತಃ ದ್ರೌಪದಿಯೇ ಒಂದು ಕಡೆ ತಿಳಿಸುತ್ತಾಳೆ. ಒಮ್ಮೆ ಶ್ರೀಕೃಷ್ಣನ ಪತ್ನಿಯಾದ ಸತ್ಯಭಾಮೆ ದ್ರೌಪದಿಯನ್ನು ಕಾಣಲು ಬರುತ್ತಾಳೆ.

ದ್ರೌಪದಿಯನ್ನು ಉದ್ದೇಶಿಸಿ ಹೀಗೆ ಕೇಳುತ್ತಾಳೆ ಪರಮವೀರರಾದ ನಿನ್ನ ಐವರು ಗಂಡಂದಿರು ನಿನ್ನನ್ನು ಸದಾ ಕಾಲ ಗೌರವಿಸಲು ಕಾರಣವೇನು ಎಂದು ಕೇಳಿದಾಗ ದ್ರೌಪದಿ ನಾನು ಅಹಂಕಾರ ಮತ್ತು ಕೋಪದಿಂದ ಸದಾ ದೂರವಿರುತ್ತೀನಿ. ನನಗೆ ನನ್ನ ಗಂಡಂದಿರೇ ಸರ್ವಸ್ವ, ನನ್ನ ಮನಸ್ಸು, ಬುದ್ಧಿ, ದೇಹ ಸದಾ ಈ ಐವರ ಶ್ರೇಯಸ್ಸಿನ ಬಗ್ಗೆನೇ ಚಿಂತಿಸುತ್ತದೆ. ನಾನು ಅವರನ್ನು ಹೊರತುಪಡಿಸಿ ಪರಪುರುಷರ ಬಗೆ ನಾನು ಯಾವತ್ತಿಗೂ ಕನಸಿನಲ್ಲಿ ಯೋಚಿಸಿಲ್ಲ. ಹೀಗಾಗಿ ಅವರ ಮೇಲೆ ನನ್ನ ಮೇಲೆ ಅಪಾರ ಪ್ರೀತಿ, ಗೌರವ ಎಂದು ತಿಳಿಸುತ್ತಾಳೆ. ಈ ಮೂಲಕ ಸಾದ್ವಿಯಾದವಳು ಯಾವ ರೀತಿ ಮನೋಧರ್ಮ ಹೊಂದಿರಬೇಕೆಂದು ಸ್ಪಷ್ಟಪಡಿಸುತ್ತಾಳೆ.

ದ್ರೌಪದಿಯ ವಿಚಿತ್ರ ಬ್ರಹ್ಮಚರ್ಯೆ ಪಾಲನೆ: ದ್ರೌಪದಿ ಐವರನ್ನು ಮದುವೆಯಾಗಿದ್ದರೂ ಸಹ ಆಕೆ ನಿತ್ಯ ಕನ್ಯೆಯಾಗಿರಬಲ್ಲ ಶಕ್ತಿಯನ್ನು ವರವಾಗಿ ಪಡೆದಿದ್ದಾಳೆ ಎಂದು ಹೇಳಲಾಗುತ್ತದೆ. ಮಹರ್ಷಿ ವೇದವ್ಯಾಸರು ದ್ರೌಪದಿಯನ್ನು ಐವರು ಪಾಂಡವರಿಗೆ ಕೊಟ್ಟು ಮದುವೆ ಮಾಡಿಸಿದ್ದರೂ ಕೂಡ ಅವರು ಆಕೆಗೆ ಕನ್ಯತ್ವದ ವರವನ್ನು ನೀಡಿದ್ದರು. ಹೀಗೆ ಪ್ರತಿ ಸಲ ತನ್ನ ಗಂಡಂದಿರ ಜೊತೆ ಇದ್ದು ಹೊರಬರುವಾಗ ಆಕೆಗೆ ತನ್ನ ಕನ್ಯತ್ವ ಪುನಃ ವಾಪಸ್ಸು ಲಭಿಸುತ್ತದೆ. ಈ ಮೂಲಕ ಆಕೆ ನಿತ್ಯ ಕನ್ಯೆಯಾಗಿಯೇ ಉಳಿಯಲು ಸಾಧ್ಯವಾಯಿತು ಎಂದು ಹೇಳಲಾಗುತ್ತದೆ.

ದ್ರೌಪದಿ ನಾಯಿಗಳಿಗೆ ಏಕೆ ಬಹಿರಂಗವಾಗಿ ಶೃಂಗಾರ ನಡೆಸುವಂತೆ ಶಾಪಕೊಟ್ಟಿದ್ದಳು: ದ್ರೌಪದಿ ಐವರನ್ನು ಮದುವೆಯಾದ ಬಳಿಕ ನಿಯಮದ ಹಾಗೇ ಪ್ರತಿ ವರ್ಷ ಅಂದರೆ ಒಂದೊಂದು ವರ್ಷ ಒಬ್ಬೊಬ್ಬರ ಜೊತೆ ಸಂಸಾರ ನಡೆಸುವಂತೆ ಒಪ್ಪಿತವಾಗಿತ್ತು. ಆಕೆ ಯಾರೊಂದಿಗಾದರೂ ಏಕಾಂತದಲ್ಲಿದ್ದಾಗ ಇನ್ನೊಬ್ಬರು ಆಕೆಯನ್ನು ಬಯಸಿ ನಿಯಮ ಉಲ್ಲಂಘನೆ ಮಾಡಿ ಬಂದಲ್ಲಿ ಅವರು ಕಾಡಿಗೆ ತೆರಳಿ ಅತ್ಯಂತ ಕಠಿಣ ವನವಾಸ ಮಾಡಬೇಕೆಂಬುದು ಶರತ್ತನ್ನು ಹಾಕಿದ್ದಳು. Draupadi

ಹೀಗಿರುವಾಗ ಒಮ್ಮೆ ಯುಧಿಷ್ಠಿರ ಹಾಗೂ ದ್ರೌಪದಿ ಇಬ್ಬರು ಏಕಾಂತದಲ್ಲಿ ಮೈಮರೆತಿದ್ದರು. ಧರ್ಮ ತನ್ನ ಪಾದುಕೆಗಳನ್ನು ಹೊರಬಿಟ್ಟು ದ್ರೌಪದಿಯ ಜೊತೆ ಒಳಗೆ ಇದ್ದ, ಈ ಸಮಯದಲ್ಲಿ ನಾಯಿಯೊಂದು ಅವನ ಪಾದುಕೆಗಳನ್ನು ಕದ್ದು ಹೋಯಿತು. ಇದೇ ಸಮಯಕ್ಕೆ ಅಲ್ಲಿಗೆ ಬಂದಂತಹ ಅರ್ಜುನ ಒಳಗೆ ಅಣ್ಣ ಯುಧಿಷ್ಠಿರ ಸಂಗತಿ ಗೊತ್ತಾಗದೇ ದ್ರೌಪದಿಯ ಬಳಿಗೆ ಹೋಗಲು ಬಂದಾಗ ಅಣ್ಣ ಮತ್ತು ದ್ರೌಪದಿ ಏಕಾಂತದಲ್ಲಿ ಇದ್ದಿದ್ದು ಗೊತ್ತಾಗುತ್ತದೆ.

ತಿಳಿಯದೇ ಈ ನಿಯಮ ಮೀರಿದ್ದರಿಂದ ಅರ್ಜುನ ಕಾಡಿಗೆ ವನವಾಸಕ್ಕೆ ಹೋಗುತ್ತಾನೆ. ಇದನ್ನು ಗಮನಿಸಿದ ದ್ರೌಪದಿ ಇಲ್ಲಿ ತಪ್ಪು ಅರ್ಜುನನದ್ದು ಅಲ್ಲ ಈ ನಾಯಿಯದ್ದು ಎಂದು ಗೊತ್ತಾಗಿ ಇಂತಹ ಕೃತ್ಯ ಎಸಗಿದಂತಹ ನಾಯಿಗೆ ಇನ್ನು ಮುಂದೆ ನೀವು ಕೂಡ ಬಹಿರಂಗವಾಗಿ ಶೃಂಗಾರ ನಡೆಸುವಂತೆ ಆಗಲಿ, ನೀವು ಏಕಾಂತದಲ್ಲಿ ಇರುವುದು ಜಗತ್ತಿಗೆ ಗೊತ್ತಾಗುವಂತೆ ಆಗಲಿ ಎಂದು ಶಾಪಕೊಡುತ್ತಾಳೆ.

ದ್ರೌಪದಿ ಭೀಮನಿಗೆ ಕೊಟ್ಟ ವಾಗ್ದಾನ: ಐವರು ಪತಿಯರಲ್ಲಿ ಅತೀ ಹೆಚ್ಚು ಪ್ರೀತಿಸುತ್ತಿದ್ದವನು ಭೀಮ ಎಂದು ಹೇಳಲಾಗುತ್ತದೆ. ತುಂಬಿದ ಸಭೆಯಲ್ಲಿ ದ್ರೌಪದಿಯ ವಸ್ತ್ರಾಪರಣ ನಡೆದಾಗ ಈ ಭೀಮನ ಆ ಅನ್ಯಾಯದ ವಿರುದ್ಧ ಸೆಟೆದು ನಿಂತದ್ದು. ಮತ್ತು ಆ ಸಭೆಯಲ್ಲಿ ಆ ವೇದನೆಗೆ ಕಾರಣರಾದವರನ್ನು ಹೆಚ್ಚಾಗಿ ಮುಂದೆ ಕುರುಕ್ಷೇತ್ರದಲ್ಲಿ ಕೊಂದದ್ದು ಕೂಡ ಭೀಮನೇ.

ಅಜ್ಞಾತದಲ್ಲಿದ್ದಾಗ ಆಕೆಗೆ ತೊಂದರೆಕೊಟ್ಟ ಕೀಚಕನನ್ನು ವಧಿಸಿದ್ದು ಕೂಡ ಇದೇ ಭೀಮ. ಕೊನೆಯಲ್ಲಿ ಎಲ್ಲರೂ ಸುಮೇರು ಪರ್ವತದ ಮೂಲಕ ಸ್ವರ್ಗಕ್ಕೆ ಹೋಗುವಾಗ ಕಾಲು ಜಾರಿ ಬೀಳುವಂತಿದ್ದ ದ್ರೌಪದಿಯನ್ನು ಭೀಮ ತಕ್ಷಣ ರಕ್ಷಿಸುತ್ತಾನೆ. ಆಗ ದ್ರೌಪದಿ ಮುಂದಿನ ಜನ್ಮದಲ್ಲಿ ಒಬ್ಬನೇ ಗಂಡನನ್ನು ಪಡೆಯುವ ಯೋಗ ಇದ್ದರೆ ನಾನು ಖಂಡಿತವಾಗಿ ಆಗ ನಿನ್ನನ್ನೇ ನನ್ನ ಪತಿಯಾಗಿ ಬಯಸುತ್ತೇನೆ ಎಂದು ಹೇಳುತ್ತಾಳೆ. ಇದೇ ಕೂಡ ನನ್ನ ವಾಗ್ದಾನ ಎಂದು ಹೇಳುತ್ತಾಳೆ.

ಸದ್ಗುಣೆ ಸಂಪನ್ನೆಯಾದ ದ್ರೌಪದಿ ಸ್ವರ್ಗಕ್ಕೆ ಹೋಗಲು ಏಕೆ ಸಾಧ್ಯವಾಗಲಿಲ್ಲ: ಕೃಷ್ಣಾವತಾರ ಮುಗಿದ ಮೇಲೆ ಪಾಂಡವರು ತಮ್ಮ ವಂಶದ ಕಿರಿಯರಿಗೆ ಸಾಮ್ರಾಜ್ಯವನ್ನು ವಹಿಸಿಕೊಟ್ಟು ತಾವು ಸುಮೇರು ಪರ್ವತದ ಮೂಲಕ ಸ್ವರ್ಗದ ಕಡೆಗೆ ಪ್ರಯಾಣವನ್ನು ಬೆಳೆಸುತ್ತಾರೆ. ಆದರೇ ಮಾರ್ಗ ಮಧ್ಯೆ ದ್ರೌಪದಿಗೆ ಸ್ವರ್ಗ ಕೈ ತಪ್ಪಿ ಹೋಗುತ್ತದೆ. ಇದರಿಂದ ಆಶ್ಚರ್ಯಚಕಿತನಾದಂತಹ ಭೀಮ ಅಣ್ಣ ಧರ್ಮರಾಯನನ್ನು ಉದ್ದೇಶಿಸಿ ದ್ರೌಪದಿ ನಮ್ಮ ಕೈಯ ಹಿಡಿದ ಮೇಲೆ ಅನೇಕ ಕಷ್ಟಗಳನ್ನು ಅನುಭವಿಸಿದಳು.

ಆಕೆ ಯಾವ ತಪ್ಪನ್ನು ಕೂಡ ಮಾಡಲಿಲ್ಲ. ಹೀಗಿರುವಾಗ ಏಕೆ ಆಕೆಗೆ ಸ್ವರ್ಗ ಪ್ರಾಪ್ತಿಯಾಗಲಿಲ್ಲ ಎಂದು ಕೇಳುತ್ತಾನೆ. ಆಗ ಅಣ್ಣನಾದ ಯುಧಿಷ್ಠಿರ ಅದಕ್ಕೆ ಉತ್ತರಿಸುತ್ತಾ ಆಕೆ ನಮ್ಮೊಂದಿಗೆ ಅನೇಕ ಕಷ್ಟಗಳನ್ನು ಅನುಭವಿಸಿದಳು ಆದರೇ ದ್ರೌಪದಿ ನಮ್ಮೆಲ್ಲರಿಗಿಂತ ಅರ್ಜುನನನ್ನು ಹೆಚ್ಚಾಗಿ ಪ್ರೀತಿಸಿದಳು. ಆಕೆಗೆ ಅವನ ಕಡೆಗೆ ಹೆಚ್ಚಿನ ಮೋಹವಿತ್ತು. ಇದನ್ನು ಆಕೆ ನಮ್ಮೊಂದಿಗೆ ಕೊನೆಯವರೆವಿಗೂ ಹೇಳಲಿಲ್ಲ. ಅದಕ್ಕಾಗಿಯೇ ಆಕೆಗೆ ಸ್ವರ್ಗ ಸಿಗಲಿಲ್ಲವೆಂದು ಧರ್ಮರಾಯ ತಿಳಿಸುತ್ತಾನೆ.

ದ್ರೌಪದಿಗೆ ಕರ್ಣನಲ್ಲಿ ಇದ್ದಂತಹ ರಹಸ್ಯ ಮೋಹ: ನಾವು ಹಲವು ಸಲ ಕೇಳಿದ್ದೇವೆ. ಮಹಾಸಾದ್ವಿ ಎನಿಸಿಕೊಂಡ ದ್ರೌಪದಿ ಕರ್ಣನಿಗೆ ಮನಸೋತಿದ್ದಳು ಎಂಬುದರ ಬಗ್ಗೆ ಇದು ಊಹೆ ಅಲ್ಲ ಅದರ ಬಗ್ಗೆ ಅವಳೇ ಸ್ವತಃ ತಿಳಿಸುವಂತಹ ಕುತೂಹಲಕಾರಿ ಪ್ರಸಂಗ ಮಹಾಭಾರತದಲ್ಲಿ ಬರುತ್ತದೆ. ಪಾಂಡವರು ವನವಾಸದಲ್ಲಿದ್ದಂತಹ ಒಂದು ಸಲ ಅಸಾಧ್ಯ ಹಸಿವು ಬಾಧಿಸುತ್ತದೆ.

ಈ ಸಮಯದಲ್ಲಿ ಅವರ ಎದುರಿಗೆ ಒಂದು ನೇರಳೆ ವೃಕ್ಷ ಕಾಣಿಸುತ್ತದೆ. ಅದರ ತುದಿಯಲ್ಲಿ ಒಂದೇ ಒಂದು ನೇರಳೆ ಗೊಂಚಲು ಕಾಣಿಸುತ್ತದೆ. ದ್ರೌಪದಿ ಅದನ್ನು ನೋಡಿ ತಿನ್ನಲು ಬಯಸಿದಾಗ ಭೀಮ ಕಿತ್ತು ಅದನ್ನು ಎಲ್ಲರಿಗೂ ಕೊಡುತ್ತಾನೆ. ಆಗ ಪ್ರತ್ಯಕ್ಷನಾದಂತಹ ಶ್ರೀಕೃಷ್ಣ ಇದು ಇಲ್ಲಿ ವಾಸವಿರುವ ಮುನಿ ಒಬ್ಬನ 12 ವರ್ಷದ ಆಹಾರ. ಆತ ಪ್ರತಿ 12 ವರ್ಷಗಳಿಗೊಮ್ಮೆ ಇದನ್ನು ಸೇವಿಸಿ ತನ್ನ ಹಸಿವನ್ನು ನೀಗಿಸಿಕೊಳ್ಳುತ್ತಾನೆ.

ಇದನ್ನು ತಿಳಿಯದೇ ನೀವು ತಿಂದಿದ್ದೀರಿ, ಈಗ ಅವನು ಬಂದರೆ ಅವನ ಶಾಪಕ್ಕೆ ಗುರಿಯಾಗುತ್ತೀರಿ, ಆದ್ದರಿಂದ ನೀವೆಲ್ಲಾ ಯಾರಿಗೂ ಕೂಡ ಹೇಳದಂತಹ ನಿಮ್ಮ ಬದುಕಿನ ರಹಸ್ಯ ಸತ್ಯವನ್ನು ಒಬ್ಬೊಬ್ಬರಾಗಿ ಬಂದು ಎಲ್ಲರೂ ಹೇಳಿದರೆ ಆ ನೇರಳೆ ಮತ್ತೆ ರೂಪುಗೊಳ್ಳುತ್ತದೆಂದು ಹೇಳುತ್ತಾನೆ. ಅವನ ಇಚ್ಛೆಯಂತೆ ಎಲ್ಲರೂ ಒಂದೊಂದು ಸತ್ಯವನ್ನು ಹೇಳುತ್ತಾರೆ.

ನಂತರ ದ್ರೌಪದಿ ಸರದಿ ಬಂದಾಗ ತಾನು ಐವರು ಗಂಡಂದಿರನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೀನಿ. ಇವರು ನನ್ನ ಪಂಚೇಂದ್ರಿಯಗಳಿಗೆ ಸಮ ಎಂದು ಹೇಳುತ್ತಾಳೆ. ಆದರೇ ಅಲ್ಲಿ ನೇರಳೆ ರೂಪುಗೊಳ್ಳುವುದಿಲ್ಲ. ಶ್ರೀಕೃಷ್ಣ ನೀನು ಎಲ್ಲರಿಂದಲೂ ಏನೋ ವಿಷಯ ಮುಚ್ಚಿಡುತ್ತಿದ್ದೀಯಾ, ಅದು ಏನು ಎಂದು ಎಲ್ಲರಿಗೂ ಮುಚ್ಚುಮರೆಯಿಲ್ಲದೇ ತಿಳಿಸು ಎಂದು ಹೇಳಿದ ಆಗ ದ್ರೌಪದಿ ತಾನು ತನ್ನ ಮದುವೆಗೂ ಮುನ್ನ ಈ ಐವರಿಗಿಂತ ಮೊದಲು ಕರ್ಣನನ್ನು ಪ್ರೀತಿಸುತ್ತಿದ್ದೆ.

ಆತ ಸೂತಪುತ್ರನೆಂದು ಎಲ್ಲರೂ ಹೇಳಿದ್ದರಿಂದ ನಾನೂ ನನ್ನ ಇಚ್ಛೆಯನ್ನು ತಿಳಿಸದೇ ಸುಮ್ಮನಾದೇ ಎಂದು ಹೇಳುತ್ತಾಳೆ. ಆಗ ತಕ್ಷಣ ನೇರಳೆ ಪ್ರತ್ಯಕ್ಷವಾಗುತ್ತದೆ. ಇಲ್ಲಿ ದ್ರೌಪದಿಯ ಹೇಳಿಕೆ ದ್ವಂದ್ವ ಎನಿಸಬಹುದು. ಆದರೆ ಆಕೆ ಕನ್ಯೆ ಆಗಿದ್ದಳು. ಯಾರನ್ನು ಬೇಕಾದರೂ ಪ್ರೀತಿಸುವ, ಮೋಹಿಸುವ ಸ್ವಾತಂತ್ರವಿತ್ತು. ಹೀಗಿರುವಾಗ ಪಾಂಡವರಿಗಿಂತ ಮುಂಚೆ ಅಲ್ಲಿ ಬಂದು ನಿಂತ ಕರ್ಣನ ಮೇಲೆ ಆಕೆಗೆ ಇಷ್ಟ ಆಗಿದ್ದು ಯಾವ ತಪ್ಪು ಇಲ್ಲವೆಂಬುದನ್ನು ಕೃಷ್ಣ ಅರ್ಥ ಮಾಡಿಸುತ್ತಾನೆ. ಇಷ್ಟು ದ್ರೌಪದಿಯ ಬಗ್ಗೆ ಕೆಲವು ಆಸಕ್ತಿಕರ ವಿಚಾರಗಳು.

Leave A Reply

Your email address will not be published.