Ultimate magazine theme for WordPress.

Eat this leaf ಬೆಳಗ್ಗೆ ಈ ಎಲೆ ತಿನ್ನಿ 7 ದಿನದಲ್ಲಿ ತೂಕ ಕಡಿಮೆಯಾಗುತ್ತೆ

0 40,491

Eat this leaf in the morning and lose weight in 7 days ಸ್ನೇಹಿತರೇ ತುಂಬಾ ಜನ ತೂಕ ಕಡಿಮೆಯಾಗಿಲ್ಲವೆಂದು ಚಿಂತೆ ಮಾಡುತ್ತಿರುತ್ತಾರೆ. ಕೇವಲ ಏಳು ದಿನದಲ್ಲಿ ನಿಮ್ಮ ಬೊಜ್ಜನ್ನ ಕರಗಿಸಿಕೊಳ್ಳುವ ಮನೆಮದ್ದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.ಸುಲಭವಾಗಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಬೇಕಾದಂತಹ ಪದಾರ್ಥವೆಂದರೆ ಒಂದು ಪಾತ್ರೆಗೆ ಒಂದು ಗ್ಲಾಸ್ ನೀರು, ಒಂದು ಸ್ಪೂನ್ ನಷ್ಟು ಜೀರಿಗೆಯನ್ನು ಹಾಕಬೇಕು.

ಜೀರಿಗೆಯೂ ನಮ್ಮ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ನಮ್ಮ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ನಮ್ಮ ದೇಹದಲ್ಲಿ ಶೇಖರಣೆಯಾದಂತಹ ಕೊಬ್ಬನ್ನು ಕರಗಿಸುವ ಶಕ್ತಿ ಈ ಜೀರಿಗೆಗೆ ಇದೆ. ಈ ಜೀರಿಗೆಯು ನಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ನಮ್ಮ ದೇಹದಲ್ಲಿ ಕೊಬ್ಬಾಗಲಿ, ಬೇಡದ ಕಲ್ಮಶವನ್ನು ಹೊರಹಾಕಲು ಜೀರಿಗೆಯು ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ. Eat this leaf

ಈ ನೀರಿಗೆ ಒಂದು ಸೋಂಪು ಕಾಳನ್ನು ಹಾಕಿ. ಸೋಂಪು ಕಾಳು ನಾವು ತಿಂದಂತಹ ಆಹಾರ ಚೆನ್ನಾಗಿ ಜೀರ್ಣವಾಗಲು ತುಂಬಾ ಒಳ್ಳೆಯದು. ಹಾಗಾಗಿ ಈ ಸೋಂಪು ಕಾಳು ನಮ್ಮ ದೇಹದಲ್ಲಿ ಸೇರಿಕೊಂಡಿರುವ ಬೊಜ್ಜನ್ನು ಕರಗಿಸುವ ಶಕ್ತಿಯನ್ನು ಹೊಂದಿದೆ. ನಮ್ಮ ದೇಹದ ತೂಕ ಹೆಚ್ಚಾಗಲು ಬಿಡುವುದಿಲ್ಲ ಒಂದು ವೇಳೆ ಹೆಚ್ಚಾದರೇ ಅದನ್ನು ಸಮತೋಲನದಲ್ಲಿರಿಸುವ ಶಕ್ತಿ ಈ ಸೋಂಪು ಕಾಳಿಗೆ ಇದೆ.

ಸಾಂಪ್ರಾದಾಯಕವಾಗಿ ವೀಳ್ಯೆದೆಲೆಯನ್ನ ಬಳಸುತ್ತೇವೆ ಜೊತೆಗೆ ಇದರಿಂದ ಆರೋಗ್ಯಕ್ಕೂ ಒಳ್ಳೆಯದು. ನಾವು ಊಟವಾದ ನಂತರ ವೀಳ್ಯೆದೆಲೆಯನ್ನ ತಿನ್ನುತ್ತೇವೆ. ಕಾರಣ ನಾವು ತಿಂದಂತಹ ಆಹಾರ ಜೀರ್ಣವಾಗಬೇಕೆಂದು ಇದರ ಜೊತೆಗೆ ನಾವು ತಿಂದಂತಹ ಆಹಾರ ಶಕ್ತಿಯಾಗಿಯೂ ಪರಿವರ್ತನೆಯಾಗುತ್ತದೆ. ದೇಹದಲ್ಲಿ ಸೇರಿಕೊಂಡಂತಹ ಕೊಬ್ಬನ್ನ ಕರಗಿಸುವ ಶಕ್ತಿಯೂ Eat this leaf

ಈ ವೀಳ್ಯೆದೆಲೆಗೆ ಇದೆ ಮತ್ತು ನಾವು ತಿಂದಂತಹ ಆಹಾರವು ಬೊಜ್ಜಾಗಿ ಶೇಖರಣೆಗೊಳ್ಳುವುದಿಲ್ಲ. ಇಷ್ಟೊಂದು ಆರೋಗ್ಯಕರ ಲಾಭವಿರುವುದರಿಂದ ಹಿಂದಿನವರು ಇದನ್ನು ಸೇವಿಸುತ್ತಿದ್ದರು. ಮೂರು ವೀಳ್ಯೆದೆಲೆಯ ತೊಟ್ಟುಗಳನ್ನ ತೆಗೆದು ಚೆನ್ನಾಗಿ ತೊಳೆದು ಪಾತ್ರೆಗೆ ಹಾಕಬೇಕು ಮತ್ತು ಅರ್ಧ ಹೋಳು ನಿಂಬೆಹಣ್ಣನ್ನು ಸಿಪ್ಪೆ ಸಹಿತ ಹಾಕಬೇಕು. ಶುಗರ್ ಮತ್ತು ಥೈರಾಯ್ಡ್ ಪೇಷೆಂಟ್ ಗಳಿಗೆ ಇದು ತುಂಬಾ ಒಳ್ಳೆಯದು.

ಪಾತ್ರೆಯನ್ನು ಸ್ಟವ್ ಮೇಲೆ ಇಟ್ಟು ಮೀಡಿಯಂ ಉರಿಯಲ್ಲಿ ಚೆನ್ನಾಗಿ ಕುದಿಸಬೇಕು. ಎರಡರಿಂದ ಮೂರು ನಿಮಿಷ ಚೆನ್ನಾಗಿ ಕುದಿಯಬೇಕು. ಈ ನೀರಿನ ಬಣ್ಣದ ಸ್ವಲ್ಪ ಬದಲಾಗುತ್ತದೆ. ಕಷಾಯ ತಯಾರಾಗುತ್ತದೆ. ಇದನ್ನು ಸೋಸಿಕೊಳ್ಳಬೇಕು. ಪ್ರತಿದಿನ ಈ ಕಷಾಯ ಕುಡಿಯುವುದರಿಂದ ತೂಕವನ್ನು ಸುಲಭವಾಗಿ ಕಡಿಮೆಮಾಡಿಕೊಳ್ಳಬಹುದು. Eat this leaf

ನಮ್ಮ ಎತ್ತರಕ್ಕೆ ತಕ್ಕನಾಗಿ ನಮ್ಮ ತೂಕವಿರಬೇಕು ಅದನ್ನು ಬ್ಯಾಲೆನ್ಸ್ ಮಾಡಲು ಈ ಮನೆಮದ್ದು ತುಂಬಾ ಒಳ್ಳೆಯದು. ಈ ಮನೆಮದ್ದಿನ ಜೊತೆಗೆ ಆಹಾರದಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆ, ಕರಿದ ಪದಾರ್ಥಗಳ ಸೇವನೆ ಕಡಿಮೆ ಮಾಡುವುದು ಸ್ವಲ್ಪ ವಾಕಿಂಗ್, ಲಘು ವ್ಯಾಯಾಮ ಮಾಡಿದರೇ ಒಳ್ಳೆಯದು. ಈ ಮನೆಮದ್ದನ್ನು ಸಕ್ಕರೆ, ಬೆಲ್ಲ ಏನನ್ನು ಮಿಕ್ಸ್ ಮಾಡಿಕೊಳ್ಳದೇ ಕುಡಿದರೇ ಒಳ್ಳೆಯದು.

ಒಂದು ವೇಳೆ ಕುಡಿಯಲು ಕಷ್ಟವೆನಿಸಿದರೇ ಉಗುರು ಬೆಚ್ಚಗಿನ ಕಷಾಯಕ್ಕೆ ಒಂದು ಸ್ಪೂನ್ ನಷ್ಟು ಜೇನುತುಪ್ಪವನ್ನು ಸೇರಿಸಿಕೊಂಡು ಕುಡಿಯಬಹುದು. ಈ ಕಷಾಯವನ್ನು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಈ ಕಷಾಯವನ್ನು ಕುಡಿಯಬೇಕು. ಹತ್ತು ವರ್ಷ ಮೇಲ್ಪಟ್ಟ ಮಕ್ಕಳುಗಳು

ಕೂಡ ಇದನ್ನು ಕುಡಿಯಬಹುದು. ಬೆಳಿಗ್ಗೆ ಸಮಯದಲ್ಲಿ ಕುಡಿಯಲ್ ಸಾಧ್ಯವಾಗದಿದ್ದಾಗ ರಾತ್ರಿ ಊಟವಾದ ಮೇಲೆ ಮಲಗುವ ಒಂದು ಗಂಟೆ ಮುಂಚೆ ಈ ಕಷಾಯವನ್ನು ಕುಡಿಯಿರಿ ಒಳ್ಳೆಯ ಫಲಿತಾಂಶ ಬರುತ್ತದೆ. ಇದನ್ನು ಹದಿನೈದು ದಿನಗಳವರೆಗೆ ಕುಡಿಯಿರಿ ನಿಮಗೆ ತಿಳಿಯುತ್ತದೆ. Eat this leaf

Leave A Reply

Your email address will not be published.