Ultimate magazine theme for WordPress.

glass skin care ಗ್ಲಾಸ್ ಸ್ಕಿನ್ ಸೀಕ್ರೆಟ್ 40 ವರ್ಷದವರು25 ರಂತೆ ಕಾಣ್ತಾರೆ

0 3,163

glass skin care healthtips ಸ್ನೇಹಿತರೇ ಒಂದು ಸಲ ಈ ಮನೆಮದ್ದನ್ನು ಮಾಡಿಕೊಂಡರೇ ಸಾಕು ನಿಮ್ಮ ಚರ್ಮವು ಹೊಳಪಾಗುತ್ತದೆ. ಯಾವುದೇ ಬ್ಯೂಟಿಫಾರ್ಲರ್ ಗೆ ಹೋಗುವ ಅವಶ್ಯಕತೆಯೇ ಇಲ್ಲ. ಮನೆಯಲ್ಲಿರುವ ಪದಾರ್ಥಗಳಿಂದ ನಮ್ಮ ಮುಖವನ್ನು ಪಳಪಳ ಹೊಳೆಯುವಂತೆ ಮಾಡಿಕೊಳ್ಳಬಹುದು. ತುಂಬಾ ಜನರಿಗೆ ತುಂಬಾ ದಿನಗಳಿಂದ ಮುಖ ಕಪ್ಪಾಗಿರುತ್ತದೆ ಮತ್ತು ಡಲ್ ಆಗಿರುತ್ತದೆ,

ಆಯಿಲ್ ಸ್ಕಿನ್ ಆಗಿರುತ್ತದೆ, ಬಂಗು ಆಗಿರುತ್ತದೆ ಇಂತಹ ಎಲ್ಲಾ ಸಮಸ್ಯೆಗಳಿಗೆ ಸೂಪರ್ ಆಗಿರುವ ಮನೆಮದ್ದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ. ಈ ಫೇಶಿಯಲ್ ಅನ್ನು ಮನೆಯಲ್ಲಿ ತಯಾರಿ ಮಾಡಿಕೊಂಡು ಬಳಸಿದರೇ ಸಾಕು ನಿಮ್ಮ ಮುಖ ಪಳಪಳ ಹೊಳೆಯುತ್ತದೆ ಮತ್ತು ಒಳ್ಳೆಯ ಫಲಿತಾಂಶ ಸಿಗುತ್ತದೆ. ಈ ಫೇಶಿಯಲ್ ಅನ್ನು ಮಹಿಳೆಯರ ಜೊತೆಗೆ ಪುರುಷರು ಮಾಡಿಕೊಳ್ಳಬಹುದು. glass skin

ಅವರಿಗೆ ಇರುವ ಸ್ಕಿನ್ ಸಮಸ್ಯೆಗಳು ಕಡಿಮೆಯಾಗುತ್ತದೆ. ಈ ಫೇಶಿಯಲ್ ಮಾಡುವ ವಿಧಾನ ಹೇಗೇಂದರೆ ಮೊದಲು ನಮ್ಮ ಮುಖವನ್ನು ನೀಟಾಗಿ ತೊಳೆದುಕೊಳ್ಳಬೇಕು. ಒಂದು ಟಮೋಟೋ ಹಣ್ಣಿನ ರಸವನ್ನು ಒಂದು ಬಟ್ಟಲಿಗೆ ಟಮೋಟೋ ಹಣ್ಣುನ್ನು ಹಿಂಡಬೇಕು, ಎರಡರಿಂದ ಮೂರು ಸ್ಪೂನ್ ನಷ್ಟು ಟಮೋಟೋ ರಸವನ್ನು ತೆಗೆದುಕೊಳ್ಳಬೇಕು. glass skin

ಇದಕ್ಕೆ ಒಂದು ಸ್ಪೂನ್ ನಷ್ಟು ಜೇನುತುಪ್ಪವನ್ನು ಹಾಕಬೇಕು. ಟಮೋಟೋ ರಸ ನಮ್ಮ ಮುಖದಲ್ಲಿರುವ ಕೊಳೆಯನ್ನ ತೆಗೆಯುತ್ತದೆ ಮತ್ತು ನಮ್ಮ ಮುಖವನ್ನು ಬೆಳ್ಳಗೆ ಮಾಡುತ್ತದೆ. ಜೇನುತುಪ್ಪವು ನಮ್ಮ ಮುಖದಲ್ಲಿ ಯಾವುದೇ ಸಮಸ್ಯೆ ಇದ್ದರೂ ಕಡಿಮೆ ಮಾಡುತ್ತದೆ. ಈ ಮಿಶ್ರಣವನ್ನು ಮುಖಕ್ಕೆ ಲೈಟಾಗಿ ಮಸಾಜ್ ಮಾಡುವ ರೀತಿಯಲ್ಲಿ ಅಪ್ಲೈ ಮಾಡಬೇಕು.

ಈ ರೀತಿ ಮಾಡುವುದರಿಂದ ಮುಖದಲ್ಲಿ ಕಪ್ಪು ಕಲೆಗಳಿದ್ದರೇ ಹೋಗುತ್ತದೆ. ಕತ್ತಿಗೂ ಕೂಡ ಇದೇ ರೀತಿ ಅಪ್ಲೈ ಮಾಡಬೇಕು. ಎರಡೂ ಕೈಗಳಿಂದ ಒಂದರಿಂದ ಎರಡು ನಿಮಿಷ ಮಸಾಜ್ ಮಾಡಿದರೆ ಸಾಕು ನಂತರ ಒಂದರಿಂದ ಎರಡು ನಿಮಿಷ ಹಾಗೇ ಬಿಟ್ಟುಬಿಡಿ ನಿಮ್ಮ ಮುಖ ಹಾಗೆಯೇ ಒಣಗುತ್ತದೆ. ಒಂದು ಬಟ್ಟಲಿನಲ್ಲಿ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಂಡು glass skin

ನ್ಯಾಪ್ಕಿನ್ ಅನ್ನು ನೀರಿಗೆ ಅದ್ದಿ ಫೇಸ್ ಮೇಲೆ ಸ್ವಲ್ಪ ಶಾಖ ಕೊಡುವ ರೀತಿಯಲ್ಲಿ ಇಡಬೇಕು. ಒಂದು ವೇಳೆ ನಿಮ್ಮ ಮನೆಯಲ್ಲಿ ಸ್ಟೀಮರ್ ಇದ್ದರೇ ಅದನ್ನು ಬಳಸಿಕೊಳ್ಳಬಹುದು. ಸಾಫ್ಟ್ ಆಗಿ ಸ್ಕಿನ್ ಅನ್ನು ಟಚ್ ಮಾಡಬೇಕು. ಕಣ್ಣಿನ ಮೇಲೆ ಬಟ್ಟೆಯನ್ನು ಇಡಬೇಡಿ. ನಂತರ ಫೇಸ್ ಪ್ಯಾಕ್ ಅನ್ನು ಹಾಕಿಕೊಳ್ಳೋಣ. ಇದು ನಮ್ಮ ಸ್ಕಿನ್ ಅನ್ನು ಟೈಟ್ ಮಾಡುವುದರ ಜೊತೆಗೆ ನಮ್ಮ ಸ್ಕಿನ್ ಗೆ ಹೊಳಪನ್ನು ಕೊಡುತ್ತದೆ.

ಈ ಫೇಸ್ ಪ್ಯಾಕ್ ಮಾಡುವ ವಿಧಾನ ಹೇಗೇಂದರೆ ಅರ್ಧ ಪಚ್ಬಾಳೇಹಣ್ಣನ್ನು ತೆಗೆದುಕೊಳ್ಳಬೇಕು. ಈ ಬಾಳೇಹಣ್ಣು ನಮ್ಮ ಮುಖದಲ್ಲಿ ಬಂಗ್ ಆಗಿದ್ದರೇ ಅದನ್ನು ಕಡಿಮೆ ಮಾಡುವ ಗುಣ ಈ ಬಾಳೇಹಣ್ಣಿಗಿದೆ. ಮುಖ ಆಯಿಲ್ ತರಹ ಇದ್ದರೇ ಬಾಳೇಹಣ್ಣು ಒಳ್ಳೆಯದು. ಬಾಳೇಹಣ್ಣನ್ನು ಪೇಸ್ಟ್ ತರಹ ತಯಾರಿ ಮಾಡಿಕೊಳ್ಳಬೇಕು. ಇದು ನ್ಯಾಚುರಲ್ ಮತ್ತು ಮುಖಕ್ಕೆ ತಂಪಾದ ಅನುಭವವನ್ನು ಕೊಡುತ್ತದೆ. glass skin

ಈ ಪೇಸ್ಟ್ ಗೆ ಎರಡು ಹನಿ ನಿಂಬೆಹಣ್ಣಿನ ರಸವನ್ನು ಸೇರಿಸಬೇಕು ಇಲ್ಲವೇ ಕೆಲವರಿಗೆ ನಿಂಬೆಹಣ್ಣಿನ ರಸ ಸರಿಬರುವುದಿಲ್ಲ ಅಂತಹವರು ಟಮೋಟೊ ರಸವನ್ನು ಹಾಕಿಕೊಳ್ಳಬಹುದು. ಡ್ರೈಸ್ಕಿನ್ ಆಗಿದ್ದರೇ ಒಂದು ಸ್ಪೂನ್ ನಷ್ಟು ಕೊಬ್ಬರಿ ಎಣ್ಣೆ ಅಥವಾ ಬಾದಾಮಿ ಎಣ್ಣೆಯನ್ನು ಹಾಕಿಕೊಳ್ಳಿ, ಇಲ್ಲವೇ ಕೆನೆ ಇರುವ ಮೊಸರನ್ನು ಸೇರಿಸಬಹುದು. ಆಯಿಲ್ ಸ್ಕಿನ್ ಆಗಿದ್ದರೇ ಇವೆಲ್ಲವನ್ನು ಸೇರಿಸದೇ ಇದ್ದರೂ ಪರವಾಗಿಲ್ಲ.

ಈ ಪೇಸ್ಟ್ ಅನ್ನು ಮುಖಕ್ಕೆ ಅಪ್ಲೈ ಮಾಡಿಕೊಳ್ಳಿ. ಈ ರೀತಿಯ ಪೇಸ್ಟ್ ಮುಖದಲ್ಲಿರುವ ಕಲೆಗಳನ್ನು ಕಡಿಮೆಯಾಗುತ್ತಾ ಬರುತ್ತದೆ. ಈ ಪ್ಯಾಕ್ ಹಾಕಿದ ಮೇಲೆ ಎರಡರಿಂದ ಮೂರು ನಿಮಿಷ ಹಾಗೇ ಇಟ್ಟುಕೊಳ್ಳಿ ನಂತರ ತಣ್ಣೀರಿನಿಂದ ನಿಮ್ಮ ಮುಖವನ್ನು ತೊಳೆಯಿರಿ. ನಿಮ್ಮ ಮುಖದಲ್ಲಿ ಶೈನಿಂಗ್ ಬರುತ್ತದೆ. ನಿಮ್ಮ ಮುಖದಲ್ಲಿ ಬದಲಾವಣೆ ಕಾಣುತ್ತದೆ.

ಮಾರುಕಟ್ಟೆಯಲ್ಲಿ ಸಿಗುವ ಓಟ್ಸ್ ಅನ್ನು ಮಿಕ್ಸಿಗೆ ಹಾಕಿಕೊಂಡು ಪೌಡರ್ ಮಾಡಿಕೊಳ್ಳಬೇಕು. ಒಂದು ಬಟ್ಟಲಿಗೆ ಒಂದು ಸ್ಪೂನ್ ನಷ್ಟು ಓಟ್ಸ್ ಪೌಡರ್ ಗೆ ಒಂದು ಸ್ಪೂನ್ ನಷ್ಟು ಅಲೋವೆರಾ ಜೆಲ್ ಅನ್ನು ಹಾಕಿಕೊಳ್ಳಬೇಕು. ಚಿಟಿಕಿ ಅರಿಶಿಣಪುಡಿಯನ್ನು ಮಿಶ್ರಣ ಮಾಡಿ, ನಂತರ ಒಂದು ಸ್ಪೂನ್ ನಷ್ಟು ಸೋಯಾಸಾಸ್ ಅನ್ನು ಹಾಕಿಕೊಳ್ಳಬೇಕು. ಸೋಯಾಸಾಸ್ ಮುಖದಲ್ಲಿರುವ ಕಪ್ಪು ಕಲೆಗಳನ್ನು ಬಹಳ ಬೇಗ ಕಡಿಮೆ ಮಾಡುತ್ತದೆ.

ಈ ವಿಧಾನ ಮಾಡುವಾಗ ಅಕ್ಕಿಹಿಟ್ಟು ಅಥವಾ ಕಡಲೆಹಿಟ್ಟನ್ನು ಬಳಸಬಹುದು. ಜೊತೆಗೆ ಮೆಂತ್ಯ ಪುಡಿಯನ್ನು ಹಾಕಿಕೊಳ್ಳಬಹುದು ಮತ್ತು ಸೋಯಾಸಾಸ್ ಹಾಕದೇ ಇದ್ದರೂ ಈ ಪೇಸ್ಟ್ ಅನ್ನು ತಯಾರಿ ಮಾಡಬಹುದು. ಈ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿದಾಗ ಪೇಸ್ಟ್ ತಯಾರಾಗುತ್ತದೆ. ಇದನ್ನು ಮುಖಕ್ಕೆ ನೀಟಾಗಿ ಅಪ್ಲೈ ಮಾಡಬೇಕು. ಎರಡು ನಿಮಿಷ ಹಾಗೆಯೇ ಬಿಟ್ಟು ತಣ್ಣೀರಿನಿಂದ ನಿಮ್ಮ ಮುಖವನ್ನು ತೊಳೆದುಕೊಳ್ಳಿ. ಈ ವಿಧಾನದಿಂದ ನಿಮ್ಮ ಮುಖದ ಸಮಸ್ಯೆಯನ್ನ ನಿವಾರಣೆ ಮಾಡಿಕೊಂಡು ಹೊಳೆಯುವಂತೆ ಮಾಡಿಕೊಳ್ಳಬಹುದು.

Leave A Reply

Your email address will not be published.