Ultimate magazine theme for WordPress.

Goddess Lakshmi ಲಕ್ಷ್ಮಿ ದೇವಿ ಕೃಪದಿಂದ ಈ 4 ರಾಶಿಯವರು 

0 789

Goddess Lakshmi By the grace of Goddess Lakshmi these 4 Rasis ನಮ್ಮ ಹಿಂದೂ ಸಂಪ್ರದಾಯದಲ್ಲಿ ಯಶಸ್ಸು ಮತ್ತು ಸಂಪತ್ತಿನ ಅಧಿದೇವತೆ ಎಂದರೇ ಶ್ರೀಮಹಾಲಕ್ಷ್ಮಿ. ಸಂಪತ್ತುಗಳ ಗಳಿಕೆ, ಸಂಮೃದ್ಧಿ ಹಾಗೂ ಅದರ ವೃದ್ಧಿಗೆ ಆಕೆಯೇ ಪ್ರತಿನಿಧಿ. ಲೌಕಿಕ ಆಸೆಗಳನ್ನು ಹಾಗೂ ಇಚ್ಛೆಗಳನ್ನು ಈಡೇರಿಸಿಕೊಳ್ಳಲು ಶ್ರೀ ಮಹಾಲಕ್ಷ್ಮಿಯ ಕೃಪೆ ಅತ್ಯುತ್ತಮವಾಗಿರುತ್ತದೆ. ಸಂಪತ್ತಿನ ಅಧಿದೇವತೆ ಶ್ರೀಮಹಾಲಕ್ಷ್ಮಿಯ ಸಾನಿಧ್ಯ ದೊರೆತರೆ

ಸಾಕು ಜೀವನದಲ್ಲಿ ಯಶಸ್ಸು ಖಂಡಿತವಾಗಿ ಸಿಗುತ್ತದೆ. ಇನ್ನು ಲಕ್ಷ್ಮಿದೇವಿಯನ್ನು ಒಲಿಸಿಕೊಳ್ಳಲು ಅಷ್ಟು ಸುಲಭದ ಮಾತಲ್ಲ. ಒಮ್ಮೆ ಲಕ್ಷ್ಮಿದೇವಿಯನ್ನು ಒಲಿಸಿಕೊಂಡರೆ ಸಾಕು ಅದನ್ನು ಕಾಪಾಡಿಕೊಂಡು ಜೋಪಾನ ಮಾಡಿಕೊಳ್ಳುವುದು ಕೂಡ ಅಷ್ಟೇ ಕಷ್ಟವಾದ ವಿಷಯ. ಮುಖ್ಯವಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆಗಮಿಸಲಿರುವ ಈ ನಾಲ್ಕು ರಾಶಿಯವರಿಗೆ Goddess Lakshmi

ಲಕ್ಷ್ಮಿದೇವಿಯ ಅಪಾರ ಕೃಪೆ ಇದೆ. ಅಷ್ಟೇ ಅಲ್ಲದೇ ಸಾಕಷ್ಟು ಅನುಗ್ರಹ ಸಿಗುತ್ತದೆ ಆಗಿದ್ದರೆ ಆ ರಾಶಿಗಳು ಯಾವುವು ಆ ರಾಶಿಗಳಿಗೆ ಯಾವ ಕ್ಷೇತ್ರದಲ್ಲಿ ಲಾಭ ಸಿಗುತ್ತದೆ ಎಂದು ತಿಳಿಸುತ್ತೇನೆ. ಮೊದಲಿಗೆ ಕುಂಭರಾಶಿಯವರಿಗೆ ವರ್ಷದಲ್ಲಿ ಬಹಳ ಸುಗಮವಾಗಿ ಕುಂಭರಾಶಿಯವರಿಗೆ ಸಾಗಲಿದೆ. ಲಕ್ಷ್ಮಿದೇವಿಯ ಅಪಾರಕೃಪೆ ಕುಂಭರಾಶಿಯವರ ಮೇಲೆ ಇರಲಿದೆ. ವ್ಯವಹಾರದಲ್ಲಿ ಹೆಚ್ಚು ಲಾಭ ಸಿಗುತ್ತದೆ.

ಉನ್ನತ ಅಧಿಕಾರಿಗಳ ಸಹಾಯ ಸಹಕಾರ ಒದಗಿ ಬರುತ್ತದೆ. ಇನ್ನು ಈ ರಾಶಿಯವರಿಗೆ ತಂದೆಯಿಂದ ದ್ರವ್ಯದ ಅನುಕೂಲವಿದೆ ಮತ್ತು ಇನ್ನು ಆರೋಗ್ಯದ ವಿಷಯಕ್ಕೆ ಬಂದರೆ ಉದರಕ್ಕೆ ಸಂಬಂಧಪಟ್ಟ ತೊಂದರೆ ಉಂಟಾಗಬಹುದು. ವ್ಯಕ್ತಿಗಳು ಒಪ್ಪಿಕೊಂಡ ಜವಾಬ್ದಾರಿಯನ್ನ ಸರಿಯಾದ ಸಮಯಕ್ಕೆ ಪೂರೈಸಿ ಸನ್ಮಾನವನ್ನು ಪಡೆದುಕೊಳ್ಳುತ್ತಾರೆ.

ಇನ್ನು ಎರಡನೇಯದಾಗಿ ಮೇಷರಾಶಿ. ಮೇಷರಾಶಿಯವರಿಗೆ ಶ್ರೀಮಹಾಲಕ್ಷ್ಮಿಯ ಕೃಪೆ ಅಪಾರವಾಗಿದೆ. ವ್ಯಾಪಾರ-ವ್ಯವಹಾರ ಕ್ಷೇತ್ರದಲ್ಲಿ ಆಕೆಯ ಅನುಗ್ರಹದಿಂದ ಸಾಕಷ್ಟು ಸಫಲತೆಯನ್ನು ಹೊಂದುತ್ತಾರೆ. ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದರಿಂದ ಇನ್ನು ಅನೇಕ ಲಾಭಗಳನ್ನು ಹೊಂದಬಹುದು. ಮದುವೆಯಾಗದವರಿಗೆ ಕಂಕಣಬಲ ಕೂಡಿಬರಲಿದೆ. Goddess Lakshmi

ಮಕ್ಕಳ ಪ್ರಗತಿಯಿಂದ ಸಂತೋಷ ಉಂಟಾಗುತ್ತದೆ. ಸಂಶೋಧಕರಿಗೆ ಸರ್ಕಾರದಿಂದ ಮನ್ನಣೆ ದೊರೆಯುತ್ತದೆ. ಕಷ್ಟದ ವಿಚಾರಕ್ಕೆ ಬಂದರೆ ಮನೆಯಲ್ಲಿ ನಿಮಗೆ ಒಂಟಿತನ ಕಾಡುತ್ತದೆ, ಇನ್ನು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಒಂಟಿತನವನ್ನು ದೂರಮಾಡಿಕೊಂಡು ನೆಮ್ಮದಿಯನ್ನು ಕಾಣಬಹುದು. ಇನ್ನು 3ನೇಯದಾಗಿ ವೃಷಭರಾಶಿಯವರಿಗೆ ಕುಟುಂಬದವರ ಸಹಕಾರ ಸಂಪೂರ್ಣವಾಗಿ

ಇವರಿಗೆ ದೊರೆತು ಯಶಸ್ಸು ಕಾಣುತ್ತಾರೆ. ಇನ್ನು ಅನಾವಶ್ಯಕ ಖರ್ಚುಗಳನ್ನು ಕಡಿಮೆ ಮಾಡಿಕೊಂಡರೆ ಇನ್ನು ಒಳ್ಳೆಯದು ಆಗುತ್ತದೆ. ಇನ್ನು ಈ ರಾಶಿಯವರು ಸಂಸಾರದಲ್ಲಿ ನೆಮ್ಮದಿಯನ್ನು ಕಾಣುತ್ತಾರೆ. ಇನ್ನು ಮಕ್ಕಳ ವಿಚಾರದಲ್ಲಿ ಚಿಂತೆ ಬೇಡ ಹೀಗಾಗಿ ಈ ರಾಶಿಯವರಿಗೆ ವರ್ಷದಲ್ಲಿ ಸಾಕಷ್ಟು ಧನವೃದ್ಧಿಯಾಗಲಿದೆ. ಇನ್ನು 4ನೇಯದಾಗಿ ಧನುಸ್ಸು ರಾಶಿ.

ಈ ರಾಶಿಯವರಿಗೆ ಶ‍್ರೀ ಮಹಾಲಕ್ಷ್ಮಿಯ ಸಂಪೂರ್ಣ ಕೃಪಾಕಟಾಕ್ಷವಿದ್ದು ಧನಕನಕ ವಸ್ತುಗಳು ವಾಹನಗಳು ಅಭಿವೃದ್ಧಿಯಾಗುವುದರಲ್ಲಿವೆ. ಅಷ್ಟೇ ಅಲ್ಲದೇ ಸಂತೋಷ, ಸಮಾರಂಭಗಳು ಮನೆಯಲ್ಲಿ ಜರುಗಿ ಮನಸ್ಸಿಗೆ ನೆಮ್ಮದಿಯನ್ನು ಉಂಟುಮಾಡುತ್ತವೆ. ಹೀಗೆ ಈ ವರ್ಷದಲ್ಲಿ ಈ ನಾಲ್ಕು ರಾಶಿಯವರಿಗೆ ಶ್ರೀ ಮಹಾಲಕ್ಷ್ಮಿ ಸಂಪೂರ್ಣ ಕೃಪೆ ಇದೆ ಎಂದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೇಳಲಾಗುತ್ತದೆ. Goddess Lakshmi

Leave A Reply

Your email address will not be published.