Ultimate magazine theme for WordPress.

Mesha Rashi ಮೇಷ ರಾಶಿ ನವೆಂಬರ್ 2023 ಭವಿಷ್ಯ

0 8,871

Mesha Rashi Bhavishya November 2023 Kannada ದ್ವಾದಶ ರಾಶಿಗಳಲ್ಲಿ ಒಂದಾಗಿರುವ ಮೇಷರಾಶಿಯ ಬಗ್ಗೆ ನವೆಂಬರ್ ತಿಂಗಳಿನ ಮಾಸ ಭವಿಷ್ಯವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಈ ಮಾಸದಲ್ಲಿ ಯಾವ ರೀತಿಯ ಫಲವಿದೆ, ಯಾವ ಗ್ರಹಗಳ ಸಂಚಾರ ಹೇಗಿದೆ? ವೃತ್ತಿ ಜೀವನ ಹೇಗಿದೆ? ಎಂಬುದನ್ನು ಈ ಮಾಸ ಭವಿಷ್ಯದ ಮೂಲಕ ತಿಳಿದುಕೊಳ್ಳೋಣ. ದ್ವಾದಶರಾಶಿಗಳಲ್ಲಿ ಮೊದಲೇ ರಾಶಿ ಮೇಷರಾಶಿಯಾಗಿದೆ.

ಮೇಷರಾಶಿಯು ಮಂಗಳಗ್ರಹದಿಂದ ಆಳಲ್ಪಡುವ ರಾಶಿಯಾಗಿದೆ. ಪುಲ್ಲಿಂಗ ಚಿಹ್ನೆ, ಮಂಗಳ ಗ್ರಹದ ಒಡೆತನದಲ್ಲಿರುವುದರಿಂದ ಸ್ವಲ್ಪ ಮಟ್ಟಿಗೆ ಬಿಸಿಯಾಗಿರುತ್ತದೆಂದು ಹೇಳಬಹುದು. ಈ ರಾಶಿಯಲ್ಲಿ ಜನಿಸಿದವರು ಆಕ್ರಮಣಕಾರಿ ಸ್ವಭಾವ ಹಾಗೂ ದಕ್ಷವಾಗಿರುತ್ತಾರೆಂದು ಹೇಳಬಹುದು. ರಾಹು ಮತ್ತು ಕೇತುಗಳು ಅನುಕೂಲಕರ ಸ್ಥಾನದಲ್ಲಿ ಇರುವುದಿಲ್ಲ ಮತ್ತು ಕ್ರಮವಾಗಿ Mesha Rashi

1 ಮತ್ತು 7ನೇ ಮನೆಯಲ್ಲಿ ಇರುವುದರಿಂದ ಫಲಿತಾಂಶ ಮಧ್ಯಮ ಎಂದು ಹೇಳಬಹುದು. ಗುರು 9 ಮತ್ತು 12ನೇ ಮನೆ ಹಾಗೂ ಮೊದಲನೇ ಮನೆಯನ್ನು ಆಕ್ರಮಿಸಿಕೊಂಡಿದ್ದಾನೆ. ಮತ್ತು 2 ಮತ್ತು 7ನೇ ಮನೆಯ ಅಧಿಪತಿಯಾಗಿ ಶುಕ್ರನು ಅಕ್ಟೋಬರ್ 2023ರಿಂದ 5ನೇ ಮನೆಯನ್ನು ಆಕ್ರಮಿಸುತ್ತಾನೆ. ಈ ಮಾಸದಲ್ಲಿ ನವೆಂಬರ್ 16ರಿಂದ 8ನೇ ಮನೆಯಿಂದ ರಾಶಿ ಅಧಿಪತಿ ಮತ್ತು ಶಕ್ತಿಯ ಗ್ರಹ ಆಕ್ರಮಿಸಿಕೊಂಡು ಸ್ಥಳೀಯರು, Mesha Rashi

ವೃತ್ತಿ, ಆರೋಗ್ಯ, ಸಂಬಂಧಗಳಿಗೆ ಮಿಶ್ರಫಲಿತಾಂಶ ಸಿಗುತ್ತದೆ. ಈ ಮಾಸದಲ್ಲಿ ವೃತ್ತಿ ಜೀವನವು ಮಧ್ಯಮವಾಗಿರುತ್ತದೆ. ಈ ರಾಶಿಗೆ ಸೇರಿದವರು ಕಠಿಣ ಕೆಲಸದಲ್ಲಿ ಮನ್ನಣೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಕೆಲಸವನ್ನು ಸ್ವಲ್ಪ ಎಚ್ಚರಿಕೆಯಿಂದ ಮಾಡಿಕೊಳ್ಳಿ. ಈ ರಾಶಿಯವರು ಚಿಂತೆಗೂ ಒಳಗಾಗಬಹುದು. Mesha Rashi

ಹಾಗಾಗಿ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಈ ರಾಶಿಯವರಿಗೆ ಈ ಮಾಸದಲ್ಲಿ ಆರ್ಥಿಕ ಪರಿಸ್ಥಿತಿಯು ಸುಧಾರಣೆಯಾಗಲಿದೆ. ಹಾಗೆಯೇ ಹೆಚ್ಚಿನ ವ್ಯಚ್ಚವೂ ಬರುತ್ತದೆ. ಹಾಗೆಯೇ ಅವರು ತಮ್ಮ ಮಕ್ಕಳ ಬೆಳವಣಿಗೆಯ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ. 9ನೇ ಮನೆಯ ಅಧಿಪತಿಯಾದ ಗುರುವು

ಒಂದನೇ ಮನೆಯಲ್ಲಿ ಇರುವುದರಿಂದ ಅದು ದೃಷ್ಠಿಗೋಚರವಾಗುತ್ತದೆಂದು ಹೇಳಬಹುದು. ಈ ರಾಶಿಯವರು ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆಯನ್ನು ಅನುಭವಿಸಬಹುದು. ಈ ರಾಶಿವರು ಸಣ್ಣ ಪುಟ್ಟ ದೋಷ ಪರಿಹಾರವಾಗಲು ರಾಹು ಮತ್ತು ಕೇತುಗಳಿಗೆ ಹವನ ಮತ್ತು ಯಜ್ಞವನ್ನು ಮಾಡುವುದರ ಮೂಲಕ ದೋಷವನ್ನು ಪರಿಹಾರ ಮಾಡಿಕೊಳ್ಳಬಹುದು. Mesha Rashi

Leave A Reply

Your email address will not be published.