Ultimate magazine theme for WordPress.

palm historyಕೈಯಲ್ಲಿ ಈ ರೇಖೆ ಇದ್ರೆ ನೀವು ಅದೃಷ್ಟವಂತರು

0 3,105

palm history in kannadatopten ಹಸ್ತರೇಖೆಗಳನ್ನು ನೋಡಿ ಭವಿಷ್ಯ ಹೇಳುತ್ತೀವಿ ಎಂದು ಎಷ್ಟೋ ಜನ ಸುಳ್ಳು ಹೇಳಿ ಅವರ ಬಳಿ ದುಡ್ಡು ಕಸಿದು ಅವರ ಭವಿಷ್ಯವನ್ನು ರೂಪಿಸಿಕೊಳ್ಳುತ್ತಿದ್ದಾರೆ. ಆದರೂ ನಾವು ಹಸ್ತರೇಖೆಗಳನ್ನು ನಂಬುವುದನ್ನು ಬಿಟ್ಟಿಲ್ಲ. ಇದು ನಿಜವೋ ಸುಳ್ಳೋ ಗೊತ್ತಿಲ್ಲ, ಹಸ್ತರೇಖೆಗಳಲ್ಲಿ ಭವಿಷ್ಯವಿದೆ ಎನ್ನುವುದು ಸತ್ಯ. ಕಷ್ಟಪಟ್ಟು ನಿಷ್ಠೆಯಿಂದ ಕೆಲಸ ಮಾಡಿದ್ದರೇ ಇಂದಲ್ಲಾ ನಾಳೆ ಯಶಸ್ಸು ಸಿಕ್ಕೆ ಸಿಗುತ್ತದೆ.

ಅಂಗೈನಲ್ಲಿ X (ಎಕ್ಸ್) ಆಕಾರದ ರೇಖೆಯಿದ್ದರೇ ಅವರು ಅತ್ಯಂತ ಬುದ್ಧಿವಂತರು. ಈ ರೀತಿಯ ರೇಖೆ ಅಲೆಗ್ಸಾಂಡರ್, ಅಬ್ರಹಾಂ ಲಿಂಕನ್ ನಂತಹ ಮಹಾನ್ ವ್ಯಕ್ತಿಗಳ ಕೈಯಲ್ಲಿ ಇತ್ತು. ನಿಮ್ಮ ಕಿರುಬೆರಳು ಮತ್ತು ಹೆಬ್ಬೆರಳನ್ನು ಕೂಡಿಸಿದಾಗ ರಿಸ್ತಾ ಭಾಗ ಮೇಲೆ ಬಂದರೆ ಜೀವನದಲ್ಲಿ ಯಶಸ್ವಿ ವ್ಯಕ್ತಿಗಳಾಗುತ್ತೀರ. ಇಂತಹವರು ಬಹಳ ಬುದ್ಧಿವಂತರು ಮತ್ತು ಏನನ್ನಾದರೂ ಸಾಧಿಸುವ ಶಕ್ತಿ ಇವರಿಗಿರುತ್ತದೆ. palm history

ಸಾಮಾನ್ಯವಾಗಿ ನಮ್ಮೆಲ್ಲರ ರಕ್ತದ ಬಣ್ಣ ಕೆಂಪುಬಣ್ಣ. ಹೀಮೋಗ್ಲೋಬಿನ್ ರಕ್ತಕ್ಕೆ ಕೆಂಪುಬಣ್ಣವನ್ನು ಕೊಡುತ್ತದೆಂಬುದನ್ನು ವಿಜ್ಞಾನದಿಂದ ತಿಳಿದಿದ್ದೇವೆ. ಅದರೂ ಗೋಲ್ಡನ್ ರಕ್ತ ಇರುವುದು ಸತ್ಯ. ಇದು ತುಂಬಾ ಅಪರೂಪ. ಈ ರೀತಿಯ ಗೋಲ್ಡನ್ ರಕ್ತ ಹೊಂದಿರುವವರಿಗೆ ವಿಶೇಷ ಶಕ್ತಿ ಇರುತ್ತದೆ. ನಿಮ್ಮ ಪಾದಗಳನ್ನು ನೋಡಿಕೊಳ್ಳಿ. ಜನರಲ್ಲಿ ಐದು ರೀತಿಯ ಪಾದಗಳು ಇರುತ್ತವೆ.

ಅಂದರೇ ಐದು ಆಕಾರದ ಪಾದಗಳು. ಈಜಿಪ್ಟಿನ್, ರೋಮನ್, ಗ್ರೀಕ್, ಜರ್ಮನಿಕ್, ಸೆಲ್ಟಿಕ್. ನಿಮ್ಮ ಪಾದಗಳನ್ನ ಈ ಶೇಪ್ ಗಳಿಗೆ ಮ್ಯಾಚ್ ಮಾಡಿಕೊಳ್ಳಿ. ನಿಮ್ಮ ಪಾದ ಈಜಿಪ್ಟಿಯನ್ ಆಗಿದ್ದರೇ ನೀವು ತುಂಬಾನೇ ಸಾಮಾಜಿಕ ಜೀವಿಗಳು. ಜನರೊಡನೆ ತುಂಬಾ ಈಜಿಯಾಗಿ ಬೆರೆಯುತ್ತೀರ. ರೋಮನ್ ಇದ್ದರೇ ಅವರು ಎಲ್ಲವನ್ನು ಲಾಜಿಕ್ ಆಗಿ ಯೋಚನೆ ಮಾಡುತ್ತಾರೆ. palm history

ಅವರು ತುಂಬಾ ಕಾನ್ಫಿಡೆಂಟ್ ಆಗಿ ಇರುತ್ತಾರೆ. ಗ್ರೀಕ್ ಪಾದಗಳಿದ್ದರೇ ಅವರು ಸ್ವಲ್ಪ ನಾಚಿಕೆ ಸ್ವಭಾವದವರು. ಆದರೇ ಅತ್ಯಂತ ಬುದ್ಧಿವಂತರು. ಜರ್ಮನಿಕ್ ಪಾದಗಳನ್ನು ಹೊಂದಿದ್ದರೇ ಅವರ ಬುದ್ಧಿ ಸಾಮಾನ್ಯವಾಗಿರುತ್ತದೆ ಮತ್ತು ತುಂಬಾ ಹೃದಯವಂತ ವ್ಯಕ್ತಿಗಳಾಗಿರುತ್ತಾರೆ. ಸೆಲ್ಟಿಕ್ ಪಾದಗಳನ್ನು ಹೊಂದಿದ್ದರೆ ಇಂತಹ ವ್ಯಕ್ತಿಗಳಿಗೆ ಗಣಿತದಂತಹ ವಿಷಯಗಳು ಅತೀ ಸುಲಭವಾಗಿರುತ್ತದೆ.

ನಿಮ್ಮ ಹಸ್ತಗಳನ್ನ ಚಾಚಿ ನಿಮ್ಮ ಬೆರಳುಗಳನ್ನು ಪರೀಕ್ಷಿಸಿ ಅದರಲ್ಲಿ ಮೂರು ರೀತಿಯದ್ದಾಗಿರುತ್ತದೆ.
ತೋರ ಬೆರಳು ಉಂಗುರದ ಬೆರಳಿಗಿಂತ ಉದ್ದವಾಗಿರುತ್ತದೆ. ಉಂಗುರದ ಬೆರಳು ತೋರಬೆರಳಿಗಿಂತ ಉದ್ದ, ತೋರು ಬೆರಳು ಮತ್ತು ಉಂಗುರಬೆರಳು ಒಂದೇ ಸಮನಾಗಿರುವುದು. palm history

ನಿಮ್ಮ ತೋರ ಬೆರಳು ಉಂಗುರದ ಬೆರಳಿಗಿಂತ ಉದ್ದವಿದ್ದರೆ ನೀವು ತುಂಬಾ ಬುದ್ಧಿವಂತರು. ಉಂಗುರದ ಬೆರಳು ತೋರ ಬೆರಳಿಗಿಂತ ಉದ್ದವಿದ್ದರೇ ಇವರ ಐಕ್ಯೂ ಸಾಮಾನ್ಯರಿಗಿಂತ ಹೆಚ್ಚಾಗಿರುತ್ತದೆ. ತೋರ ಬೆರಳು ಮತ್ತು ಉಂಗುರದ ಬೆರಳು ಸಮನಾಗಿದ್ದರೇ ಎಲ್ಲರಿಗಿಂತ ಹೆಚ್ಚಿನ ಬುದ್ಧಿವಂತರಾಗಿರುತ್ತೀರಿ. ನಿಮಗೆ ಸರಿಸಾಟಿಗೆ ಯಾರು ಇಲ್ಲ ಮತ್ತು ಅದೃಷ್ಠವಂತರು, ಜೀವನದಲ್ಲಿ ಯಶಸ್ವಿಯನ್ನು ಕಾಣುತ್ತೀರಿ.

Leave A Reply

Your email address will not be published.