Ultimate magazine theme for WordPress.

RCB ಗೆ ಸಿಕ್ಕ ಕೋಚ್​ ಎಂಥವರು ಗೊತ್ತಾ?

0 289

RCB Know About RCB’s New Head Coach Andy Flower  ಆರ್ಸಿಬಿ ಅಥವಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದುವರೆವಿಗೂ ಕಪ್ ಗೆಲ್ಲದೇ ಇರಬಹುದು ಆದರೆ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದೆ. ಇಂತಹ ಆರ್ಸಿಬಿ 2024ರಲ್ಲಿ ಕಪ್ ಗೆಲ್ಲಬೇಕೆಂಬ ಪ್ಲಾನ್ನೊಂದಿಗೆ ಹೊಸ ಹೆಡ್ಕೋಚ್ ಅನ್ನು ನೇಮಕ ಮಾಡಿದೆ.

ಆಂಡಿ ಫ್ಲವರ್ ಆರ್ಸಿಬಿಯ ನೂತನ ಹೆಡ್ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡಿದ್ಧಾರೆ. ಈ ಆಂಡಿ ಫ್ಲವರ್ ಯಾರು? ಕೋಚ್ ಆಗಿ ಇವರು ಮಾಡಿರುವ ಸಾಧನೆ ಏನು ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.
ಆಂಟಿಫ್ಲವರ್ ದಕ್ಷಿಣ ಆಫ್ರಿಕಾದಲ್ಲಿ ಹುಟ್ಟಿ ಪಕ್ಕದ ಜಿಂಬಾವ್ವೆ ದೇಶದ ಪರವಾಗಿ ಕ್ರಿಕೆಟ್ ಆಡಿದ್ದ ಆಟಗಾರ. 1992ರಿಂದ 2003ರವರೆಗೆ ಅಂದರೆ RCB

11 ವರ್ಷ ಜಿಂಬಾವ್ವೆ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ವಿಕೆಟ್ ಕೀಪರ್, ಬ್ಯಾಟರ್ ಆಗಿ ಕಾಣಿಸಿಕೊಂಡವರು. ಇವರ ತಮ್ಮ ಗ್ರ್ಯಾಂಡ್ ಫ್ಲವರ್ ಕೂಡ ಜಿಂಬಾವ್ವೆ ತಂಡದಲ್ಲಿದ್ದರು. ಇಂತಹ ಆಂಡಿ ಫ್ಲವರ್ ಅನ್ನು ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ವಿಕೆಟ್ ಕೀಪರ್ ಬ್ಯಾಟರ್ಗಳಲ್ಲಿ ಒಬ್ಬರು ಎನ್ನಲಾಗುತ್ತದೆ. ಆಂಡಿ ಫ್ಲವರ್ ಜಿಂಬಾವ್ವೆ ಪರವಾಗಿ 63 ಟೆಸ್ಟ್ ಮ್ಯಾಚ್ ಆಡಿ 4794 ರನ್ ಬಾರಿಸಿ, 151 ಕ್ಯಾಚ್ ಹಿಡಿದು 9 ಸ್ಟಂಪ್ ಮಾಡಿದ್ದಾರೆ.

ಒಂಡೇ ಕ್ರಿಕೆಟ್ನಲ್ಲಿ 213 ಮ್ಯಾಚ್ ಆಡಿ, 6786ರನ್ ಬಾರಿಸಿ, 151 ಕ್ಯಾಚ್ ಹಿಡಿದು 32 ಸ್ಟಂಪ್ ಮಾಡಿದ್ದಾರೆ. ಟಿ-ಟ್ವೆಂಟಿಯಲ್ಲಿ 21 ಮ್ಯಾಚ್ ಆಡಿ 95 ರನ್ ಬಾರಿಸಿ, 6 ಕ್ಯಾಚ್ ಹಿಡಿದ್ದಿದ್ದಾರೆ. ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಬಳಿಕ ಆಂಡಿ ಫ್ಲವರ್ ಕೋಚ್ ಕೆಲಸಕ್ಕೆ ಕೈ ಹಾಕಿದರು. ಮೊದಲಿಗೆ ಇಂಗ್ಲೆಂಡ್ ರಾಷ್ಟ್ರೀಯ ತಂಡದ ಅಸಿಸ್ಟೆಂಟ್ ಕೋಚ್ ಆದರು. ನಂತರ 2009ರಿಂದ 2014ರ ವರೆಗೆ ಇಂಗ್ಲೆಂಡ್ನ ಹೆಡ್ಕೋಚ್ ಆದರು.

ಅಂದರೆ 2010ರಲ್ಲಿ ಇಂಗ್ಲೆಂಡ್ ತಂಡ ಟಿ-ಟ್ವೆಂಟಿ ವಿಶ್ವಕಪ್ ಗೆದ್ದಿತು. ಆಶಸ್ ಸರಣಿಗಳನ್ನ ಗೆದ್ದಿತು. ಟೆಸ್ಟ್ ರ್ಯಾಕಿಂಗ್ ಸ್ಥಾನದಲ್ಲಿ ನಂಬರ್ 1 ಸ್ಥಾನಕ್ಕೆಏರಿ ಟೆಸ್ಟ್ ಮೇಸ್ ಪಡೆದುಕೊಂಡಿತು. 2014ರಿಂದ 2019ರವರೆಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ನಲ್ಲಿ ಎಲ್ಹೈಟ್ ಕೋಚ್ನ ತಾಂತ್ರಿಕ ನಿರ್ದೇಶಕರಾದರು. ಬಳಿಕ ವಿವಿಧ ತಂಡಗಳ ಕೋಚ್ ಜವಾಬ್ದಾರಿ ವಹಿಸಿಕೊಂಡರು. RCB

ಇವರ ಕೋಚ್ನಲ್ಲಿ ಮುಲ್ತಾನ್, ಸುಲ್ತಾನ್ ತಂಡ 2021ರಲ್ಲಿ ಪಾಕಿಸ್ತಾನ್ ಸೂಪರ್ನಲ್ಲಿ ಗೆದ್ದಿತು. 2022ರಲ್ಲಿ ಟ್ರೆಂಡ್ಸ್ ರಾಕರ್ಸ್ ತಂಡ ಇಂಗ್ಲೆಂಡ್ನಲ್ಲಿ ನಡೆದ ಮೆನ್ಸ್ ಹಂಡ್ರೆಡ್ ಟಿ-ಟ್ವಿಂಟಿ ಗೆದ್ದಿತು. 2023ರಲ್ಲಿ ಗರ್ಲ್ಸ್ ಜೆಂಡ್ಸ್ ತಂಡ ಯುಎಇನಲ್ಲಿ ನಡೆದ ಐಎಲ್ಟಿ ಟ್ವೆಂಟಿ ಗೆದ್ದಿತು. ಡೆಲ್ಲಿ ಬುಲ್ಸ್ ತಂಡ ಅಬುದಾಬಿ ಟಿ-ಟೆನ್ನಲ್ಲಿ ಎರಡು ಸಲ ರನ್ನರ್ ಅಪ್ ಆಗಿದೆ.

ಸೆಂಟ್ ಲೂಸಿಯಾ ಕಿಂಕ್ ತಂಡ ಕೆರಿಬಿಯನ್ ಪ್ರೀಮಿಯರ್ ತಂಡ ಲೀಗ್ನಲ್ಲಿ ಎರಡು ಸಲ ರನ್ನರ್ ಅಪ್ ಆಗಿದೆ. ಲಖ್ನೌ ಸೂಪರ್ ತಂಡ ಐಪಿಎಲ್ ನಲ್ಲಿ ಪ್ಲೇ ಆಫ್ ಪ್ರವೇಶಿಸಿದೆ. ಇತ್ತೀಚೆಗೆ ಮೆನ್ಸ್ ಆರ್ಶಸ್ ಟೂರ್ನಿ ವೇಳೆ ಕನ್ಸಲ್ಟೆಂಟ್ ಆಗಿ ಆಸ್ಟ್ರೇಲಿಯಾ ತಂಡದ ಜೊತೆ ಕೆಲಸ ಮಾಡಿದ್ದರು ಆಂಡಿ ಫ್ಲವರ್. ಹೀಗೆ ಕಪ್ಗಳ ಮೇಲೆ ಕಪ್ ಪಡೆದ ಆಂಡಿಫ್ಲವರ್ RCB

ಅನ್ನು ತನ್ನ ಹೆಡ್ ಕೋಚ್ ಆಗಿ ನೇಮಿಸಿದೆ ಆರ್ಸಿಬಿ. ಅಂದಹಾಗೇ ಆರ್ಸಿಬಿ ನಾಯಕ ಫಾಕ್ ಡೂಪ್ಲೆಕ್ಸೆ ಈ ಹಿಂದೆ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಸೆಂಟ್ ಲೂಸಿಯಾ ಕಿಂಗ್ಸ್ ತಂಡದಲ್ಲಿದಾಗ ಆಂಡಿಫ್ಲವರ್ ಆ ತಂಡದ ಹೆಡ್ ಕೋಚ್ ಆಗಿದ್ದರು. ಈಗ ಆರ್ಸಿಬಿ ಮೂಲಕ ಇಬ್ಬರು ಮತ್ತೆ ಒಟ್ಟಾಗಿದ್ದಾರೆ. ಮುಂಬರುವ ಐಪಿಎಲ್ ನ ಆಟಗಾರರ ಹರಾಜಿನಲ್ಲಿ ಆಂಡಿಫ್ಲವರ್ಗೆ ಹೆಚ್ಚಿನ ಅಧಿಕಾರ ಕೊಡಲು ಮಾಲೀಕರು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

Leave A Reply

Your email address will not be published.