Ultimate magazine theme for WordPress.

Secrets about Kaliyuga ಶ್ರೀ ಕೃಷ್ಣ ಹೇಳಿದ ಕಲಿಯುಗದ ರಹಸ್ಯಗಳು 

0 8,638

Secrets about Kaliyuga by Lord Sri Krishna in kannಕಲಿಯುಗದ ಬಗ್ಗೆ ಶ್ರೀಕೃಷ್ಣ ಹೇಳಿದ್ದೇನು? ಘೋರ ಕಲಿಯುಗ ಹೇಗಿರುತ್ತದೆ? ಈ ಕಲಿಯುಗದ ಅಂತ್ಯ ಹೇಗಾಗುತ್ತದೆ? ಎನ್ನುವ ಕುತೂಹಲಕಾರಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಒಂದು ದಿನ ಪಂಚಪಾಂಡವರಿಗೆ ದ್ವಾಪರಯುಗದ ನಂತರ ಬರುವ ಕಲಿಯುಗದ ಬಗ್ಗೆ ತಿಳಿದುಕೊಳ್ಳುವ ಆಸೆಯಾಗುತ್ತದೆ. ಆಗ ಶ್ರೀಕೃಷ್ಣ ಪಾಂಡವರೇ ಕಲಿಯುಗದಲ್ಲಿ ದಿನಗಳು ಹೇಗಿರುತ್ತದೆಂಬುದನ್ನು ನಾನು ಉದಾಹರಣೆಗಳ ಸಹಿತ ಹೇಳುತ್ತೀನಿ

ಆದರೇ ನೀವೆಲ್ಲಾ ಮಾಡಬೇಕಾಗಿರುವುದು ಇಷ್ಟೆ, ಕಾಡಿಗೆ ತೆರಳಬೇಕಾಗುತ್ತದೆ, ನಾನು ನಿಮ್ಮೆಲ್ಲರಿಗೂ ಒಂದೊಂದು ಸೂಚನೆಯನ್ನು ಕೊಟ್ಟುಕಳಿಸುತ್ತೀನಿ, ನೀವೆಲ್ಲಾ ನನ್ನ ಸೂಚನೆಯಂತೆಯೇ ನಡೆಯಬೇಕು ಎಂದು ಹೇಳುತ್ತಾನೆ. ಶ್ರೀಕೃಷ್ಣ ಹೇಳಿದ ರೀತಿಯೇ ಪಂಚಪಾಂಡವರು ಒಬ್ಬೊಬ್ಬರಾಗಿ ಒಂದೊಂದು ದಿಕ್ಕಿಗೆ ಕಾಡಿನಲ್ಲಿ ತೆರಳುತ್ತಾರಂತೆ ಶ್ರೀಕೃಷ್ಣ ಪಾಂಡವರಿಗೆ ಸೂಚನೆಯನ್ನು ಏನು ಕೊಟ್ಟಿದ್ದ Secrets

ಎಂದರೇ ಕಾಡಿನಲ್ಲಿ ನೀವು ಹೋದಾಗ ನಿಮಗೆ ಒಂದೊಂದು ವಿಚಿತ್ರ ಸಂಗತಿಗಳು ಎದುರಾಗುತ್ತದೆ. ಆ ವಿಚಿತ್ರ ಸಂಗತಿಗಳನ್ನು ನಿಮ್ಮ ಸ್ಮರಣೆಯಲ್ಲಿಟ್ಟುಕೊಂಡು ಬಂದು ಯತ್ತಾವತ್ತಾಗಿ ನೀವು ಹೇಗೆ ನೋಡಿದ್ದಿರಿ ಹಾಗೇ ನನಗೆ ಬಂದು ಹೇಳಬೇಕು ಹೇಳಿರುತ್ತಾನಂತೆ, ಮೊಟ್ಟ ಮೊದಲನೆಯದಾಗು ಯುಧಿಷ್ಠಿರ ಕಾಡಿಗೆ ತೆರಳುತ್ತಾನಂತೆ, ಕಾಡಿಗೆ ತೆರಳಿದಾಗ ಆತ ಎರಡು ಸೊಂಡಲಿನ ಆನೆಯನ್ನು ನೋಡುತ್ತಾನೆ

ನಂತರ ವಿಚಿತ್ರ ಪ್ರಶ್ನೆಗಳು, ಕುತೂಹಲ, ಕೌತುಕ ಯುಧಿಷ್ಠಿರನ ತಲೆಯಲ್ಲಿ ಓಡುತ್ತದೆ. ಆನಂತರ ಕಾಡಿನಿಂದ ವಾಪಸ್ಸು ಬಂದು ಶ್ರೀಕೃಷ್ಣನ ಬಳಿ ಕೇಳುತ್ತಾನಂತೆ ಆಗ ಶ್ರೀಕೃಷ್ಣ ಮುಗುಳುನಗುತ್ತಾ ಹೇಳುತ್ತಾನಂತೆ ಯುಧಿಷ್ಠಿರ ನೀನು ಕಾಡಿನಲ್ಲಿ ನೋಡಿದ್ದೀಯಲ್ಲಾ ಎರಡು ಸೊಂಡಲಿನ ಆನೆ ಅದೇ ರೀತಿ ಕಲಿಯುಗದಲ್ಲಿ ಮನುಷ್ಯರ ಬುದ್ಧಿ ಇರುತ್ತದೆ. ಅವರು ಹೇಳುವುದು ಒಂದು ಮಾಡುವುದು ಇನ್ನೊಂದು, Secrets

ಎರಡು ಸೊಂಡಲಿನ ರೀತಿ ಜನರ ವರ್ತನೆ ಇರುತ್ತದೆಂದು ಶ್ರೀಕೃಷ್ಣ ಯುಧಿಷ್ಠಿರನಿಗೆ ಹೇಳುತ್ತಾನಂತೆ.
ಭೀಮಸೇನಾ ಕಾಡಿಗೆ ತೆರಳುತ್ತಾನಂತೆ ಭೀಮಸೇನನ ಕಣ್ಣಿನ ಎದುರು ವಿಚಿತ್ರವಾದ ಘಟನೆ ನಡೆಯುತ್ತದೆಯಂತೆ ಅದೇನೆಂದರೆ ಹಸು ತನ್ನ ಮಗುವನ್ನು ಪ್ರೀತಿಯಿಂದ ನೆಕ್ಕುತ್ತಿತ್ತಂತೆ, ಹಾಗೇ ನೆಕ್ಕುವಾಗಿ ಕರುವಿನ ಚರ್ಮ ಕಿತ್ತಿ ರಕ್ತ ಸೋರುತ್ತಿತ್ತಂತೆ. ಭೀಮಸೇನಾ ಕಾಡಿನಿಂದ ವಾಪಸ್ಸು ಬಂದು ಶ್ರೀಕೃಷ್ಣನಿಗೆ ತಾನು ನೋಡಿದ

ಘಟನೆಯನ್ನು ವಿವರಿಸುತ್ತಾನೆ. ಆಗ ಶ್ರೀಕೃಷ್ಣ ಹೇಳುತ್ತಾನೆ ಭೀಮಾ ಕಲಿಯುಗದಲ್ಲಿ ಮಕ್ಕಳನ್ನು ಯಾವ ರೀತಿ ಬೆಳೆಸುತ್ತಾರೆ ಎಂಬ ಉದಾಹರಣೆಯನ್ನು ಈ ಘಟನೆಯ ಮೂಲಕ ತಿಳಿದುಕೊಳ್ಳಬೇಕಾಗುತ್ತದೆ ಎಂಬುದನ್ನು ಹೇಳುತ್ತಾನೆ. ಅಂದರೆ ಕಲಿಯುಗದಲ್ಲಿ ಮಕ್ಕಳ ಮಾನಸಿಕ ಬೆಳವಣಿಗೆ ನಿಂತು ಹೋಗುತ್ತದೆ. ಬೇರೆಯವರ ಮಕ್ಕಳು ಸಾಧುಸಂತರಾದರೇ ಆಶೀರ್ವಾದ ಪಡೆಯುತ್ತಾರೆ. Secrets

ಆದರೇ ಅವರ ಮಕ್ಕಳು ಸಾಧುಸಂತರಾದರೇ ದುಖಃ ಪಡುತ್ತಾರೆ, ಎಂತಹ ಹಾದಿಯಲ್ಲಿ ಹೋಗುತ್ತಾರೆ ಕಲಿಯುಗದಲ್ಲಿ ಜನ ಎಂಬುದನ್ನು ಶ್ರೀಕೃಷ್ಣ ಭೀಮಸೇನನಿಗೆ ಹೇಳುತ್ತಾನೆ. ಅರ್ಜುನ ಕಾಡಿಗೆ ತೆರಳುತ್ತಾನಂತೆ ಕಾಡಿಗೆ ಹೋದಾಗ ಅಲ್ಲಿ ನಡೆದ ಘಟನೆ ತುಂಬಾ ವಿಚಿತ್ರವಾಗಿತ್ತಂತೆ. ಮಾಂಸಹಾರಿ ದುಷ್ಟಹಕ್ಕಿಯೊಂದು ಅರಣ್ಯದಲ್ಲಿ ಹಾರಾಡುವುದನ್ನು ನೋಡುತ್ತಾನಂತೆ,

ಅದರ ರೆಕ್ಕೆಯಲ್ಲಿ ವೇದಮಂತ್ರಗಳನ್ನು ಬರೆಯಲಾಗಿತ್ತಂತೆ. ಆದರೇ ಆ ಹಕ್ಕಿ ಮನುಷ್ಯನ ಮಾಂಸವನ್ನು ಕುಕ್ಕಿ ಕುಕ್ಕಿ ತಿನ್ನುತ್ತಿತ್ತಂತೆ. ಇದನ್ನು ಕಂಡ ಅರ್ಜುನ ಒಂದು ಕ್ಷಣ ಮಾತ್ರ ದಂಗಾಗಿ ಹೋಗುತ್ತಾನಂತೆ. ಶ್ರೀಕೃಷ್ಣನ ಬಳಿ ವಾಪಸ್ಸಾಗುವ ಅರ್ಜುನ ತಾನು ಕಾಡಿನಲ್ಲಿ ನೋಡಿದ ಘಟನೆಯನ್ನು ವಿವರಿಸುತ್ತಾನಂತೆ ಅರ್ಜುನಿಗೆ ಶ್ರೀಕೃಷ್ಣ ಕಲಿಯುಗದಲ್ಲಿ ಜನರು ವಿದ್ವಾಂಸರಂತೆ ಆಡುತ್ತಾರೆ, Secrets

ಆದರೇ ಒಬ್ಬರು ಇನ್ನೊಬ್ಬರ ಸಾವನ್ನು ಬಯಸುತ್ತಾರೆ, ಇನ್ನೊಬ್ಬರ ಸಾವಿಗಾಗಿ ಕಾಯುತ್ತಾರೆ. ಬೇರೆಯವರ ಆಸ್ತಿಯನ್ನು ಹೇಗೆ ಲೂಟಿ ಮಾಡಬೇಕೆಂದು ಯೋಚನೆಯನ್ನು ಮಾಡುತ್ತಿರುತ್ತಾರೆಂದು ಹೇಳುತ್ತಾನೆ. ಸಂತರ ವೇಷದಲ್ಲಿದ್ದುಕೊಂಡು ಲೂಟಿಯನ್ನು ಮಾಡುತ್ತಾರೆ. ಕೆಲವೇ ಕೆಲವು ನಿಜವಾದ ಸಂತರು ಮಾತ್ರ ಇರುತ್ತಾರೆಂದು ಶ್ರೀಕೃಷ್ಣ ಹೇಳುತ್ತಾನೆ.

ನಕುಲ ಕಾಡಿಗೆ ಹೋದನಂತೆ ಆ ಕಾಡಿನಲ್ಲಿ ನೋಡಿದ ದೃಶ್ಯ ಭಯಾನಕವಾಗಿತ್ತಂತೆ. ಬೆಟ್ಟದ ಮೇಲಿಂದ ಒಂದು ಬಂಡೆಕಲ್ಲು ಹುರುಳಿ, ಹುರುಳಿ ಬರಲು ಶುರುಮಾಡಿತ್ತಂತೆ ಬೃಹತ್ ಆಕಾರದ ಮರಗಳು, ಚಿಕ್ಕಪುಟ್ಟ ಬಂಡೆಗಳು ಹಾಗೂ ಇನ್ನಿತ್ತರ ಅಡೆತಡೆಗಳು ಕೂಡ ಆ ಬೃಹತ್ ಬಂಡೆಕಲ್ಲನ್ನು ತಡೆಯಲು ಸಾಧ್ಯವಾಗಲಿಲ್ಲವಂತೆ ಆದರೇ ಸಣ್ಣ ಪೊದೆಯೊಂದು ಆ ಬಂಡೆಕಲ್ಲನ್ನು ಹಿಡಿದು ನಿಲ್ಲಿಸಿತ್ತಂತೆ. Secrets

ಈ ದೃಶ್ಯವನ್ನು ನೋಡಿದ ನಕುಲ ವಾಪಸ್ಸು ಆಗಿ ಶ್ರೀಕೃಷ್ಣ ಬಳಿ ತಾನು ಕಾಡಿನಲ್ಲಿ ನೋಡಿದ ದೃಶ್ಯದ ಬಗ್ಗೆ ವಿವರಣೆಕೊಟ್ಟನಂತೆ. ಆಗ ಕೃಷ್ಣ ಮುಗುಳುನಗುತ್ತಾ ನಕುಲನಿಗೆ ಕಲಿಯುಗದಲ್ಲಿ ಜನರ ಬುದ್ಧಿ ಕ್ಷೀಣಿಸುತ್ತದೆ, ಜೀವನ ನಾಶವಾಗುತ್ತದೆ. ಇದನ್ನು ತಡೆಯಲು ಹಣ, ಅಧಿಕಾರಕ್ಕೆ ಶಕ್ತಿ ಇರುವುದಿಲ್ಲ. ಯಾರು ದೇವರ ನಾಮಸ್ಮರಣೆಯನ್ನು ಮಾಡುತ್ತಾರೋ ಆ ಪೊದೆ ದೊಡ್ಡ ಬಂಡೆಕಲ್ಲನ್ನು ತಡೆದು ನಿಲ್ಲಿಸಿತ್ತೋ ಅಂತಹ ಶಕ್ತಿ

ಆ ದೇವರ ನಾಮಸ್ಮರಣೆಗೆ ಇರುತ್ತದೆ ಕಲಿಗಾಲದಲ್ಲಿ ಎಂದು ಕೃಷ್ಣ ನಕುಲನಿಗೆ ಹೇಳುತ್ತಾನೆ. ಕೊನೆಯದಾಗಿ ಸಹದೇವ ಕಾಡಿಗೆ ತೆರಳುತ್ತಾನಂತೆ ಸಹದೇವ ಕಾಡಿನಲ್ಲಿ ಹಲವಾರು ಬಾವಿಗಳನ್ನು ನೋಡುತ್ತಾನೆ. ಎಲ್ಲಾ ಬಾವಿಗಳಲ್ಲಿ ನೀರು ಇರುತ್ತದೆ ಆದರೇ ಮಧ್ಯದಲ್ಲಿರುವ ಎರಡು ಬಾವಿಗಳನ್ನು ನೀರು ಇರುವುದಿಲ್ಲ, ಮಧ್ಯದ ಬಾವಿ ಹಾಳವಾಗಿದ್ದರೂ ಅದರಲ್ಲಿ ನೀರು ಇಲ್ಲವಲ್ಲ ,

ಅಕ್ಕಪಕ್ಕದ ಬಾವಿಗಳಲ್ಲಿ ನೀರು ತುಂಬಿಕೊಂಡಿದೆ ಈ ಮಧ್ಯದಲ್ಲಿರುವ ಬಾವಿಯಲ್ಲಿ ಏಕೆ ನೀರು ಇಲ್ಲ ಎನ್ನುವ ಚಿಂತೆಯಾಗುತ್ತದೆ. ಸಹದೇವ ಕಾಡಿನಿಂದ ವಾಪಸ್ಸು ಬಂದು ಶ್ರೀಕೃಷ್ಣನ ಬಳಿ ಕೇಳುತ್ತಾನೆ. ಆಗ ಶ್ರೀಕೃಷ್ಣ ಹೇಳುತ್ತಾನೆ ಕಲಿಯುಗದಲ್ಲಿ ದುಡ್ಡು ಇರುವವರು ಮಾತ್ರ ತಮ್ಮ ಶೋಕಿಗಾಗಿ, ಮಕ್ಕಳ ಮದುವೆಗಾಗಿ ದುಡ್ಡು ಅನಾವಾಶ್ಯಕವಾಗಿ ದುಂದುವೆಚ್ಚವನ್ನು ಮಾಡುತ್ತಾರೆ,

ಖರ್ಚುಗಳನ್ನು ಮಾಡುತ್ತಾರೆ. ಆದರೆ ಹಸಿವಿನಿಂದ ಕಂಗೆಟ್ಟವರಿಗೆ ಮಾತ್ರ ಸಹಾಯ ಮಾಡುವುದಿಲ್ಲ. ಕಾಮ, ಮದ್ಯಪಾನ ಹಾಗೂ ಇತರೆ ಚಟಗಳಿಗೆ ದುಡ್ಡು ಖರ್ಚು ಮಾಡುತ್ತಾರೆ ಹೊರತು, ಬಡವರ ಹತ್ತಿರ ಅವರು ತಿರುಗಿಯೂ ನೋಡುವುದಿಲ್ಲ. ಕೊನೆಯದಾಗಿ ಶ್ರೀಕೃಷ್ಣ ಪಾಂಡವರನ್ನು ಕೂರಿಸಿಕೊಂಡು ಈ ರೀತಿ ಹೇಳುತ್ತಾರಂತೆ ನೀವು ಅಚ್ಚರಿಯಾದ ಘಟನೆಯನ್ನು ನೋಡಿದ್ದೀರಿ. Secrets

ಇದೇ ರೀತಿ ಕಲಿಯುಗವು ಘೋರವಾಗಿರುತ್ತದೆ. ಕಲಿಯುಗದಲ್ಲಿ ಮನುಷ್ಯನ ಪಾಪಕರ್ಮಗಳು ಹೆಚ್ಚಾಗುತ್ತದೆ. ಯಾರು ದೇವರ ನಾಮಸ್ಮರಣೆಯನ್ನು ಮಾಡುತ್ತಾರೋ, ಒಳ್ಳೆಯ ಕೆಲಸಗಳನ್ನು ಮಾಡುತ್ತಾರೋ, ಒಳ್ಳೆಯ ಕೆಲಸಗಳಲ್ಲಿ ಭಾಗಿಯಾಗಿರುತ್ತಾರೋ ಅಂತಹವರಿಗೆ ಕಲಿಗಾಲದಲ್ಲಿ ಯಾವ ಕಷ್ಟಗಳು ಎದುರಾಗುವುದಿಲ್ಲ. ಅವರು ಸುರಕ್ಷಿತವಾಗಿರುತ್ತಾರೆ, ನನ್ನ ಕೃಪೆ ಅವರ ಮೇಲೆ ಸದಾ ಇರುತ್ತದೆಂದು ಶ್ರೀಕೃಷ್ಣ ಪಂಚಪಾಂಡವರಿಗೆ ಹೇಳುತ್ತಾನೆ.

Leave A Reply

Your email address will not be published.