Ultimate magazine theme for WordPress.

Sudha Murthy ಆಡದೇ ಮಾಡುವನು ರೂಢಿಯೊಳಗುತ್ತಮನು

0 1,002

Sudha Murthy Best Inspitalional Speech ಸುಧಾಮೂರ್ತಿಯವರ ಬಂಗಾರದಂತಹ ಮಾತುಗಳನ್ನ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಸುಧಾಮೂರ್ತಿಯವರು ಹೇಳುತ್ತಾರೆ ಆಡದೇ ಮಾಡುವವನು ರೂಢಿಯೊಳಗುತ್ತಮನು ನಮ್ಮ ಕೆಲಸ ಮಾತನಾಡಬೇಕು ನಾವಲ್ಲ. ನೂರಾರು ಮಾತನಾಡಿ ಕೆಲಸ ಮಾಡದೇ ಇದ್ದರೇ ಏನು ಉತ್ತಮ. ನನಗೆ ಸರ್ಕಾರಿ ಆಸ್ಪತ್ರೆಯ ಮೇಲೆ ವಿಶೇಷವಾದ ಪ್ರೀತಿ ಇದೆ.

ಅದಕ್ಕೆ ಕಾರಣ ನನ್ನ ತಂದೆ ಸರ್ಕಾರಿ ಆಸ್ಪತ್ರೆಯ ವೈದ್ಯರಾಗಿದ್ದರು. ಆ ಸಮಯದಲ್ಲೆಲ್ಲಾ ಈ ರೀತಿ ಹೊಡೆಯುವುದು ಇರಲಿಲ್ಲ. 50 ವರ್ಷಗಳ ಹಿಂದೆ ವೈದ್ಯರೆಂದರೆ ತುಂಬಾ ಮರ್ಯಾದೆ, ಗೌರವ ಇತ್ತು. ಏನೇ ಹೇಳಿದರೂ ರೋಗಿಗಳು ಕೇಳುತ್ತಿದ್ದರು. ಕೇವಲ ಬ್ಯುಲ್ಡಿಂಗ್ನಿಂದ, ಒಂದು ಓಟಿಯಿಂದ ಸಲಕರಣೆಗಳಿಂದ ರೋಗಗಳು ವಾಸಿಯಾಗುವುದಿಲ್ಲ. ಉತ್ತಮ ವೈದ್ಯರಿಂದ ಸಾಧ್ಯವಿದೆ. Sudha Murthy

ನನ್ನ ತಂದೆಗೆ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳು ನೀವೂ ಏನು ಮಾಡುತ್ತೀರೋ ಮಾಡಿ ನನಗೆ ನೀವು ಒಳ್ಳೆಯದು ಮಾಡುತ್ತೀರೆಂಬ ನಂಬಿಕೆ ಇದೆ ಸಂತೋಷವಾಗಿ ಚಿಕಿತ್ಸೆ ಪಡೆದುಕೊಳ್ಳುತ್ತೇವೆ ಎನ್ನುತ್ತಿದ್ದರು. ಅದಕ್ಕೆ ಅವರ ಚಿಕಿತ್ಸೆ ನೂರಕ್ಕೆ 95ರಷ್ಟು ಫಲಕಾರಿಯಾಗುತ್ತಿತ್ತು. ಅದಕ್ಕೆ ಕಾರಣ ವಿಶ್ವಾಸ. ವೈದ್ಯರು ಮತ್ತು ರೋಗಿಗಳ ಸಂಬಂಧ ಒಂದು ರೀತಿಯ ವಿಶಿಷ್ಟವಾಗಿರುತ್ತದೆ. Sudha Murthy

ವೈದ್ಯರಿಗೆ ಅವರ ಬಗ್ಗೆ ಕಾಳಜಿ ಇರಬೇಕು ಹಾಗೆಯೇ ರೋಗಿಗಳಿಗೂ ವಿಶ್ವಾಸವಿರಬೇಕು. ಸುಧಾಮೂರ್ತಿ ಯವರ ತಂದೆ ಹೇಳುತ್ತಿದ್ದರಂತೆ ನನಗೆ ದೇವರು ಎಂದರೆ ನನ್ನ ಪೇಷೆಂಟ್ಸ್ ಎನ್ನುತ್ತಿದ್ದರಂತೆ, ವೈದ್ಯರಲ್ಲಿ ವಿಶ್ವಾಸ ಹಿಡಿ ನಿಮಗೆ ಒಳ್ಳೆಯದೇ ಮಾಡುತ್ತಾರೆಂದು ಹೇಳುತ್ತಿದ್ದರು ನಮ್ಮ ತಂದೆ ಎನ್ನುತ್ತಾರೆ ಸುಧಾಮೂರ್ತಿ. ವೈದ್ಯರು ಪಾಸಿಟಿವ್ ಆಗಿ ಮಾತನಾಡಿದರೇ ನಿಮ್ಮ ರೋಗವೂ ಶೇ 50ರಷ್ಟು ವಾಸಿಯಾಗಿಬಿಡುತ್ತದೆ.

ವೈದ್ಯರಲ್ಲಿ ವಿಶ್ವಾಸ ಹಿಡದೇ ಇದ್ದ ಪಕ್ಷದಲ್ಲಿ ವೈದ್ಯಲೋಕ ಮುರಿದು ಹೋಗುತ್ತದೆ ನಾವು ಆಗ ಯಾವ ಸ್ಥಿತಿಯನ್ನ ತಲುಪುತ್ತೇವೆಂದು ಯೋಚನೆ ಮಾಡಿ ಎನ್ನುತ್ತಾರೆ ಸುಧಾಮೂರ್ತಿಯವರು. ಕೇವಲ ಕಟ್ಟಡಗಳಿಂದ ರೋಗಿಗಳು ಗುಣಮುಖವಾಗುವುದಿಲ್ಲ ವೈದ್ಯರಲ್ಲಿ ವಿಶ್ವಾಸ ಹಿಡಿ ಅವರು ಕೂಡ ನಿಮ್ಮನ್ನ ಕೇರ್ ಮಾಡುತ್ತಾರೆಂದು ಹೇಳುತ್ತಾರೆ. ನಾನು ಏನೇ ಕೆಲಸ ಮಾಡಿದರೂ ನನಗೆ ತುಂಬಾ ಜನರು ನನಗೆ ಸಹಾಯ ಮಾಡುತ್ತಾರೆ

ಮತ್ತು ನನಗೆ ನನ್ನ ಗಂಡ ನನ್ನ ಎಲ್ಲಾ ಕೆಲಸಗಳಿಗೂ ಪ್ರೋತ್ಸಾಹ ಕೊಡುತ್ತಾರೆ. ಹೆಂಡತಿ ಒಂದು ಕೆಲಸ ಮಾಡುತ್ತಿದ್ದರೆ ಅವಳ ಹಿಂದೆ ಒಂದು ಶಕ್ತಿಯಾಗಿ ಪುರುಷ ನಿಂತರೆ ಆ ಕೆಲಸ ಯಶಸ್ವಿಯಾಗುತ್ತದೆ. ಆ ರೀತಿಯ ಪತಿ ನನಗೆ ಇದ್ದಾರೆ ಹಾಗಾಗಿ ನಾನು ಸಮಾಜಮುಖಿ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿದೆ ಎನ್ನುತ್ತಾರೆ ಸುಧಾಮೂರ್ತಿ. Sudha Murthy

ಕೇವಲ ಇನ್ಪೋಸಿಸ್ ಕಟ್ಟುವುದು ಮಾತ್ರವಲ್ಲದೇ ಅವರು ನನ್ನ ಪ್ರತಿಯೊಂದು ಕೆಲಸದಲ್ಲಿಯೂ ಉತ್ಸುಕತೆಯಿಂದ ಭಾಗವಹಿಸುತ್ತಾರೆ. ವೈದ್ಯರಿಲ್ಲದೇ ಇದ್ದ ಆಸ್ಪತ್ರೆ ಕೇವಲ ಅದು ಕೊಠಡಿಯಾಗುತ್ತದೆ ನೀವು ವೈದ್ಯರು ನಿಷ್ಠೆಯಿಂದ ಕೆಲಸ ಮಾಡುತ್ತೀರಿ, ಸಿಸ್ಟರ್ಸ್, ಬ್ರದರ್ಸ್ ಇದ್ದಾರೆ, ವಾರ್ಡ್ಬಾಯ್, ಆಯಾಗಳು ಇದ್ದಾರೆ ನೀವೆಲ್ಲರೂ ಸೇರಿ ಆಸ್ಪತ್ರೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೀರಿ ಆಸ್ಪತ್ರೆಯು ಪುನರ್ ಜನ್ಮದ ಸ್ಥಾನ ಎಂದು ಹೇಳುತ್ತೇನೆ ಎಂದು ಸುಧಾಮೂರ್ತಿ ಅವರು ಹೇಳುತ್ತಾರೆ. Sudha Murthy

Leave A Reply

Your email address will not be published.