Ultimate magazine theme for WordPress.

ತಿರುಪತಿ ಲಡ್ಡುಗೆ ಸೆಕ್ಯೂರಿಟಿ ಹೇಗಿರುತ್ತೆ? 

0 212

Tirupati laddu history ತಿರುಪತಿ ಲಡ್ಡು ಬಗ್ಗೆ ನಿಮಗೆ ಎಷ್ಟು ಗೊತ್ತು? ಈ ಲಡ್ಡುವಿನ ಇತಿಹಾಸ ಗೊತ್ತಾ? ತಿರುಪತಿಯಲ್ಲಿ ಏಕೆ ಲಡ್ಡುವನ್ನೇ ಪ್ರಸಾದವಾಗಿ ಕೊಡುವುದು? ಇಲ್ಲಿ ಪ್ರತಿದಿನ ಎಷ್ಟು ಲಡ್ಡು ಸೇಲ್ ಆಗುತ್ತದೆ. ತಿರುಪತಿಯಲ್ಲಿ ಲಡ್ಡು ಕಟ್ಟಲು ಎಷ್ಟು ಜನ ಇದ್ದಾರೆ? ಎಷ್ಟು ಕಡ್ಲೆಹಿಟ್ಟು, ಸಕ್ಕರೆ, ತುಪ್ಪ, ಗೋಡಂಬಿ, ಏಲಕ್ಕಿ ಬಳಸಲಾಗುತ್ತದೆ? ತಿರುಪತಿಯಲ್ಲಿ ಒಂದು ಲಡ್ಡು ಎಷ್ಟು ತೂಕವಿರುತ್ತದೆ?

ಒಂದು ಲಡ್ಡುವಿನ ಬೆಲೆ ಎಷ್ಟು? ಎಲ್ಲವನ್ನೂ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ತಿರುಮಲ ವೆಂಕಟೇಶ್ವರ ದೇವಸ್ಥಾನ ಆಂಧ್ರದ ತಿರುಪತಿಯಲ್ಲಿ ತಿಮ್ಮಪ್ಪನಿಗೆ ಲಡ್ಡುವಿನ ನೈವೇದ್ಯ ನೀಡಲಾಗುತ್ತದೆ. ನಂತರ ಭಕ್ತರಿಗೆ ಪ್ರಸಾದದ ರೂಪದಲ್ಲಿ ಲಡ್ಡು ನೀಡಲಾಗುತ್ತದೆ. ಇದನ್ನು ಶ್ರೀವರಿ ಲಡ್ಡು ಎಂದು ಕರೆಯಲಾಗುತ್ತದೆ. ಈ ಲಡ್ಡು ಸುಮಾರು 600 ವರ್ಷಗಳ ಹಿಂದೆ ತಮಿಳು ಮತ್ತು ತೆಲಗು ಪ್ರದೇಶವನ್ನು ಆಳಿದ ಪಲ್ಲವ ವಂಶದ ಸೀಕ್ರೆಟ್ ರೆಸಿಪಿಯಾಗಿತ್ತು. Tirupati laddu history 

ನಂತರ 1715ರಿಂದ ತಿರುಪತಿ ದೇವಾಲಯದಲ್ಲಿ ಇದನ್ನೇ ಪ್ರಸಾದ ರೂಪದಲ್ಲಿ ನೀಡಲು ಶುರು ಮಾಡಲಾಯಿತು. ಅಂದರೇ ಬರೋಬರಿ 300 ವರ್ಷಗಳಿಂದ ತಿಮ್ಮಪ್ಪನ ಪ್ರಸಾದವಾಗಿ ಭಕ್ತರು ಲಡ್ಡು ಪಡೆಯುತ್ತಿದ್ದಾರೆ.
ತಿರುಪತಿ ಲಡ್ಡು ಪ್ರಸಿದ್ಧಿಯಾಗುತ್ತಿದ್ದಂತೆ ಇದರ ಕಾಳಸಂತೆ ಮಾರಾಟ ಶುರುವಾಯಿತು. ಅಂದರೆ ತಿರುಪತಿ ಲಡ್ಡು ಹೆಸರಿನಲ್ಲಿ ದೇವಸ್ಥಾನ Tirupati laddu history 

ಬಿಟ್ಟು ಹೊರಗಿನವರು ಮಾರಾಟಕ್ಕೆ ಇಳಿದರು. 2009ರಲ್ಲಿ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ಈ ಲಡ್ಡು ತಯಾರಿಕೆಗೆ ಪೇಟೆಂಟ್ ಪಡೆದುಕೊಂಡಿತು. ಇದರಿಂದ ತಿರುಪತಿಯ ಹೆಸರಿನಲ್ಲಿ ಯಾರೂ ಲಡ್ಡು ಮಾರಾಟ ಮಾಡುವಂತಿಲ್ಲ. ತಿರುಪತಿ ಲಡ್ಡು ತುಂಬಾ ರುಚಿಯಾಗಿರುತ್ತದೆ. ಅದಕ್ಕೆ ಏನೆಲ್ಲಾ ಹಾಕುತ್ತಾರೆಂಬುದು ಎಲ್ಲರಿಗೂ ಕುತೂಹಲ ಇರುತ್ತದೆ. ಇದಕ್ಕೆ ಕಡ್ಲೆಹಿಟ್ಟು, ಸಕ್ಕರೆ,

ತುಪ್ಪ, ಗೋಡಂಬಿ, ಏಲಕ್ಕಿ, ಕಲ್ಲುಸಕ್ಕರೆ, ದ್ರಾಕ್ಷಿ ಮತ್ತು ಕರ್ಪೂರವನ್ನು ಬಳಸಲಾಗುತ್ತದೆ. ದಿನಕ್ಕೆ ಹತ್ತು ಟನ್ ಅಂದರೆ 10 ಸಾವಿರ ಕೆಜಿಯಷ್ಟು ಕಡ್ಲೆಹಿಟ್ಟು, 10ಸಾವಿರ ಕೆಜಿಯಷ್ಟು ಸಕ್ಕರೆ, 700 ಕೆ.ಜಿ ಗೋಡಂಬಿ, 150 ಕೆ.ಜಿ ಏಲಕ್ಕಿ, 300ರಿಂದ 350 ಕೆ.ಜಿ ತುಪ್ಪ, 500 ಕೆ.ಜಿಯಷ್ಟು ಕಲ್ಲುಸಕ್ಕರೆ, 540ಕೆ.ಜಿಯಷ್ಟು ದ್ರಾಕ್ಷಿಯನ್ನು ಬಳಸಲಾಗುತ್ತದೆ.

ತಿರುಪತಿಯಲ್ಲಿ ತಯಾರು ಮಾಡುವ ಲಡ್ಡುವಿನ ರುಚಿ ಮತ್ತು ಗುಣಮಟ್ಟದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ, ಒಂದೇ ರೀತಿ ಇರುತ್ತದೆ. ಇದಕ್ಕೆ ಕಾರಣ ಟೆಸ್ಟಿಂಗ್ ಅಂದರೆ ಇಲ್ಲಿ ರೆಡಿ ಮಾಡುವ ಲಾಡನ್ನು ಟೆಸ್ಟ್ ಮಾಡಲು ಒಂದು ಲ್ಯಾಬ್ ಇದೆ. ಇಲ್ಲಿ ಲಡ್ಡುವನ್ನು ಭಕ್ತರಿಗೆ ನೀಡುವ ಮುನ್ನ ಲ್ಯಾಬ್ನಲ್ಲಿ ಟೆಸ್ಟ್ ಮಾಡಲಾಗುತ್ತದೆ. ಮತ್ತು ಲಡ್ಡು ಮಾತ್ರವಲ್ಲದೇ ಲಡ್ಡುವಿಗೆ ಬಳಸುವ ವಿವಿಧ ವಸ್ತುಗಳ ಗುಣಮಟ್ಟವನ್ನು ಕೂಡ ಚೆಕ್ ಮಾಡಲಾಗುತ್ತದೆ. ಈ ಲಡ್ಡುಗಳನ್ನು ಹದಿನೈದು ದಿನಗಳ ಕಾಲ ಇಟ್ಟು ತಿನ್ನಬಹುದು. Tirupati laddu history 

ತಿರುಪತಿ ದೇವಸ್ಥಾನದ ಬೃಹತ್ ಕಿಚನ್ನಲ್ಲಿ ಲಡ್ಡು ತಯಾರಿಕೆಗೆ ಸಪರೇಟ್ ವಿಭಾಗವಿದೆ. ಇಲ್ಲಿ ಮೊದಲೆಲ್ಲಾ ಐದು ಸೌದೆ ಒಲೆಯಲ್ಲಿ ಲಡ್ಡು ತಯಾರು ಮಾಡುತ್ತಿದ್ದರು. ಆದರೇ 1984ರಲ್ಲಿ ಎಲ್ಪಿಜಿ ಕನೆಕ್ಷನ್ ನೀಡಲಾಯಿತು. ಈ ಕಿಚನ್ ಎಷ್ಟು ದೊಡ್ಡದಾಗಿದೆ ಎಂದರೆ ದಿನಕ್ಕೆ 8 ಲಕ್ಷ ಲಡ್ಡುಗಳನ್ನು ತಯಾರು ಮಾಡುವ ಸಾಮರ್ಥ್ಯವಿದೆ. ಪ್ರತಿದಿನ 4 ಲಕ್ಷದಷ್ಟು ಲಡ್ಡುಗಳನ್ನು ತಯಾರಿಸಲಾಗುತ್ತದೆ.

3000ದಷ್ಟು 700 ಗ್ರಾಂ ತೂಕದ ದೊಡ್ಡ ಲಡ್ಡು, 75000ದಷ್ಟು 25 ಗ್ರಾಂ ಮತ್ತು ಮೂರುವರೆ ಲಕ್ಷದಷ್ಟು 175 ಗ್ರಾಂನ ಲಡ್ಡುಗಳನ್ನು ತಯಾರಿಸಲಾಗುತ್ತದೆ. ಇವುಗಳ ಪೈಕಿ 175 ಗ್ರಾಂ ನ ಲಡ್ಡುಗಳನ್ನು ಹೆಚ್ಚಿನ ಜನ ತೆಗೆದುಕೊಂಡು ಹೋಗುತ್ತಾರೆ. ಲಡ್ಡು ಪ್ರಸಾದದಿಂದ ಇಲ್ಲಿ ನೂರಾರು ಜನರಿಗೆ ಕೆಲಸ ಸಿಕ್ಕಿದೆ. ಲಡ್ಡು ತಯಾರು ಮಾಡಲು ಮೂರು ಶಿಫ್ಟ್ಗಳಲ್ಲಿ 620 ಜನ ಕೆಲಸ ಮಾಡುತ್ತಾರೆ. Tirupati laddu history 

ಅದರಲ್ಲಿ 247 ಜನ ಷಫ್ಗಳು ಇದ್ದಾರೆ. ದಿನದ 20 ಗಂಟೆ ಗಳ ಕಾಲ ಲಡ್ಡು ತಯಾರು ಆಗುತ್ತಿರುತ್ತದೆ. ಇಲ್ಲಿ ಒಂದು ಲಡ್ಡುವಿಗೆ 25 ರೂಪಾಯಿಯಿಂದ ಹಿಡಿದು 200ರೂಪಾಯಿಯವರೆಗೂ ಇದೆ. ದೇವಸ್ಥಾನದಲ್ಲಿ ವರ್ಷಕ್ಕೆ ಸರಾಸರಿ 4000 ಕೋಟಿ ರೂಪಾಯಿಯಷ್ಟು ಆದಾಯವಿದ್ದು, ಲಡ್ಡು ಒಂದರಿಂದಲ್ಲೇ 350 ಕೋಟಿ ರೂಪಾಯಿ ಆದಾಯ ಬರುತ್ತಿದೆ.

ಲಡ್ಡುವನ್ನು ಬಿಗಿಭದ್ರತೆಯಲ್ಲಿ ಇಡಲಾಗುತ್ತದೆ. ಆ ಕೊಠಡಿಗೆ ಬೇರೆ ಯಾರನ್ನು ಬಿಡುವುದಿಲ್ಲ. ಆ ಬಾಗಿಲು ತೆರೆಯಲು ಸೆಕ್ಯುರಿಟಿ ಕೋಡ್ ಎಂಟ್ರಿ ಬೇಕಾಗುತ್ತದೆ. ಭಕ್ತರು ಲಡ್ಡುವನ್ನು ತೆಗೆದುಕೊಳ್ಳಲು ಮೊದಲು ಕೂಪನ್ ತೆಗೆದುಕೊಳ್ಳಬೇಕು. ನಂತರ ಫೇಸ್ ಸ್ಕಾನ್ ಮಾಡಲಾಗುತ್ತದೆ. ಮತ್ತು ಕ್ಯೂನಲ್ಲಿ ನಿಲ್ಲಬೇಕು. ಪ್ರಸಾದದ ಕೌಂಟರ್ ಬಳಿ ಆ ಕೂಪನ್ ಅನ್ನು ಚೆಕ್ ಮಾಡುತ್ತಾರೆ. ಆ ಕೂಪನ್ ಗೂ ಕ್ಯೂನಲ್ಲಿ ನಿಂತವರಿಗೆ ಮ್ಯಾಚ್ ಆದರೇ ಮಾತ್ರ ಲಡ್ಡು ನೀಡಲಾಗುತ್ತದೆ.

2005ರಿಂದಲೂ ರಾಜ್ಯದ ಕೆಎಂಎಫ್ ತಿರುಪತಿಗೆ ನಂದಿನಿ ತುಪ್ಪವನ್ನು ಕಳುಹಿಸುತ್ತಾ ಬಂದಿದೆ. ಲಡ್ಡುವಿಗೆ ಬಳಸಲಾಗುವ ತುಪ್ಪದಲ್ಲಿ ಶೇ 45ರಷ್ಟು ತುಪ್ಪ ನಂದಿನಿಯೇ ಆಗಿತ್ತು. 2022ರಲ್ಲಿ ಕೆ.ಜಿಗೆ 340ರೂಪಾಯಿಯಂತೆ ಮೂರು ಲಕ್ಷದ ನಲವತ್ತೈದು ಕೆಜಿಯಷ್ಟು ತುಪ್ಪವನ್ನು ಪೂರೈಸಿತ್ತು. ಆದರೇ ಆಗಸ್ಟ್ 1ರಿಂದ ನಂದಿನಿ ತುಪ್ಪದ ಬೆಲೆ ಹೆಚ್ಚು ಆಗಿದೆ. ಆದರೇ ಹೊಸ ಬೆಲೆಯ ಪ್ರಸ್ತಾವನೆಯನ್ನು ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ಒಪ್ಪಿಕೊಂಡಿಲ್ಲ. ಹೀಗಾಗಿ ನಂದಿನಿ ತುಪ್ಪದ ಪೂರೈಕೆ ಬಂದ್ ಆಗಿದೆ. ಇದರಿಂದ ಹಲವು ವರ್ಷಗಳಿಂದ ನಂದಿನಿ ತುಪ್ಪ ಮತ್ತು ತಿರುಪತಿಯ ಲಡ್ಡು ಸಂಬಂಧ ಅಂತ್ಯಗೊಂಡಿದೆ.

Leave A Reply

Your email address will not be published.