Ultimate magazine theme for WordPress.

Brahma ಸ್ವಂತ ತಂದೆಯನ್ನು ಮದುವೆಯಾಗಲು ಸರಸ್ಪತಿ

0 32,766

Brahma married his own daughter ನಾವು ಈ ಲೇಖನದಲ್ಲಿ ಬ್ರಹ್ಮ ತನ್ನ ಮಗಳನ್ನೇ ಮದುವೆ ಆಗಿದ್ದು ಯಾಕೆ , ಬ್ರಹ್ಮವನ್ನು ಯಾಕೆ ಪೂಜಿಸುವುದಿಲ್ಲ ಮತ್ತು ಸ್ವಂತ ತಂದೆಯನ್ನು ಮದುವೆಯಾಗಲು ಸರಸ್ಪತಿ ಒಪ್ಪಿಕೊಂಡಿದ್ದು ಯಾಕೆ, ಬ್ರಹ್ಮನ ತಲೆಯನ್ನು ಈಶ್ವರ ಸಂಹರಿಸಿದ್ದು ಯಾಕೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಬೃಹ್ಮನನ್ನು ಇಡೀ ಜೀವ ಕುಲದ ಸೃಷ್ಟಿ ಕರ್ತ ಎಂದು ಕರೆಯುತ್ತಾರೆ.

ಮನುಷ್ಯರ ಹಣೆ ಬರಹ ಬರೆಯೋದು ಕೂಡ ಬ್ರಹ್ಮದೇವನೇ ಅನ್ನೋದು ಎಲ್ಲರ ನಂಬಿಕೆ ಕೂಡ ಆಗಿದೆ. ಹಾಗೆಯೇ ಸರಸ್ಪತಿ ಎಂದರೆ ವಿಧ್ಯೆ ಬುದ್ಧಿ ದಯಪಾಲಿಸಿ ಕಲೆಗಾರರ ಕಲೆಗಳಲ್ಲೂ ಕೂಡ ಸರಸ್ವತಿಯನ್ನೇ ಆರಾಧಿಸುತ್ತೇವೆ. . ಆದರೆ ನಾವು ಕೇಳಿರುವ ವಿಷಯ ಏನೆಂದರೆ ಬ್ರಹ್ಮದೇವ ತನ್ನ ಸ್ವಂತ ಮಗಳಾದ ಸರಸ್ಪತಿಯನ್ನೇ ಮದುವೆಯಾಗಿದ್ದಾನೆ ಅನ್ನುವುದು ಹಾಗಾದರೆ ಸರಸ್ಪತಿ ಮತ್ತು ಬೃಹ್ಮನ ನಡುವೆ ನಡೆದಿರುವುದು ಏನೆಂದರೆ ನಮ್ಮ ಹಿಂದೂ ಧಮ್ಮದಲ್ಲಿ ಪ್ರಮುಖ ಪುರಾಣಗಳಾದ ಮತ್ಸ್ಯಪುರಾಣ Brahma

ಮತ್ತು ಸರಸ್ಪತಿ ಪುರಾಣಗಳಲ್ಲಿ ಉಲ್ಲೇಖವಾಗಿರುವುದೇನೆಂದರೆ ಬೃಹ್ಮ ದೇವ ಸೃಷ್ಟಿಯನ್ನು ನಿರೂಪಿಸುವಾಗ ಮನುಷ್ಯರೂ, ರಾಕ್ಷಸರೂ, ಜೀವಿಗಳು ಹಗಲು, ರಾತ್ರಿಗಳು ಈ ರೀತಿ ಅನೇಕ ಸೃಷ್ಟಿಗಳನ್ನು ಉಂಟು ಮಾಡುತ್ತಾನೆ.
ನಂತರ ನನ್ನ ಜೊತೆಗೆ ಯಾರೂ ಇಲ್ಲವಲ್ಲ ಎಂದು ಯೋಚಿಸಿದ ಬ್ರಹ್ನ ತನ್ನ ಶಕ್ತಿಯನ್ನು ಬಳಸಿ ಸರಸ್ಪತಿಯನ್ನು ಸೃಷ್ಟಿಸುತ್ತಾನೆ. Brahma

ಇನ್ನೊಂದು ರೀತಿಯಲ್ಲಿ ತನ್ನ ವೀರ್ಯದಿಂದ ಸರಸ್ಪತಿಯನ್ನು ತನ್ನ ಮಗಳಾಗಿ ಸೃಷ್ಟಿ ಮಾಡಿದ ಎಂದು ಹೇಳಾಗಿದೆ. ಈ ರೀತಿಯಾಗಿ ಸೃಷ್ಟಿ ಮಾಡಿದ ಸರಸ್ಪತಿ ದೇವಿ ತುಂಬಾ ಸುಂದರವಾಗಿದ್ದಳು. ಸರಸ್ಪತಿಯನ್ನು ಸೃಷ್ಟಿ ಮಾಡಿದ ಬ್ರಹ್ಮದೇವನೇ ಅವಳನ್ನು ನೋಡಿ ಆಶ್ಚರ್ಯ ಪಟ್ಟಿದ್ದನಂತೆ . ಅಷ್ಟರ ಮಟ್ಟಿಗೆ ಸರಸ್ಪತಿ ದೇವಿ ಸುಂದರಿಯಾಗಿದ್ದಳು. ಸರಸ್ಪತಿ ದೇವಿಯನ್ನ ಕಂಡು ಅವಳ ಚೆಲುವಿಗೆ ,

ಅವಳ ಸೌಂದಯ೯ಕ್ಕೆ ಸೋತು ಹೋಗಿ ಸ್ವತಃ ಬ್ರಹ್ಮದೇವನೇ ತನ್ನ ಮಗಳಾದ ಸರಸ್ಪತಿಯನ್ನು ಪ್ರೀತಿಸಲು ಪ್ರಾರಂಭಿತ್ತಾನೆ. ತನ್ನ ಪೂರ್ತಿ ದೃಷ್ಟಿಯನ್ನು ಸರಸ್ಪತಿ ದೇವಿಯ ಮೇಲೆ ಹರಿಸಲು ಪ್ರಾರಂಭಸಿದನು. ಬ್ರಹ್ಮದೇವನ ಈ ವರ್ತನೆಯನ್ನು ಕಂಡು ಸರಸ್ವತಿಗೆ ಬ್ರಹ್ಮದೇವನ ಪ್ರೇಮದ ಉದ್ದೇಶ ಅರ್ಥವಾಗಿ ಬ್ರಹ್ಮದೇವನ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾಳೆ.

ಇನ್ನೊಂದು ವಿಷಯವೇನೆಂದರೆ ನೀವೆಲ್ಲರೂ ತಿಳಿದಿರೋ ತರಹ – ಬ್ರಹ್ಮದೇವನಿಗೆ ನಾಲ್ಕು ತಲೆಯ ಬದಲಾಗಿ ಐದು ತಲೆ ಇತ್ತು. ಹೀಗೆ ಬ್ರಹ್ಮದೇವನ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ನಾಲ್ಕು ದಿಕ್ಕುಗಳಲ್ಲೂ ಅಡಗಿಕೊಳ್ಳುತ್ತಿದ್ದಳು.
ಸರಸ್ವತಿ ಯಾವುದೇ ದಿಕ್ಕಿಗೆ ಹೋದರೂ ಬ್ರಹ್ಮ ದೇವ ತನ್ನ ಒಂದೊಂದು ತಲೆಯನ್ನು ಆ ದಿಕ್ಕಿಗೆ ಕಳುಹಿಸಿ ಸರಸ್ಪತಿ ದೇವಿಯ ಮೇಲೆ ಯಾವಾಗಲೂ ದೃಷ್ಟಿ ಅರಿಸಿದ್ದನು. . Brahma

ಆಗ ಸರಸ್ಪತಿ ದೇವಿ ಈ ನಾಲ್ಕು ದಿಕ್ಕುಗಳನ್ನು ಬಿಟ್ಟು ಮೇಲೆ ಹೋಗಿ ಅಡಗಿ ಕುಳಿತರೂ ತನ್ನ 5 ನೇ ತಲೆಯಿಂದ ಕಂಡು ಹಿಡಿಯುತ್ತಿದ್ದ . ಇದರಿಂದ ಸರಸ್ವತಿ ದೇವಿಗೆ ಬೇರೆ ದಾರಿ ಕಾಣದೆ ಬ್ರಹ್ಮದೇವನ ಬಳಿಯೇ ಮದುವೆಯಾಗಲು ಒಪ್ಪುವಂತಹ ಪರಿಸ್ಥಿತಿ ಬರುತ್ತೆ. ನಂತರ ಬ್ರಹ್ಮದೇವನು ಸರಸ್ಪತಿಯನ್ನ ತನ್ನ ಮಗಳು ಎಂದು ಸಹ ನೋಡದೆ ಸರಸ್ವತಿಯ ಚೆಲುವಿಗೆ ಮಾರು ಹೋಗಿ ಮದುವೆಯಾಗುತ್ತಾನೆ. ನಂತರ ಅವರಿಬ್ಬರೂ ಒಂದು ಸ್ಥಳಕ್ಕೆ ಹೋಗಿ ನೂರು ವರ್ಷಗಳ ಕಾಲ ಪತಿ ಪತ್ನಿಗೆ ಳಂತೆ ಜೀವಿಸುತ್ತಾರೆ.

ಹೀಗೆ ಅವರಿಬ್ಬರ ಸಂಮಿಲನದಿಂದ ಅವರಿಬ್ಬರಿಗೂ ಮನು ಎಂಬ ಮಗು ಜನನ ವಾಗುತ್ತದೆ. ಈ ರೀತಿಯಾಗಿ ಬ್ರಹ್ಮದೇವನು ತನ್ನ ಸ್ವಂತ ಮಗಳನ್ನೆ ಮದುವೆಯಾಗುತ್ತಾನೆ. ಎಂಬ ಉಲ್ಲೇಖಗಳು ನಮ್ಮ ಹಿಂದೂ ಧರ್ಮದ ಪುರಾಣಗಳಲ್ಲಿ ಇದೆ.

ಈಗ ಮತ್ತೊಂದು ವಿಷಯವೇನೆಂದರೆ ಬ್ರಹ್ಮ ದೇವನನ್ನು ಹೆಚ್ಚಾಗಿ ಯಾರೂ ಯಾಕೆ ಪೂಜಿಸುವುದಿಲ್ಲ ಎನ್ನುವ ಕಾರಣವನ್ನು ನೋಡುವುದಾದರೆ, ಆದರಲ್ಲಿ ಮೊದಲನೆಯದು ಸೃಷ್ಟಿಯ ಕಲ್ಯಾಣಕ್ಕಾಗಿ ಬ್ರಹ್ಮದೇವ ಒಂದು ಯಜ್ಞವನ್ನು ಮಾಡಬೇಕಾಗಿರುತ್ತದೆ. ಅದಕ್ಕೆ ಸೂಕ್ತವಾದ ಸ್ಥಳ ಹುಡುಕಲು

ಬ್ರಹ್ಮ ತನ್ನ ಕಮಲವನ್ನು ಭೂಮಿಗೆ ಬಿಡುತ್ತಾನೆ. ಆಗ ಆ ಕಮಲ ರಾಜಸ್ಥಾನದ ಪುಸ್ಕಾರ್ ಅನುವ್ನ ಸ್ಥಳಕ್ಕೆ ಬೀಳುತ್ತದೆ. ಆಗ ಸ್ಥಳದಲ್ಲಿ ಯಜ್ಞನವಲ್ಲಿ ಮಾಡುವ ನಿರ್ಧಾರ ಮಾಡಬೇಕಾಗುತ್ತದೆ. ಆದರೆ ಆ ಯಜ್ಞ ಪೂರ್ಣಗೊಳ್ಳಬೇಕು. ಆ ಯಜ್ಞ ಫಲ ಕೊಡಬೇಕು ಅಂದರೆ ಆ ಜಾಗದಲ್ಲಿ ಒಂದು ಹೆಣ್ಣು ಇರಬೇಕು. ಆ ಹೆಣ್ಣು ಯಾರಾಗ ಬೇಕು ಅಂದರೆ, Brahma

ಬ್ರಹ್ಮದೇವನ ಹೆಂಡತಿಯಾದ ಸರಸ್ಪತಿಯೇ ಆಗಿರಬೇಕು, ಆದರೆ ಬ್ರಹ್ಮದೇವನ ಹೆಂಡತಿ ಅಲ್ಲಿಗೆ ಬರುವುದು ತುಂಬಾ ತಡವಾಗುತ್ತದೆ. ಜೊತೆಗೆ ಯಜ್ಞದ ಸಮಯವೂ ಮೀರಿ ಹೋಗುತ್ತಿರುತ್ತದೆ. ಆಗ ಬ್ರಹ್ಮನಿಗೆ ಏನೂ ಕೂಡ ತೋಚುವುದಿಲ್ಲ. ಆಗ ಬ್ರಹ್ಮ ಮತ್ತೊಂದು ಹೆಣ್ಣನ್ನು ಮದುವೆಯಾಗಿ ಆ ಯಜ್ಞವನ್ನು ಪೂರ್ಣಗೊಳ್ಳುತ್ತದೆ. ಆ ಸಮಯಕ್ಕೆ ಅಲ್ಲಿಗೆ ಬಂದ ಸರಸ್ಪತಿ ಬ್ರಹ್ಮನು ಬೇರೆ ಹೆಣ್ಣನ್ನು ಮದುವೆಯಾಗಿರುವುದನ್ನು

ಕಂಡು ಕೋಪಗೊಂಡು ನಿನ್ನನ್ನು ಈ ಲೋಕದಲ್ಲೇ ಯಾರೂ ಕೂಡ ಪೂಜಿಸುವುದಿಲ್ಲ ಎಂದು , ಯಾವ ಕಾಯ೯ದಲ್ಲೂ , ನೆನಪಾಗುವುದಿಲ್ಲ ಎಂದು ಶಾಪ ಕೊಡುತ್ತಾಳೆ ಎಂದು ಹೇಳಲಾಗಿದೆ. ಆದರೆ ಬ್ರಹ್ಮ ದೇವ ಮತ್ತೊಂದು ಮದುವೆಯಾಗಿದ್ದು ಲೋಕ ಕಲ್ಯಾಣಕ್ಕಾಗಿ ಎಂದು ತಿಳಿದಾಗ ಸರಸ್ಪತಿಯು ನೀನು ಯಜ್ಞವನ್ನು ಮಾಡಿದ ಸ್ಥಳದಲ್ಲಿ ಮಾತ್ರ ನಿನ್ನನ್ನು ಪೂಜಿಸಲಾಗುತ್ತದೆ.

ಎಂದು ಮತ್ತೊಂದು ವರವನ್ನು ನೀಡಿದಳು, ಇದೊಂದು ರೀತಿಯಲ್ಲಿ ಕಾರಣವಾದರೆ, ಪುರಾಣಗಳ ಪ್ರಕಾರ ಬೃಹ್ಮದೇವ ತನ್ನ ಸ್ವಂತ ಮಗಳಾದ ಸರಸ್ವತಿ ದೇವಿಯನ್ನು ಮದುವೆಯಾದ ವಿಚಾರ ತಿಳಿದ ಪರಮಶಿವ ಬ್ರಹ್ಮನ ಬಗ್ಗೆ ಕೋಪಗೊಂಡು ಬ್ರಹ್ಮ ದೇವ ತನ್ನ ಮಗಳನ್ನು ಮದುವೆಯಾಗಿದ್ದು ಧರ್ಮದ ವಿರುದ್ಧ ಈ ಕೃತ್ಯಕ್ಕೆ ನಿನಗೆ ಸಿಗುವ ಕರ್ಮವೆಂದರೆ,

ನಿನ್ನನ್ನು ಇನ್ನು ಮುಂದೆ ಯಾರೂ ಕೂಡ ಪೂಜಿಸುವುದಿಲ್ಲ. ಎಂದು ಶಾಪ ನೀಡಿದನು ಎಂದು ಹೇಳಲಾಗಿದೆ. ಈ ಕಾರಣಗಳಿಂದ ಸೃಷ್ಟಿಕರ್ತನೇ ಆಗಿದ್ದರೂ ತಾನು ಮಾಡಿದ ತಪ್ಪುಗಳಿಂದ ಆತನನ್ನು ಯಾರೂ ಕೂಡ ಪೂಜಿ ಸುವುದಿಲ್ಲ ಎಂದು ಹೇಳಲಾಗಿದೆ. ಇನ್ನೂ ಇಂದಿಗೂ ಕೂಡ ರಾಜಸ್ಥಾನದ ಪುಸ್ಕರ್ ಎನ್ನುವ ಸ್ಥಳದಲ್ಲಿ ಬ್ರಹ್ಮದೇವನನ್ನು ಪೂಜಿಸಲಾಗುತ್ತದೆ.

ಅಷ್ಟಕ್ಕೂ ಬ್ರಹ್ಮದೇವನಿಗೆ ಮೊದಲು ಐದು ತಲೆಗಳು ಇತ್ತಂತೆ . ಆದರೆ ಬ್ರಹ್ಮದೇವ 5 ತಲೆಗಳ ಬದಲು 4 ತಲೆಗಳನ್ನು ಹೊಂದಲು ಕಾರಣವೇನು ಇದರ ಹಿಂದಿರುವ ರಹಸ್ಯಗಳನ್ನು ನೋಡುವುದಾದರೆ, ಸರಸ್ವತಿ ದೇವಿಯನ್ನು ಮದುವೆಯಾಗಲು ಇಚ್ಚಿಸಿದ ಬ್ರಹ್ಮದೇವ ತನ್ನ ಪೂರ್ತಿ ದೃಷ್ಟಿಯನ್ನು ಸರಸ್ವತಿಯ ದೇವಿಯ ಮೇಲಿಡಲು ಇಷ್ಟ ಪಟ್ಟಿದ್ದನು. ಸರಸ್ಪತಿ ದೇವಿ ಯಾವ ದಿಕ್ಕಿಗೆ ಹೋದರೂ ಆ ಸದಿಕ್ಕುಗಳಿಗೆ ತನ್ನ ಒಂದೊಂದು ತಲೆಯನ್ನು ಕಳುಹಿಸುತ್ತಿದ್ದನು. Brahma

ಆಗ ಸರಸ್ವತಿ ದೇವಿ ಬ್ರಹ್ಮನಿಂದ ತಪ್ಪಿಸಿಕೊಳ್ಳುಲು ಶಿವನ ಹತ್ತಿರ ಹೋಗುತ್ತಾಳೆ. ಅಲ್ಲಿಗೂ ಬಂದಂತಹ ಬ್ರಹ್ಮನನ್ನು ಕಂಡ ಪರಮಶಿವ ಬ್ರಹ್ಮನ ಮನದಲ್ಲಿ ಇದ್ದಂತಹ ಉದ್ದೇಶವನ್ನು ಅರಿತು ನೀನು ಮಾಡುತ್ತಿರುವ ಕೃತ್ಯ ಸರಿಯಲ್ಲ ಎಂದು ಬ್ರಹ್ಮನಿಗೆ ತಿಳಿ ಹೇಳಲು ಪ್ರಯತ್ನಿಸಿದ ಶಿವನ ವಿರುದ್ಧವಾಗಿ ಬೃಹ್ಮನ ಐದೂ ತಲೆಗಳೂ ವಾದ ಮಾಡಲು ಪ್ರಾರಂಭ ಸುತ್ತವೆ.

ಆಗ ಅದರಿಂದ ಕೋಪಗೊಂಡ ಪರಮಶಿವ ಐದು ತಲೆಗಳಲ್ಲಿ ಒಂದು ತಲೆಯನ್ನು ನಾಶಮಾಡುತ್ತಾನೆ. ಅಂದಿನಿಂದ ಬ್ರಹ್ಮದೇವನು ಐದು ತಲೆಗಳ ಬದಲಾಗಿ ನಾಲ್ಕು ತಲೆಗಳನ್ನು ಹೊಂದುತ್ತಾನೆ. ಇದೆಲ್ಲವೂ ಬ್ರಹ್ಮದೇವ ತನ್ನ ಸ್ವಂತ ಮಗಳನ್ನೇ ಮದುವೆಯಾದ , ಯಾರೂ ಯಾಕೆ ಬೃಹ್ಮದೇವನನ್ನು ಹೆಚ್ಚಾಗಿ ಪೂಜಿಸುವುದಿಲ್ಲ ಎಂಬುದು ಈ ಲೇಖನದಲ್ಲಿ ನಾವು ನೋಡಿದ್ದೇವೆ .

Leave A Reply

Your email address will not be published.