Ultimate magazine theme for WordPress.

calcium ಮೂಳೆಗಳು ಗಟ್ಟಿ ದೇಹದಲ್ಲಿ ತಾಕತ್ತು..! ಕ್ಯಾಲ್ಸಿಯಂ ಹೆಚ್ಚಾಗಲು ಮನೆಮದ್ದು

0 25,891

calcium improve food  ನಾವು ಈ ಲೇಖನದಲ್ಲಿ ಕ್ಯಾಲ್ಸಿಯಂ ಹೆಚ್ಚಾಗಲು ಮನೆ ಮದ್ದು ಏನು ಎಂಬುದನ್ನು ಈ ಲೇಖನದಲ್ಲಿ ನೋಡೋಣ. ನೈಸರ್ಗಿಕವಾಗಿ ಕ್ಯಾಲ್ಸಿಯಂ ಕೊರತೆಯನ್ನು ಹೇಗೆ ನಿವಾರಣೆ ಮಾಡಿಕೊಳ್ಳುವುದು ಎಂಬುದನ್ನು ನೋಡೋಣ. ಕ್ಯಾಲ್ಸಿಯಂ ಕೊರತೆ ಅನ್ನುವುದು ನಮ್ಮ ಮೂಳೆಗಳಿಗೆ ಬೇಕಾಗಿರುವಂತಹ ಅಂದರೆ ಮೂಳೆಗಳನ್ನು ಗಟ್ಟಿಗೊಳಿಸಲು ಬೇಕಾಗುವಂತಹ ಒಂದು ಪ್ರಧಾನ ಅಂಶ . ಕ್ಯಾಲ್ಸಿಯಂ ಕೊರತೆಯನ್ನೂ ನಾವೆಲ್ಲರೂ ಅನುಭವಿಸುತ್ತಿದ್ದೇವೆ. ಸೀತಾಫಲ ಹಣ್ಣು ಎಲ್ಲಾ ಸಿಟ್ರಿಕ್ ಹಣ್ಣುಗಳು ,

ಬ್ರೊಕೊಲಿ ಸೋರೆಕಾಯಿ, ಬೂದು ಕುಂಬಳಕಾಯಿ ಇದರಲ್ಲಿ ಹೆಚ್ಚಾಗಿ ನಮಗೆ ಕ್ಯಾಲ್ಸಿಯಂ ದೊರೆಯುತ್ತದೆ. ಮತ್ತು ಹುರುಳಿ ಕಾಳು ಹೆಸರು ಕಾಳು ಉದ್ದಿನ ಕಾಳುಗಳಲ್ಲಿ ನಿಮಗೆ ಹೆಚ್ಚಿನ ಕ್ಯಾಲ್ಸಿಯಂ ಸಿಗುತ್ತದೆ. ಮತ್ತು ಹಾಲಿ ನಲ್ಲೂ ಕೂಡ ನಿಮಗೆ ಹೆಚ್ಚಿನ ಕ್ಯಾಲ್ಸಿಯಂ ದೊರೆಯುತ್ತದೆ. ಹಾಲನ್ನು ಸೇವನೆ ಮಾಡಬಹುದು. ನಾವು ಈ ಲೇಖನದಲ್ಲಿ ಕ್ಯಾಲ್ಸಿಯಂ ಕೊರತೆಯನ್ನು ನಿವಾರಣೆ ಮಾಡುವಂತಹ ಹಣ್ಣು ಮತ್ತು ತರಕಾರಿ ಆಹಾರ ಪದಾರ್ಥಗಳು . ನೈಸರ್ಗಿಕವಾಗಿ

ಆಹಾರದಲ್ಲಿ ಕ್ಯಾಲ್ಸಿಯಂ ಕೊರತೆಯನ್ನು ಹೇಗೆ ನಿವಾರಣೆ ಮಾಡಿಕೊಳ್ಳುವುದು ಈ ಕುರಿತಾಗಿ ಇರುವ ಮಾಹಿತಿಗಳನ್ನು ನಾವು ನೋಡೋಣ. ಕ್ಯಾಲ್ಸಿಯಂ ಅನ್ನೋದು ನಮ್ಮ ಮೂಳೆಗಳನ್ನ ಗಟ್ಟಿಗೊಳಿಸಲು ಬೇಕಾಗಿರುವ ಒಂದು ಪ್ರಧಾನ ಅಂಶ. ಸತ್ತ ಧಾತುಗಳಲ್ಲಿ ಮೂಳೆಗಳು ಬಹಳ ಮುಖ್ಯ. ಮೂಳೆಗಳಿಂದ ನಮ್ಮ ಶರೀರಕ್ಕೆ ಆಕಾರ ಸಿಗುತ್ತದೆ.

.ನಮ್ಮ ಶರೀರದಲ್ಲಿ ಮೂಳೆ ಇಲ್ಲ ಅಂದರೆ ಅದು ಮಾಂಸದ ಮುದ್ದೆ ಆಗುತ್ತೆ. ಆ ಮೂಳೆಗಳ ಬೆಳವಣಿಗೆಗೆ , ಆ ಮೂಳೆಗಳ ಬಲಕ್ಕೆ ಮೂಲ ಕಾರಣ ಕ್ಯಾಲ್ಸಿಯಂ. ಅಂತಹ ಕ್ಯಾಲ್ಸಿಯಂ ಕೊರತೆಯನ್ನು ಕಾಣುತ್ತಿದ್ದೇವೆ. ಅದಕ್ಕೆ ಕಾರಣ ಈಗಿನ ಆಹಾರ ಪದ್ಧತಿ.ಮತ್ತು ಜಂಕ್ ಫುಡ್ , ವೇಗದ ಆಹಾರ ಮತ್ತು ವ್ಯಾಯಾಮ ರಹಿತ ಜೀವನ. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡದೆ ಇರುವುದು. ಅಜೀರ್ಣ , ಮಲಬದ್ಧತೆ ಇವೆಲ್ಲ ಕಾರಣಗಳಾಗಿವೆ. ಹಾಗಿದ್ದರೆ ಇದಕ್ಕೆ ಒಳ್ಳೆಯ ಆಹಾರ ಯಾವುದು ಎಂದರೆ . calcium

ಈ ಕ್ಯಾಲ್ಸಿಯಂ ಕೊರತೆಯನ್ನು ಮಾತ್ರೆಗಳಿಂದ ಪರಿಹರಿಸಿಕೊಂಡರೆ ಏನಾಗಬಹುದು ಎಂಬುದನ್ನು ನೋಡೋಣ. ಇದರಿಂದ ಏನೆಲ್ಲಾ ದುಷ್ಪರಿಣಾಮಗಳು ಆಗುತ್ತವೆ ಎಂಬುದನ್ನು ತಿಳಿಯೋಣ. ಇದರಿಂದ
ಹಾರ್ಟ್ ಅಟ್ಯಾಕ್ ಆಗುತ್ತದೆ. ಮತ್ತು ಇದರಿಂದ ಆಮವಾಗುತ್ತದೆ. ಶರೀರಕ್ಕೆ ಬೇಕಾಗಿರುವ ಯಾವುದೇ ಪೋಷಕಾಂಶಗಳ ಕೊರತೆಗೆ ಔಷಧಿಗಳನ್ನ ತೆಗೆದುಕೊಂಡರೆ ಅದರಿಂದ ನಮ್ಮ ರಕ್ತದಲ್ಲಿ ಆಮ ಹೆಚ್ಚಾಗುತ್ತೆ. ಆಗಿದ್ದಾಗ ನಾವು ಆಹಾರದ ಮೂಲಕವೇ ಆ ಕೊರತೆಯನ್ನು ನೀಗಿಸಬೇಕು.

ಯಾವ ಆಹಾರಗಳು ಎಂದರೆ ಹಣ್ಣುಗಳಲ್ಲಿ ಸೀತಾಫಲ ಹಣ್ಣು. ರಾಮ ಫಲ ಬಾಳೆಹಣ್ಣು ಎಲ್ಲಾ ಸಿಟ್ರಿಕ್ ಹಣ್ಣುಗಳು . ಈ ಹಣ್ಣುಗಳಿಗೆ ಕ್ಯಾಲ್ಸಿಯಂ ಮತ್ತು ವಿಟಮಿನ್ ಸಿ ಇರುತ್ತದೆ. ವಿಟಮಿನ್ ಸಿ ಕ್ಯಾಲ್ಸಿಯಂ ಉತ್ಪತ್ತಿಗೆ ಪ್ರಧಾನವಾದ ಶಕ್ತಿಯನ್ನು ತಂದುಕೊಡುತ್ತದೆ. ಇದೇ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಭ್ರೂ ಕೊಲಿ ಹಾಗೆಯೇ ಮೆಂತ್ಯ ಸೊಪ್ಪು, ನುಗ್ಗೆ ಸೊಪ್ಪು .ಕರಿಬೇವಿನ ಸೊಪ್ಪು ,ಪಾಲಕ್ ಸೊಪ್ಪು , calcium

ಮೆಂತ್ಯ ಸೊಪ್ಪು ಇವುಗಳಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಸಿಗುತ್ತದೆ. ಮತ್ತೆ ತರಕಾರಿಗಳಲ್ಲಿ ಸೋರೆಕಾಯಿ , ಬೂದುಗುಂಬಳಕಾಯಿ, ಇದರಲ್ಲಿ ಹೆಚ್ಚಾಗಿ ನಿಮಗೆ ಕ್ಯಾಲ್ಸಿಯಂ ದೊರೆಯುತ್ತದೆ. ಹೀಗೆ ಎಲ್ಲಾ ತರಕಾರಿಗಳನ್ನು ತಿನ್ನಬಹುದು. ಇನ್ನು ಕೆಲವು ತರಕಾರಿಗಳಾದ ಬೆಂಡೆಕಾಯಿ ಬಟಾಣಿಯಲ್ಲೂ ಕೂಡ ಹೆಚ್ಚಿನ ಕ್ಯಾಲ್ಸಿಯಂ ನಮಗೆ ದೊರೆಯುತ್ತದೆ. ಎಲ್ಲಾ ಕಾಳುಗಳಲ್ಲಿ ಕ್ಯಾಲ್ಸಿಯಂ ಹೆಚ್ಚಾಗಿ ಸಿಗುತ್ತದೆ . ಉದ್ದಿನ ಕಾಳಿನಲ್ಲಿ ಹೆಸರು ಕಾಳಿನಲ್ಲಿ ಹೆಚ್ಚಾಗಿ ಸಿಗುತ್ತದೆ.ಮಿತ ಆಹಾರ ,

ಮಿತ ಮಾತು, ಮಿತವಾದ ನಿದ್ದೆ ಮಾಡಬೇಕು ಎಂದು ಹೇಳಲಾಗಿದೆ. ಇಲ್ಲವಾದಲ್ಲಿ ರೋಗಗಳಿಗೆ ಕಾರಣವಾಗುತ್ತದೆ. ಯಾವಾಗಲೂ ನಮ್ಮ ಆಹಾರ ಹಿತಮಿತವಾಗಿ ಇರಬೇಕು.ನಮ್ಮ ಪ್ರಕೃತಿಗೆ ಎಷ್ಟು ಬೇಕಾಗುತ್ತದೆ ಅಷ್ಟು ನಿಯಮಿತವಾಗಿ ಆಹಾರವನ್ನು ತಿನ್ನಬೇಕು. ನಿಮಗೆ ಹಾಲಿನಲ್ಲಿಯೂ ಸಹ ಹೆಚ್ಚಿನ ಕ್ಯಾಲ್ಸಿಯಂ ಸಿಗುತ್ತದೆ ಹಾಲಿನ ಸೇವನೆ ಮಾಡಬಹುದು.

ಮತ್ತು ಸುಣ್ಣವನ್ನು ಎಲೆಯ ಜೊತೆ ಬಳಸುವುದರಿಂದ ಅಧಿಕವಾಗಿ ಕ್ಯಾಲ್ಸಿಯಂ ದೊರೆಯುತ್ತದೆ. ಈ ವಿಳ್ಳೆದೆಲೆಯ ರಸವನ್ನು ಮಜ್ಜಿಗೆ ಅಥವಾ ಹಾಲಿನಲ್ಲಿ ಬೆರೆಸಿ ಕುಡಿಯಬಹುದು. ಹೀಗೆ ಮಾಡುವುದರಿಂದ ಕ್ಯಾಲ್ಸಿಯಂ ಕೊರತೆಯನ್ನು ನೈಸರ್ಗಿಕವಾಗಿ ಮತ್ತು ಶಾಶ್ವತವಾಗಿ ನಾವು ಗುಣಪಡಿಸಿಕೊಳ್ಳಬಹುದು. ಇದರ ಬದಲಾಗಿ ರಾಸಾಯನಿಕ ವಸ್ತುಗಳನ್ನು ತೆಗೆದುಕೊಂಡರೆ ನಿಮ್ಮ ಸಾವಿಗೆ ನೀವೇ ಕಾರಣವಾಗುತ್ತೀರಾ. ಹಾರ್ಟ್ ಅಟ್ಯಾಕ್ ಆಗೋದಕ್ಕೆ ಕಿಡ್ನಿ ಸ್ಟೋನ್ ಆಗೋದಕ್ಕೆ ಬ್ಲಡ್ ಗ್ಲ್ಯಾಟ್ ಆಗಿ ಮೆದುಳಿನಲ್ಲಿ ರಕ್ತ ಹೆಪ್ಪು ಗಟ್ಟುವಿಕೆಗೆ ಕಾರಣವಾಗುತ್ತದೆ.ಇದಕ್ಕೆಲ್ಲ ರಾಸಾಯನಿಕ ವಸ್ತುಗಳೆ ಕಾರಣವಾಗುತ್ತದೆ. ಇದನ್ನು ನೈಸರ್ಗಿಕ ವಿಧಾನಗಳಿಂದ ಪರಿಹರಿಸಿಕೊಳ್ಳಿ ಎಂದು ಹೇಳಲಾಗಿದೆ. calcium

Leave A Reply

Your email address will not be published.