Ultimate magazine theme for WordPress.

If married ಯಾವ ರಾಶಿಯವರನ್ನು ಮದುವೆಯಾದರೆ ಜೀವನ

0 30,065

If married to any zodiac sign ಯಾವ ರಾಶಿಯವರು ಯಾವ ರಾಶಿಯವರನ್ನು ಮದುವೆಯಾದರೇ ಅನ್ಯೋನ್ಯವಾಗಿ ಜೀವನ ನಡೆಸುತ್ತಾರೆಂದು ಶಾಸ್ತ್ರ ಹೇಳುತ್ತದೆ. ಮದುವೆ ಮಾಡುವ ಮುಂಚೆ ತಂದೆ ತಾಯಿಯು ಮೊದಲು ಮಾಡುವ ಕೆಲಸ ಜಾತಕ, ನಕ್ಷತ್ರ, ರಾಶಿಯನ್ನು ನೋಡುವುದು. ಕೆಲವು ರಾಶಿಗಳು ಉತ್ತಮ ಜೀವನ ನಡೆಸುತ್ತಾರೆಂದು ಅಂತಹ ರಾಶಿ ಜೋಡಿಗಳು ಯಾವುವು ಎಂಬುದನ್ನು

ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಮೇಷರಾಶಿ ಮತ್ತು ಕಟಕರಾಶಿ: ಮೇಷರಾಶಿಯುಳ್ಳವರು ಅತ್ಯಂತ ಶಕ್ತಿಯುಳ್ಳವರು ಮತ್ತು ಧೈರ್ಯವಂತರು. ಈ ಗುಣವುಳ್ಳವರು ಕಟಕರಾಶಿಯ ಸಂಗಾತಿಯನ್ನು ಬಹಳವಾಗಿ ಮೆಚ್ಚಿಸುತ್ತದೆ. ಅವರ ನಡುವಿನ ಬಾಂಧವ್ಯವನ್ನು ಹೆಚ್ಚಿಸುತ್ತದೆ. ಕಟಕರಾಶಿಯವರು ಅತ್ಯಂತ ಯಶಸ್ಸನ್ನು ಪಡೆಯಲು ಅವಣಿಸುತ್ತಿರುತ್ತಾರೆ. If married

ಅವರ ಪ್ರಯತ್ನವು ಮೇಷರಾಶಿಯ ಸಂಗಾತಿಯನ್ನು ಗೌರವಿಸುವಂತೆ ಮಾಡುತ್ತದೆ.
ಮೇಷರಾಶಿ ಮತ್ತು ಕುಂಭರಾಶಿ: ಜಾತಕದ ಪ್ರಕಾರ ಇದೊಂದು ಅದ್ಭುತವಾದ ಜೋಡಿ. ಇವರ ಜೀವನದಲ್ಲಿ ಬರೀ ಹಾಲುಜೇನು ಇರುತ್ತದೆಂದು ಹೇಳಲಾಗುತ್ತದೆ. ಇಬ್ಬರು ಸಾಹಸಪ್ರಿಯರು. ಒಟ್ಟೊಟ್ಟಿಗೆ ಎಲ್ಲಾ ಕೆಲಸಕ್ಕೂ ಕೈ ಹಾಕುತ್ತಾರೆ.

ಇಬ್ಬರೂ ಕಲಾತ್ಮಕ ಆಲೋಚನೆಗಳನ್ನು ಹೊಂದಿರುತ್ತಾರೆ. ಪ್ರೀತಿ ಗೌರವಗಳಿಂದ ಕಾಣುತ್ತಾರೆ ಮತ್ತು ಒಬ್ಬರಿಗೊಬ್ಬರು ತಮ್ಮ ವ್ಯಕ್ತಿಗತ ಸ್ವಾತಂತ್ರವನ್ನು ನೀಡುತ್ತಾರೆ. ಮೇಷರಾಶಿ ಮತ್ತು ಮೀನಾರಾಶಿ: ಈ ಎರಡು ರಾಶಿಯವರು ಬಹಳ ಅನ್ಯೋನ್ಯವಾಗಿ ಜೀವನ ನಡೆಸಿಕೊಂಡು ಹೋಗುತ್ತಾರೆ. ಒಬ್ಬರಿಗೊಬ್ಬರು ಅನುಸರಿಸಿಕೊಂಡು ನಡೆಯುತ್ತಾರೆ. If married

ಮೀನಾರಾಶಿಯ ಸಂಗಾತಿ ಮೇಷರಾಶಿಯ ಸಂಗಾತಿಯ ವಿಚಾರಗಳನ್ನು ಅನುಕರಣೆ ಮಾಡುತ್ತಾರೆ.
ತುಲಾರಾಶಿ ಮತ್ತು ಸಿಂಹರಾಶಿ: ಈ ಎರಡು ರಾಶಿಯವರು ಬಹಳ ಸಮಾಜಮುಖಿ ಜೀವನವನ್ನು ನಡೆಸುತ್ತಿರುತ್ತಾರೆ. ಬಹಳ ಸ್ನೇಹಿತರು ಮತ್ತು ಸಂಬಂಧಿಕರನ್ನು ಹೊಂದಿರುತ್ತಾರೆ. ಸಿಂಹರಾಶಿಯವರು ಬಹಳ ಕೋಪಿಷ್ಠ ಸ್ವಭಾವದವರಾಗಿದ್ದರೂ

ಸಹ ತುಲಾರಾಶಿಯ ಸಂಗಾತಿ ಎಲ್ಲಾವನ್ನು ಖುಷಿಯಾಗಿ ನಿಭಾಯಿಸಿಕೊಂಡು ಹೋಗುತ್ತಾರೆ. ಸಿಂಹರಾಶಿ ಮತ್ತು ಧನುಸ್ಸು ರಾಶಿ: ಸ್ನೇಹಿತರೊಂದಿಗೆ ತಿರುಗಾಡಿಗೊಂಡು ಹಾಯಾಗಿ ಇರುತ್ತಾರೆ. ಸುಖಕ್ಕೆ ಬೇಕಾಗಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಾರೆ. If married

ಸಿಂಹರಾಶಿಯ ಸಂಗಾತಿ ಬಹಳ ಮುದ್ದಿನಿಂದ ಸಾಕಲ್ಪಟ್ಟ ಮತ್ತು ಸ್ವಲ್ಪ ಕಾಟ ಸ್ವಭಾವದ ವ್ಯಕ್ತಿಯಾಗಿದ್ದು ಧನುಸ್ಸು ರಾಶಿಯವರು ಅನುಸರಿಸಿಕೊಂಡು ಹೋಗುತ್ತಾರೆ. ವೃಷಭರಾಶಿ ಮತ್ತು ಕಟಕರಾಶಿ: ಕಟಕರಾಶಿಯ ಸಂಗಾತಿ ಬಹಳ ಪ್ರಾಮಾಣಿಕನಾಗಿದ್ದು ವೃಷಭರಾಶಿಯ ಸಂಗಾತಿಗೆ ಬಹಳ ಇಷ್ಟವಾಗುತ್ತದೆ.

ವೃಷಭರಾಶಿಯವರು ಬಹಳ ಸಹಾಯ ಮಾಡುವ ಗುಣವನ್ನು ಹೊಂದಿರುತ್ತಾರೆ. ಇವರು ಸೇರಿ ಮನೆ, ಆಸ್ತಿ ಎಲ್ಲವನ್ನು ಗಳಿಸುತ್ತಾರೆ. ವೃಷಭರಾಶಿ ಮತ್ತು ಮಕರರಾಶಿ: ವೃಷಭರಾಶಿಯವರಿಗೆ ಮಕರರಾಶಿಯವರ ಕೆಲಸ ಮತ್ತು ತಮಾಷೆಯ ಗುಣಗಳು ಇಷ್ಟವಾಗುತ್ತದೆ. ಮಕರರಾಶಿಯವರಿಗೆ ವೃಷಭರಾಶಿಯವರ ಪ್ರಾಮಾಣಿಕ ಮನಸ್ಸು ಇಷ್ಟವಾಗುತ್ತದೆ.

Leave A Reply

Your email address will not be published.