Ultimate magazine theme for WordPress.

joint pain ಕೀಲು ನೋವು ಶುಗರ್ ಕಂಟ್ರೋಲ್

0 39,282

joint pain sugar control healthtips kannadatop tenಸ್ನೇಹಿತರೇ ಹಾಲು ಅಥವಾ ನೀರಿನಲ್ಲಿ ಈ ಒಂದು ವಸ್ತು ಸೇರಿಸಿ ಕುಡಿದರೇ ಸಾಕು ರಕ್ತನಾಳಗಳಲ್ಲಿ ಬ್ಲಾಕೇಜ್ ಉಂಟಾಗುವುದು, ಕೈಕಾಲುಗಳ ನರಗಳಲ್ಲಿ ಸೆಳೆತ ಉಂಟಾಗುವುದು, ಕೊಲೆಸ್ಟ್ರಾಲ್ ಹೆಚ್ಚು ಆಗುವುದು, ಮಧುಮೇಹ ಸಮಸ್ಯೆ ಹೆಚ್ಚು ಆಗುವುದು, ವೆರಿಕೋಸ್ ನ ಸಮಸ್ಯೆ ಆಗುವುದು, ರಕ್ತ ಗಟ್ಟಿಯಾಗುವುದು, ಕಾಲಿನಲ್ಲಿರುವ ನರಗಳು ಉಬ್ಬಿದ ಹಾಗೇ ಆಗುವುದು,

ಮಂಡಿ ನೋವು, ತುಂಬಾ ವರ್ಷ ಜ್ಯಾಂಟ್ ಪೈನ್ ಆಗುತ್ತಿರುವುದು, ಚಿಕ್ಕ ಪುಟ್ಟ ಸಮಸ್ಯೆ ಮಾಡಲು ಸಾಧ್ಯವಾಗದೇ ಇರುವುದು ಅಂತಹ ಎಲ್ಲಾ ಸಮಸ್ಯೆಗಳನ್ನು ಕಡಿಮೆ ಮಾಡುವಂತಹ ಮನೆಮದ್ದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ. ವಯಸ್ಸು ಚಿಕ್ಕದಿದ್ದು ಇಂತಹ ಸಮಸ್ಯೆಗಳಿದ್ದರೇ ಈ ಮನೆಮದ್ದನ್ನು ಮಾಡುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ. joint pain

ನಿಮ್ಮ ದೇಹಕ್ಕೆ ಒಳ್ಳೆಯ ಎನರ್ಜಿಯನ್ನು ಕೊಡುತ್ತದೆ. ನಿಮ್ಮ ದೇಹದಲ್ಲಿನ ರಕ್ತನಾಳಗಳಲ್ಲಿ ಉಂಟಾಗುವಂತಹ ಎಲ್ಲಾ ಸಮಸ್ಯೆಗಳು ಕಡಿಮೆಯಾಗುತ್ತದೆ. ನಿಮ್ಮ ಮೂಳೆಗಳನ್ನ ಗಟ್ಟಿ ಮಾಡುವುದರ ಜೊತೆಗೆ ಮಾಂಸಖಂಡಗಳ ನೋವು ಇದ್ದರೂ ಸಹ ಕಡಿಮೆ ಮಾಡುತ್ತದೆ. ಆ ಮನೆಮದ್ದನ್ನು ಹೇಗೆ ತಯಾರು ಮಾಡಬೇಕೆಂದರೆ ಅಗಸೆ ಬೀಜವನ್ನು ತೆಗೆದುಕೊಳ್ಳಬೇಕು.

ಹೇರಳವಾದಂತಹ ನಾರಿನಾಂಶ ಮತ್ತು ಒಮೆಗಾ 3 ಆಸಿಡ್ ಇದೆ. ದೇಹದಲ್ಲಿನ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣ ಮಾಡುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣ ಮಾಡುತ್ತದೆ. ಅಗಸೆ ಬೀಜವನ್ನು ದಿನನಿತ್ಯ ಸೇವನೆ ಮಾಡುವುದರಿಂದ ಮಧುಮೇಹ ಬರದ ಹಾಗೇ ನೋಡಿಕೊಳ್ಳಬಹುದು. joint pain

ಅಗಸೆ ಬೀಜವು ಮಹಿಳೆಯರಿಗೆ ತುಂಬಾ ಒಳ್ಳೆಯದು, ಮಹಿಳೆಯರಲ್ಲಿ ಹಾರ್ಮೋನ್ ನಲ್ಲಿ ಅಸಮತೋಲನ ಉಂಟಾಗುತ್ತಿದ್ದರೇ ಅದನ್ನು ಕಡಿಮೆಮಾಡಿಕೊಳ್ಳಬಹುದು. ಈ ಬೀಜದಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಜೊತೆಗೆ ಒಣ ಶುಂಠಿ ಪುಡಿಯನ್ನು ತೆಗೆದುಕೊಳ್ಳೋಣ. ಶುಂಠಿಯನ್ನು ಬಳಸುವುದರಿಂದ ನಮ್ಮ ದೇಹದಲ್ಲಿನ ರಕ್ತಪರಿಚಲನೆ ಚೆನ್ನಾಗಿ ಆಗುತ್ತದೆ.

ರಕ್ತ ನಾಳಗಳಲ್ಲಿ ಬ್ಲಾಕೇಜ್ ಆಗಿದ್ದರೇ ಅದನ್ನು ಕೂಡ ಕ್ಲಿಯರ್ ಮಾಡುತ್ತದೆ. ರಕ್ತವನ್ನು ತೆಳುಮಾಡುವುದಲ್ಲದೇ ವಾತ, ಪಿತ್ತ, ಕಫದಂತಹ ಯಾವುದೇ ದೋಷವಿದ್ದರೂ ಅದನ್ನು ಕಡಿಮೆ ಮಾಡುತ್ತದೆ. ಯಾರಿಗೆ ಕಫ, ತಂಡಿ, ಆಗುತ್ತಿದ್ದರೇ ಅದನ್ನು ಹೋಗಲಾಡಿಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಾತದ ದೋಷದಿಂದ ಕೈಕಾಲುಗಳಲ್ಲಿ ಊತ ಬರುತ್ತಿದ್ದರೇ ಅದನ್ನು ಸಹ ಕಡಿಮೆ ಮಾಡುತ್ತದೆ. joint pain

ಮೂರನೇ ವಸ್ತು ದಾಲ್ಚಿನ್ನಿಯನ್ನು ತೆಗೆದುಕೊಳ್ಳೋಣ. ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆಮಾಡುವುದರ ಜೊತೆಗೆ ಮೂಳೆಗಳು ಗಟ್ಟಿಯಾಗಲು ಸಹಾಯ ಮಾಡುತ್ತದೆ. ದೇಹದಲ್ಲಿರುವ ರಕ್ತನಾಳಗಳು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಬೆನ್ನುನೋವು, ಮಂಡಿನೋವು, ಗ್ಯಾಸ್ ಅಸಿಡಿಟಿ ಅಂತಹ ಸಮಸ್ಯೆಗಳು ಇದ್ದರೂ ಕಡಿಮೆ ಮಾಡುತ್ತದೆ. ಅರಿಶಿಣ ಪುಡಿಯನ್ನು ತೆಗೆದುಕೊಳ್ಳೋಣ.

ಆದಷ್ಟು ನಾವು ಅರಿಶಿಣದ ಕೊಂಬನ್ನು ತಂದು ಮನೆಯಲ್ಲೇ ತಯಾರು ಮಾಡಿಕೊಂಡರೆ ಉತ್ತಮ. ಅರಿಶಿಣ ಪುಡಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕ್ಯಾನ್ಸರ್ ನಂತಹ ಕಾಯಿಲೆಗಳು ಬರದ ಹಾಗೇ ತಡೆಯುತ್ತದೆ. ಲಿವರ್ ಗೆ ಒಳ್ಳೆಯದು ಮತ್ತು ಯಾವುದೇ ರೀತಿಯ ಜ್ಯಾಂಟ್ ಗಳಲ್ಲಿ ಊಟ ಉಂಟಾಗಿದ್ದರೂ ಅದನ್ನು ಕಡಿಮೆಮಾಡುವಂತಹ ಗುಣ ಈ ಅರಿಶಿಣ ಪುಡಿಗೆ ಇದೆ. joint pain

ಒಂದು ಬಟ್ಟಲು ಅಗಸೆ ಬೀಜವನ್ನು ಸ್ವಲ್ಪ ಫ್ರೈ ಮಾಡಿಕೊಳ್ಳಿ ಅಂದರೆ ಚಟಪಟ ಎನ್ನುವಷ್ಟು ಶಬ್ದ ಬರುವಷ್ಟು ಉರಿದುಕೊಳ್ಳಿ. ಇದು ತಣ್ಣಗಾದ ಮೇಲೆ ಮಿಕ್ಸಿಗೆ ಹಾಕಿ ನೈಸ್ ಆಗಿ ಪುಡಿ ಮಾಡಿಕೊಳ್ಳಬೇಕು. ಒಂದು ಸ್ಫೂನ್ ನಷ್ಟು ಒಣಶುಂಠಿ ಪುಡಿಯನ್ನು ಹಾಕಬೇಕು, ಅರ್ಧ ಸ್ಪೂನ್ ನಷ್ಟು ದಾಲ್ಚಿನ್ನಿ ಪೌಡರ್ ಅನ್ನು ಹಾಕಬೇಕು ಮತ್ತು ಒಂದು ಸ್ಪೂನ್ ನಷ್ಟು ಅರಿಶಿಣ ಪುಡಿಯನ್ನು ಹಾಕಿ ಮಿಶ್ರಣ ಮಾಡಬೇಕು. joint pain

ಈ ಪೌಡರ್ ನಲ್ಲಿ ನಮ್ಮ ದೇಹಕ್ಕೆ ಬೇಕಾದಂತಹ ಎಲ್ಲಾ ಅಂಶಗಳು ಇವೆ. ಒಂದು ಗ್ಲಾಸ್ ಹಾಲಿಗೆ ಒಂದು ಸ್ಪೂನ್ ನಷ್ಟು ಈ ಪುಡಿಯನ್ನು ಮಿಶ್ರ ಮಾಡಬೇಕು. ಇದನ್ನು ರಾತ್ರಿ ಊಟವನ್ನು ಮಾಡಿ ಮಲಗುವ ಮೊದಲು ಇದನ್ನು ಕುಡಿಯಬೇಕು. ಊಟ ಮಾಡಿದ ತಕ್ಷಣ ಕುಡಿಯದೇ ಸ್ವಲ್ಪ ಸಮಯವನ್ನು ಬಿಟ್ಟು ಕುಡಿಯಬೇಕು. ಹಾಲಿನಲ್ಲಿ ಕುಡಿಯಲು ಇಷ್ಟವಿಲ್ಲದವರು ನೀರಿನಲ್ಲಿ ಈ ಪುಡಿಯನ್ನು ಮಿಕ್ಸ್ ಮಾಡಿ ಕುಡಿಯಬಹುದು. ಒಂದು ವಾರ ಕುಡಿಯಿರಿ ನಂತರ ನಿಮಗೇ ಇದರ ಫಲಿತಾಂಶ ಗೊತ್ತಾಗುತ್ತದೆ ಮತ್ತೆ ಇನ್ನೊಂದು ವಾರ ಕುಡಿಯಿರಿ. ಒಳ್ಳೆಯ ಎನರ್ಜಿ ಬರುತ್ತದೆ. ಯಾವುದೇ ರೀತಿಯ ಕಾಯಿಲೆ ಇದ್ದರೂ ನಿಯಂತ್ರಣಕ್ಕೆ ಬರುತ್ತದೆ.

Leave A Reply

Your email address will not be published.