Ultimate magazine theme for WordPress.

Lakshmi ಅಕ್ಕಿಯ ಡಬ್ಬದಲ್ಲಿ ಈ ಒಂದು ವಸ್ತು ಬಚ್ಚಿಡಿ

0 5,015

Lakshmi attraction Rice ಸಾಮಾನ್ಯವಾಗಿ ಪ್ರತಿಯೊಬ್ಬರು ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು, ಸಿರಿಸಂಪತ್ತನ್ನು ಗಳಿಸಬೇಕು ಎನ್ನುವ ಆಸೆಯನ್ನು ಹೊಂದಿರುತ್ತಾರೆ. ಆದರೆ ಅನೇಕ ರೀತಿಯ ಅಡೆತಡೆಗಳು ಸಮಸ್ಯೆಗಳಿಂದಾಗಿ ಅಂದುಕೊಂಡಿದ್ದಂತಹ ಗುರಿಗಳನ್ನು ತಲುಪಲು ಸಾಧ್ಯವಾಗುವುದಿಲ್ಲ. ಅವರ ಜೀವನದಲ್ಲಿ ‘ಸಮಸ್ಯೆಗಳು ಬರುತ್ತಲೇ ಇರುತ್ತವೆ. ಅದರಲ್ಲಿ ಮುಖ್ಯವಾಗಿ ಹಣಕಾಸಿನ ಸಮಸ್ಯೆ ಎದುರಾದರೆ ಜೀವನದಲ್ಲಿ ಪ್ರಗತಿ ಕಾಣುವುದು ಕಷ್ಟಕರ. ಸಾಲದ ಬಾಧೆಯಿಂದ ಋಣ ಮುಕ್ತರಾಗದೇ ಮಾನಸಿಕ ಒತ್ತಡಗಳು ಎದುರಾಗಿ ನೆಮ್ಮದಿ ಇಲ್ಲದಂತೆ ಆಗುತ್ತದೆ.

ಯಾವಾಗ ಸಾಲ ತೀರುತ್ತದೆ ಎಂಬ ಚಿಂತೆ ಕಾಡುತ್ತಿರುತ್ತದೆ. ಸಾಲ ತೀರಿಸಬೇಕೆಂದರೆ ನಾವು ಕಷ್ಟ ಪಟ್ಟು ಕೆಲಸ ಮಾಡಲೇ ಬೇಕು. ಮನೆಯಲ್ಲಿ ಧನಸಂಪತ್ತು ಹೆಚ್ಚಾಗಬೇಕಾದರೆ ಮನೆಯಲ್ಲಿ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ. ಆದಾಯದ ಮೂಲಗಳು ಹೆಚ್ಚಾಗುತ್ತವೆ. ಹಾಗಾದರೇ ಯಾವ ವಸ್ತುವನ್ನು ಅಕ್ಕಿಡಬ್ಬದಲ್ಲಿಡುವುದರಿಂದ ಅದೃಷ್ಠ ಬರುತ್ತದೆ Lakshmi

ಮತ್ತು ಹಣವನ್ನ ಯಾವ ರೀತಿ ಆಕರ್ಷಣೆ ಮಾಡಬಹುದು ಎಂಬುದೆಲ್ಲವನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಅಕ್ಕಿಡಬ್ಬದಲ್ಲಿ ಕೆಲವೊಂದು ವಸ್ತುಗಳನ್ನು ಇಡುವುದರಿಂದ ಧನಾಕರ್ಷಣೆಯಾಗುತ್ತದೆ. ಯಾವುದೇ ಕಾರಣಕ್ಕು ಮನೆಯಲ್ಲಿ ಅಕ್ಕಿ ಡಬ್ಬ ಖಾಲಿಯಾಗದಂತೆ ನೋಡಿಕೊಳ್ಳಬೇಕು. ಸ್ವಲ್ಪವಾದರೂ ಅಕ್ಕಿ ಡಬ್ಬದಲ್ಲಿ ಅಕ್ಕಿ ಇರಬೇಕು. ಪುರಾತನ ಕಾಲದಿಂದಲೂ ನಮ್ಮ ಹಿರಿಯರು ಅನುಸರಿಸಿಕೊಂಡು ಬರುತ್ತಿದ್ದಾರೆ. ಅವರಿಗೆ ಯಾವುದೇ ರೀತಿಯ ಧನದ ಕೊರತೆಯಾಗುತ್ತಿರಲಿಲ್ಲ.

ಚಿಲ್ಲರೆ ನಾಣ್ಯಗಳನ್ನು ಅಕ್ಕಿ ಡಬ್ಬದಲ್ಲಿ ಹಾಕುತ್ತಿದ್ದರು. ಇದರಿಂದಾಗಿ ಧನಾಕರ್ಷಣೆ ಹೆಚ್ಚಾಗುತ್ತಿತ್ತು. ಸದಾ ಅವರ ಬಳಿ ಹಣವಿರುತ್ತಿತ್ತು. ಆದ್ದರಿಂದ ಮನೆಯಲ್ಲಿ ಅಕ್ಕಿ ಡಬ್ಬದಲ್ಲಿ ಚಿಲ್ಲರೆ ಕಾಸನ್ನು ಹಾಕಬೇಕು. ಜೊತೆಗೆ ಸ್ವಲ್ಪ ಅಕ್ಕಿಯನ್ನು ಪಕ್ಷಿಗಳಿಗೆ ಹಾಕಬೇಕು. ಈ ರೀತಿ ಮಾಡುವುದರಿಂದ ಸದಾ ಅನ್ನಪೂರ್ಣೇಶ್ವರಿಯ ಅನುಗ್ರಹವಿರುತ್ತದೆ. ಮನೆಯಲ್ಲಿ ಧನಧಾನ್ಯ ಸಿರಿಸಂಪತ್ತು ವೃದ್ಧಿಯಾಗುತ್ತದೆ. Lakshmi

ನಿಮ್ಮ ಮನೆಯಲ್ಲಿ ಸಿರಿಸಂಪತ್ತು ಯಾವಾಗಲೂ ನೆಲೆಸಿರ ಬೇಕೆಂದರೆ ಚಿಕ್ಕ ಪರಿಹಾರ ಮತ್ತು ಸಲಹೆ ಏನೆಂದರೆ ಈ ಪರಿಹಾರಗಳನ್ನು ಅಮ್ಮನವರ ವಾರವಾದ ಮಂಗಳವಾರ ಮತ್ತು ಶುಕ್ರವಾರ ಮಾಡಿ, ಇದು ಮಹಾಲಕ್ಷ್ಮಿಗೆ ಸಂಬಂಧಿಸಿದ ಪ್ರಯೋಗವಾಗಿರುವುದರಿಂದ ಕೆಂಪು ಬಟ್ಟೆಯನ್ನ ಚೌಕಾ ಆಕಾರವಾಗಿ ಕತ್ತರಿಸಿಕೊಂಡು ಈ ಬಟ್ಟೆಯ ಒಳಗಡೆ ಕೆಲವು ವಸ್ತುಗಳನ್ನು ಹಾಕಬೇಕು ನಾವು ಹಾಕುವ ಪ್ರತಿಯೊಂದು ವಸ್ತುವು ಕೂಡ ಲಕ್ಷ್ಮಿ ದೇವಿಗೆ ಸಂಬಂಧಿಸಿದ್ದು, ಲಕ್ಷ್ಮಿ ಕವಡೆ ಹಾಗೂ ಬಿಳಿ ಕವಡೆಯನ್ನು ಬಳಸಬಾರದು.

ಹಳದಿ ಕಲರ್ ಕವಡೆಗಳನ್ನು ಬಳಸಬೇಕು. ಏಕೆಂದರೆ ಈ ಕವಡೆಗಳು ಮಹಾಲಕ್ಷ್ಮಿಯ ಸ್ವರೂಪವಾಗಿರುತ್ತದೆ. ಈ ಕವಡೆಗಳ ಜೊತೆ 3 ಗೋಮತಿ ಚಕ್ರಗಳನ್ನು ತೆಗೆದುಕೊಳ್ಳಿ. ಇವುಗಳು ಸಹ ನದಿಯಲ್ಲಿ ಸಿಗುತ್ತದೆ. ಒಂದು ರೂಪಾಯಿಯ 3 ನಾಣ್ಯಗಳನ್ನು ತೆಗೆದುಕೊಳ್ಳಿ. 2 ರೂಪಾಯಿಯ 3 ನಾಣ್ಯಗಳನ್ನು ಬಳಸಬಹುದು. ಹಾಗೆಯೇ 3 ವಾಲಕ್ಕೆ 3 ಲವಂಗವನ್ನ ತೆಗೆದುಕೊಳ್ಳಿ ಇವು ಧನಾಕರ್ಷಣೆಗೆ ಸಹಕಾರಿ.

ಈ ಎಲ್ಲಾ ವಸ್ತುಗಳನ್ನು ಕೆಂಪು ಬಟ್ಟೆಯಲ್ಲಿ ಅರಿಶಿಣ ಕುಂಕುಮವನ್ನು ಹಾಕಿ ಓಂ ಶ್ರೀ ಮಾತೃಯೇ ನಮಃ ಎಂಬ ಮಂತ್ರವನ್ನು ಹೇಳುತ್ತಾ ಅಕ್ಷತೆಯನ್ನು ಹಾಕಬೇಕು. ಹೀಗೆ 21 ಸಲ ಮಾಡಿದ ನಂತರ ಇದನ್ನು ಗಂಟುಕಟ್ಟಿ ನಿಮ್ಮ ಮನೆಯಲ್ಲಿರುವ ಅಕ್ಕಿ ಡಬ್ಬದಲ್ಲಿ ಇಡಬೇಕು. ಈ ಪ್ರಯೋಗವನ್ನು ಮಂಗಳವಾರ ಆರಂಭಿಸಿದರೇ ಪ್ರತಿ ಮಂಗಳವಾರ, ಶುಕ್ರವಾರ ಆರಂಭಿಸಿದರೆ ಪ್ರತಿ ಶುಕ್ರವಾರ Lakshmi

ಈ ಗಂಟನ್ನು ತೆಗೆದು ನಾಣ್ಯಗಳು, ಗೋಮತಿ ಚಕ್ರಗಳನ್ನು ತೊಳೆದು, ಬೇರೆ ಲವಂಗ, ಏಲಕ್ಕಿಯನ್ನು ಹಾಕಿ ಮತ್ತೆ ಗಂಟು ಕಟ್ಟಿ ಅಕ್ಕಿಡಬ್ಬದಲ್ಲಿ ಹಾಕಬೇಕು. ಪ್ರತಿವಾರ ಬದಲಾಯಿಸಲು ಸಾಧ್ಯವಾಗದಿದ್ದರೇ ತಿಂಗಳಿಗೊಮ್ಮೆಯಾದರೂ ಬದಲಿಸಬಹುದು. ಈ ಗಂಟಿನಲ್ಲಿ ಬಳಸಿದ ಲವಂಗ ಮತ್ತು ಏಲಕ್ಕಿಯನ್ನು ದೇವರಿಗೆ ಧೂಪ ಹಾಕುವಾಗ ಬಳಸಿಕೊಳ್ಳಬಹುದು. ಈ ಪ್ರಯೋಗವನ್ನು ನೀವು ಬ್ರಾಹ್ಮಿ ಮುಹೂರ್ತದಲ್ಲಿ ಮಾಡಿಕೊಂಡರೆ ಬಹಳ ಶ್ರೇಷ್ಠ, ಸಾಧ್ಯವಾಗದಿದ್ದರೇ ಗೋಧೂಳಿ ಸಮಯದಲ್ಲೂ ಮಾಡಬಹುದು.

Leave A Reply

Your email address will not be published.