Ultimate magazine theme for WordPress.

lucky indoor ಅದೃಷ್ಟ ನಿಮ್ಮನ್ನು ಹುಡುಕಿ ಬರುತ್ತೆ 

0 5,547

lucky indoor vastu plants in kannadatopten ಈ ಲೇಖನದಲ್ಲಿ ನಾವು ಈ 10 ಅದೃಷ್ಟದ ಸಸ್ಯಗಳು ಮನೆಯಲ್ಲಿದ್ದರೆ, ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ. ಈ ಸಸ್ಯಗಳು ಮನೆಗೆ ಅದೃಷ್ಟ ತರುತ್ತದೆ. ತಾಯಿ ಲಕ್ಷ್ಮೀಯ ಆಶೀರ್ವಾದ ಬೇಡ ಅನ್ನುವವರು ಯಾರೂ ಇಲ್ಲ. ತಾಯಿ ಲಕ್ಷ್ಮೀಯ ಆಶೀರ್ವಾದ ಸಿಗಬೇಕು ಎಂದರೆ ನಾನಾ ಪೂಜೆ – ಪುನಸ್ಕಾರವನ್ನುಮಾಡಬೇಕು ಅನ್ನೊ ನಿಯಮ ಇರುವುದಿಲ್ಲ.

ಲಕ್ಷ್ಮೀ ಸ್ವರೂಪವಾದ ಈ ಗಿಡಗಳನ್ನು ನೆಟ್ಟರೆ ಸಾಕು, ಗಿಡಗಳು ಅಭಿವೃದ್ಧಿಯ ಸಂಕೇತವಾಗಿದ್ದೂ ಮನೆಯಲ್ಲಿ ಸಕಾರಾತ್ಮಕ ಅಂಶಗಳನ್ನು ತರುತ್ತದೆ. ಈ ಕಾರಣದಿಂದ ಮನೆಯ ಆರ್ಥಿಕ ಪರಿಸ್ಥಿತಿಯು ಅಭಿವೃದ್ಧಿಯಾಗುತ್ತದೆ. ಅಂತಹ ಗಿಡಗಳು ಯಾವುದು ಎಂಬುದನ್ನು ಈ ಲೇಖನದಲ್ಲಿ ನಾವು ನೋಡೋಣ.ಮೊದಲನೆಯ ಗಿಡ ಯಾವುದೆಂದರೆ , lucky indoor

ಅಶೋಕ ಮರ . ಹಿಂದೂ ಧರ್ಮದಲ್ಲಿ ಅಶೋಕ ಮರಕ್ಕೆ ವಿಶೇಷ ಮಾನ್ಯತೆ ಇದೆ. ಈ ಮರ ಮನೆಯ ದುಃಖವನ್ನು ತೊಡೆದು ಹಾಕುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ವಿಶೇಷ ಮಾನ್ಯತೆ ಹೊಂದಿರುವ ಈ ಮರ ಅಭಿವೃದ್ಧಿಯ ಸಂಕೇತವಾಗಿದೆ.

ಎರಡನೆಯ ಗಿಡ ಯಾವುದೆಂದರೆ , ಮನಿಪ್ಲಾಂಟ್ . ಒಳಾಂಗಣ ಸಸ್ಯವಾಗಿರುವ ಈ ಮನಿಪ್ಲಾಂಟ್ ಸಸ್ಯವನ್ನು ನೆಡುವುದರಿಂದ ಆರ್ಥಿಕತೆ ವೃದ್ಧಿಯಾಗುತ್ತದೆ. ಈ ಸಸ್ಯ ಹೊರ ಸೂಸುವ ಗಾಳಿಯಿಂದ ಮನೆಯಲ್ಲಿ ಸಕಾರಾತ್ಮಕತೆಯನ್ನು ದೂರ ಮಾಡುತ್ತದೆ. ಮನಿಪ್ಲಾಂಟ್ ಮನೆಯಲ್ಲಿ ಉತ್ತಮ ಅದೃಷ್ಟ ನಿವಾರಣೆ ತರುವ ಶಶಿಗಳಲ್ಲಿ ಒಂದಾಗಿದೆ. lucky indoor

ಈ ಶಶಿಯನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಸಂಪತ್ತನ್ನು ತರುತ್ತದೆ. ಮೂರನೆಯ ಗಿಡ ಯಾವುದೆಂದರೆ ತೂಜಾ ಗಿಡ. ಸ್ವರಸ್ವತಿಯ ಸ್ವರೂಪ ಎಂದು ಪರಿಗಣಿಸುವ ಈ ಸಸ್ಯವನ್ನು ಮನೆಯ ಮುಂದೆ ನೆಟ್ಟರೆ ಉತ್ತಮ ವಾತಾವರಣ ನಿರ್ಮಾಣ ಮಾಡುತ್ತದೆ. ಮಕ್ಕಳಲ್ಲಿ ಓದಲು ಆಸಕ್ತಿ ಮಾಡುವಂತೆ ಮಾಡುತ್ತದೆ. ನಾಲ್ಕನೆಯ ಗಿಡ ಯಾವುದೆಂದರೆ ಕುಬೇರಾಕ್ಷಿ ಗಿಡ .

ಮನೆಗೆ ಅದೃಷ್ಟ ಲಾಭ ತರುವ ಈ ಗಿಡ ವಾಸ್ತು ಶಾಸ್ತ್ರದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ . ಈ ಗಿಡ ಮನೆಯಲ್ಲಿ ಇದ್ದರೆ, ಧನ- ಸಂಪತ್ತು ಹೆಚ್ಚುತ್ತದೆ. ಐದನೇಯ ಗಿಡ ಯಾವುದೆಂದರೆ ಲಕ್ಷ್ಮಿ ಕಮಲ ಗಿಡ . ಜೀವನದಲ್ಲಿ ಹೊಸ ಉದಯವನ್ನು ಈ ಗಿಡ ಸೂಚೆಸುತ್ತದೆ. ಈ ಗಿಡ ಮನೆಯಲ್ಲಿ ಇದ್ದರೆ, ಲಕ್ಷ್ಮೀ ಮತ್ತು ವಿಷ್ಣುವಿನ ಆಶೀರ್ವಾದ ಸದಾ ಇರುತ್ತದೆ. lucky indoor

ಈ ಸಸ್ಯಗಳು ಮನೆಯಲ್ಲಿ ಇದ್ದರೆ ಯಾವುದೇ ಕಷ್ಟಗಳು ಎದುರಾದರೂ ಅದು ಪರಿಹಾರವಾಗುತ್ತದೆ. ಮನೆಯಲ್ಲಿ ಕಮಲದ ಗಿಡವನ್ನು ಒಂದು ಮಣ್ಣಿನ ಮಡಿಕೆಯ ನೀರಿನಲ್ಲಿ ಇರಿಸಬೇಕು. ಇದು ಸೌಂದರ್ಯ ,ಸಂಮೃದ್ಧಿ ಹಾಗೂ ಫಲವತ್ತತೆಯ ಸಂಕೇತವಾಗಿದೆ. ಪ್ರತಿಯೊಬ್ಬ ವ್ಯಕ್ತಿಯನ್ನು ಆಕರ್ಷಿಸುವ ಈ ಹೂವೂ ಭಾವನಾತ್ಮಕ , ಆಧ್ಯಾತ್ಮಿಕ ಹಾಗೂ ದೈಹಿಕವಾದ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಇದೆ.

ಈ ಗಿಡದಲ್ಲಿ ಹೇರಳವಾಗಿ ಧನಾತ್ಮಕ ಶಕ್ತಿಯನ್ನು ಒಳಗೊಂಡಿದೆ. ಹಾಗಾಗಿ ವ್ಯಕ್ತಿಗೆ ಸಾಮಾಜಿಕ ಸ್ಥಾನಮಾನ , ಯಶಸ್ಸು , ಅದೃಷ್ಟ ತಂದು ಕೊಡುತ್ತದೆ. ಆರನೇಯ ಗಿಡ ಯಾವುದೆಂದರೆ ತುಳಸಿಗಿಡ . ಈ ಗಿಡವನ್ನು ಶಶಿಗಳ ರಾಣಿ ಎ೦ದು ಕರೆಯಲಾಗುತ್ತದೆ. ಇದನ್ನು ಲಕ್ಷ್ಮೀ ಸ್ವರೂಪ ಎ೦ದು ಹೇಳಲಾಗಿದೆ. ಇದೇ ಕಾರಣಕ್ಕೆ ಲಕ್ಷ್ಮೀ ಗಿಡಕ್ಕೆ ಹಿಂದೂ ಸಂಪ್ರದಾಯದಲ್ಲಿ ವಿಶೇಷ ಸ್ಥಾನವಿದೆ . lucky indoor

ತುಳಸಿ ಗಿಡಗಳು ಮನೆಯ ಅಭಿವೃದ್ಧಿ ಯ ಸಂಕೇತವಾಗಿದೆ. ಏಳನೇಯ ಗಿಡ ಯಾವುದೆಂದರೆ ಲೋಳೆ ರಸ, ಈ ಸಸ್ಯವು ಉತ್ತಮ ಶಕ್ತಿ ಮತ್ತು ಆರೋಗ್ಯ ಪ್ರಯೋಜನಗಳಿಗಾಗಿ ನೆಡಬೇಕಾಗದ ಅತ್ಯುತ್ತಮ ಗಿಡ . ಇದು ಅಗಾದ ಪ್ರಮಾಣದ ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳುವ ಮೂಲಕ ಮತ್ತು ಸಮಾನ ಪ್ರಮಾಣದ ಆಮ್ಲಜನಕವನ್ನು

ಹೊರ ಹಾಕುವ ಮೂಲಕ ಗಾಳಿಯ ಶುದ್ಧೀಕರಣಕ್ಕೆ ಕೊಡುಗೆ ನೀಡುತ್ತದೆ. ಇದು ಉಸಿರಾಡುವುದಕ್ಕೆ ತಾಜಾ ಹಾನಿಕಾರಕವಲ್ಲದ ವಾತಾವರಣ ನಿರ್ಮಾಣ ಮಾಡುತ್ತದೆ. ಈ ಗಿಡವನ್ನು ಪೂರ್ವ or ಉತ್ತರ ದಿಕ್ಕಿನಲ್ಲಿ ಇರಿಸಿದರೆ ಆಲೂ ವೇರ ಸಸ್ಯವು ವಾಸ್ತು ಪ್ರಕಾರ ವ್ಯಾಪಕವಾದ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
ಎಂಟನೇಯ ಗಿಡ ಯಾವುದೆಂದರೆ ಬಾಳೆ ಗಿಡ . ಬಾಳೆ ಮರವು ಪವಿತ್ರವಾದದ್ದು,

ಮತ್ತು ಉತ್ತಮ ಆರೋಗ್ಯವನ್ನು ಉಂಟು ಮಾಡುತ್ತದೆ . ಬಾಳೆ ಗಿಡವನ್ನು ಪ್ರಪಂಚದ ಕೆಲವು ಪ್ರದೇಶಗಳಲ್ಲಿ ವಿಶೇಷವಾಗಿ ಭಾರತದ ದಕ್ಷಿಣದಲ್ಲಿ ಪೂಜಿಸಲಾಗುತ್ತದೆ. ಪೂಜಾ ಕಾರ್ಯ- ಶುಭಕಾರ್ಯಗಳಲ್ಲಿ ಇದನ್ನು ಬಹಳಸಲಾಗುತ್ತದೆ. ಬಾಳೆಗಿಡಗಳು ಮನೆಗಳಲ್ಲಿ ನೆಡುವುದಕ್ಕೆ ಅತ್ಯಂತ ಉತ್ತಮ . ಏಕೆಂದರೆ ಇದು ಭಗವಾನ್ ವಿಷ್ಟುವಿಗೆ ಸಂಬಂಧಿಸಿದೆ. lucky indoor

ಬಾಳೆ ಗಿಡವನ್ನು ನಿಮ್ಮ ಮನೆಯ ಈಶಾನ್ಯ ಮೂಲೆಯಲ್ಲಿ ನೆಡಬೇಕು. ಒಂಬತ್ತನೆಯ ಗಿಡ ಯಾವುದೆಂದರೆ ಲಿಲ್ಲಿ ಸಸ್ಯ . ಲಿಲ್ಲಿ ಸಸ್ಯವು ವಾಸ್ತು ಪ್ರಕಾರ ಪ್ರೀತಿ, ಸಾಮರಸ್ಯ, ಮತ್ತು ಪ್ರಶಾಂತತೆಯ ಸಾಕಾರವನ್ನು ಸಂಕೇತಿಸುತ್ತದೆ. ನೀವು ನಿನ್ನು ಮಲಗುವ ಕೋಣೆಯಲ್ಲಿ ಇಟ್ಟಿಕೊಳ್ಳುವುದರಿಂದ ನಿಮ್ಮ ಶಾಂತಿಯುತ ನಿದ್ದೆಗೆ ಕಾರಣನಾಗುತ್ತದೆ. ಮತ್ತು ದುಸ್ವಪ್ನವನ್ನು ತಬ್ಬಿಸಲು ಸಹಾಯ ಮಾಡುತ್ತದೆ.

ನೀವು ನಿದ್ರಾ ಹೀನತೆಯನ್ನು ಹೊಂದಿದ್ದಾರೆ ನಿಮ್ಮ ಮಲಗುವ ಕೋಣಿಯಲ್ಲಿ ಈ ಒಂದು ಲಿಲ್ಲಿ ಶಶಿಯನ್ನು ಇಟ್ಟುಕೊಳ್ಳುವುದು ಪ್ರಯೋಜನಕಾರಿಯಾಗಿದೆ. ಹತ್ತನೆಯ ಗಿಡ ಯಾವುದೇಂದರೆ ಲ್ಯಾವೆಂಡರ್ ಸಸ್ಯ . ಇದು ಆಂತರಿಕ ಶಾಂತಿಯನ್ನು ಸೃಷ್ಟಿಸುತ್ತದೆ. ಮತ್ತು ಒಳಗಿನ ನಕಾರಾತ್ಮಕತೆಯನ್ನು ಹೊರ ಹಾಕುವಲ್ಲಿ ಸಹಾಯ ಮಾಡುತ್ತದೆ. ಇದು ಪ್ರೀತಿ ಮತ್ತು ಸಂಬಂಧದ ಸಾಮರಸ್ಯವನ್ನು ಬೆಳೆಸುತ್ತದೆ.

ಲ್ಯಾವೆಂಡರ್ ನ ಮಧುರ ಪರಿಮಳವು ದಂಪತಿಗಳು ತಾವು ಮಲಗುವ ಕೋಣಿಯಲ್ಲಿ ಇಟ್ಟುಕೊಳ್ಳುವುದಕ್ಕೆ ಅತ್ಯುತ್ತಮ ಆಯ್ಕೆಯಾಗಿದೆ. ಯಾವುದೇ ದಂಪತಿಗಳ ನಡುವಿನ ಹೊಂದಾಣಿಕೆಯನ್ನು ಹೆಚ್ಚಿಸುತ್ತದೆ. ಇದು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಮತ್ತು ವಾಸ್ತು ಪ್ರಕಾರ ಕೆಲಸದ ಒತ್ತಡದಿಂದ ಮನೆಗೆ ಮರಳಿದಾಗ ಅದು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. lucky indoor

ನಂತರದ ಗಿಡ ಯಾವುದೆಂದರೆ ಅಶ್ವಗಂಧ ಸಸ್ಯ . ಮನೆಯಲ್ಲಿ ಅಶ್ವಗಂಧವನ್ನು ಇರಿಸುವುದರಿಂದ ಎಲ್ಲಾ ವಾಸ್ತು ದೋಷಗಳು ಇಲ್ಲವಾಗುತ್ತದೆ. ಈ ಗಿಡವು ಜೀವನದಲ್ಲಿ ಸಂತೋಷವನ್ನು ತುಂಬುತ್ತದೆ. ಈ ಸಸ್ಯದಿಂದ ಆಯುರ್ವೇದ ಔಷಧವನ್ನು ತಯಾರಿಸಲಾಗುತ್ತದೆ.

ನಂತರದ ಗಿಡ ಯಾವುದೆಂದರೆ ನೆಲ್ಲಿಮರ . ನೆಲ್ಲಿ ಸಸ್ಯವನ್ನು ಪೂಜಿಸುವುದರಿಂದ ಎಲ್ಲಾ ವ್ರತಗಳು ನೆರವೇರುತ್ತವೆ . ಆದ್ದರಿಂದ ಮನೆಯಲ್ಲಿ ನೆಲ್ಲಿ ಸಸ್ಯವನ್ನು ನೆಡುವುದು ತುಂಬಾ ಪ್ರಯೋಜನಕಾರಿ. ಇದನ್ನು ಉತ್ತರ or ಪೂರ್ವ ದಿಕ್ಕಿನಲ್ಲಿ ಇಡುವುದರಿಂದ ತುಂಬಾ ಉಪಯೋಗ . ಇದರ ನಿಯಮಿತ ಪೂಜೆಯಿಂದ ದುಃಖ ನಿವಾರಣೆಯಾಗಿ ಮನಸ್ಸಿಗೆ ನೆಮ್ಮದಿ ನೀಡುತ್ತದೆ.

ನಂತರದ ಗಿಡ ಯಾವುದೆಂದರೆ ಬೇವಿನ ಮರ . ಶಾಸ್ತ್ರಗಳ ಪ್ರಕಾರ ಏಳು ಬೇವಿನ ಶಶಿ ನೆಡುವ ವ್ಯಕ್ತಿಯು ಮರಣಾ ನಂತರ ಶಿವಲೋಕವನ್ನು ಸೇರುತ್ತಾನೆ. ಮತ್ತು ಮೂರು ಬೇವಿನ ಶಶಿ ನೆಡುವ ವ್ಯಕ್ತಿಯು ಸೂರ್ಯ ದೇವರ ಆಶೀರ್ವಾದವನ್ನು ಪಡೆಯುತ್ತಾನೆ ಎ೦ದು ಹೇಳಲಾಗಿದೆ. ಹಾಗಾಗಿ ಮನೆಯಲ್ಲಿ ಈ ಶಶಿ ನೆಡುವುದರಿಂದ ಶುಭವಾಗುತ್ತದೆ. ಇದನ್ನು ಧನಾತ್ಮಕ ಶಕ್ತಿಯ ಮೂಲ ಎ೦ದು ಹೇಳಬಹುದು.

ನಂತರದ ಗಿಡ ಯಾವುದೆಂದರೆ ದಾಸವಾಳ ಗಿಡ . ಜ್ಯೋತಿಷ್ಯದ ಪ್ರಕಾರ ದಾಸವಾಳದ ಗಿಡ ಸೂರ್ಯ ಮತ್ತು ಮಂಗಳ ಗ್ರಹಕ್ಕೆ ಸೇರುತ್ತದೆ. ಈ ಗಿಡವನ್ನು ಮನೆಯಲ್ಲಿ ಎಲ್ಲಿ ಬೇಕಾದರೂ ನೆಡಬಹುದು. ಹನುಮಾನ್ ಜೀ ಮತ್ತು ದುರ್ಗಾಮಾತೆಗೆ ದಾಸವಾಳವನ್ನು ಅರ್ಪಿಸುವುದರಿಂದ ನಿಯಮಿತವಾಗಿ ಎಲ್ಲಾ ಬಿಕ್ಕಟ್ಟುಗಳನ್ನು ತೆಗೆದು ಹಾಕುತ್ತದೆ. ಮಂಗಳನ ಸಮಸ್ಯೆ ,

ಆಸ್ತಿ ನಿರ್ಬಂಧಗಳು ಮತ್ತು ಕಾನೂನು ಸಮಸ್ಯೆಗಳು ಸಹ ಪರಿಹಾರವಾಗುತ್ತದೆ. ನಂತರದ ಗಿಡ ಯಾವುದೆಂದರೆ ಮುಟ್ಟಿದರೆ ಮುನಿ ಗಿಡ. ಈ ಶಶಿ ವಾಸ್ತು ಶಾಸ್ತ್ರದಲ್ಲಿ ಬಹಳ ಮಂಗಳಕರ ಎ೦ದು ಹೇಳಲಾಗಿದೆ. ಈ ಗಿಡವನ್ನು ಮನೆಯಲ್ಲಿ ನೆಟ್ಟು ಪ್ರತಿನಿತ್ಯ ನೀರು ಹಾಕುವುದರಿಂದ ಜಾತಕದಲ್ಲಿ ಇರುವ ರಾಹು ದೋಷ ನಿವಾರಣೆಯಾಗುತ್ತದೆ. ಹಣಕಾಸಿನ ನಷ್ಟ, ರೋಗಗಳು , ಪ್ರಗತಿಯಲ್ಲಿ ನ ಅಡೆತಡೆಗಳು , ಸಂಬಂಧಗಳಲ್ಲಿನ ಸಮಸ್ಯೆಗಳು ನಿವಾರಣೆಯಾಗುತ್ತದೆ.

ನಂತರದ ಗಿಡ ಯಾವುದೆಂದರೆ ಲಕ್ಷ್ಮಣ ಸಸ್ಯ . ಈ ಸಸ್ಯವು ಲಕ್ಷ್ಮಿ ದೇವಿಗೆ ಸಂಬಂಧಿಸಿದ್ದಾಗಿದೆ. ಈ ಸಸ್ಯವನ್ನು ಮನೆಯಲ್ಲಿ ನೆಡುವುದರಿಂದ ಸಂಪತ್ತಿನ ದೇವತೆಯಾದ ಲಕ್ಷ್ಮೀ ದೇವಿಯು ಮನೆಯಲ್ಲಿ ನೆಲೆಸುತ್ತಾಳೆ. ಮನೆಯಲ್ಲಿ ಸಂಪತ್ತು ತುಂಬಿರುತ್ತದೆ. ಈ ಗಿಡವನ್ನು ಮನೆಯ ಪೂರ್ವ or ಪೂರ್ವ ಉತ್ತರ ದಿಕ್ಕಿನಲ್ಲಿ ನೆಡುವುದರಿಂದ ಶುಭವಾಗುತ್ತದೆ. lucky indoor

ನಂತರದ ಗಿಡ ಯಾವುದೆಂದರೆ ಜೆಡ್ ಸಸ್ಯ . ವೃತ್ತಾಕಾರದ ಎಲೆಗಳನ್ನು ಹೊಂದಿರುವ ಸಸ್ಯಗಳು ಮನೆಗೆ ಒಳಿತು ಮಾಡುತ್ತವೆ. ಇದಕ್ಕೆ ಸರಿಯಾಗಿ ಜೆಡ್ ಸಸ್ಯವು ಸಾಮಾನ್ಯವಾಗಿ ಹೊಸದಾಗಿ ಉದ್ಯೋಗ ಆರಂಭಿಸುವ ವ್ಯಕ್ತಿಗಳಿಗೆ ಉಡುಗೊರೆಯಾಗಿ ಈ ಗಿಡವನ್ನು ಕೊಡುವ ಸಂಪ್ರದಾಯವಿದೆ . ಇದನ್ನು ಉದ್ಯೋಗ ಸ್ಥಳದ ಪ್ರವೇಶ ದ್ವಾರದಲ್ಲಿ ಇಡುವುದರಿಂದ ಯಶಸ್ಸು ಸಂಮೃದ್ಧಿಯಾಗುತ್ತದೆ.

Leave A Reply

Your email address will not be published.