Ultimate magazine theme for WordPress.

 Almonds Benefits ನೆನೆಸಿದ ಬಾದಾಮಿ 21ದಿನಗಳ

0 1,079

Almonds Benefits ನೆನಸಿಟ್ಟ ಬಾದಾಮಿಯ ಸೇವನೆಯಿಂದ ಆರೋಗ್ಯಕರ ಲಾಭಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ನೆನಸದೇ ಇರುವ ಬಾದಾಮಿಯ ಸೇವನೆಯಿಂದ ಶೇ 50 ರಷ್ಟು ಲಾಭವಾದರೇ ನೆನಸಿದ ಬಾದಾಮಿಯನ್ನು ತಿಂದರೆ ಶೇ 100 ರಷ್ಟು ಆರೋಗ್ಯಕರ ಪ್ರಯೋಜನಗಳಿವೆ. ಬಾದಾಮಿಯನ್ನು ಹುರಿದು, ಕರಿದು ತಿನ್ನುವುದರಿಂದ ಯಾವುದೇ ರೀತಿಯ ಲಾಭಗಳಿಲ್ಲ.

ನೆನಸಿಟ್ಟ ಬಾದಾಮಿಯನ್ನು ಒಬ್ಬ ವ್ಯಕ್ತಿ ಎಷ್ಟು ತಿನ್ನಬೇಕು ಎಂದರೆ ಸಣ್ಣ ಮಕ್ಕಳು ಒಂದು ದಿನಕ್ಕೆ ಎರಡು ಮೂರು ತಿನ್ನಬಹುದು. ದೊಡ್ಡವರು ನಾಲ್ಕರಿಂದ ಆರು ತಿನ್ನಬಹುದು. ಅಧಿಕವಾಗಿ ತಿಂದರೇ ಪ್ರಯೋಜನವಿಲ್ಲ. ಅಧಿಕವಾಗಿ ತಿಂದರೇ ವಿಷವಾಗುತ್ತದೆ. ರಾತ್ರಿ ನೆನೆಸಿ ಬೆಳಿಗ್ಗೆ ಸಿಪ್ಪೆ ತೆಗೆದು ತಿನ್ನಬೇಕು. ಈ ಬಾದಾಮಿಯಲ್ಲಿ ಪೊಟಾಷಿಯಂ, ಸೋಡಿಯಂ,  Almonds Benefits

ಐರನ್, ವಿಟಮಿನ್ ಬಿ6, ಪೊಟಾಷಿಯಂ ಮತ್ತು ಇದರಲ್ಲಿ ಪ್ರೊಟೀನ್ ಮತ್ತು ಕ್ಯಾಲ್ಸಿಯಂ ಅಂಶ ಇದೆ. ಬಾದಾಮಿಯಲ್ಲಿ ಇಷ್ಟೆಲ್ಲಾ ಪೋಷಕತತ್ವಗಳು ಇವೆ. ಈ ಪೋಷಕ ತತ್ವಗಳು ನಮ್ಮ ದೇಹದಲ್ಲಿ ಏನೆಲ್ಲಾ ಆರೋಗ್ಯಕರ ಲಾಭಗಳು ಇವೆ ಎಂದರೆ ಇದರಲ್ಲಿರುವ ಪೊಟಾಷಿಯಂ ನಮ್ಮ ದೇಹದನ ಜೀವಕೋಶದಲ್ಲಿ ಫ್ಯುಯಿಡ್ ಇನ್ ಬ್ಯಾಲೆನ್ಸ್ ಆಗದೇ ರೀತಿಯಲ್ಲಿ ನೋಡಿಕೊಳ್ಳುತ್ತದೆ.

ಈ ರೀತಿ ಅಸಮತೋಲನವಾದರೇ ಶರೀರದಲ್ಲಿ ಊತ ಉಂಟಾಗುತ್ತದೆ. ಸೋಡಿಯಂ ತತ್ವ ಜೀವಕೋಶದೊಳಗೆ ಫ್ಯುಯಿಡ್ ಅಂಶವನ್ನು ಸಮತೋಲನದಲ್ಲಿಡುತ್ತದೆ. ಇದು ಹೆಚ್ಚು ಕಡಿಮೆಯಾದರೇ ಹೃದಯಕ್ಕೆ, ಕಿಡ್ನಿಗೆ,ಬ್ರೈನ್ ಗೆ ತೊಂದರೆಯಾಗುತ್ತದೆ. ಇದು ಬ್ಯಾಲೆನ್ಸ್ ಆಗಿ ನಮ್ಮ ಶರೀರದಲ್ಲಿ ಇರಬೇಕೆಂದರೆ ಪೊಟಾಷಿಯಂ ಮತ್ತು ಸೋಡಿಯಂ ಸಮತೋಲನದಲ್ಲಿರಬೇಕಾದರೇ ಡ್ರೈಫ್ರೂಟ್ಸ್ ಅನ್ನು ನೆನೆಸಿ ತಿನ್ನಬೇಕು.  Almonds Benefits

ಇದರಲ್ಲಿರುವ ಮೆಗ್ನೇಷಿಯಂ ನರಮಂಡಲ ಮತ್ತು ಮಾಂಸಖಂಡದಲ್ಲಿರುವ ದೌರ್ಬಲ್ಯವನ್ನು ಕಡಿಮೆ ಮಾಡಿ ನರಮಂಡಲವನ್ನು ಕ್ರಿಯಾಶೀಲಗೊಳಿಸುತ್ತದೆ. ಮೆಗ್ನೇಷಿಯಂ ಸಮತೋಲನದಲ್ಲಿ ಇರದೇ ಇದ್ದರೇ ಹೃದಯ, ಶ್ವಾಸಕೋಶ, ಕಿಡ್ನಿ,ಮೆದುಳಿಗೆ ತೊಂದರೆಯಾಗುತ್ತದೆ.

ಜನರು ಐರನ್ ಅಂಶ ಕಡಿಮೆಯಾದರೇ ಕೃತಕವಾಗಿ ಇಂಜೆಕ್ಷನ್ಸ್ ಮತ್ತು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ ಆದರೇ ಇದು ರಕ್ತದಲ್ಲಿ ಕೆಟ್ಟ ಅಂಶವೂ ಹೆಚ್ಚಾಗುತ್ತಾ ಹೋಗುತ್ತದೆ. ಈ ರೀತಿಯ ಕೆಟ್ಟ ಅಂಶದಿಂದ ಶರೀರದಲ್ಲಿ ಬ್ಲಾಕೇಜ್ ಗಳು ಉಂಟಾಗುತ್ತದೆ. ಈ ರೀತಿಯ ರಸಾಯನಿಕ ವಸ್ತುಗಳಿಂದ ಮುಕ್ತರಾಗಿ ಕಬ್ಬಿಣದ ಅಂಶದ ನ್ಯೂನತೆ ಇರುವವರು ನೆನೆಸಿದ ಬಾದಾಮಿಯನ್ನು ತಿನ್ನಬೇಕು.  Almonds Benefits

ಇದರಲ್ಲಿರುವ ನಾರಿನಾಂಶವು ಜೀರ್ಣಾಂಗ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡುತ್ತದೆ. ಬಾದಾಮಿಯ ಸೇವನೆಯಿಂದ ಜೀರ್ಣಾಂಗವ್ಯೂಹ ಕ್ರಿಯಾಶೀಲವಾಗಿರುತ್ತದೆ. ನಮ್ಮ ದೇಹದಲ್ಲಿ ಕೆಟ್ಟ ಕೊಬ್ಬಿನ ಅಂಶವಿರುತ್ತದೆ ಅದು ಕೂಡ ಸಮತೋಲನವಾಗುತ್ತದೆ. ಬಾದಾಮಿ ಸೇವನೆಯಿಂದ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ನಿಯಮಿತವಾದ ಬಾದಾಮಿಯ ಸೇವನೆಯಿಂದ ಮುಖದ ಕಾಂತಿ ಹೆಚ್ಚುತ್ತದೆ.

ಮುಖದಲ್ಲಿ ಮೊಡವೆಗಳು ಕಾಣಿಸುವುದಿಲ್ಲ ತಾರುಣ್ಯಭರಿತವಾಗಿರುತ್ತದೆ. ನೆನಸಿದ ಬಾದಾಮಿಯನ್ನು ಎಳನೀರಿನಲ್ಲಿ ತೇದು ಹಚ್ಚಿಕೊಂಡು ಅರ್ಧ ಗಂಟೆಯ ನಂತರ ಮುಖವನ್ನು ತೊಳೆಯಿರಿ ಕಪ್ಪು ಕಲೆ, ಸುಕ್ಕು, ರಿಂಕಲ್ಸ್ ಗಳು ಮಾಯವಾಗುತ್ತದೆ. ಬಾದಾಮಿಯ ಸೇವನೆಯಿಂದ ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕೂದಲು ದಟ್ಟವಾಗಿ ಉದ್ದವಾಗಿ ಬೆಳೆಯುತ್ತದೆ.  Almonds Benefits

ಹೃದಯವು ಚೆನ್ನಾಗಿ ಕೆಲಸ ಮಾಡುತ್ತದೆ. ಕಿಡ್ನಿ ಮತ್ತು ಲಿವರ್ ನ ಆರೋಗ್ಯಕ್ಕೆ ಉತ್ತಮ ಆಹಾರವಾಗಿದೆ. ಇದು ನಮ್ಮ ಶರೀರದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಜೀರ್ಣ, ಅಸಿಡಿಟಿಯಿಂದ ನಮ್ಮನ್ನು ರಕ್ಷಣೆ ಮಾಡುತ್ತದೆ. ಇಮ್ಯುನಿಟಿ ಪವರ್ ಅನ್ನು ಕ್ರಿಯಾಶೀಲಗೊಳಿಸುತ್ತದೆ. ನಮ್ಮ ಆಯಸ್ಸನ್ನು ವೃದ್ಧಿಗೊಳಿಸುತ್ತದೆ. ನೆನಸಿದ ಬಾದಾಮಿಯನ್ನು ಚಳಿಗಾಲ ಮತ್ತು ಬೇಸಿಗೆ ಕಾಲದಲ್ಲಿ ಸೇವಿಸುವುದು ಒಳ್ಳೆಯದು.

Leave A Reply

Your email address will not be published.