Ultimate magazine theme for WordPress.

Aries ಮೇಷ ರಾಶಿಯ ಗುಣಸ್ವಭಾವಗಳು

0 15,935

Aries : Characteristics of Aries ನಾವು ಈ ಲೇಖನದಲ್ಲಿ ಮೇಷ ರಾಶಿಯ ಗುಣ ಸ್ವಭಾವಗಳು ಯಾವ ರೀತಿ ಇರುತ್ತದೆ ಎಂಬುದನ್ನು ನೋಡೋಣ .ಅಂದರೆ ಮೇಷ ರಾಶಿಯವರ ವರ್ತನೆ , ಜೀವನ ಶೈಲಿ, ನಡವಳಿಕೆ ಮತ್ತು ಅವರ ವ್ಯಕ್ತಿತ್ವ ಹೇಗಿರುತ್ತದೆ , ಈ ವಿಚಾರವಾಗಿ ಈ ಲೇಖನದಲ್ಲಿ ನೋಡೋಣ .ಮೇಷ ರಾಶಿ ಎಂದರೆ , ಹಠ ವಾದಿಗಳು ಅಥವಾ ಚಲ ವಾದಿಗಳು ಧೈರ್ಯ ಶಾಲಿ ಗಳು ಕೋಪಿಷ್ಟರು .

ಮೇಷ ರಾಶಿಯವರು ಯಾವುದೇ ತೀರ್ಮಾನ ತೆಗೆದುಕೊಂಡು . ಆ ತೀರ್ಮಾನದ ಬಗ್ಗೆ ದೃಢವಾಗಿ ಇರುತ್ತಾರೆ .ತೆಗೆದುಕೊಂಡಿರುವ ನಿರ್ಧಾರಗಳನ್ನು ವಾಪಸ್ ತೆಗೆದುಕೊಳ್ಳುವುದು ಇಲ್ಲ. ಹಠ ವಾದಿಗಳು ಧೈರ್ಯ ವಾದಿಗಳು ಎಂದು ಹೇಳಬಹುದು .ಅಂದರೆ ತಾವು ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಅದು ಸರಿ ಎಂದು ವಾದ ಮಾಡುತ್ತಾರೆ . ಎಂದು ಹೇಳಲಾಗಿದೆ .Aries

ಯಾವುದೇ ಕೆಲಸ ಮಾಡುವಾಗ ಆ ನಿರ್ಧಾರದಲ್ಲಿ ಚಾಕಚಕ್ಯತೆಯನ್ನು ಹೊಂದಿರುತ್ತಾರೆ .ಇವರಿಗೆ ಭಾಗ್ಯ ಅಧಿಪತಿ ಗುರು ಆಗಿರುವುದರಿಂದ , ತಂದೆಯ ವಿಚಾರದಲ್ಲಿ ಭಿನ್ನಾಭಿಪ್ರಾಯದಿಂದ ಇವರಿಬ್ಬರ ನಿಲುವು ಒಂದೇ ಆಗಿರುವುದಿಲ್ಲ . ತಂದೆಯ ವಿಚಾರದಲ್ಲಿ ಸಾಮ್ಯತೆ ಕಡಿಮೆ ಇರುತ್ತದೆ.ಇನ್ನು ಕುಟುಂಬಕ್ಕಿಂತ ವ್ಯಾಪಾರ , ವ್ಯವಹಾರ , ವಹಿವಾಟು ಇಂತಹುದರ ಕಡೆ ಹೆಚ್ಚು ಒಲವು ಇರುತ್ತದೆ .

ವಿದ್ಯೆಗಳಲ್ಲಿ ಪದವಿಯನ್ನು ಪಡೆಯುವಂತಹ ಗುಣವನ್ನು ಹೊಂದಿರುತ್ತಾರೆ .ಮತ್ತು ಬೇರೆಯವರಿಗೆ ಕೊಟ್ಟ ಮಾತನ್ನು ನಡೆಸಿ ಕೊಡಬೇಕು ಎಂಬ ನಿರ್ಧಾರ ಕಟುವಾಗಿ ಇರುತ್ತದೆ . ಅಧಿಕಾರ ಪಡೆಯುವುದಕ್ಕೆ ಬಹುದೊಡ್ಡ ಹೋರಾಟವನ್ನು ಮಾಡಬೇಕಾಗುತ್ತದೆ .ಯಾವುದೇ ಒಂದು ಕೆಲಸವನ್ನು ಸುಲಭವಾಗಿ ದಕ್ಕಿಸಿಕೊಳ್ಳಲು ಸಾಧ್ಯವಾಗುವುದಿಲ್ಲ , Aries

ತಾವು ಮಾಡುವ ಕೆಲಸದಲ್ಲಿ ಕಷ್ಟಪಟ್ಟು ಪರಿಶ್ರಮದಿಂದ ಜಯ ಪಡೆದುಕೊಳ್ಳುವ ಗುಣ ಇವರಿಗೆ ಇರುತ್ತದೆ .ಆರೋಗ್ಯದ ವಿಚಾರದಲ್ಲಿ ಇವರು ತುಂಬಾ ಚೆನ್ನಾಗಿ ಇರುತ್ತಾರೆ . ಒಂದು ಹಂತದಲ್ಲಿ ಆರೋಗ್ಯದ ವಿಚಾರ ತುಂಬಾ ಚೆನ್ನಾಗಿರುತ್ತೆ .ಇವರಿಗೆ ಲಗ್ನಾಧಿಪತಿ ಕುಜ . ಸ್ವತಃ ಅಷ್ಠಮ ಅಧಿಪತಿ ಆಗಿರುವುದರಿಂದ ಉಷ್ಣಕ್ಕೆ ಸಂಬಂಧಿಸಿದ ರೋಗಗಳು ಭಾದಿಸುತ್ತವೆ. ಜಲ ದೋಷಗಳು ಕೂಡ ಭಾದಿಸುತ್ತವೆ.

ಗುಪ್ತ ರೋಗಗಳಿಂದ ಸ್ವಲ್ಪ ಬಳಲುವ ಸಾಧ್ಯತೆ ಇರುತ್ತದೆ . ಈ ರಾಶಿಯವರು ಏನೇ ಮಾತನಾಡಿದರು ಮುಖಕ್ಕೆ ಹೊಡೆಯುವ ಹಾಗೆ ಮಾತನಾಡುತ್ತಾರೆ .ಯಾರ ಹಿಂದೆ ಮುಂದೆ ಮಾತನಾಡುವುದಿಲ್ಲ ಎದುರಿಗೆ ಮಾತನಾಡುತ್ತಾರೆ .ಯಾವುದೇ ಸಂದರ್ಭದಲ್ಲಿ ಕೂಡ ಇವರು ನೇರವಾಗಿ ಮಾತನಾಡುವ ನಿಸ್ಸೀಮ ತೆಯನ್ನು ಹೊಂದಿರುತ್ತಾರೆ .ಇನ್ನು ಮತ್ತು ತಮ್ಮ ಸುತ್ತಮುತ್ತಲಿನವರು ಕೂಡ ಹಾಗೆ ಇರಬೇಕೆಂದು ಬಯಸುತ್ತಾರೆ .Aries

ಇವರಿಗೆ ಬೇರೆಯವರು ಸುಳ್ಳು ಹೇಳಿದಾಗ ತಡೆದುಕೊಳ್ಳಲು ಆಗುವುದಿಲ್ಲ . ತುಂಬಾ ಬೇಗ ಕೋಪ ಬರುತ್ತದೆ .ಇದರಿಂದ ತೊಂದರೆಗಳು ಕೂಡ ಉಂಟಾಗುತ್ತದೆ .ಇವರ ವ್ಯಕ್ತಿತ್ವ ಪಾದರಸದಂತೆ ಇರುತ್ತದೆ . ಇವರ ಚಾರಿತ್ರ್ಯ ತುಂಬಾ ಚೆನ್ನಾಗಿರುತ್ತೆ .ಮತ್ತು ಪ್ರೀತಿಸಿದವರಿಗೆ ಇವರು ಎಂದಿಗೂ ಮೋಸ ಮಾಡುವುದಿಲ್ಲ .ಮೇಷ ರಾಶಿಯವರು ಅವರು ಕೊಟ್ಟ ಮಾತಿಗೆ ಬದ್ಧ ವಾಗಿರುತ್ತಾರೆ .

ಇವರಲ್ಲಿ ಚುರುಕುತನ ಜಾಸ್ತಿ ಇರುತ್ತದೆ . ಇವರು ತುಂಬಾ ಶಕ್ತಿ ಶಾಲಿಗಳಾಗಿರುತ್ತಾರೆ .ಅಂದರೆ ಅವರು ತುಂಬಾ ಬಲಿಷ್ಠವಾಗಿ ಇರುತ್ತಾರೆ .ಇವರು ಬೇರೆಯವರ ಹಂಗಿನ ಜೀವನದಲ್ಲಿ ಇರಲು ಇಷ್ಟಪಡುವುದಿಲ್ಲ .ಇವರು ಸ್ವತಂತ್ರ ವಾಗಿರಬೇಕು ಮತ್ತು ಸ್ವಯಂ ಯೋಚನೆಯನ್ನು ಮಾಡಬೇಕೆಂದು ಬಯಸುತ್ತಾರೆ .ಬಡವರು ಆಗಿರಲಿ ಅಥವಾ ಶ್ರೀಮಂತರೇ ಆಗಿರಲಿ ಅವರು ಇರುವ ಪರಿಸ್ಥಿತಿಯಲ್ಲಿ ಇರಬೇಕೆಂದು ಬಯಸುತ್ತಾರೆ .ಮೇಷ ರಾಶಿಯವರದು ಸ್ವಾವಲಂಬನೆ Aries

ಜೀವನ ಆಗಿರುತ್ತದೆ .ಮೇಷ ರಾಶಿಯವರು ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಒಳ್ಳೆಯ ರೀತಿಯ ಫಲ ಇವರಿಗೆ ದೊರೆಯುತ್ತದೆ .ಇವರ ಋಣಾತ್ಮಕ ಶಕ್ತಿಯೇ ಕೋಪವಾಗಿ ಇರುತ್ತದೆ .ಇದನ್ನು ಹಿಡಿತದಲ್ಲಿಟ್ಟು ಕೊಂಡರೆ ಒಂದು ಒಳ್ಳೆಯ ಸಾಧನೆಯನ್ನು ಮಾಡಬಹುದು .ಇವರಿಗೆ ಅದ್ಭುತವಾದ ಫಲ ಸಿಗುತ್ತದೆ ಎಂದು ಹೇಳಲಾಗಿದೆ . ಇವರ ಮನಸ್ಸು ತುಂಬಾ ಶುದ್ಧವಾಗಿರುತ್ತದೆ .ಮೇಷ ರಾಶಿಯವರು ಬೇರೆಯವರಿಗೋಸ್ಕರ ಖರ್ಚು ಮಾಡುವ ಗುಣ ಹೊಂದಿರುತ್ತಾರೆ.ಮೇಷ ರಾಶಿಯವರು ಒಂದು ಶುದ್ಧವಾದ ಮನಸ್ಸನ್ನು ಹೊಂದಿರುತ್ತಾರೆ ಎಂದು ಹೇಳಲಾಗಿದೆ .

Leave A Reply

Your email address will not be published.