Ultimate magazine theme for WordPress.

Astrological ರಸ್ತೆಯಲ್ಲಿ ಹೊರಟಾಗ ಈ 7 ವಸ್ತುಗಳನ್ನು ದಾಟಬೇಡಿ

0 17,591

Astrological Remedial Solutions ರಸ್ತೆಯಲ್ಲಿ ನಡೆಯುವಾಗ ಈ ಏಳು ವಸ್ತುಗಳನ್ನು ದಾಟಲೇಬಾರದು. ಆದರೇ ನಾವು ತಿಳಿದೋ ತಿಳಿಯದೆಯೋ ದಾಟಿ ಹೋಗುತ್ತೀವಿ. ಹೀಗೆ ದಾಟುವುದರಿಂದ ನಮಗೆ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಕಿರಿಕಿರಿ ಉಂಟಾಗುತ್ತದೆ. ಕೆಲವು ಬಾರಿ ಕಠಿಣ ಕಷ್ಟಗಳು ಬರಬಹುದು. ಹಾಗಾದರೇ ರಸ್ತೆಯಲ್ಲಿ ಯಾವ ಯಾವ ವಸ್ತುಗಳನ್ನು ದಾಟಬಾರದು ಎಂಬುದನ್ನು ತಿಳಿಸಿಕೊಡುತ್ತೇವೆ. Astrological

ಅಂತಹ ವಸ್ತುಗಳು ನೀವು ನಡೆದಾಡುವ ಕಡೆ ಇದ್ದರೇ ನೀವು ರಸ್ತೆಯನ್ನು ಬದಲಾಯಿಸುವುದು ತುಂಬಾ ಒಳ್ಳೆಯದು. ಕೆಲವು ಬಾರಿ ರಸ್ತೆಯಲ್ಲಿ ಸ್ನಾನ ಮಾಡಿದ ನೀರು ಹರಿದು ಬರುವುದು ಕಂಡುಬರುತ್ತದೆ. ಇದನ್ನು ದಾಟಿಕೊಂಡು ಮುಂದೆ ಹೋಗುತ್ತೇವೆ. ಇದು ವಿಷ್ಣುಪುರಾಣದ ಪ್ರಕಾರ ಇದು ಕೊಳಕು ನೀರಲ್ಲ ಅದಕ್ಕಿಂತಲೂ ಹೆಚ್ಚು ಕೆಡುಕು ಮಾಡುವ ನೀರು ಎಂದು ಹೇಳಲಾಗಿದೆ.

ನಮ್ಮ ಪುರಾಣ ಶಾಸ್ತ್ರಗಳಲ್ಲಿ ಸ್ನಾನದ ಕುರಿತಾದ ಹಲವಾರು ವಿಷಯಗಳನ್ನು ಹೇಳಲಾಗಿದೆ. ಇದರ ಪ್ರಕಾರ ನಾಲ್ಕು ಬಗೆಯ ಸ್ನಾನಗಳಿವೆ. ಮುನಿಸ್ನಾನ, ಮನುಷ್ಯ ಸ್ನಾನ, ದೇವತಾ ಸ್ನಾನ, ರಾಕ್ಷಸ ಸ್ನಾನ. ಈ ರಾಕ್ಷಸ ಸ್ನಾನದಿಂದ ಕೇವಲ ದೇಹದ ಕೊಳೆಯನ್ನ ಮಾತ್ರವಲ್ಲ, ನಮ್ಮ ದೇಹದ ಸೂಕ್ಷ್ಮ ಶರೀರದ ಕೊಳೆಯು ತೊಳೆದು ಹೋಗುತ್ತದೆ. ಆ ಕೊಳೆಯು ನೀರಿನಲ್ಲಿ ವಿಲೀನಗೊಳ್ಳುತ್ತದೆ. ಅಂತಹ ನೀರನ್ನು ಯಾವುದಾದರೂ ವ್ಯಕ್ತಿಯು ದಾಟಿದರೇ ಆತನಿಗೆ ದಾರಿದ್ರ್ಯತೆ ಅಂಟಿಕೊಳ್ಳುತ್ತದೆ. Astrological

ಆದ್ದರಿಂದ ಈ ತರಹದ ಕೊಳಕು ನೀರನ್ನು ದಾಟುವುದನ್ನು ಅವಾಯ್ಡ್ ಮಾಡಿರಿ. ಕೆಲವು ಬಾರಿ ರಸ್ತೆಯಲ್ಲಿ ಸತ್ತ ಪ್ರಾಣಿಗಳ ಶವಗಳು ಬಿದ್ದಿರುತ್ತವೆ. ವಿಷ್ಣುಪುರಾಣಗಳ ಪ್ರಕಾರ ಈ ಪ್ರಾಣಿಗಳನ್ನು ದಾಟಬಾರದು ಮತ್ತು ಅವುಗಳ ಹತ್ತಿರವೂ ಕೂಡ ಹೋಗಬಾರದು. ಆಕಸ್ಮಿಕವಾಗಿ ದಾಟಿದರೇ ಬಹಳ ಬೇಗ ಸ್ನಾನ ಮಾಡಬೇಕು. ಹಿಂದೂ ಧರ್ಮಗಳ ಪ್ರಕಾರ ಪ್ರಾಣಿಗಳ ಅಸ್ಥಿ ಪಂಜರಗಳ ಹತ್ತಿರ ನಕಾರಾತ್ಮಕ ಶಕ್ತಿಗಳು ಇರುತ್ತವೆ. ಹೀಗೆ ಪ್ರಾಣಿಗಳ ಶವವನ್ನು ದಾಟುವುದರಿಂದ ವಿವಿಧ ರೀತಿಯ ತೊಂದರೆಗಳು ಉಂಟಾಗುತ್ತವೆ.

ಆದ್ದರಿಂದ ಈ ರೀತಿಯ ಪರಿಸ್ಥಿತಿಗಳಿಂದ ದೂರವಿರಿ. ಇನ್ನೊಂದು ವಿಷಯವೇನೆಂದರೆ ಕೂದಲು. ಒಂದು ಬಾರಿ ಭೀಷ್ಮನು ಅರ್ಜುನನಿಗೆ ಊಟದಲ್ಲಿ ಕೂದಲು ಬಂದರೆ ಆ ಊಟವನ್ನು ಮಾಡಲೇಬಾರದು ಎಂದು ಉಪದೇಶ ಮಾಡಿದ್ದರು. ಏಕೆಂದರೆ ಕೂದಲು ಬಿದ್ದ ಊಟಗಳಿಗೆ ಪಿಶಾಚಿಗಳು ಅಂಟಿಕೊಳ್ಳುತ್ತವೆ ಎಂದು ಹೇಳಲಾಗಿದೆ. ಕೂದಲಿನಲ್ಲಿ ನಕಾರಾತ್ಮಕ ಶಕ್ತಿಗಳು ಇರುತ್ತವೆ. Astrological

ನಾವು ಕೂದಲನ್ನು ತೆಗೆದಾಗ ನಮ್ಮ ನಕಾರಾತ್ಮಕ ಶಕ್ತಿಗಳು ಹೋಗುತ್ತವೆ. ಆದ್ದರಿಂದಲೇ ಹುಟ್ಟು ಸಾವು ಎರಡೂ ಸಂದರ್ಭಗಳಲ್ಲಿ ತಲೆಯನ್ನು ಬೋಳಿಸುತ್ತಾರೆ. ನಮ್ಮ ನಕಾರಾತ್ಮಕ ಶಕ್ತಿ ತೊಲಗಲಿ ಎಂದು, ದಾರಿದ್ರ್ಯ, ಕರ್ಮಗಳು ತೊಲಗಲಿ ಎಂದು ದೇವರಿಗೆ ಮುಡಿಯನ್ನು ಕೊಡುತ್ತಾರೆ. ಕತ್ತರಿಸಿದ ಕೂದಲನ್ನು ದಾಟುವುದರಿಂದ ಆ ವ್ಯಕ್ತಿಯ ತಲೆಯ ಭಾರ ದಾರಿಯಲ್ಲಿ ದಾಟಿದವನ ಮೇಲೆ ಬೀಳುತ್ತದೆ.

ನಮ್ಮ ಸನಾತನ ಧರ್ಮದಲ್ಲಿ ಯಜ್ಞ, ಹವನ ಮಾಡುವುದು ರೂಢಿಯಲ್ಲಿದೆ. ಹೀಗೆ ಯಜ್ಞದಿಂದ ಮಾಡಿದ ಬೂದಿ ಅಪ್ಪಿ ತಪ್ಪಿಯೂ ರಸ್ತೆಯಲ್ಲಿ ಬಿದ್ದರೇ ಅದನ್ನು ದಾಟಬೇಡಿ. ಹೋಮ ಮತ್ತು ಹವನವು ಪುಣ್ಯದ ಕೆಲಸ ಇದರ ಬೂದಿಯನ್ನು ದಾಟಿದರೇ ತಪ್ಪಾಗುತ್ತದೆ. ಮುಂದಿನ ವಸ್ತು ನಡೆಯುವ ದಾರಿಯಲ್ಲಿ ಮುಳ್ಳುಗಳು ಬಿದ್ದರೇ ಅದನ್ನು ದೌರ್ಭಾಗ್ಯದ ಸಂಕೇತವೆಂದು ಹೇಳಲಾಗುತ್ತದೆ. Astrological

ಮುಳ್ಳುಗಳನ್ನು ದಾರಿಯಲ್ಲಿ ತುಳಿದರೇ ನೋವಾಗುತ್ತದೆ ಆದರೇ ಇದು ದರಿದ್ರದ ಸಂಕೇತವೆಂದು ಹೇಳುತ್ತಾರೆ. ನೀವು ಬರುವ ದಾರಿಯಲ್ಲಿ ಮುಳ್ಳುಗಳು ಇದ್ದರೇ ತೆಗೆದುಹಾಕಿ ಹೀಗೆ ಮಾಡುವುದರಿಂದ ನಿಮಗೆ ಮತ್ತು ಬೇರೆಯವರಿಗೂ ಒಳ್ಳೆಯದಾಗುತ್ತದೆ. ಮಾಟ ಮಂತ್ರದ ವಸ್ತುಗಳನ್ನು ದಾಟುವುದು ಅತ್ಯಂತ ಅಪಾಯಕಾರಕ. ಮಾಂತ್ರಿಕರು ನಕಾರಾತ್ಮಕ ಶಕ್ತಿಗಳನ್ನು ಸಂತುಷ್ಟಗೊಳಿಸಲು ಯಾರು ನಡೆದಾಡದ ಸ್ಥಳದಲ್ಲಿ ಕೆಲವು ವಸ್ತುಗಳನ್ನು ಇಟ್ಟಿರುತ್ತಾರೆ. ಅವುಗಳೆಂದರೆ ಮಾಂಸ,

ಮೊಟ್ಟೆ, ಕೆಂಪು ವಸ್ತ್ರ, ಲವಂಗ, ಸಿಹಿ ತಿಂಡಿಗಳು, ನಿಂಬೆ ಹಣ್ಣು ಹಾಗೂ ಯಾವುದಾದರೂ ಹೊಸ ವಸ್ತುವನ್ನು ದೆವ್ವಗಳನ್ನ ಸಂತಸ ಪಡಿಸಲು ಇವುಗಳನ್ನು ಇಟ್ಟು ಹೋಗಿರುತ್ತಾರೆ. ಈ ದೆವ್ವಗಳು ಇವುಗಳನ್ನು ತಿನ್ನುವುದಕ್ಕೂ ಮೊದಲು ನೀವೇನಾದರೂ ದಾಟಿದರೇ ಆ ದುಷ್ಟಶಕ್ತಿ ಕೋಪಗೊಂಡು ನಿಮಗೆ ತೊಂದರೆ ನೀಡಬಹುದು. ಇದನ್ನ ಪೇತಬಾಧೆ ಎಂದು ಕರೆಯುತ್ತಾರೆ. ರಸ್ತೆಯಲ್ಲಿ ಇಂತಹ ವಸ್ತುಗಳನ್ನು ನೋಡಿದರೇ ಜಾಗರೂಕರಾಗಿರಿ. ಕೊನೆಯದಾಗಿ ಜನರು ದಾರಿಯಲ್ಲೇ ಮಲಮೂತ್ರ ವಿಸರ್ಜನೆ ಮಾಡುತ್ತಾರೆ

ಮತ್ತು ಕತ್ತರಿಸಿದ ಕೂದಲು, ಅರಿದ ಬಟ್ಟೆಗಳನ್ನು ಬೀಸಾಡುತ್ತಾರೆ. ಹೀಗೆ ಬೇಕಾಬಿಟ್ಟಿ ಬೀಸಾಕುವ ವಸ್ತುಗಳಲ್ಲಿ ನಕಾರಾತ್ಮಕ ಶಕ್ತಿ ವಾಸಮಾಡುತ್ತವೆ. ಆದ್ದರಿಂದ ನಮ್ಮ ಹಿರಿಯರು ಹೇಳುವುದು ಮಲಮೂತ್ರಗಳನ್ನ ಕಂಡಕಂಡಲ್ಲಿ ಮಾಡಬೇಡಿ ಎನ್ನುತ್ತಾರೆ. ಇಂತಹ ವಸ್ತುಗಳನ್ನು ದಾಟುವುದರಿಂದ ಅನಾರೋಗ್ಯದಿಂದ ನರಳಬೇಕಾಗುತ್ತದೆ. ಆದ್ದರಿಂದ ಇಂತಹ ತಪ್ಪುಗಳನ್ನು ಮಾಡಬೇಡಿ. ನಿಮ್ಮ ಮನೆಯ ಸುತ್ತಮುತ್ತ ಸ್ವಚ್ಛವಾಗಿ ಇಟ್ಟುಕೊಳ್ಳಿ. Astrological

Leave A Reply

Your email address will not be published.