Ultimate magazine theme for WordPress.

benefits of amla ನೆಲ್ಲಿಕಾಯಿಯ ಔಷಧಿಯ ಗುಣ

0 4,432

benefits of amla ಮೂರು ಸ್ಪೂನ್ ನಷ್ಟು ನೆಲ್ಲಿಕಾಯಿ ರಸದೊಂದಿಗೆ ಮೂರು ಸ್ಪೂನ್ ಜೇನುತುಪ್ಪವನ್ನು ಸೇರಿಸಿ ಸೇವಿಸಿದರೇ ಮೆದುಳಿನ ಕಾಯಿಲೆ ನಿವಾರಣೆಯಾಗುತ್ತದೆ. ಸಕ್ಕರೆಯೊಂದಿಗೆ ನೆಲ್ಲಿಕಾಯಿಯ ರಸದೊಂದಿಗೆ ಕುಡಿಯುವುದರಿಂದ ಹೊಟ್ಟೆ ನೋವು ನಿವಾರಣೆಯಾಗುವುದು. ನೆಲ್ಲಿಕಾಯಿಯ ಎಲೆಗಳಿಂದ ಕಷಾಯ ತಯಾರಿಸಿ ಬಾಯಿ ಮುಕ್ಕಳಿಸುವುದರಿಂದ ಬಾಯಿ ಹುಣ್ಣು ಮಾಯವಾಗುವುದು.

ಕಿರು ನೆಲ್ಲಿಕಾಯಿಯನ್ನು ಉಪ್ಪಿನ ಜೊತೆ ತಿಂದರೆ ತಲೆ ಸುತ್ತುವಿಕೆ, ಅಜೀರ್ಣ ನಿವಾರಣೆಯಾಗುವುದು. ಬಲಿತ ನೆಲ್ಲಿಕಾಯಿಯ ಚೂರ್ಣವನ್ನು ಬಿಸಿನೀರಿನಲ್ಲಿ ಚೆನ್ನಾಗಿ ಕಿವುಚಿ ಅದಕ್ಕೆ ಸಕ್ಕರೆಯನ್ನು ಸೇರಿಸಿ ಶೋಧಿಸಿದ ನಂತರ ಸೇವಿಸಿದರೆ ಬಾಯಿ, ಮೂಗು ಮತ್ತು ಗುದದ್ವಾರದಿಂದ ಹೊರಬೀಳುವ ರಕ್ತ ಬಹಳ ಬೇಗ ನಿಂತು ಹೋಗುತ್ತದೆ. ನಿರಂತರವಾಗಿ ನೆಲ್ಲಿಕಾಯಿಯ ರಸವನ್ನು ಸೇವಿಸಿದರೇ ಕಣ್ಣಿನ ದೋಷಗಳು ದೂರವಾಗುವವು. benefits of amla

ಒಂದು ಸ್ಪೂನ್ ನಷ್ಟು ನೆಲ್ಲಿಕಾಯಿಯ ರಸವನ್ನುಅಷ್ಟೇ ಪ್ರಮಾಣದ ಜೇನುತುಪ್ಪದೊಂದಿಗೆ ಪ್ರತಿದಿನ ಬೆಳಗ್ಗಿನ ಸಮಯ ಸೇವಿಸುವುದರಿಂದ ಸಿ ಜೀವಸತ್ತ್ವದ ಕೊರತೆಯಿಂದ ಉಂಟಾಗಬಹುದಾದ ಯಾವುದೇ ರೋಗವು ಸಹ ಸಂಪೂರ್ಣವಾಗಿ ಗುಣವಾಗುತ್ತದೆ. ನೆಲ್ಲಿಕಾಯಿಯನ್ನು ಚೆನ್ನಾಗಿ ಅರೆದು ಅದಕ್ಕೆ ಸಕ್ಕರೆ ಬೆರೆಸಿ ತಿಂದರೆ ಮಧುಮೇಹಿಗಳ ರೋಗ ಸ್ವಲ್ಪ ಮಟ್ಟಿಗೆ ಹತೋಟಿಗೆ ಬರುತ್ತದೆ.

ಮಧುಮೇಹಿ ರೋಗಿಗಳು ಕೂದಲು ಉದುರುವವರು ನೆಲ್ಲಿಕಾಯಿಯನ್ನು ಹೆಚ್ಚು ಉಪಯೋಗಿಸಿದರೆ ದೋಷಗಳ ನಿವಾರಣೆಯಾಗುವುದು. ನೆಲ್ಲಿಕಾಯಿಯನ್ನು ತೈಲದೊಂದಿಗೆ ಬೆರೆಸಿ ತಲೆಗೆ ಹಚ್ಚಿಕೊಂಡರೆ ಕೂದಲು ನೆರೆಯುವುದಿಲ್ಲ. ಕೇಶದ ಬೆಳವಣಿಗೆಗೆ ಹೆಚ್ಚು ಸಹಾಯಕವಾಗುತ್ತದೆ. benefits of amla

ನೆಲ್ಲಿಕಾಯಿಯನ್ನು ಕ್ರಮವಾಗಿ ತಿನ್ನುವುದರಿಂದ ನೆಗಡಿ, ಉಬ್ಬಸ, ಕ್ಷಯ, ಜ್ಞಾಪಕಶಕ್ತಿ ಇಲ್ಲದಿರುವಿಕೆ, ಅಕಾಲ ಮಧುಮೇಹ, ಕೂದಲು ಉದುರುವಿಕೆ ಮುಂತಾದ ಸಮಸ್ಯೆಗಳು ನಿವಾರಣೆಯಾಗುತ್ತದೆ. ನೆಲ್ಲಿಕಾಯಿಯನ್ನ ಬಳಸಿ ಚಟ್ನಿ ಮಾಡಿ ತಿನ್ನುತ್ತಿದ್ದರೆ ನೆಗಡಿ, ಉಬ್ಬಸ, ಕ್ಷಯ ಮುಂತಾದ ರೋಗಗಳಿಂದ ಮುಕ್ತವಾಗುವ ಹೆಚ್ಚಿನ ಸಾಧ್ಯತೆ ಇದೆ.

Leave A Reply

Your email address will not be published.