Ultimate magazine theme for WordPress.

Benefits of Garlic ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಎಸಳು ತಿಂದರೆ ಏನಾಗುತ್ತೆ ಗೊತ್ತಾ? 

0 617

Benefits of Garlic on an Empty Stomach ಸಾವಿರಾರು ವರ್ಷಗಳಿಂದ ಬೆಳ್ಳುಳ್ಳಿಯನ್ನು ನಾವು ಮಾಡುವ ಅಡುಗೆಗಳಲ್ಲಿ ಪ್ರಮುಖ ಸಾಂಬಾರು ಪದಾರ್ಥವಾಗಿ ಬಳಸುತ್ತಾರೆ. ನಮ್ಮ ಆರೋಗ್ಯಕ್ಕೆ ಪೂರಕವಾಗಿರುವ ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ತಿಂದರೇ ಏನಾಗುತ್ತದೆಂಬುದನ್ನು

ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಪ್ರತಿದಿನ ಒಂದು ಸೇಬು ತಿನ್ನಿ ವೈದ್ಯರಿಂದ ದೂರವಿರಿ ಎಂದು ಹೇಳುವಂತೆ ಪ್ರತಿದಿನ ಬೆಳ್ಳುಳ್ಳಿಯನ್ನು ಬಳಸಿ ಆರೋಗ್ಯವಾಗಿರಿ ಎಂದು ಹೇಳುತ್ತದೆ ಆಯುರ್ವೇದಶಾಸ್ತ್ರ. ಆದರೇ ಕೆಲವರು ಬೆಳ್ಳುಳ್ಳಿಯನ್ನು ತಿನ್ನುವುದಿಲ್ಲ. ಆಹಾರದಲ್ಲಿ ಮಧ್ಯೆ ಸಿಕ್ಕರೂ ಅದನ್ನು ಎತ್ತಿಹಾಕಿ ತಿನ್ನುತ್ತಾರೆ. ಆದರೇ ಆರೋಗ್ಯದ ದೃಷ್ಟಯಿಂದ ಇದು ಸರಿಯಲ್ಲ.

ಪ್ರತಿದಿನ ಒಂದೆರೆಡು ಬೆಳ್ಳುಳ್ಳಿ ಎಸಳನ್ನು ತಿನ್ನುವ ಅಭ್ಯಾಸ ಮಾಡಿಕೊಂಡರೇ ಒಳ್ಳೆಯದು. ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಅಥವಾ ನಿಯಮಿತವಾಗಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭಗಳು ಇವೆ ಎಂದರೆ ಮಲಬದ್ಧತೆ, ಕೀಲುನೋವು, ರಕ್ತದೊತ್ತಡ ಇತ್ಯಾದಿ ಅನೇಕ ಕಾಯಿಲೆಗಳಿಗೆ ಇದು ರಾಮಬಾಣ. ಅಷ್ಟೇ ಅಲ್ಲದೇ ಬೆಳ್ಳುಳ್ಳಿ ಸೇವನೆಯಿಂದ ಹಸಿವು ಅನ್ನು ಹೆಚ್ಚಿಸುತ್ತದೆ.

ಬೆಳಿಗ್ಗೆ ಬೆಳ್ಳುಳ್ಳಿ ಸೇವಿಸಿದ ಒಂದು ಗಂಟೆಯಲ್ಲಿ ಜೀರ್ಣವಾಗಿ ಆರೋಗ್ಯ ವೃದ್ಧಿ ಮಾಡುತ್ತದೆ. ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಶರೀರದಲ್ಲಿರುವ ವಿಷ ಪದಾರ್ಥವನ್ನು ಮಲ ಹಾಗೂ ಮೂತ್ರದ ಮೂಲಕ ಹೊರ ಹಾಕುತ್ತದೆ. ಅಷ್ಟೇ ಅಲ್ಲದೇ ದೇಹದ ಆಲಸ್ಯ ಕಡಿಮೆ ಮಾಡಿ,

ದೇಹಕ್ಕೆ ವಿಶೇಷ ಚೈತನ್ಯ ಕೊಡುತ್ತದೆ ಮತ್ತು ಹುರಿದ ಬೆಳ್ಳುಳ್ಳಿಯನ್ನು ಸೇವನೆ ಮಾಡುವುದರಿಂದ ಕ್ಯಾನ್ಸರ್ ಕೋಶಗಳು ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಪ್ರತಿದಿನ ಹುರಿದ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಚಯಾಪಚಯ ಕ್ರಿಯೆ ಸರಾಗಗೊಂಡು ಶರೀರದ ಬೊಜ್ಜು ಕರಗಿಸುವಲ್ಲಿ ಸಹಾಯ ಮಾಡುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಶ್ವಾಶಕೋಶದ ನಾಳಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಅಸ್ತಮಾ, ಕೆಮ್ಮು, ಕಫವನ್ನು ಕಡಿಮೆಮಾಡುತ್ತದೆ.

Leave A Reply

Your email address will not be published.