Ultimate magazine theme for WordPress.

Chanakya neeti ಚಾಣಕ್ಯ ನೀತಿ

0 8,234

Chanakya neeti for enemies trouble ಇಂದಿನ ಲೇಖನದಲ್ಲಿ ಜೀವನದಲ್ಲಿ ಯಶಸ್ಸು ಗಳಿಸಬೇಕು ಮತ್ತು ಶತೃಗಳು ಇರಲೇ ಬಾರದು ಎಂದಾದರೇ ಚಾಣಕ್ಯ ಹೇಳಿದ ಈ ಸೂತ್ರಗಳನ್ನ ಪಾಲಿಸಬೇಕಾಗುತ್ತದೆ. ಚಾಣಕ್ಯರ ಹೆಸರು ನಮ್ಮ ಭಾರತೀಯ ಪರಂಪರೆಯಲ್ಲಿ ಮಹತ್ತ್ವಪೂರ್ಣ ಪಡೆದುಕೊಂಡಿದೆ. ಚಾಣಕ್ಯನ ನೀತಿ, ಅರ್ಥಶಾಸ್ತ್ರ, ನ್ಯಾಯಶಾಸ್ತ್ರ ಮುಂತಾದ ವಿಷಯಗಳು ಈಗಲೂ ಸಹ ನಮ್ಮ ಜೀವನಕ್ಕೆ ದಾರಿದೀಪವಾಗಿವೆ.

ಚಾಣಕ್ಯನಿಗೆ ಕೌಟಿಲ್ಯ ಎಂಬ ಹೆಸರು ಕೂಡ ಇದೆ. ಭಾರತೀಯ ಇತಿಹಾಸದಲ್ಲಿ ಆಚಾರ್ಯ ಚಾಣುಕ್ಯನನ್ನು ಶ್ರೇಷ್ಠ ಪಂಡಿತ ಎಂದು ಕರೆಯಲಾಗಿದೆ. ಪ್ರಖ್ಯಾತ ಮೌರ್ಯ ಸಾಮ್ರಾಜ್ಯದ ಸ್ಥಾಪನೆಗೆ ಮೂಲ ಕಾರಣಕರ್ತ ಚಾಣುಕ್ಯ ಎಂದು ಹೇಳಲಾಗಿದೆ. ಸಾಧನೆಗೆ, ಸೇಡಿಗೆ, ಗೆಲುವಿಗೆ, ಮನಃಶಾಂತಿಗೆ, ಸುಖಕ್ಕೆ, ಶತೃನಾಶಕ್ಕೆ ಹೀಗೆ ಹಲವಾರು ವಿಷಯಗಳ Chanakya neeti

ಮೇಲೆ ಚಾಣಕ್ಯನ ತಂತ್ರಗಳಿವೆ. ಚಾಣುಕ್ಯ ಬರೆದಿರುವ ಕೆಲವು ನೀತಿ ಪಾಠಗಳು ಇಂದಿಗೂ ಕೂಡ ಪ್ರಚಲಿತದಲ್ಲಿವೆ. ನೀವು ಸಹ ಜೀವನದಲ್ಲಿ ಸಫಲರಾಗಿ, ಸುಖವಾಗಿ ಬಾಳಬೇಕಾದರೇ ಚಾಣಕ್ಯರು ಬರೆದ ಕೆಲವು ನೀತಿ ಪಾಠಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೇ ನಿಮ್ಮ ಜೀವನದಲ್ಲಿ ತುಂಬಾ ಬದಲಾವಣೆಯನ್ನು ಕಾಣುತ್ತೀರಿ. ಚಾಣಕ್ಯನ ನೀತಿ ಪಾಠದ ಕೆಲವನ್ನ ತಿಳಿಸಿಕೊಡುತ್ತೇವೆ.

ಸಹೋದರ ಮತ್ತು ಸಂಬಂಧಿಗಳ ನಿಜ ಸ್ವರೂಪ ಗೊತ್ತಾಗುವುದು ನಮ್ಮ ಕಷ್ಟದ ಸಮಯದಲ್ಲಿ ಅಂದರೆ ನಾವು ಕಷ್ಟದಲ್ಲಿದ್ದಾಗ ಅವರ ನಿಜವಾದ ಬಣ್ಣ ನಮಗೆ ತಿಳಿಯುತ್ತದೆ. ನಾವು ಕಷ್ಟದಲ್ಲಿದ್ದಾಗ ಸಹೋದರ ಮತ್ತು ಬಂಧುಗಳದ್ದು ಕಪಟ ಪ್ರೀತಿಯಾದರೇ ನಮ್ಮ ಹತ್ತಿರನೂ ಸುಳಿಯುವುದಿಲ್ಲ. ನಮ್ಮನ್ನು ಮಾತು ಆಡಿಸುವುದಿಲ್ಲ. ನಾವು ಕಷ್ಟದಲ್ಲಿದ್ದಾಗ Chanakya neeti

ಯಾರು ನಮ್ಮ ಕೈ ಇಡಿಯುತ್ತಾರೋ ಅವರೇ ನಮ್ಮ ನಿಜವಾದ ಗೆಳೆಯರು. ನಮ್ಮ ಬಾಳ ಸಂಗಾತಿಯು ಸಹ ನಮ್ಮ ಜೀವನದ ಕಷ್ಟವನ್ನು ಅರಿತುಕೊಂಡು ಜೊತೆಯಲ್ಲಿದ್ದರೇ ಜೀವನ ಅರ್ಥಪೂರ್ಣವಾಗಿರುತ್ತದೆ ಇಲ್ಲವೇ ಜೀವನವೇ ಕಷ್ಟಕರವಾಗಿರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಗಂಡನ ಕೆಲಸ ಹೋಯಿತು ಎಂದಾಗ ಕಾಲುಕಸಕ್ಕಿಂತ ಹೆಂಡತಿ ಕಂಡರೇ ಜೀವನ ಹೇಗಿರುತ್ತದೆ?

ಅದೇ ಗಂಡ ಸಂಬಳ ಬಂದಾಗ ಹೆಂಡತಿಯ ಕೈಗೆ ತಂದುಕೊಡುವಾಗ ಪ್ರೀತಿಯಿಂದ ಕಾಣುವ ಹೆಂಡತಿ ಅದೇ ಕಷ್ಟದಲ್ಲಿದ್ದಾಗ ಅವನನ್ನು ನಿಂದಿಸಿದಾಗ ಅವನ ಮನಸ್ಸಿಗೆ ನೋವಾಗುತ್ತದೆ. ಸುಖ ಇರಲಿ ದುಃಖ ಇರಲಿ ಗಂಡ ಹೆಂಡತಿಯ ನಡುವೆ ಪ್ರೀತಿ ಒಂದೇ ಸಮನಾಗಿರಬೇಕು ಎಂದು ಹೇಳುತ್ತಾನೆ ಚಾಣುಕ್ಯ. Chanakya neeti

ಯಾವುದೇ ಸಂದರ್ಭದಲ್ಲೂ ನಿಮ್ಮ ಮನಸ್ಸಿನ ಗುಟ್ಟನ್ನು ಯಾರಿಗೂ ಹೇಳಬಾರದು. ಈ ಒಂದು ಸ್ವಭಾವ ನಮ್ಮ ಜೀವನವನ್ನೇ ಹಾಳು ಮಾಡಿಬಿಡುತ್ತದೆ ಎನ್ನುತ್ತಾನೆ ಚಾಣಕ್ಯ. ನಮ್ಮ ಮನಸ್ಸಿನ್ನಲ್ಲಿರುವ ಗುಟ್ಟನ್ನು ಯಾರಿಗಾದರೂ ಹಂಚಿಕೊಂಡರೇ ಅದು ಗುಟ್ಟಾಗಿ ಉಳಿಯದೇ ಬೆಂಕಿಯ ತರಹ ಊರೆಲ್ಲಾ ಹಬ್ಬಿ ಬಿಡುತ್ತದೆ. ನಮ್ಮ ಮನಸ್ಸಿನ ಗುಟ್ಟುಗಳು ಎಲ್ಲರಿಗೂ ತಿಳಿದರೇ Chanakya neeti

ನಮ್ಮ ಅವನತಿ ಪ್ರಾರಂಭವಾಯಿತ್ತೆಂದೇ ಅರ್ಥ. ಎಲ್ಲದ್ದಕ್ಕಿಂತ ಹೆಚ್ಚು ಕಷ್ಟ ಯಾವುದು ಎಂದರೇ ಬೇರೆಯವರ ಮನೆಯಲ್ಲಿ ವಾಸ ಮಾಡುವುದು. ಯಾವುದೇ ಮನುಷ್ಯ ತಮ್ಮ ಸ್ವಂತ ವಸ್ತುಗಳ ಮೇಲೆ ಮಾತ್ರ ಹಕ್ಕನ್ನು ಚಲಾಯಿಸಬೇಕು. ಒಂದು ವೇಳೆ ಬೇರೆಯವರ ವಸ್ತುಗಳನ್ನು ಉಪಯೋಗಿಸುವುದು ಎಂದರೆ ನಾವು ಅವರ ಋಣದಲ್ಲಿ ಬದುಕಬೇಕಾಗುತ್ತದೆ.

ಎಷ್ಟೇ ಕಷ್ಟವಿದ್ದರೂ ಸ್ವಾಭಿಮಾನದಿಂದ ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕು ಎಂಬುದು ಚಾಣಕ್ಯರ ಮಾತಾಗಿದೆ. ಚಾಣಕ್ಯರ ಪ್ರಕಾರ ಅತೀಪ್ರಾಮಾಣಿಕನಾಗಿರಬಾರದು ಎಂಬುದು ಸಿದ್ಧನೀತಿಗಳನ್ನು ಒಂದಾಗಿದೆ. ಕಲಿಯುಗದಲ್ಲಿ ಪ್ರಾಮಾಣಿಕತೆಗೆ ಕಷ್ಟ ಹೆಚ್ಚು ಎಂದು ಹೇಳಲಾಗುತ್ತದೆ. ಪ್ರಾಮಾಣಿಕನಾಗಿರುವ ವ್ಯಕ್ತಿಯು ಹೆಚ್ಚು ಕಷ್ಟಗಳನ್ನ ಸಮಾಜದಿಂದ ಎದುರಿಸಬೇಕಾಗುತ್ತದೆಂದು ಆಚಾರ್ಯರು ಹೇಳಿದ್ದಾರೆ. ಸಂದರ್ಭ ಮತ್ತ ಸಮಯಕ್ಕೆ ತಕ್ಕಂತೆ ಒಳ್ಳೆಯ Chanakya neeti

ರೀತಿಯ ಜೀವನ ಮಾಡಬೇಕು ಮತ್ತು ವರ್ತಮಾನದಲ್ಲಿ ಬದುಕುವ ಮಾರ್ಗವನ್ನು ಕಂಡುಕೊಳ್ಳಿ ಎಂದು ಹೇಳಿದ್ದಾನೆ. ಕಳೆದು ಹೋದ ಸಮಯ, ಗತಿಸಿ ಹೋದ ಘಟನೆಗಳನ್ನ ನೆನಪಿಸಿಕೊಂಡು ಕೊರಗುವ ಬದಲಾಗಿ ವರ್ತಮಾನದಲ್ಲಿದ್ದು ಸಂತೋಷದಿಂದ ಇರುವುದೇ ಜೀವನ. ನೆನ್ನೆ ಬಗ್ಗೆ ಯೋಚನೆ ಮಾಡದೇ ನಾಳೆ ಬಗ್ಗೆ ಚಿಂತೆ ಮಾಡದೇ ಇಂದಿನ ದಿನವನ್ನ ಸುಂದರವಾದ ದಿನ ಎಂದು ತಿಳಿದು ಸಂತೋಷದಿಂದ ಬದುಕಬೇಕು. ಹಿಂದೆ ಮಾಡಿದ ಮತ್ತು ನಡೆದು ತಪ್ಪು ಕೆಲಸದ ಬಗ್ಗೆ ಚಿಂತೆ ಮಾಡಿದರೇ ವರ್ತಮಾನ ಮತ್ತು ಭವಿಷ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ. ಜೀವನದ ಯಶಸ್ಸು ಇದರಲ್ಲೇ ಅಡಗಿದೆ.

Leave A Reply

Your email address will not be published.