Ultimate magazine theme for WordPress.

channa health tips ರಾತ್ರಿ ಕಡಲೆಕಾಳು ನೆನೆಸಿಟ್ಟು ಬೆಳಗ್ಗೆ ತಿಂದರೆ

0 505

channa health tips ಹಿಂದಿನ ಕಾಲದ ಜನರು ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ತಮ್ಮ ನಿತ್ಯಕರ್ಮಗಳನ್ನು ಮುಗಿಸಿಕೊಂಡು ಒಂದು ಹಿಡಿಯಷ್ಟು ನೆನೆಸಿಟ್ಟ ಕಾಳುಗಳನ್ನು ತಿನ್ನುತ್ತಿದ್ದರು. ಅದರಿಂದ ಅವರ ಆರೋಗ್ಯವು ಕೂಡ ಉತ್ತಮವಾಗಿರುತ್ತಿತ್ತು. ಅವರಿಗೆ ಯಾವುದೇ ಕಾಯಿಲೆಗಳು ಬರುತ್ತಿರಲಿಲ್ಲ. ಆಕಸ್ಮಿಕವಾಗಿ ಅವರಿಗೆ ಯಾವುದೇ ಕಾಯಿಲೆಗಳು ಬಂದರೂ ಅವರು ಬೇಗನೇ ಗುಣಮುಖವಾಗುತ್ತಿದ್ದರು.

ಅದಕ್ಕೆ ಕಾರಣ ಅವರು ತಿನ್ನುವ ಆಹಾರ ಪದ್ಧತಿಗಳು. ಪ್ರತಿದಿನ ನೆನೆಸಿಟ್ಟ ಕಡಲೆಕಾಳನ್ನು ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭಗಳು ಎಂದು ತಿಳಿದುಕೊಳ್ಳೋಣ. ಕಡಲೆಕಾಯಿಯಲ್ಲಿ ಸಾಕಷ್ಟು ಪೌಷ್ಠಿಕಾಂಶಗಳು ಇವೆ. ಅದರಲ್ಲೂ ನೆನೆಸಿಟ್ಟ ಕಡಲೆಕಾಳನ್ನು ತಿನ್ನುವುದು ಬಹಳ ಒಳ್ಳೆಯದು. ದುಬಾರಿ ಹಣ್ಣು ಮತ್ತು ಡ್ರೈಫ್ರೂಟ್ಸ್ ಗಳಿಗಿಂತ ಇದು ಬಹಳ ಒಳ್ಳೆಯದು.

ನೆನೆಸಿಟ್ಟ ಕಡಲೆಕಾಳಿನಲ್ಲಿ ಪ್ರೊಟೀನ್ ,ಫೈಬರ್,ಮಿನರಲ್ ಬಹಳ ಹೇರಳವಾಗಿರುತ್ತದೆ. ನೆನೆಸಿಟ್ಟ ಕಡಲೆಕಾಳುಗಳ ಸೇವನೆಯಿಂದ ಅನೇಕ ರೋಗಗಳು ದೂರವಾಗುತ್ತವೆ ಮತ್ತು ದೇಹಕ್ಕೆ ಅಧಿಕ ಶಕ್ತಿ ಸಿಗುತ್ತದೆ. ರಾತ್ರಿಪೂರ್ತಿ ಕಡಲೆಕಾಳನ್ನು ನೀರಿನಿಂದ ನೆನೆಸಿಡಿ, ಬೆಳಿಗ್ಗೆ ಅದನ್ನು ಸರಿಯಾಗಿ ಅಗಿದು ತಿನ್ನಿ,ಪ್ರತಿದಿನ ಸೇವನೆ ಮಾಡುವುದರಿಂದ ಶಕ್ತಿ ಬರುತ್ತದೆ ಹಾಗೂ ಸ್ನಾಯುಗಳು ಬಲಗೊಳ್ಳುತ್ತವೆ. ದೇಹ ಅನೇಕ ರೋಗಗಳಿಂದ ಮುಕ್ತಿ ಪಡೆಯುತ್ತದೆ.

ಇದನ್ನು ಬೆಲ್ಲದ ಜೊತೆ ಸೇವನೆ ಮಾಡುವುದರಿಂದ ಮೂತ್ರದ ಸಮಸ್ಯೆ ಕಡಿಮೆಯಾಗುತ್ತದೆ. ಪದೇಪದೇ ಮೂತ್ರ ಮಾಡುವ ಹಾಗೂ ಮೂಲವ್ಯಾಧಿಯಂತಹ ಸಮಸ್ಯೆ ಇರುವುದಿಲ್ಲ. ಮಲಬದ್ಧತೆ ಸಮಸ್ಯೆ ಇರುವವರು ಕಡಲೆಕಾಯಿಯನ್ನು ಸೇವನೆ ಮಾಡಬೇಕು. ಇದರಲ್ಲಿ ಫೈಬರ್ ಅಂಶ ಹೆಚ್ಚು ಇರುವುದರಿಂದ ಜೀರ್ಣಕ್ರಿಯೆ ಸುಲಭವಾಗಿ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ. ಯಾರಿಗೆ ನೆನಪಿನ ಶಕ್ತಿ ಕಡಿಮೆ ಇರುತ್ತದೆಯೋ ಅವರು ಪ್ರತಿದಿನ ಒಂದು ಹಿಡಿಯಷ್ಟು ನೆನಸಿದ ಕಡಲೆಕಾಳನ್ನು ಸೇವನೆ ಮಾಡುವುದರಿಂದ ಅವರ ನೆನಪಿನ ಶಕ್ತಿಯನ್ನು ಹೆಚ್ಚಿಸಲು ಬಹಳ ಉತ್ತಮವಾದ ಆಹಾರವಾಗಿದೆ.

Leave A Reply

Your email address will not be published.