Ultimate magazine theme for WordPress.

Vrishabha ವೃಷಭ ರಾಶಿಯ ಗುಣಸ್ವಭಾವಗಳು

0 11,440

Vrishabha Rashi ಈ ಲೇಖನದಲ್ಲಿ ನಾವು ವೃಷಭ ರಾಶಿ ರೋಹಿಣಿ ನಕ್ಷತ್ರದವರ ಗುಣ ಸ್ವಭಾವಗಳು ಯಾವ ರೀತಿ ಇರುತ್ತದೆ ಎಂಬುದನ್ನು ನೋಡೋಣ .ರೋಹಿಣಿ ನಕ್ಷತ್ರದಲ್ಲಿ ಹುಟ್ಟಿರುವಂತಹ ಸ್ತ್ರೀಯರು ಇರಬಹುದು ಅಥವಾ ಪುರುಷರು ಇರಬಹುದು ಇವರ ಸ್ವಭಾವ ಮತ್ತು ಮನಸ್ಥಿತಿಯವರಿಗೆ ಇರುತ್ತದೆ .ಇವರು ಯಾವ ಕ್ಷೇತ್ರದಲ್ಲಿ ಪ್ರಬಲರಾಗಿ ಇರುತ್ತಾರೆ .ಆರೋಗ್ಯ ಯಾವ ರೀತಿ ಇರುತ್ತದೆ .

ನಕ್ಷತ್ರದವರು ಎಷ್ಟು ಸದೃಢವಾಗಿ ಇರುತ್ತಾರೆ .ವಿವಾಹ ಕೂಡ ಯಾವ ನಕ್ಷತ್ರ ಇರುವ ವ್ಯಕ್ತಿ ಜೊತೆ ಮದುವೆ ಮಾಡಿದಾಗ ಒಳ್ಳೆಯ ಫಲ ಸಿಗುತ್ತದೆ . ಎಂಬ ಮಾಹಿತಿಯನ್ನು ಲೇಖಕನದಲ್ಲಿ ನೋಡೋಣ . ರೋಹಿಣಿ ನಕ್ಷತ್ರದವರು ಸಾಮಾನ್ಯವಾಗಿ ಯಾವುದೇ ವಿಚಾರದಲ್ಲಿ ತುಂಬಾ ನೀಟಾಗಿ ಅಥವಾ ಶುದ್ಧವಾಗಿ ಇರುತ್ತಾರೆ .ಇವರ ಆಚಾರ , Vrishabha

ವಿಚಾರ ಪದ್ಧತಿ , ಸ್ನಾನ , ಇವರ ಬಟ್ಟೆ , ಮತ್ತು ಮನಸ್ಥಿತಿ ಹೀಗೆ ಹಲವಾರು ಶುಚಿತ್ವದ ಕಡೆಗೆ ಗಮನವನ್ನು ಕೊಡುತ್ತಾರೆ . ಈ ನಕ್ಷತ್ರದವರನ್ನು ಸ್ವಚ್ಛತಾ ಪ್ರಿಯರು ಎಂದು ಹೇಳಬಹುದು .ಮತ್ತೆ ಇವರು ಹೆಚ್ಚಾಗಿ ಮೂಢನಂಬಿಕೆಗಳನ್ನು ನಂಬುವ ಸಾಧ್ಯತೆ ಇರುತ್ತದೆ . ಅಂದರೆ ಅವರು ತುಂಬಾ ನಂಬುತ್ತಾರೆ . ಇವರು ಸಾಮಾಜಿಕ ಕ್ಷೇತ್ರಗಳಲ್ಲಿ ಗೌರವ ಪ್ರತಿಷ್ಠೆ ಗಳ ಆಸೆಯನ್ನು ಹೊಂದಿರುತ್ತಾರೆ .

ದೊಡ್ಡ ದೊಡ್ಡ ವ್ಯಕ್ತಿಗಳ ಸಹವಾಸ , ಕಲೆ , ಕ್ರೀಡೆ , ರಾಜಕೀಯದಲ್ಲಿ ತೊಡಗುವುದು ಹೀಗೆ ಹಲವಾರು ಗುಣವನ್ನು ಹೊಂದಿರುತ್ತಾರೆ . ಇವರಿಗೆ ಧಾರ್ಮಿಕ ಕಾರ್ಯಗಳಲ್ಲಿ ಸಾಕಷ್ಟು ಮನಸ್ಸು ಇರುತ್ತದೆ .ಇಂತಹ ಕೆಲಸಗಳಲ್ಲಿ ಇವರಿಗೆ ಒಡನಾಟ ಹೆಚ್ಚಾಗಿರುತ್ತದೆ . ಈ ನಕ್ಷತ್ರದವರು ಪ್ರಯಾಣದಲ್ಲಿ ತುಂಬಾ ಆಸೆಯನ್ನು ಹೊಂದಿರುತ್ತಾರೆ . ಅಂದರೆ ದೂರದ ಪ್ರಯಾಣ ಎಂದರೆ ಇವರು ತುಂಬಾ ಬಯಕೆ ಉಳ್ಳವರು ಆಗಿರುತ್ತಾರೆ.

ರೋಹಿನಿ ನಕ್ಷತ್ರದವರು ಸಾರ್ವಜನಿಕರ ಆಸೆಗಳನ್ನು ಪೂರೈಸುವ ಗುಣವನ್ನು ಹೊಂದಿರುತ್ತಾರೆ . ಈ ನಕ್ಷತ್ರದವರು ದುಷ್ಟ ಶಕ್ತಿ ಮತ್ತು ದೈವ ಶಕ್ತಿ ಎರಡನ್ನು ತುಂಬಾ ನಂಬುತ್ತಾರೆ . ಎಂದು ಹೇಳಲಾಗಿದೆ .ಈ ಶಕ್ತಿಗಳಿಗೆ ಇವರು ಅತ್ಯುನ್ನತವಾದ ಪ್ರಾಧಾನ್ಯತೆಯನ್ನು ಕೊಡುತ್ತಾರೆ . ಸ್ತ್ರೀಯರು ಇರಬಹುದು ಅಥವಾ ಪುರುಷರು ಇರಬಹುದು ಇವರುಗಳು 27 , 32, 47 ಮತ್ತು 53 ನೇ ವಯಸ್ಸಿನಲ್ಲಿ ಸ್ವಲ್ಪ ಜೀವನದಲ್ಲಿ ಕಷ್ಟವನ್ನು ಎದುರಿಸಬೇಕಾಗುತ್ತದೆ . ಅನೇಕ ಕಠೋರವಾದ Vrishabha

ಪರಿಸ್ಥಿತಿಗಳನ್ನು ಎದುರಿಸಬೇಕಾದ ಸನ್ನಿವೇಶಗಳು ಕೂಡ ಬರುತ್ತವೆ . ಅದನ್ನು ಸಮರ್ಥವಾಗಿ ಕೂಡ ಎದುರಿಸುತ್ತಾರೆ . ಈ ನಕ್ಷತ್ರದವರು ಇಂತಹ ಒಂದು ಬಲ ಇವರಲ್ಲಿ ಇರುತ್ತದೆ . ಈ ನಕ್ಷತ್ರದವರು ತಮ್ಮ ಬಂಧುಗಳಿಗೆ ಅಪಾರವಾದ ಪ್ರೀತಿ ಗೌರವವನ್ನು ತೋರಿಸುತ್ತಾರೆ . ಮತ್ತೆ ಮನೆಗೆ ಬಂದವರನ್ನು ಆಧರಿಸಿ ಅತಿಥಿ ಸತ್ಕಾರ ಮಾಡುವ ಗುಣವನ್ನು ಹೊಂದಿರುತ್ತಾರೆ . Vrishabha

ಇವರು ಯಾವುದೇ ಕೆಲಸ ಮಾಡಿದರು ಅದನ್ನು ಗೆಲ್ಲುವ ವರೆಗೂ ಬಿಡುವುದಿಲ್ಲ . ಆ ಕೆಲಸ ಪರಿಪೂರ್ಣ ಆಗುವವರೆಗೂ ಬಿಡುವುದಿಲ್ಲ . ಮತ್ತೆ ಹೋರಾಟವನ್ನು ಮುಂದುವರಿಸುತ್ತಾರೆ .ಇವರ ಗೆಲುವು ಇವರ ಕೈಯಲ್ಲೇ ಇರುತ್ತದೆ . ಆದರೆ ಯೋಜನಾ ಶಕ್ತಿಯ ಮೇಲೆ ಇವರ ಭವಿಷ್ಯ ಅವಲಂಬಿತವಾಗಿರುತ್ತದೆ . ಸಾಮಾಜಿಕ ಮತ್ತು ಅವರ ಕೌಟುಂಬಿಕ ವಿಚಾರದಲ್ಲಿ ತುಂಬಾ ಚಾಣಾಕ್ಷತನದಿಂದ ಕೆಲಸವನ್ನು ನಿರ್ವಹಿಸುತ್ತಾರೆ .

ಮತ್ತು ತುಂಬಾ ಗೌರವವನ್ನು ನೀಡುತ್ತಾರೆ . ಮತ್ತು ಅದನ್ನು ಜವಾಬ್ದಾರಿಯುತವಾಗಿ ನಿಂತು ಪೂರೈಸುವ ಗುಣವನ್ನು ಹೊಂದಿದ್ದಾರೆ . ಈ ರೋಹಿಣಿ ನಕ್ಷತ್ರದಲ್ಲಿ ನಾಲ್ಕು ಚರಣಗಳು ಇವೆ . ಅವುಗಳು ಒ, ವ , ವಿ, ವು ಈ ನಾಲ್ಕು ಜನಗಳ ವ್ಯಕ್ತಿತ್ವ ಕೂಡ ಸ್ವಲ್ಪ ಬೇರೆ ಬೇರೆಯಾಗಿರುತ್ತದೆ . ಬೇರೆ ಬೇರೆ ಆಗಿರುವ ಚರಣಗಳು ಯಾವ ರೀತಿಯ ವ್ಯತ್ಯಾಸ ಹೊಂದಿರುತ್ತವೆ ಎಂಬುದನ್ನು ಹೇಳುವುದಾದರೆ ,

ಒಂದನೇ ಚರಣದವರು ಅತಿಯಾದ ಭಯದಿಂದ ಸದೃಢವಾದ ನಿರ್ಧಾರವನ್ನು ತೆಗೆದುಕೊಳ್ಳಲು ಆಗದೆ ಒಂದು ಭಯದ ವಾತಾವರಣದಲ್ಲಿ ಇರುತ್ತಾರೆ .ಅಂದರೆ ಒಂದು ಸಣ್ಣ ವಿಚಾರವನ್ನು ಕೂಡ ನಿರ್ಧಾರ ತೆಗೆದುಕೊಳ್ಳಲು ಅಳೆದು ತೂಗಿ ಕೈ ಹಾಕುವ ವ್ಯಕ್ತಿತ್ವದವರು ಆಗಿರುತ್ತಾರೆ . ಎರಡನೇ ಚರದವರು ಅವರ ಅತ್ಯಧಿಕ ಸೌಂದರ್ಯದಿಂದ ಕಲೆಗಳನ್ನು ಮೈಗೂಡಿಸಿಕೊಂಡು ಇರುತ್ತಾರೆ . Vrishabha

ಇವರು ಶೃಂಗಾರ ಪ್ರಿಯರು ಎಂದು ಹೇಳಬಹುದು . ರೋಹಿಣಿ ನಕ್ಷತ್ರದವರು ಸೌಂದರ್ಯಕ್ಕೆ ಹೆಚ್ಚು ಮಹತ್ವವನ್ನು ನೀಡುತ್ತಾರೆ ಎಂದು ಹೇಳಲಾಗಿದೆ .ಅವರ ಸೌಂದರ್ಯ ಇರಬಹುದು , ಬಾಹ್ಯ ಸೌಂದರ್ಯ ಇರಬಹುದು , ಅಥವಾ ಬೇರೆಯವರ ಸೌಂದರ್ಯ ಇರಬಹುದು , ಹೀಗೆ ಇವರು ಸೌಂದರ್ಯಕ್ಕೆ ಹೆಚ್ಚು ಒತ್ತನ್ನು ನೀಡುತ್ತಾರೆ ಎಂದು ಹೇಳಲಾಗಿದೆ .

ಮೂರನೇ ಚರಣದವರು ಅವರ ಮನಸ್ಸಿನ ಭಾವನೆಗಳನ್ನು ಅತಿಯಾಗಿ ಜನರೊಂದಿಗೆ ಪ್ರದರ್ಶಿಸುವ ಗುಣ ಹೊಂದಿರುತ್ತಾರೆ . ಅವರ ಮನಸ್ಸಿನಲ್ಲಿ ಇರುವುದನ್ನು ನೇರವಾಗಿ ಹೇಳುವ ವ್ಯಕ್ತಿತ್ವ ಇವರಿಗೆ ಇರುತ್ತದೆ , ಆ ವಿಷಯವನ್ನು ಮುಚ್ಚು ಮರೆ ಮಾಡುವ ವ್ಯಕ್ತಿತ್ವ ಇವರದಲ್ಲ. ಎಲ್ಲರ ಹತ್ತಿರ ಇವರು ನೇರವಾಗಿ ಮಾತನಾಡುತ್ತಾರೆ.
ನಾಲ್ಕನೇ ಚರಣದಲ್ಲಿ ಹುಟ್ಟಿರುವವರ ಅವರ ಹೃದಯವು ಸದಾ ಉತ್ಸಾಹದಲ್ಲಿ ಇರುತ್ತದೆ .

ಸದಾ ಕ್ರಿಯಾಶೀಲ ವ್ಯಕ್ತಿಗಳಾಗಿ ಇರುತ್ತಾರೆ . ತುಂಬಾ ಚಟುವಟಿಕೆಯಿಂದ ಇರುತ್ತಾರೆ . ಸಾಮಾಜಿಕ , ಧಾರ್ಮಿಕ , ಆಚರಣೆಗಳಲ್ಲಿ ಯಾವಾಗಲೂ ಮುಂದೆ ಇರುತ್ತಾರೆ .ಈ ನಾಲ್ಕು ಚರಣದ ವ್ಯಕ್ತಿತ್ವಗಳು ಈ ಮೇಲೆ ತಿಳಿಸಿರುವ ಹಾಗೆ ಇರುತ್ತದೆ . ರೋಹಿಣಿ ನಕ್ಷತ್ರದಲ್ಲಿ ಹುಟ್ಟಿರುವವರು ಯಾವ ಒಂದು ಕ್ಷೇತ್ರದಲ್ಲಿ ಇರುತ್ತಾರೆ , ಯಾವ ಕ್ಷೇತ್ರದಲ್ಲಿ ಇವರು ಇದ್ದರೆ , ಅವರಿಗೆ ಫಲ ಸಿಗುತ್ತದೆ ಎಂದು ನೋಡೋಣ..

ಇವರು ಎಣ್ಣೆ ಪದಾರ್ಥಗಳನ್ನು ಮಾರಾಟ ಮಾಡುವವರು ಆಗಿರುತ್ತಾರೆ . ಅಂದರೆ ಎಣ್ಣಿಗೆ ಸಂಬಂಧ ಪಟ್ಟಿದ್ದನ್ನು ಮಾರಾಟ ಮಾಡುತ್ತಾರೆ .ಇನ್ನು ಇವರು ನೌಕಾ ಅಥವಾ ಸೇನಾ ನೆಲೆಗಳಲ್ಲಿ ಕೆಲಸವನ್ನು ಮಾಡುತ್ತಾರೆ . ಯಂತ್ರೋಪಕರಣಗಳ ಬಿಡಿ ಭಾಗಗಳನ್ನು ತಯಾರಿಸುವ ಕೆಲಸವನ್ನು ಕೂಡ , ಇವರು ಮಾಡುತ್ತಾರೆ . ಹಣ್ಣುಗಳನ್ನು ಮಾರಾಟ ಮಾಡುತ್ತಾರೆ .

ನೂಲು ಗಾರಿಕೆಯಲ್ಲಿ ಕೆಲಸ ಮಾಡುವುದು .ಸರ್ಕಾರದ ಹುದ್ದೆಗಳನ್ನು ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ . ಇವರು ಕೃಷಿ ಕ್ಷೇತ್ರದಲ್ಲಿ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ . ಎಲ್ಲಾ ಕ್ಷೇತ್ರಗಳಲ್ಲಿ ಕೆಲಸಗಳನ್ನು ಮಾಡುವ ಗುಣ ಹೊಂದಿರುತ್ತಾರೆ . ಯಾವುದೇ ಉದ್ಯೋಗ ಆದರೂ ಕೂಡ ಅದನ್ನು ನಿಭಾಯಿಸುವ ಕಲೆ ಉಳ್ಳವರು ಅಥವಾ ಚಾಣಾಕ್ಷರು ಎಂದು ಹೇಳಬಹುದು . Vrishabha

ಆ ಒಂದು ಕ್ಷೇತ್ರದಲ್ಲೇ ಮಾಡುವುದರಿಂದ ಉತ್ತಮವಾದ ಫಲ ಕೂಡ ದೊರೆಯುತ್ತದೆ .ರೋಹಿಣಿ ನಕ್ಷತ್ರದಲ್ಲಿ ಹುಟ್ಟಿರವವರ ಆರೋಗ್ಯದ ಸ್ಥಿತಿಗತಿ ಹೇಗಿರುತ್ತದೆ ಎಂಬುದನ್ನು ನೋಡೋಣ .ಆರೋಗ್ಯದಲ್ಲಿ ಹೆಚ್ಚಿನ ಗಮನವನ್ನು ತೆಗೆದುಕೊಳ್ಳಬೇಕು .ರೋಹಿಣಿ ನಕ್ಷತ್ರದವರಿಗೆ ಅಷ್ಟೇನೂ ಆರೋಗ್ಯದಲ್ಲಿ ಹೇಳಿಕೊಳ್ಳುವ ಸಮಸ್ಯೆಗಳು ಇರುವುದಿಲ್ಲ .

ತುಂಬಾ ಸದೃಢವಾಗಿ ಇರುತ್ತಾರೆ. ಮತ್ತು ಶಕ್ತಿ ಶಾಲಿಗಳಾಗಿರುತ್ತಾರೆ . ನಿಜವಾಗಿ ಆರೋಗ್ಯದಲ್ಲಿ ಸಹಜವಾದ ಆರೋಗ್ಯದಲ್ಲಿ ಬದಲಾವಣೆಗಳು ಕೂಡ ಆಗಿರುತ್ತದೆ . ಹಾಗಾಗಿ ಸಣ್ಣ ಪುಟ್ಟ ಆರೋಗ್ಯದ ಸಮಸ್ಯೆಗಳು ಇರುವುದರಿಂದ ನೀವು ಗಮನವನ್ನು ಹರಿಸಬೇಕಾಗುತ್ತದೆ .ರೋಹಿಣಿ ನಕ್ಷತ್ರದಲ್ಲಿ ಹುಟ್ಟಿರುವ ವಧುವರರಿಗೆ ಯಾವ ನಕ್ಷತ್ರದ ಹುಡುಗ ಹುಡುಗಿ ಯಾರು ಸಾಮರಸ್ಯವಾಗುತ್ತದೆ ಎಂಬುದನ್ನು ನೋಡೋಣ .

ಮೊದಲು ವರ ಹುಡುಗರಿಗೆ ಅಂದರೆ ರೋಹಿಣಿ ನಕ್ಷತ್ರದಲ್ಲಿ ಹುಟ್ಟಿದವರಿಗೆ ಯಾವ ನಕ್ಷತ್ರದ ಕನ್ಯೆ ಬೇಕಾಗುತ್ತದೆ ಎಂಬುದನ್ನು ನೋಡೋಣ .ಅಶ್ವಿನಿ , ರೋಹಿಣಿ , ಮೃಗಶಿರ , ಆರಿದ್ರ , ಭರಣಿ , ಪುನರ್ವಸು , ನಕ್ಷತ್ರದ ಮೊದಲ ಮೂರು ಚರಣಗಳು ಇತರ ಪುಷ್ಯ , ಮಖ , ಉತ್ತರ , ಚಿತ್ತ , ಸ್ವಾತಿ , ಅಸ್ತ , ಜೇಷ್ಠ , ಮೂಲ , ಪೂರ್ವ, ಉತ್ತಾರಾಷಡ , ಅನುರಾಧ ಮೊದಲ ಮೂರು ಚರಣಗಳು ಮತ್ತು ಶ್ರವಣ ನಕ್ಷತ್ರ ,

ಮತ್ತು ಧನಿಷ್ಠ ನಕ್ಷತ್ರ , ಶತತಾರ ನಕ್ಷತ್ರ , ಪೂರ್ವ ಬಾದ್ರದ ಮೊದಲ ಮೂರು ಚರಣಗಳು ಮತ್ತು ಉತ್ತರ ಬಾದ್ರದ ನಾಲ್ಕು ಚರಣಗಳು ಈ ನಕ್ಷತ್ರದಲ್ಲಿ ಹುಟ್ಟಿರುವ ಕನ್ಯೆಯರು ಈ ವರನಿಗೆ ಹೊಂದಾಣಿಕೆ ಆಗುತ್ತದೆ. ಎಂದು ಹೇಳಬಹುದು. ಈ ನಕ್ಷತ್ರದವರ ಹೊಂದಾಣಿಕೆ ಆಗುವುದರಿಂದ ಉತ್ತಮ ದಾಂಪತ್ಯಕ್ಕೆ ನಾಂದಿಯಾಗುತ್ತದೆ . ಆಗಿದ್ದರೆ , ಸ್ಟೀಯರಿಗೆ ಯಾವ ನಕ್ಷತ್ರದಲ್ಲಿ ಹುಟ್ಟಿರುವ ವರಗಳು ಹೊಂದಾಣಿಕೆ ಯಾಗುತ್ತದೆ. ಎಂಬ ಮಾಹಿತಿಯನ್ನು ತಿಳಿಯಬಹುದು.

ಅಶ್ವಿನಿ, ನಕ್ಷತ್ರ , ಭರಣಿ ನಕ್ಷತ್ರ , ಕೃತಿಕಾ ದ ಮೂರು ಚರಣಗಳು ಮತ್ತು ರೋಹಿಣಿ ನಕ್ಷತ್ರ, ಮೃಗಶಿರ ನಕ್ಷತ್ರದ ಮೂರು ಮತ್ತು ನಾಲ್ಕನೇ ಚರಣ . ಆರಿದ್ರ ನಕ್ಷತ್ರ ಮತ್ತು ಪುನರ್ವಸು ನಕ್ಷತ್ರ ಉತ್ತರ ಪಾಲ್ಗುಣಿ ಹಸ್ತ , ಚಿತ್ತ , ವಿಶಾಖದ ಮೊದಲ ಮೂರು ಚರಣಗಳು ಅನುರಾಧ , ಜೇಷ್ಠ , ಪೂರ್ವಾಷಾಡ , ಉತ್ತರಾಷಾಡದ , ಮೊದಲ ಮೂರು ಚರಣಗಳು ಶ್ರವಣ, Vrishabha

ಧನಿಷ್ಠ ಮತ್ತು ಶತತಾರ ಶತಭಿಷಾ ಮತ್ತು ಪೂರ್ವ ಭಾದ್ರದ ನಾಲ್ಕು ಚರಣಗಳು ಸೇರಿ ಅಂತಹ ಒಂದು ಈ ನಕ್ಷತ್ರದಲ್ಲಿ ಹುಟ್ಟಿರುವ ವರಗಳನ್ನು ತೆಗೆದುಕೊಂಡು ಮದುವೆ ಮಾಡಿದರೆ ಖಂಡಿತವಾಗಿಯೂ ಒಳ್ಳೆಯದಾಗುತ್ತದೆ. ಅಂತೂ ರೋಹಿಣಿ ನಕ್ಷತ್ರದಲ್ಲಿ ಹುಟ್ಟಿದವರು ಮೃದುವಾಗಿ, ಹಠವಾದಿ, ಚಲವಾದಿ , ಧಾರ್ಮಿಕ , ಆಚರಣೆಯಲ್ಲಿ ನಂಬಿಕೆ ಇರುವ ಸ್ನೇಹ ಜೀವಿಗಳೂ ಆಗಿ , ಸ್ಪಷ್ಟವಾಗಿ ಕಂಡುಬರುತ್ತಾರೆ. ಎಂದು ಹೇಳಲಾಗಿದೆ.

Leave A Reply

Your email address will not be published.