Ultimate magazine theme for WordPress.

feng shui items ಈ ವಸ್ತುಗಳನ್ನು ಮನೆಯಲ್ಲಿಟ್ಟರೆ ವಾಸ್ತುದೋಷ

0 7,144

feng shui items ನಾವು ಈ ಲೇಖನದಲ್ಲಿ ಈ ವಸ್ತುಗಳನ್ನು ಮನೆಯಲ್ಲಿ ಇಟ್ಟರೆ ವಾಸ್ತುದೋಷ ನಿವಾರಣೆ ಗ್ಯಾರಂಟಿ ಆಗುತ್ತದೆ ಎಂಬುದನ್ನು ನೋಡೋಣ . ನೀವು ಜೀವನದಲ್ಲಿ ಸಾಕಷ್ಟು ಕಷ್ಟ ಪಡುತ್ತಿದ್ದರೆ , ಎಷ್ಟೇ ದುಡಿದರೂ ಏಳಿಗೆ ಆಗುತ್ತಿಲ್ಲವೇ , ಕೈಯಲ್ಲಿ ಹಣವಿಲ್ಲದೆ ಇರುವುದು, ಕೆಲಸದಲ್ಲಿ ನೆಮ್ಮದಿ ಇಲ್ಲದೆ ಇರುವುದು , ಮನೆಯಲ್ಲಿ ನೆಮ್ಮದಿ ಇಲ್ಲದೆ ಇರುವುದು .

ಇದಕ್ಕೆಲ್ಲ ನೀವು ವಾಸ ಮಾಡುವ ಮನೆಯು ಕೂಡ ಕಾರಣವಾಗುತ್ತದೆ .ಮನೆ ಸ್ವಂತ ಮನೆ ಆಗಿರಲಿ, ಅಥವಾ ಬಾಡಿಗೆ ಮನೆ ಆಗಿರಲಿ ,ವಾಸ್ತು ದೋಷವಿದ್ದರೆ , ಮನೆ ಏಳಿಗೆ ಆಗಲು ಬಿಡುವುದಿಲ್ಲ . ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಇಡುವುದರ ಮುಖಾಂತರ ನಾವು ವಾಸ್ತು ದೋಷವನ್ನು ನಿವಾರಣೆ ಮಾಡಿಕೊಳ್ಳಬಹುದು. ವಾಸ್ತು ಶಾಸ್ತ್ರವು ಮನೆಯಲ್ಲಿರುವ ಋಣಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ .ಮತ್ತು ದೈನಂದಿನ ಜೀವನದಲ್ಲಿ ಬಳಸುವ ವಸ್ತುಗಳ ಮೂಲಕ , feng shui

ಧನಾತ್ಮಕ ಶಕ್ತಿಯನ್ನು ತುಂಬಲು ಒಳ್ಳೆಯ ಮಾರ್ಗಗಳನ್ನು ನಮಗೆ ತೋರಿಸುತ್ತದೆ . ಇಂತಹ ಕೆಲವು ವಸ್ತುಗಳಲ್ಲಿ ಕನ್ನಡಿ, ತುಳಸಿ ಗಿಡ ,ಗಂಟೆ ,ಕುದುರೆಲಾಳ , ಮತ್ತು ಉಪ್ಪು ಮುಂತಾದ ಅನೇಕ ವಸ್ತುಗಳು ಸೇರಿರುತ್ತವೆ .ಜೀವನದಲ್ಲಿ ಮಾಡುವ ಚಿಕ್ಕ ಚಿಕ್ಕ ತಪ್ಪು ಳಿಂದಾಗಿ , ವಾಸ್ತು ಶಾಸ್ತ್ರದ ಪ್ರಕಾರ ನಮ್ಮ ಮನೆಯ ಮೇಲೆ ಮತ್ತು ನಮ್ಮ ಆರೋಗ್ಯದ ಮೂಲಕ ಕೆಲವೊಂದು ಋಣಾತ್ಮಕ ಪರಿಣಾಮಗಳು ಆಗುತ್ತದೆ. ವಾಸ್ತು ದೋಷದಿಂದ ನಾವು ಜೀವನದಲ್ಲಿ ಪ್ರತಿನಿತ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ .

ಮನೆಯ ವಾಸ್ತು ಅಲ್ಲದೆ ಮನೆಯಲ್ಲಿರುವ ವಸ್ತುಗಳು ಕೂಡ . ಪ್ರತಿನಿತ್ಯ ಜೀವನದ ಮೇಲೆ ಪ್ರಭಾವ ಬೀರುತ್ತದೆ .ಮನೆಯಲ್ಲಿ ಇರುವವರ ಆರೋಗ್ಯ , ಉದ್ಯೋಗ , ಹಣಕಾಸಿನ ವ್ಯವಹಾರಗಳು ಸರಿಯಾಗಿರಬೇಕು ಎಂದರೆ , ವಾಸ್ತು ಶಾಸ್ತ್ರದ ಪ್ರಕಾರ ಯಾವ ವಸ್ತುಗಳಲ್ಲಿ ಮನೆಯಲ್ಲಿ ಇಟ್ಟುಕೊಂಡರೆ , ವಾಸ್ತು ದೋಷ ನಿವಾರಣೆ ಯಾಗುತ್ತದೆ ಮತ್ತು ಅಂತ ವಸ್ತುಗಳು ಯಾವುದು ಎಂಬುದನ್ನು ನೋಡೋಣ ..feng shui

ನಿಮಗೆ ತಿಳಿದಿರುವ ಹಾಗೆ ಎಲ್ಲರೂ ಅಡುಗೆ ಮನೆಯಲ್ಲಿ ಬಳಸುವ ಪದಾರ್ಥ ಹಾಲು.ವಾಸ್ತು ಶಾಸ್ತ್ರದ ಪ್ರಕಾರ ಹಾಲಿನ ಪಾತ್ರೆಯನ್ನು ಎಂದಿಗೂ ತೆರೆದು ಇಡಬಾರದು . ಹಾಲಿನ ಪಾತ್ರೆಯನ್ನು ತೆರೆದು ಇಡುವುದರಿಂದ , ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತದೆ . ಜೊತೆಗೆ ಮಾನಸಿಕ ಕಿರಿ ಕಿರಿ ಗಳು ಹೆಚ್ಚಾಗುತ್ತವೆ . ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಖಾಲಿ ಮಡಿಕೆ ,

ಹಳೆಯ ಮಡಿಕೆ ಕೆಟ್ಟು ಹೋಗಿರುವ ಕೂಲರ್ ಅಥವಾ ಫ್ಯಾನ್ ರದ್ದೀಕಾಗದ ಈ ವಸ್ತುಗಳನ್ನು ಮನೆಯ ಮೇಲ್ಚಾವಣಿಯಲ್ಲಿ ಇಡಬಾರದು .ಈ ವಸ್ತುವನ್ನು ವಿಶೇಷವಾಗಿ ನೀವು ಮಲಗುವ ಮೇಲ್ಚಾವಣಿ ಯಲ್ಲಿ ಇಡಬಾರದು . ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ದ್ವಾರದ ಮುಂದೆ ಮುಳ್ಳಿನ ಗಿಡ ಅಥವಾ ಹೂವು ಇರುವ ಮುಳ್ಳಿನ ಗಿಡವನ್ನು ನೆಡಬಾರದು .

ಮತ್ತೆ ಕೊಳಕು ನೀರನ್ನು ಮನೆ ಮುಂದೆ ಸಂಗ್ರಹಿಸಿ ಇಡಬಾರದು .ಮತ್ತು ಮನೆಯ ಮುಂದೆ ಕೊಳಕು ನೀರು ಹರಿಯದಂತೆ ಕೂಡ ಇರಬಾರದು . ಇದು ಮನೆಯ ಸದಸ್ಯರ ಜೀವನವನ್ನು ಬಹಳ ಕಷ್ಟಕರವಾಗಿ ಆಗಿಸುತ್ತದೆ . ಮನೆಯ ಸದಸ್ಯರಿಗೆ ಒಂದಲ್ಲ ಒಂದು ವ್ಯಾದಿ ಕಾಡುತ್ತಿರುತ್ತದೆ . ಮನೆಯ ಮುಂದೆ ಕೊಳಚೆ ನೀರು ಹರಿಯುತ್ತಿದ್ದರೆ , ಅದಕ್ಕೆ ಪರ್ಯಾಯ ವ್ಯವಸ್ಥೆ ವ್ಯವಸ್ಥೆ ಆಗೋದಿಲ್ಲಾ , ಅಂದರೆ ಇದರಿಂದ ಪರಿಹಾರ ಪಡೆಯುವುದಕ್ಕೆ ಸ್ವಸ್ತಿಕ ಚಿಹ್ನೆ , ಓಂ ಚಿಹ್ನೆ , feng shui

ಗಣಪತಿ ಹೆಸರು , ಅಥವಾ ಶುಭ ಲಾಭ ತರುವ ಮನೆಯ ಮುಖ್ಯ ದೇವತೆ ಹೆಸರನ್ನ ಮನೆಯ ದ್ವಾರದಲ್ಲಿ ಬರೆಯಬೇಕು.ರಾತ್ರಿ ಮಲಗುವಾಗ ಕೆಂಪು ಕರ ವಸ್ತ್ರವನ್ನು ನಿಮ್ಮ ತಲೆಯ ಕೆಳಗೆ ಇಟ್ಟುಕೊಂಡು ಮಲಗಿ. ಇದರಿಂದ ಕೆಟ್ಟ ಕನಸುಗಳು ಬೀಳುವುದಿಲ್ಲ . ಅಲ್ಲದೆ ಹಗಲಿನಲ್ಲಾಗಲಿ ಅಥವಾ ರಾತ್ರಿಯಲ್ಲಿ ಆಗಲಿ ಮನೆಯನ್ನು ಸಂಪೂರ್ಣವಾಗಿ ಕತ್ತಲೆ ಯನ್ನಾಗಿ ಇರಿಸಬಾರದು .

ಎಲ್ಲಾದರೂ ಒಂದು ಕಡೆ ಬೆಳಕು ಇರುವಂತೆ ನೋಡಿಕೊಳ್ಳಬೇಕು .ಇದರಿಂದ ದುಸ್ವಪ್ನಗಳು ಉಂಟಾಗುವುದಿಲ್ಲ . ಮತ್ತು ಮಾನಸಿಕ ಒತ್ತಡದಿಂದಲು ಪರಿಹಾರ ಸಿಗುತ್ತದೆ . ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ದ್ವಾರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು . ಅಲ್ಲದೆ ಮನೆಯ ಮುಖ್ಯದ್ವಾರದ ಹೊಸ್ತಿಲಿಗೆ ಬಿಳಿ ಬಣ್ಣವನ್ನೇ ಹಚ್ಚಬೇಕು ಎಂದು ಹೇಳಲಾಗಿದೆ . ಮತ್ತು ಇದರ ಮೇಲೆ ಸ್ವಸ್ತಿಕ ಗಳಂತಹ ಚಿತ್ರಗಳನ್ನು ಬಿಡಿಸಬೇಕು.ಹೀಗೆ ಮಾಡುವುದರಿಂದ ನಮ್ಮ ಮನೆಯ ಸುತ್ತಮುತ್ತಲಿನ ನಕಾರಾತ್ಮಕ ಶಕ್ತಿಗಳು ಮನೆಯನ್ನು ಪ್ರವೇಶ ಮಾಡುವುದಿಲ್ಲ .

ಅಲ್ಲದೇ ಮನೆಯಲ್ಲಿ ಸುಖ , ಶಾಂತಿ, ನೆಮ್ಮದಿ ನೆಲಸಿ ಮನೆಯ ಸದಸ್ಯರಿಗೆ ಎಲ್ಲಾ ರೀತಿಯ ಆರೋಗ್ಯ ವೃದ್ಧಿಯಾಗುತ್ತದೆ . ಇನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಒಡೆದು ಹೋದ ಕಸದ ಬುಟ್ಟಿಯನ್ನು ಇಟ್ಟುಕೊಳ್ಳಬಾರದು . ಹೀಗೆ ಇಟ್ಟುಕೊಳ್ಳುವುದರಿಂದ ಮನೆಯ ಸದಸ್ಯರ ನಡುವೆ ವೈ ಮನಸ್ಸು ಉಂಟಾಗುತ್ತದೆ , ಮತ್ತು ಮನೆಯ ನೆಮ್ಮದಿ ಕೂಡ ಹಾಳಾಗುತ್ತದೆ . feng shui

ಇದಲ್ಲದೇ ಮನಸ್ಸುಗಳ ಮಧ್ಯೆ ಬಿರುಕು ಹೆಚ್ಚಾಗುತ್ತದೆ . ಹೀಗಾಗಿ ಮೊದಲು ನಿಮ್ಮ ಮನೆಯಲ್ಲಿರುವ ಹೊಡೆದ ಕಸದ ಬುಟ್ಟಿಯನ್ನು ಮೊದಲು ಹೊರಗೆ ಹಾಕಿ . ಮನೆಯ ಮುಂದೆ ಒಣಗಿದ ಗಿಡಗಳಿದ್ದರೆ ,ಅಂದರೆ ಒಣಗಿದ ತುಳಸಿ ಗಿಡವಿದ್ದರೆ ,ಇದನ್ನು ಯಾವುದೇ ಕಾರಣಕ್ಕೂ ಇಟ್ಟುಕೊಳ್ಳಬಾರದು .ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ .ಮನೆಯ ಸದಸ್ಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ . ವಾಸ್ತು ಶಾಸ್ತ್ರದ ಪ್ರಕಾರ ಹಳೆಯ ಪತ್ರಿಕೆಗಳು ಮತ್ತು ಹರಿದ ಪುಸ್ತಕಗಳನ್ನು ಮನೆಯಲ್ಲೇ ಇಟ್ಟುಕೊಳ್ಳಬಾರದು .

ಹೀಗೆ ಇಟ್ಟುಕೊಳ್ಳುವುದರಿಂದ ಮಾನಸಿಕ ಅಶಾಂತಿ ಉಂಟಾಗುತ್ತದೆ . ಋಣಾತ್ಮಕ ಶಕ್ತಿಯು ಮನೆಯನ್ನು ಆವರಿಸುತ್ತದೆ . ಮಾನಸಿಕ ಆರೋಗ್ಯ ಹದಗೆಟ್ಟು , ಮನಸ್ಸಿನ ನೆಮ್ಮದಿ ಕೂಡ ಹಾಳಾಗುತ್ತದೆ. ನಿಮ್ಮ ಮನೆಯಲ್ಲಿ ಹಳೆಯ ಪತ್ರಿಕೆಗಳು ಹರಿದ ಪುಸ್ತಕಗಳು ಇದ್ದರೆ ಹಿಂದೆಯೇ ಅವನ್ನು ಮನೆಯಿಂದ ಹೊರಗೆ ಹಾಕಿ . ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ನೀಲಿ ಅಥವಾ ಬಿಳಿ ಬಲ್ಬ್ ಗಳನ್ನು ಹಾಕಬೇಕು .

ಅದರಲ್ಲೂ ನೀಲಿ ಬಣ್ಣದ ಬಲ್ಬ್ ಗಳನ್ನು ಹಾಕಿದರೆ ಇನ್ನೂ ಒಳ್ಳೆಯದು .ಒಂದು ವೇಳೆ ಉತ್ತರ ದಿಕ್ಕು ನಿಮ್ಮ ಬೆಡ್ರೂಮ್ ಆಗಿದ್ದರೆ , ಅಲ್ಲಿ ಯಾವುದೇ ಕಾರಣಕ್ಕೂ ನೀಲಿ ಬಲ್ಬ್ ಗಳನ್ನು ಹಾಕಬೇಡಿ . ಅದರ ಬದಲು ಬಿಳಿ ಬಲ್ಬ್ ಗಳನ್ನು ಮಾತ್ರ ಹಾಕಬೇಕು .ಹೀಗೆ ಹಾಕುವುದರಿಂದ ಮನೆಯಲ್ಲಿ ಹಣದ ಅಭಿವೃದ್ಧಿಯಾಗುತ್ತದೆ. ಯಾವುದೇ ರೀತಿಯ ಹಣದ ತೊಂದರೆ ಇದ್ದರೂ , ನಿಮಗೆ ಅಡೆತಡೆಗಳಿಲ್ಲದೆ ಸರಾಗವಾಗಿ ಬರುತ್ತದೆ .

ಅಲ್ಲದೇ ನೀವು ಸಾಲ ಬಾದೆಯಿಂದ ನರಳುತ್ತಿದ್ದರೆ , ಅದರಿಂದ ಬೇಗ ಮುಕ್ತಿ ಹೊಂದಬಹುದು .ಬೆಡ್ರೂಮ್ ಗಳಲ್ಲಿ ನೀಲಿ ಬಲ್ಬ್ ಗಳನ್ನು ಹಾಕುವುದರಿಂದ ಸಂಬಂಧಗಳಲ್ಲಿ ಬಿರುಕು ಮೂಡುತ್ತದೆ.. ವಾಸ್ತು ಶಾಸ್ತ್ರದಲ್ಲಿ ಕನ್ನಡಿಯ ಬಗ್ಗೆ ವಿಶೇಷವಾಗಿ ಹೇಳಲಾಗಿದೆ .ಕನ್ನಡಿಯಲ್ಲಿ ಅನೇಕ ವಾಸ್ತು ದೋಷವನ್ನು ತೆಗೆಯುವ ಶಕ್ತಿ ಇದೆ ಎಂದರೆ , ನಂಬಲೇ ಬೇಕಾಗುತ್ತದೆ .ಮನೆಯ ದಕ್ಷಿಣ ದಿಕ್ಕಿನಲ್ಲಿ ಗೋಡೆ ಮೇಲೆ ಯಾವುದೇ ಕನ್ನಡಿಯನ್ನು ಇಡಬಾರದು . ಹೀಗೆ ಮಾಡುವುದು ತುಂಬಾ ಅಶುಭಕರ . feng shui

ಮನೆಯ ಮುಂದೆ ದೊಡ್ಡ ಕಂಬ ಮರ ಅವಶೇಷಗಳು ಇರುವುದು , ಶುಭಕರ . ಇಂತಹ ಪರಿಸ್ಥಿತಿಯಲ್ಲಿ ಮನೆಯ ಮುಖ್ಯ ದ್ವಾರದ ಬಳಿ ಚೌಕಟ್ಟಿನ ಮುಂದೆ ಒಂದು ದುಂಡಾದ ಆಕಾರದ ಕನ್ನಡಿಯನ್ನು ಹಾಕಬೇಕು .ಹೀಗೆ ಮಾಡುವುದರಿಂದ ಮನೆಗೆ ಬರುವ ಋಣಾತ್ಮಕ ಅಂಶ ಗಳನ್ನೆಲ್ಲ ತಡೆಗಟ್ಟಬಹುದು .ಮನೆ ಈಶಾನ್ಯ ಮೂಲೆಯು ಚಿಕ್ಕದಾಗಿದ್ದರೆ ಅಲ್ಲಿ ದೊಡ್ಡ ಕನ್ನಡಿಯನ್ನು ಹಾಕಬೇಕು .

ಈ ಕಾರಣದಿಂದ ಸ್ಥಳವು ವಿಸ್ತಾರವಾಗಿ ಕಾಣುತ್ತದೆ . ಮತ್ತು ಇದು ವಸ್ತು ದೋಷವನ್ನು ತೆಗೆದುಹಾಕುತ್ತದೆ. ಡ್ರೆಸ್ಸಿಂಗ್ ರೂಮ್ ನ ಉತ್ತರ ಹಾಗೂ ಪೂರ್ವ ಗೋಡೆಯ ಮೇಲೆ ಕನ್ನಡಿಯನ್ನು ಇರಿಸಿ .ಅಂತಹ ಕನ್ನಡಿ ನಿಮಗೆ ಶುಭಕರ ವಾಗಿರುತ್ತದೆ . ಒಂದು ವೇಳೆ ಮಲಗುವ ಕೋಣೆಯಲ್ಲಿ ಕನ್ನಡಿಯನ್ನು ಇಡಬಾರದು. ಒಂದು ವೇಳೆ ಕನ್ನಡಿಯನ್ನು ಇರಿಸಿದರೆ, ಅದನ್ನು ಬಟ್ಟೆಯಿಂದ ಮುಚ್ಚಬೇಕು .

ನಿಮ್ಮ ಮನೆಯಲ್ಲಿ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ದೇವರ ದೀಪವನ್ನು ಹಚ್ಚಬೇಕು .ಮಹಾ ಮೃತ್ಯುಂಜಯ ಜಪ ಗಾಯತ್ರಿ ಜಪ ಮತ್ತು ಓಂಕಾರಗಳನ್ನು ಹೇಳುವುದರಿಂದ ಯಾವುದೇ ದುಷ್ಟ ಶಕ್ತಿಗಳು ಮನೆಯನ್ನು ಪ್ರವೇಶ ಮಾಡುವುದಿಲ್ಲ .ಮನೆಯಲ್ಲಿ ಶಾಂತಿ ನೆಮ್ಮದಿ ಕೂಡ ಹೆಚ್ಚಾಗುತ್ತದೆ .ಅಲ್ಲದೆ ಮನೆಯ ಮುಂದೆ ತುಳಸಿ ಗಿಡವನ್ನು ಇಡಬೇಕು . feng shui

ತುಳಸಿ ಗಿಡದ ಮುಂದೆ ಪ್ರತಿದಿನ ಸಂಜೆ ದೀಪ ಹಚ್ಚುವುದರಿಂದ ಲಕ್ಷ್ಮಿ ಸಂತೃಪ್ತಿ ಯಾಗಿ ಸದಾ ಮನೆಯಲ್ಲಿ ಲಕ್ಷ್ಮಿ ನೆಲೆಸಿರುವಂತೆ ಆಗುತ್ತದೆ .ಕುದುರೆ ಲಾಳವನ್ನು ಹಲವಾರು ಶತಮಾನಗಳಿಂದ ಬಳಸಲಾಗುತ್ತಿದೆ .ಜ್ಯೋತಿಷ್ಯ ಮತ್ತು ಲಾಲ್ ಕಿತಾಬ್ ನಲ್ಲಿ ವಾಸ್ತವದಲ್ಲಿ ಕುದುರೆ ಲಾಳವನ್ನು ಬಹಳ ಮುಖ್ಯ ಎಂದು ವಿವರಿಸಲಾಗಿದೆ . ಅದರಲ್ಲೂ
ಕಪ್ಪು ಕುದುರೆಯ ಲಾಳವು ಮನೆಯ ಹಲವಾರು ವಾಸ್ತು ದೋಷ ತೆಗೆದು ಹಾಕಲು ಸಾಧ್ಯವಾಗುತ್ತದೆ. ಇದಕ್ಕಾಗಿ “ಯು ” ಆಕಾರದ ಕುದುರೆ ಲಾಳವನ್ನು ಮನೆಯಲ್ಲಿ ಹಾಕಬೇಕು .

ಮತ್ತೊಮ್ಮೆ ಇದನ್ನು ಅಂಗಡಿ ಕಚೇರಿಗಳಲ್ಲಿ ಕಾರ್ಖಾನೆಗಳಲ್ಲಿ ಇತ್ಯಾದಿಗಳಲ್ಲಿ ಮೇಲ್ಮುಖವಾಗಿ ಹಾಕುವುದರಿಂದ ನಕಾರಾತ್ಮಕ ಶಕ್ತಿಯಿಂದ ದೂರವಿರಬಹುದು. ಕುದುರೆ ಲಾಳಕ್ಕೆ ಅದರದೇ ಆದ ಮಹತ್ವವಿದ್ದು, ವಾಸ್ತುದೋಷ ಮನೆಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ . ಕುದುರೆ ಲಾಳವನ್ನು ಯಾವ ಸ್ಥಳದಲ್ಲಿ ಹಾಕಬೇಕು , ಮತ್ತು ಅದರಿಂದಾಗುವ ಲಾಭಗಳೇನು ಎಂಬುದನ್ನು ತಿಳಿಯೋಣ .

ಇನ್ನು ಮಲಗುವ ಮುಂಚೆ ವಾರದಲ್ಲಿ ಎರಡು ದಿನಗಳಾದರೂ ಮನೆಯಲ್ಲಿ ಧೂಪ ಕರ್ಪೂರದ ರೂಪ ಹಾಕಬೇಕು . ಇದರಿಂದ ಯಾವುದೇ ನಕಾರಾತ್ಮಕ ಶಕ್ತಿಗಳು ನಿಮ್ಮ ಮನೆಯನ್ನು ಪ್ರವೇಶ ಮಾಡಿದರೆ , ಅದು ಮನೆಯಿಂದ ಹೊರಟು ಹೋಗುತ್ತದೆ .ಅಲ್ಲದೆ ನಿಮ್ಮ ಮನೆಯಲ್ಲಿ ಇರುವ ಗ್ರಹ ದೋಷಗಳು ಕೂಡ ದೂರವಾಗುತ್ತದೆ .ನಾವು ಮಾಡುವ ಸಣ್ಣ ಪುಟ್ಟ ತಪ್ಪುಗಳಿಂದ ಆಗಿ ನಮ್ಮ ಜೀವನದ ಮೇಲೆ feng shui

ಸಾಕಷ್ಟು ಕೆಟ್ಟ ಪ್ರಭಾವವನ್ನು ಬೀರುತ್ತದೆ .ನಾನು ಹೇಳಿರುವ ಕೆಲವೊಂದು ಬದಲಾವಣೆಗಳನ್ನು ನಿಮ್ಮ ಜೀವನದಲ್ಲಿ ಮಾಡಿಕೊಂಡು ಸುಖ , ಶಾಂತಿ, ನೆಮ್ಮದಿಯನ್ನು ಕಾಣಬಹುದು .ಹಾಗೆಯೇ ಮನೆ ಮುಂದೆ ಒಂದು ಮರ ನೆಡುವುದು ಉತ್ತಮ .ಯಾವುದೇ ಶುಭ ಸಮಾರಂಭಗಳನ್ನು ಮಾಡುವವರು ಒಂದು ಸಸಿಯನ್ನು ಉಡುಗೊರೆಯಾಗಿ ಕೊಡಿ . ಹಸಿರೇ ಉಸಿರು ಎಂದು ಹೇಳಲಾಗುತ್ತದೆ .

Leave A Reply

Your email address will not be published.