Ultimate magazine theme for WordPress.

Flax Seed ಅಗಸೆ ಸೇವನೆ ಮಾಡಿದರೆ ಏನಾಗುತ್ತೆ ಗೊತ್ತಾ? 

0 12,702

Flax Seed Health Benefits of Flax Seed in Kannada topten ಸ್ನೇಹಿತರೇ ಈ ಲೇಖನದಲ್ಲಿ ಅಗಸೆ ಬೀಜದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ.ಅಗಸೆ ಬೀಜವನ್ನು ಹೆಚ್ಚಾಗಿ ಉತ್ತರ ಕರ್ನಾಟಕದಲ್ಲಿ ಬಳಕೆ ಮಾಡುತ್ತಾರೆ. ತುಂಬಾ ಜನರಿಗೆ ಇದರ ಉಪಯೋಗ ತಿಳಿದಿಲ್ಲ. ಸಾವಿರಾರು ವರ್ಷಗಳ ಹಿಂದೆ ದಿನನಿತ್ಯ ಆಹಾರವಾಗಿ ಬಳಕೆ ಮಾಡುತ್ತಿದ್ದ ಅಗಸೆ ಬೀಜ ಈಗಿನ ಆಧುನಿಕ ಜೀವನ ಶೈಲಿಯಲ್ಲಿ ಮರತೇ ಬಿಟ್ಟಿದ್ದಾರೆ.

ಅಗಸೆ ಬೀಜದಲ್ಲಿರುವ ಪೌಷ್ಠಿಕಾಂಶಗಳು ಬೇರೆ ಯಾವುದೇ ದಿನನಿತ್ಯ ಬಳಸುವ ಆಹಾರದಲ್ಲಿ ಸಿಗುವುದಿಲ್ಲವೆಂದು ಹೇಳಿದರೇ ತಪ್ಪಾಗುವುದಿಲ್ಲ. ಈ ಅಗಸೆ ಬೀಜವನ್ನು ದಿನನಿತ್ಯ ಬಳಸುವುದರಿಂದ ನಿಮ್ಮ ಆರೋಗ್ಯದಲ್ಲಿ ಅದ್ಬುತ ಬದಲಾವಣೆಯನ್ನು ಕಾಣಬಹುದು. ಪ್ರಪಂಚದಲ್ಲಿ ಪ್ರಮುಖವಾಗಿ ಸಿಗುವ ಆಹಾರಗಳನ್ನು ಪಟ್ಟಿಮಾಡಿದರೇ ಅದರಲ್ಲಿ ಮೊದಲನೇ ಸ್ಥಾನ ಸಿಗುವುದು ಈ ಅಗಸೆ ಬೀಜಕ್ಕೆ. Flax Seed

ಕೇವಲ 15 ಗ್ರಾಂ ನಷ್ಟು ಅಗಸೆ ಬೀಜವನ್ನು ತೆಗೆದುಕೊಂಡರೇ ಅದರಲ್ಲಿ ನೀವು 20 ಕೆ.ಜಿ ಶೇಂಗಾ ಮತ್ತು 10 ಕೆ.ಜಿ ಬಾದಾಮಿ ಹಾಗೂ ಒಂದು ಕೆ.ಜಿ ಮೀನಿನಲ್ಲಿ ಸಿಗುವ ಪೌಷ್ಠಿಕಾಂಶಗಳು ಈ ಅಗಸೆ ಬೀಜದಲ್ಲಿ ಸಿಗುತ್ತದೆ. ಪ್ರತಿದಿನ ಅಗಸೆ ಬೀಜವನ್ನು ಉಪಯೋಗ ಮಾಡಿದರೇ ಈ ಎಲ್ಲಾ ಲಾಭಗಳನ್ನು ಪಡೆಯಬಹುದು. ಅವು ಯಾವುವು ಎಂದರೆ
ಅಗಸೆ ಬೀಜದಲ್ಲಿರುವ ನಾರಿನಾಂಶ ತೂಕ ಇಳಿಕೆಯಲ್ಲಿ ಬಹಳ ಉಪಯೋಗಕರವಾಗಿದೆ ಮತ್ತು ಅಗಸೆ ಬೀಜದಲ್ಲಿ ಪ್ರೋಟಿನ್ ಮತ್ತು ಕಬ್ಬಿಣದ ಅಂಶ ಅಧಿಕ ಪ್ರಮಾಣದಲ್ಲಿದೆ.

ಇದು ದೇಹದ ಕೊಬ್ಬನ್ನು ಕರಗಿಸುತ್ತದೆ. ಪ್ರತಿದಿನ ಅಗಸೆ ಬೀಜವನ್ನು ಸೇವನೆ ಮಾಡುವುದರಿಂದ ಹೃದಯಘಾತ ಆಗುವುದಿಲ್ಲ ಮತ್ತು ಹೃದಯಸಂಬಂಧೀ ಕಾಯಿಲೆಗಳನ್ನು ತಡೆಯುತ್ತದೆ. ಅಗಸೆ ಬೀಜದಲ್ಲಿ ಒಮೆಗಾ 3 ಇರುವುದರಿಂದ ಕಣ್ಣಿನ ಆರೋಗ್ಯಕ್ಕೆ ಉತ್ತಮವಾಗಿದೆ ಮತ್ತು ಇದು ಸ್ತನಾ ಮತ್ತು ರಕ್ತ ಕ್ಯಾನ್ಸರ್ ಅನ್ನು ತಡೆಯುತ್ತದೆ. Flax Seed

ಇದನ್ನು ಹೇಗೆ ಸೇವನೆ ಮಾಡಬೇಕೆಂದರೆ ಚಟ್ನಿ ತರಹ ಮಾಡಿಕೊಂಡು ತಿನ್ನಬಹುದು. ಅಗಸೆ ಬೀಜವನ್ನು ಪುಡಿ ಮಾಡಿ ಮೊಸರಿನಲ್ಲಿ ಕುಡಿಯಬಹುದು ಅಥವಾ ನೀರಿನಲ್ಲಿ ಹಾಕಿ ಕುಡಿಯಬಹುದು. ಆದರೇ ಒಂದು ವಿಷಯ ನೆನಪಿನಲ್ಲಿಟ್ಟುಕೊಳ್ಳಿ ಅಗಸೆ ಬೀಜವನ್ನು ಪುಡಿ ಮಾಡಿದ ನಂತರ 10 ಅಥವಾ 15 ನಿಮಿಷದ ಒಳಗೆ ಸೇವನೆ ಮಾಡಬೇಕು. ಏಕೆಂದರೆ ಇದರಲ್ಲಿರುವ ಕೆಲವೊಂದು ಗುಣಗಳು ಗಾಳಿಯಲ್ಲಿ ಲೀನವಾಗುತ್ತದೆಂದು ತಜ್ಞರು ಹೇಳುತ್ತಾರೆ.

Leave A Reply

Your email address will not be published.