Ultimate magazine theme for WordPress.

Garlic Benefits ಹಲವು ಆರೋಗ್ಯ ಸಮಸ್ಯೆಗಳಿಗೆ ಬೆಳ್ಳುಳ್ಳಿ ದಿವ್ಯ ಔಷಧ

0 493

Garlic Benefits Ayurveda Tips in Kannada ದೇಹವನ್ನು ಹೆಚ್ಚು ಶಾಖದಲ್ಲಿಡಲು ಮತ್ತು ನರಗಳಲ್ಲಿ ಹೆಚ್ಚು ಚೈತನ್ಯ ತುಂಬಿಸಿಕೊಳ್ಳಲು ಬೆಳ್ಳುಳ್ಳಿಯನ್ನು ಪ್ರತಿನಿತ್ಯ ಸೇವಿಸಬೇಕು. ರೋಗಮುಕ್ತರಾದ ಕ್ಷಯರೋಗಿಗಳು ದೀರ್ಘಕಾಲ ಪ್ರತಿದಿನ ಬೆಳ್ಳುಳ್ಳಿಯನ್ನು ಬಳಸುತ್ತಿದ್ದರೇ ರೋಗ ಮರುಕಳಿಸುವ ಭಯವಿರುವುದಿಲ್ಲ. ಬೆಳ್ಳುಳ್ಳಿ ಇಪ್ಪೆ ಅಥವಾ ಹೊಂಗೆಬೀಜ ಮತ್ತು ಅಡುಗೆ ಉಪ್ಪನ್ನು ಅರೆದು ಗಾಯಗಳಿಗೆ ಲೇಪಿಸುವುದರಿಂದ ಗಾಯ ಬಹಳ ಬೇಗ ಗುಣವಾಗುವುದು.

ಚೇಳು ಕುಟುಕಿದ ಜಾಗಕ್ಕೆ ಬೆಳ್ಳುಳ್ಳಿ ತೊಳೆಯನ್ನು ಅರೆದು ಹಚ್ಚುವುದರಿಂದ ಯಾತನೆ ದೂರವಾಗುವುದು. ಕಿವಿ ನೋವಿದ್ದರೆ ಬೆಳ್ಳುಳ್ಳಿಯ ತೊಳೆಯನ್ನು ಹರಳೆಣ್ಣೆಯಲ್ಲಿ ಕರಿದು ನಂತರ ಆರಿದ ಮೇಲೆ ಕಿವಿಗೆ ಒಂದೆರೆಡು ತೊಟ್ಟು ಕಿವಿಗೆ ಬಿಟ್ಟುಕೊಂಡರೆ ಪರಿಹಾರವಾಗುವುದು. ಹಾಲಿನಲ್ಲಿ ಬೆಳ್ಳುಳ್ಳಿ ತೊಳೆಯನ್ನು ಬೇಯಿಸಿ ಪ್ರತಿದಿನ ತಿನ್ನುತ್ತಿದ್ದರೇ ಉಬ್ಬಸ ರೋಗ ನಿವಾರಣೆಯಾಗುತ್ತದೆ. Garlic Benefits

ಬೆಳ್ಳುಳ್ಳಿಯನ್ನು ಬೇಯಿಸಿ ಅದರ ನೀರನ್ನು ದಿನಕ್ಕೆ ಎರಡು ಬಾರಿ ಕುಡಿಯುವುದರಿಂದ ಗರ್ಭಾಶಯದ ನೋವು ಪರಿಹಾರವಾಗುವುದು. ಪ್ರತಿನಿತ್ಯ ಬೆಳ್ಳುಳ್ಳಿಯನ್ನು ಬಳಸುತ್ತಿದ್ದರ ಜಠರದಲ್ಲಿ ವಾಯು ಸೇರುವುದಿಲ್ಲ. ಜೊತೆಗೆ ರಕ್ತದ ವೃದ್ಧಿಯಾಗುತ್ತದೆ. ದೀರ್ಘಕಾಲದ ಕೆಮ್ಮು ಮತ್ತು ನೆಗಡಿಯಿಂದ ಬಳಲುತ್ತಿರುವವರು ಬೆಳ್ಳುಳ್ಳಿಯನ್ನು ಪ್ರತಿದಿನ ಬಳಸಿದರೆ ಕಾಯಿಲೆ ದೂರವಾಗುವುದು. Garlic Benefits

ಬಿಸಿ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಅಜೀರ್ಣ ಮತ್ತು ಹೊಟ್ಟೆ ಉಬ್ಬರ ದೂರವಾಗುತ್ತದೆ. ಬೆಳ್ಳುಳ್ಳಿಯನ್ನು ಪ್ರತಿನಿತ್ಯ ಬಳಸುವುದರಿಂದ ಪಚನಶಕ್ತಿ ಹೆಚ್ಚಿಸಿ ವೀರ್ಯವನ್ನು ವೃದ್ಧಿಸುತ್ತದೆ. ಇದರಿಂದ ದಮ್ಮು, ಕೆಮ್ಮು, ಉಬ್ಬಸದಂತಹ ಕಾಯಿಲೆಗಳಿಗೆ ದಿವ್ಯ ಔಷಧಿಯಾಗಿದೆ. ಬಾಣಂತಿಯರು ಬೆಳ್ಳುಳ್ಳಿಯ ಚೂರುಗಳನ್ನು ಹತ್ತಿಯಲ್ಲಿ ಸುತ್ತಿ ಕಿವಿಯಲ್ಲಿ ಇಟ್ಟುಕೊಂಡರೆ ಶೀತದಿಂದ ಕಿವಿ ಕಿವುಡಾಗುವ ಸಾಧ್ಯತೆ ಇರುವುದಿಲ್ಲ ಮತ್ತು ವಾತನಾಶಕವಾಗುತ್ತದೆ. ಕ್ಷಯರೋಗವನ್ನು ನಿವಾರಣೆ ಮಾಡುತ್ತದೆ. ಕಾಲರಾಕ್ಕೆ ಇದರ ಸೇವನೆಯಿಂದ ಹೆಚ್ಚು ಪ್ರಯೋಜನಕಾರಿಯಾಗಿದೆ. Garlic Benefits

Leave A Reply

Your email address will not be published.