Ultimate magazine theme for WordPress.

Hair ಕೂದಲಿನ ಆರೋಗ್ಯಕ್ಕೆ ಮೆಂತ್ಯ ಎಷ್ಟು ಒಳ್ಳೆಯ ಔಷಧಿ

0 1,969

Hair Growth health tips kannadatop ಹಲೋ ಸ್ನೇಹಿತರೇ ಇಂದಿನ ಲೇಖನದಲ್ಲಿ ಕೂದಲಿನ ಆರೋಗ್ಯಕ್ಕೆ ಮೆಂತ್ಯ ಎಷ್ಟು ಒಳ್ಳೆಯ ಔಷಧಿಯಾಗಿ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಸಿಕೊಡುತ್ತೇವೆ. ಮೆಂತ್ಯದಲ್ಲಿ ವಿಟಮಿನ್, ಕ್ಯಾಲ್ಸಿಯಂ, ಜಿಂಕ್, ಮೆಗ್ನೇಷಿಯಂ, ಪ್ರೋಟಿನ್ ಅಂಶ, ಫೈಬರ್ ಅಂಶ, ಐರನ್ ಅಂಶ ಇಷ್ಟೆಲ್ಲಾ ಪೋಷಕಾಂಶಗಳು ಇವೆ. ಮೆಂತ್ಯವನ್ನು ಅದ್ಭುತವಾದಂತಹ ಕೇಶ ಸಂಜೀವಿನಿ ಎಂದು ಹೇಳಬಹುದು.

ಕೂದಲಿಗೆ ಬೇಕಾಗಿರುವ ಎಲ್ಲಾ ಪೋಷಕಾಂಶಗಳು ಮತ್ತು ಕೂದಲಿನ ಬೆಳವಣಿಗೆಗೆ ಬೇಕಾಗಿರುವಂತಹ ಮತ್ತು ಮೆದುಳಿಗೆ ರೋಮ ರಂಧ್ರಗಳ ಅಸಮತೋಲನವನ್ನು ಬ್ಯಾಲೆನ್ಸ್ ಮಾಡುವಂತಹ ಎಲ್ಲಾ ಪೋಷಕ ತತ್ವಗಳು ಹಾಗೂ ಔಷಧೀ ಸತ್ವಗಳು ಮೆಂತ್ಯದಲ್ಲಿ ಕಾಣಬಹುದು. ಕೂದಲಿನ ಸಮಸ್ಯೆಗೆ ಮೆಂತ್ಯ ಹೇರ್ ಪ್ಯಾಕ್ ಕೂಡ ಹಾಕಿಕೊಳ್ಳಬಹುದು ಮತ್ತು ಮೆಂತ್ಯ ಸೇವನೆಯನ್ನು ಕೂಡ ಮಾಡಬಹುದು. Hair Growth

ಇದು ನಮ್ಮ ಕೂದಲಿಗೆ ಒಳ್ಳೆಯ ಶಕ್ತಿಯನ್ನು ಕೊಡುತ್ತದೆ. ಮೆಂತ್ಯದ ಸೇವನೆಯನ್ನು ಹೇಗೆ ಮಾಡುವುದೆಂದರೆ ರಾತ್ರಿ ಮಲಗುವ ಮೊದಲು ಒಂದು ಸ್ಪೂನ್ ನಷ್ಟು ಮೆಂತ್ಯವನ್ನು ತೊಳೆದು ನೆನೆಸಿ ಬೆಳಿಗ್ಗೆ ಎದ್ದು ಆ ಮೆಂತ್ಯವನ್ನು ಅಗಿದು ಅಗಿದು ತಿನ್ನುವುದರಿಂದ ಕೂದಲಿನ ಸಮಸ್ಯೆಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಕೂದಲು ನೆನೆಸಿದ ಮೆಂತ್ಯದಿಂದ ಎಲ್ಲಾ ಪೋಷಕಾಂಶಗಳನ್ನು ಪಡೆದುಕೊಳ್ಳುತ್ತದೆ. Hair Growth

ಆಂತರಿಕವಾಗಿ ಕೂದಲು ಸದೃಢವಾಗುತ್ತದೆ. ಅಜೀರ್ಣ, ಮಲಬದ್ಧತೆಯೇ ಕೂದಲು ಉದುರಲು ಪ್ರಧಾನ ಕಾರಣವಾಗಿರುವುದರಿಂದ ಮತ್ತು ಮಾನಸಿಕ ಒತ್ತಡಗಳು ಕೂದಲು ಉದುರಲು ಕಾರಣವಾಗಿರುವುದರಿಂದ ಮೆಂತ್ಯ ಸೇವನೆ ಮಾಡುವುದರಿಂದ ಅಜೀರ್ಣ, ಮಲಬದ್ಧತೆ, ಮಾನಸಿಕ ಒತ್ತಡಗಳು ನಿವಾರಣೆಯಾಗುತ್ತದೆ.
ಮೆಂತ್ಯ ಪ್ಯಾಕ್ ಅದನ್ನು ಹೇಗೆ ಮಾಡುವುದೆಂದರೆ

ಮೆಂತ್ಯವನ್ನು ನೆನೆಯಿಸಿ ಮಿಕ್ಸಿ ಗೆ ಹಾಕಿ ಅದರ ಪೇಸ್ಟ್ ಅನ್ನು ಚೆನ್ನಾಗಿ ಕೂದಲಿಗೆ ಪ್ಯಾಕ್ ಹಾಕಿ ಅದನ್ನು ಒಂದು ಗಂಟೆ ಬಿಟ್ಟು ಅಂಟುವಾಳದ ಕಾಯಿಯಿಂದ ತಲೆಯನ್ನು ತೊಳೆಯುವುದರಿಂದ ಕೂದಲು ಮಧ್ಯದಲ್ಲಿ ಸೀಳುವುದಿಲ್ಲ, ನೆರೆಕೂದಲು ಆಗುವುದಿಲ್ಲ. ದಟ್ಟವಾಗಿ ಕೂದಲು ಬೆಳೆಯುತ್ತದೆ ಮತ್ತು ಹೊಸ ಹೊಸ ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ಕೂದಲು ಮೃದುವಾಗಿ ದಟ್ಟವಾಗಿ ಬೆಳೆಯಲು Hair Growth

ಈ ಮೆಂತ್ಯ ಶಕ್ತಿಯನ್ನು ತುಂಬುತ್ತದೆ. ಈ ಕಾರಣದಿಂದ ಮೆಂತ್ಯವನ್ನು ಕೂದಲಿನ ಬೆಳವಣಿಗೆಗೆ ಸಂಜೀವಿನಿ ಎಂದು ಹೇಳಬಹುದು. ಕೂದಲಿಗೆ ಪ್ಯಾಕ್ ಹಾಕಬೇಕಾದರೇ ಬೆಳಿಗ್ಗೆ ಹಾಕಿದರೇ ಉತ್ತಮ. ಮೆಂತ್ಯವನ್ನು ಸೇವನೆ ಮಾಡುವುದಾದರೇ ಬೆಳಿಗ್ಗೆ ಸಮಯವೇ ಉತ್ತಮವಾಗಿದೆ. ಯಾವುದೇ ಮನೆಮದ್ದಿನಿಂದ ಒಳ್ಳೆಯ ಫಲಿತಾಂಶ ಪಡೆದುಕೊಳ್ಳಬೇಕಾದರೇ ಕನಿಷ್ಠ ಒಂದು ತಿಂಗಳು ಮಾಡಲೇಬೇಕು ಇಲ್ಲವೇ ಮೂರು ತಿಂಗಳು ಮಾಡಿಕೊಳ್ಳಬೇಕು ಆಗ ಮಾತ್ರ ಆ ಮನೆಮದ್ದು ನಿಮಗೆ ಒಳ್ಳೆಯ ಫಲಿತಾಂಶವನ್ನು ನೀಡುತ್ತದೆ.Hair Growth

Leave A Reply

Your email address will not be published.