Ultimate magazine theme for WordPress.

Health Benefits ದಿನಕ್ಕೆ ಒಂದರಂತೆ, ಚಿಕ್ಕು ಹಣ್ಣನ್ನು 15 ದಿನ

0 661

Health Benefits of Chiku Sapota ದಿನಕ್ಕೆ ಒಂದರಂತೆ, ಚಿಕ್ಕು ಹಣ್ಣನ್ನು 15 ದಿನ ತಿಂದರೆ ಏನಾಗುತ್ತೆ ಗೊತ್ತಾ?ಚಿಕ್ಕು ಹಣ್ಣನ್ನು ಕೆಲವರು ಸಪೋಟ ಅಂತಲೂ ಹೇಳುತ್ತಾರೆ. ಇದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳೋಣ. ಸಾಮಾನ್ಯವಾಗಿ ಯಾವುದೇ ಹಣ್ಣುಗಳನ್ನು ಬೆಳೆಯಲು ಅದಕ್ಕೆ ಬಹಳಷ್ಟು ರಾಸಾಯನಿಕ ಮತ್ತು ಕೀಟನಾಶಕಗಳನ್ನು ಬಳಸುತ್ತಾರೆ. ಆದರೆ ಈ ಚಿಕ್ಕು ಹಣ್ಣು ಅತ್ಯಂತ ಕಡಿಮೆ ರಾಸಾಯನಿಕ ಮತ್ತು ವಿರಳವಾಗಿ ಕೀಟನಾಶಕಗಳ ಬಳಕೆಯಿಂದ ಬೆಳೆಯುವ ಹಣ್ಣಾಗಿದೆ.

ಚೆನ್ನಾಗಿ ಮಾಗಿದ ಹಣ್ಣು ಬಹಳ ಸಿಹಿ ಅಷ್ಟೇ ರುಚಿಕರ ಕೂಡ ಆಗಿರುತ್ತದೆ. ಮತ್ತು ಆಹಾರ ತಜ್ಞರು ಇದನ್ನು ಪೌಷ್ಟಿಕಾಂಶಗಳ ಕಣಜ ಎಂದೇ ಹೇಳುತ್ತಾರೆ. 100 ಗ್ರಾಂ ಚಿಕ್ಕು ಹಣ್ಣಿನಲ್ಲಿ 83 ಕ್ಯಾಲೋರಿಗಳಿವೆ. ಇದು ಬಾಳೆ ಹಣ್ಣು ಮತ್ತು ಸಿಹಿಗೆಣಸಿಗೆ ಸಮವಾಗಿದ್ದು ಮತ್ತು ನೂರು ಗ್ರಾಂ ಚಿಕ್ಕು ಹಣ್ಣು ತಿಂದರೆ ದೇಹಕ್ಕೆ 25 ಗ್ರಾಂ ಸಿ ಜೀವ ಸತ್ವ ಲಭಿಸುತ್ತದೆ. ಮತ್ತು ವಯಸ್ಸಾದ ಮೇಲೆ ಕಣ್ಣಿನ ದೃಷ್ಟಿದೋಷ ಕಡಿಮೆಯಾಗುತ್ತದೆ. Health Benefits

ಸಪೋಟ ಹಣ್ಣಿನಲ್ಲಿ ವಿಟಮಿನ್ ಎ ಅಧಿಕವಾಗಿರುತ್ತದೆ. ಕೆಲವು ಸಂಶೋಧನೆಗಳ ಪ್ರಕಾರ ವಿಟಮಿನ್ ಎ ವಯಸ್ಸಾದ ಮೇಲೆ ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ. ಆದ್ದರಿಂದ ಒಳ್ಳೆಯ ದೃಷ್ಟಿಯನ್ನು ಕಾಪಾಡಿಕೊಳ್ಳಲು ಚಿಕ್ಕು ಹಣ್ಣನ್ನು ತಿನ್ನಬೇಕು. ರಾತ್ರಿ ಊಟದ ನಂತರ ಚಿಕ್ಕು ಹಣ್ಣನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಿ.

ಇದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ ಮತ್ತು ಇದರಲ್ಲಿ ವಿಟಮಿನ್ ಎ ಮತ್ತು ಬಿ ಗಳು ದೇಹದ ಒಳಗಿನ ಲೋಳೆಯ ಒಳಪದರದ ಆರೋಗ್ಯವನ್ನು ಕಾಪಾಡುವುದಲ್ಲದೆ ಚರ್ಮದ ರಚನೆಯ ಆರೋಗ್ಯವನ್ನು ಸಹ ಕಾಪಾಡುತ್ತದೆ. ಮತ್ತು ಜ್ವರ ಬಂದವರಿಗೆ ಬಾಯಿ ಒಣಗುವುದನ್ನು ತಡೆಯಲು ಒಂದು ಹೋಳು ಚಿಕ್ಕು ಹಣ್ಣನ್ನು ತಿನ್ನುವುದರಿಂದ ಸುಲಭವಾಗಿತ್ತದೆ. ನಿದ್ರಾಹೀನತೆ, ಖಿನ್ನತೆ, ನರ ದೌರ್ಬಲ್ಯ ಮತ್ತು ದೀರ್ಘಕಾಲದಿಂದ ಕಾಡುತ್ತಿರುವ ಶೀತ, ಶಾಶ್ವನಾಳದ ಕೆಮ್ಮು, ಕಫಗಳನ್ನು ಗುಣಪಡಿಸಲು ಇದು ಒಂದು ಔಷಧಿಯಾಗಿ ಕೆಲಸ ಮಾಡುತ್ತದೆ.

ಮತ್ತು ಚಿಕ್ಕು ಹಣ್ಣಿನ ಎಲೆಗಳಿಂದ ತಯಾರಿಸಿದ ಕಷಾಯದಿಂದ ಬಾಯಿಯನ್ನು ಮುಕ್ಕಳಿಸುವುದರಿಂದ ಬಾಯಿಯಲ್ಲಿರುವ ಹುಣ್ಣುಗಳು ಗುಣವಾಗುತ್ತದೆ. ಇದರಲ್ಲಿರುವ ಪ್ರಬಲ ನಿದ್ರಾಜನಕ ಉದ್ರೇಕಗೊಂಡಿರುವ ನರಗಳನ್ನು ಶಾಂತಗೊಳಿಸಿ ಒತ್ತಡವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ನಿದ್ರಾಹೀನತೆ, ಆತಂಕ ಮತ್ತು ಖಿನ್ನತೆಯಿಂದ ಒದ್ದಾಡುತ್ತಿರುವ ವ್ಯಕ್ತಿಗಳಿಗೆ ಇದು ಬಹಳ ಒಳ್ಳೆಯದು. Health Benefits

ಹಾಗೂ ಗರ್ಭಿಣಿಯರನ್ನು ಕಾಡುವ ವಾಂತಿ, ತಲೆಸುತ್ತು, ಆಯಾಸ ತಡೆಯಲು ಬೆಳಿಗ್ಗೆ ಇಷ್ಟವಾದಷ್ಟು ಚಿಕ್ಕು ಹಣ್ಣನ್ನು ತಿನ್ನಬಹುದು. ಇದನ್ನು ತಿಂದರೆ ಹಾಲುಣಿಸುವ ತಾಯಂದಿರ ಎದೆ ಹಾಲು ಕೂಡ ಹೆಚ್ಚುತ್ತದೆ. ಆರು ತಿಂಗಳು ದಾಟಿದ ಮಕ್ಕಳಿಗೆ ಅದು ದೇಹದ ಬೆಳವಣಿಗೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ಪೂರೈಸುತ್ತದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಅಗ್ಗದ ಬೆಲೆಯಲ್ಲಿ ಸಿಗುವ ಚಿಕ್ಕು ಹಣ್ಣಿನಿಂದ ನಮ್ಮ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ.

Leave A Reply

Your email address will not be published.