Ultimate magazine theme for WordPress.

Home Remedies ಗ್ಯಾಸ್ಟ್ರಿಕ್‌ನ ಲಕ್ಷಣಗಳೇನು? ಏನು ಮಾಡಬೇಕು? 

0 487

Home Remedies For Gastric Problems ಸಾಮಾನ್ಯವಾಗಿ ಬರುವ ಆರೋಗ್ಯ ಸಮಸ್ಯೆ ಎಂದರೆ ಗ್ಯಾಸ್ಟ್ರಿಕ್. ಅದರ ಲಕ್ಷಣಗಳೇನು? ಯಾವ ರೀತಿಯಾದ ಸಿಂಟಮ್ಸ್ ಗಳು ಇರುತ್ತದೆ? ಇದು ಯಾವ ಕಾರಣಕ್ಕೆ ಬರುತ್ತದೆ? ಗ್ಯಾಸ್ಟ್ರಿಕ್ ಬಂದಾಗ ಯಾವ ರೀತಿಯಾದ ಪರೀಕ್ಷೆಗಳು ಬೇಕಾಗುತ್ತದೆ? ಇದಕ್ಕೆ ಚಿಕಿತ್ಸೆ ಏನು ಮತ್ತು ಶಾಶ್ವತವಾಗಿ ಬರದೇ ಇರಲು ಏನು ಮಾಡಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

ಗ್ಯಾಸ್ಟ್ರಿಕ್ ನ ಲಕ್ಷಣಗಳೆಂದರೆ ನಮ್ಮ ಹೊಟ್ಟೆಯ ಹೊಕ್ಕಳಿನ ಸ್ವಲ್ಪ ಮೇಲೆ ಸ್ವಲ್ಪ ಊತ ಬರಬಹುದು. ಸ್ವಲ್ಪ ನೋವು ಬರಬಹುದು. ಕೆಲವರಿಗೆ ಸ್ವಲ್ಪ ಊಟ ಮಾಡಿದರೂ ಹೊಟ್ಟೆ ಉಬ್ಬರವಾಗುವುದು, ಪದೇ ಪದೇ ತೇಗು ಬರುವುದು, ಈ ಲಕ್ಷಣಗಳು ಇದ್ದರೇ ಗ್ಯಾಸ್ಟ್ರಿಕ್ ಎಂದು ಹೇಳುತ್ತೇವೆ. ಗ್ಯಾಸ್ಟ್ರಿಕ್ ಮನುಷ್ಯನಿಗೆ ಏಕೆ ಬರುತ್ತದೆ ಎಂದರೆ ತುಂಬಾ ಅವಸರ, ಒತ್ತಡ, ನಿದ್ರಾಹೀನತೆ, Home Remedies

ಆತಂಕ ಇವೆಲ್ಲದರಿಂದ ಗ್ಯಾಸ್ಟ್ರಿಕ್ ಅಂಶ ಹೆಚ್ಚು ಉತ್ಪಾದನೆಯಾಗುತ್ತದೆ. ತುಂಬಾ ಎಣ್ಣೆ ಪದಾರ್ಥಗಳ ಸೇವನೆ, ಕರಿದ ಪದಾರ್ಥ, ಮಾಂಸ ಆಹಾರ ಸೇವನೆ, ಖಾರ ಆಹಾರಪದಾರ್ಥ, ಸರಿಯಾದ ಆಹಾರ ಕ್ರಮವಿಲ್ಲದೇ ಇರುವುದು ಇದರಿಂದ ನಮ್ಮ ಜೀರ್ಣಕ್ರಿಯೆ ನಿಧಾನಗತಿಯಲ್ಲಿ ಆಗುತ್ತದೆ ಮತ್ತು ನಮ್ಮ ಹೊಟ್ಟೆಯಲ್ಲಿ ಬ್ಯಾಕ್ಟೀರಿಯಾ ಇರುತ್ತದೆ, ಇದು ನಮ್ಮ ಹೊಟ್ಟೆಯ ಲೈನಿಂಗ್ ಅನ್ನು ತೊಂದರೆಗೀಡುಮಾಡುತ್ತದೆ. Home Remedies

ಅಲ್ಲ ಡ್ಯಾಮೇಜ್ ಆದರೇ ಗ್ಯಾಸ್ಟ್ರಿಕ್ ಆಗುತ್ತದೆ ಅಥವಾ ನಮ್ಮ ಆಸಿಡ್ ಲೆವೆಲ್ಸ್ ಹೆಚ್ಚಾಗುತ್ತದೆ. ಆಗ ಅಲ್ಸರ್ ಕೂಡ ಉಂಟಾಗಬಹುದು. ಆಗ ಗ್ಯಾಸ್ಟ್ರಿಕ್ ಸಮಸ್ಯೆಗಳು ಬರುತ್ತವೆ. ಇಂತಹ ಸಮಸ್ಯೆಗಳಿಗೆ ಆಸ್ಪತ್ರೆಗೆ ಹೋಗುವ ಬದಲು ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಬೆಳಿಗ್ಗೆ ಎದ್ದ ತಕ್ಷಣ ಒಂದು ಲೀಟರ್ ನಷ್ಟು ಬಿಸಿನೀರನ್ನು ಕುಡಿಯಬೇಕು, ನಂತರ ಬೆಳಗ್ಗಿನ ಉಪಹಾರವನ್ನು 8 ರಿಂದ 9 ರ ಒಳಗೆ ತೆಗೆದುಕೊಳ್ಳಿ, ಮಧ್ಯಾಹ್ನ 2 ಗಂಟೆಯ ವೇಳೆಗೆ ಊಟ ಮುಗಿಸಿ, Home Remedies

ರಾತ್ರಿ 7 ಗಂಟೆಗೆ ಊಟವನ್ನು ಮುಗಿಸಿ ಹೀಗೆ ಮಾಡುವುದರಿಂದ ನಮ್ಮ ಜೀರ್ಣಾಂಗವ್ಯೂಹಕ್ಕೆ ರೆಸ್ಟ್ ಸಿಗುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆ ಇರುವುದಿಲ್ಲ. ಖಾರ, ಅತೀಯಾದ ಹುಳಿ, ಫಿಜಾ ದಂತಹ ಆಹಾರ ಪದಾರ್ಥಗಳ ಸೇವನೆಯನ್ನು ಆದಷ್ಟು ನಿಲ್ಲಿಸಬೇಕು. ತುಂಬಾ ಮಾಂಸಹಾರ ಸೇವನೆ ಮಾಡುತ್ತಿದ್ದರೇ ಅದನ್ನು ಹಿತಿಮಿತಿಯಾಗಿ ಸೇವನೆ ಮಾಡಬೇಕು.

ಮೊದಲು ಇದನ್ನು ನಮ್ಮ ಆಹಾರದಲ್ಲಿ ಅಳವಡಿಸಿಕೊಳ್ಳಬೇಕು. ಇದೆಲ್ಲಾವನ್ನು ಅನುಸರಿಸಿದ ಮೇಲೂ ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆಯಾಗಿಲ್ಲವೆಂದಾಗ ಮಾತ್ರ ಡಾಕ್ಟರ್ ಅನ್ನು ಭೇಟಿ ಮಾಡಬಹುದು. ಡಾಕ್ಟರ್ ಸಲಹೆ ಮೇರೆಗೆ ಔಷಧಿಗಳನ್ನು ತೆಗೆದುಕೊಂಡು ಗ್ಯಾಸ್ಟ್ರಿಕ್ ಕಡಿಮೆ ಮಾಡಿಕೊಳ್ಳಬಹುದು. ಯಾರಿಗೆ ಕಡಿಮೆ ಆಗುವುದಿಲ್ಲವೋ ಅಂತಹವರಿಗೆ ಎಂಡೋಸ್ಕೋಪಿ ಮಾಡಿ ಗ್ಯಾಸ್ಟ್ರಿಕ್ ಸಮಸ್ಯೆಯನ್ನ ಗುರುತಿಸುತ್ತಾರೆ.

ಅದಕ್ಕೆ ಹೊಂದುವ ಔಷಧಿಯನ್ನು ಕೊಟ್ಟು ಗ್ಯಾಸ್ಟ್ರಿಕ್ ಸಮಸ್ಯೆಯನ್ನ ವೈದ್ಯರು ಕ್ಲಿಯರ್ ಮಾಡುತ್ತಾರೆ.
ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹೋಗಲಾಡಿಸುವುದು ನಮ್ಮ ಕೈನಲ್ಲಿಯೇ ಇದೆ ಅದೇನೆಂದರೆ ಸರಿಯಾದ ಸಮಯಕ್ಕೆ ಆಹಾರವನ್ನು ಸೇವನೆ ಮಾಡಬೇಕು. ರಾತ್ರಿಯ ಊಟವನ್ನು ಬಹಳ ಕಡಿಮೆ ತಿನ್ನಬೇಕು. ಗ್ಯಾಸ್ಟ್ರಿಕ್ ಸಮಸ್ಯೆ ಬರದಾಹಾಗೇ ಮಾಡಲು ಮೊದಲು ಮಾಡಬೇಕಾಗಿದ್ದು ಡಯಟ್ . ಊಟದ ಜೊತೆಗೆ ಹಣ್ಣು, ತರಕಾರಿಗಳನ್ನು ಹೆಚ್ಚು ಸೇವನೆ ಮಾಡಿ. ರಾತ್ರಿ ಹಸಿವು ಆಗಿತ್ತೆಂದರೆ ಸ್ವಲ್ಪ ಮಜ್ಜಿಗೆಯನ್ನು ಕುಡಿಯಬಹುದು. Home Remedies

ಊಟವನ್ನು ನಿಧಾನವಾಗಿ ಅಗಿದು ತಿನ್ನಬೇಕು. ಪ್ರತಿದಿನ ವ್ಯಾಯಾಮ ಅಥವಾ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ ಇದರಿಂದ ನಮ್ಮ ಜೀರ್ಣಾಂಗವ್ಯೂಹ ಸರಿಯಾಗಿ ಕೆಲಸ ಮಾಡುತ್ತದೆ. ನಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಸಂಗೀತ ಕೇಳುವುದು ಅಥವಾ ಮೆಡಿಟೇಷನ್ ಮಾಡುವುದು ಇಂತಹವುಗಳ ಕಡೆ ಗಮನ ಹರಿಸಬೇಕು. ಜೊತೆಗೆ ನಮ್ಮ ಕೈ ಕಾಲುಗಳನ್ನ ಶುಚಿಯಾಗಿ ಇಟ್ಟುಕೊಳ್ಳುವುದರಿಂದ ನಮಗೆ ಇನ್ ಫೆಕ್ಷನ್ಸ್ ಗಳು ಬರುವುದಿಲ್ಲ. ಯಾವುದೇ ಆಹಾರ ಸೇವನೆ ಮಾಡಬೇಕಾದರೂ ಕೈಗಳನ್ನು ಸರಿಯಾಗಿ ತೊಳೆದುಕೊಳ್ಳಬೇಕು. ಇವುಗಳನ್ನ ಮಾಡುವುದರಿಂದ ಗ್ಯಾಸ್ಟ್ರಿಕ್ ಅನ್ನು ತಡೆಗಟ್ಟಬಹುದು.

Leave A Reply

Your email address will not be published.