Ultimate magazine theme for WordPress.

honey ಜೇನುತುಪ್ಪ ತಿನ್ನುವವರು ಯಾವುದೇ ಕಾರಣಕ್ಕೂ

0 599

honey health tips in kannada ನಾನು ಈ ಲೇಖನದಲ್ಲಿ ಜೇನುತುಪ್ಪ ತಿನ್ನುವವರು ಯಾವುದೇ ಕಾರಣಕ್ಕೂ ಈ ತಪ್ಪು ಮಾಡಬಾರದು ಎಂಬುದನ್ನು ನೋಡೋಣ . ಕೆಲವರು ತೂಕ ಇರುವವರು ತಮ್ಮ ತೂಕವನ್ನು ಇಳಿಸಲು ಬಿಸಿ ನೀರಿನ ಜೊತೆಗೆ ಜೇನುತುಪ್ಪವನ್ನು ಬೆರೆಸಿ ಕುಡಿಯುವ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಹೀಗೆ ಕುಡಿಯುವುದರಿಂದ , ಆಯುರ್ವೇದದಲ್ಲಿ ಏನು ಹೇಳಿದ್ದಾರೆ ಎಂಬುದನ್ನು ಲೇಖನದಲ್ಲಿ ನೋಡೋಣ .

ಚರಕ ಸಂಹಿತೆ ಎನ್ನುವ ಆಯುರ್ವೇದದ ಪುಸ್ತಕದಲ್ಲಿ ಆರೋಗ್ಯಕರ ಜೀವನ ಶೈಲಿ , ಮತ್ತು ಔಷಧಿಗಳ ಬಗ್ಗೆ ತಿಳಿಸಿದ್ದಾರೆ . ಈ ಮಾಹಿತಿಯ ಪ್ರಕಾರ ಬಿಸಿನೀರಿನ ಜೊತೆಗೆ ಜೇನುತುಪ್ಪವನ್ನು ಬೆರೆಸಿ ಯಾವುದೇ ಕಾರಣಕ್ಕೂ ಕುಡಿಯಬಾರದು. ಜೇನು ತುಪ್ಪದಲ್ಲಿ ಇರುವ ಪೌಷ್ಠಿಕ ಆಹಾರಗಳು ನಾಶವಾಗುತ್ತವೆ . ಜೇನುತುಪ್ಪದಲ್ಲಿ ನೈಸರ್ಗಿಕವಾಗಿ ಸಕ್ಕರೆ ಪ್ರಮಾಣ ,

ಖನಿಜಗಳು , ಉತ್ಕರ್ಷಣ ನಿರೋಧಕ , ಜೀವಸತ್ವ, ಗ್ಲೂಕೋಸ್ ಆಕ್ಸಿಡೆಂಟ್, ಡಯಾಕ್ಸೈಡ್ ಇವೆಲ್ಲಾ ಪೌಷ್ಟಿಕಾಂಶಗಳು ಸರಿಯಾಗಿ ನಮ್ಮ ದೇಹಕ್ಕೆ ಸಿಗುವುದಿಲ್ಲ . ಜೇನುತುಪ್ಪ ಬಿಸಿ ಆದಾಗ ಅದರ ಲಕ್ಷಣಗಳಲ್ಲಿ ಬದಲಾವಣೆ ಕಾಣಿಸುತ್ತದೆ . ಅದಕ್ಕಾಗಿ ಆಯುರ್ವೇದದಲ್ಲಿ ಜೇನುತುಪ್ಪವನ್ನು ಬಿಸಿ ನೀರಿನ ಜೊತೆಗೆ ಸೇವಿಸಬಾರದು, ಇದರಿಂದ ನಮ್ಮ ಆರೋಗ್ಯದ ಮೇಲೆ ದುಷ್ಟರಿಣಾಮಗಳು ಬೀರುತ್ತವೆ .honey

ಇನ್ನು ಜೇನುತುಪ್ಪವನ್ನು ಕೆಲವೊಂದು ಆಹಾರಗಳ ಜೊತೆಗೆ ಸೇರಿಸಿ ತಿನ್ನುವುದರಿಂದ ,ಅದು ಕೂಡ ವಿರುದ್ಧ ಆಹಾರವಾಗುತ್ತದೆ ಎಂದು ಹೇಳಿದ್ದಾರೆ . ಜೇನು ತುಪ್ಪವನ್ನು ತುಪ್ಪದ ಜೊತೆಗೆ ಮಿಶ್ರಣ ಮಾಡಿ ತಿನ್ನಬಾರದು .ಯಾವುದೇ ರೀತಿ ಎಣ್ಣೆ, ಬೆಣ್ಣೆ ,ಮೊಸರು ತಿಂದ ನಂತರ ಜೇನುತುಪ್ಪವನ್ನು ತಿನ್ನಬೇಡಿ .ಇದು ವಿರುದ್ಧ ಆಹಾರವಾಗಿದೆ .

ಇನ್ನು ಮೀನು ಮತ್ತು ಮಾಂಸವನ್ನು ತಿಂದಾಗ ಕೂಡ ಜೇನುತುಪ್ಪವನ್ನು ಸೇರಿಸಬೇಡಿ . ಮೀನು ಮತ್ತು ಮಾಂಸವನ್ನು ತಿಂದಾಗ ಎರಡು ಮೂರು ಗಂಟೆಗಳ ಕಾಲ ಬಿಟ್ಟು ಜೇನುತುಪ್ಪವನ್ನು ತಿನ್ನಿ . ಇನ್ನು ಟೀ ಕಾಫಿ ಜೊತೆಗೆ ಇತ್ತೀಚೆಗೆ ಜೇನುತುಪ್ಪವನ್ನು ಮಿಶ್ರಣ ಮಾಡಿಕೊಂಡು ಸೇವಿಸುತ್ತಾರೆ . ಇದು ಕೂಡ ಸಂಪೂರ್ಣವಾಗಿ ವಿರುದ್ಧವಾಗಿದೆ . ಯಾವುದೇ ಕಾರಣಕ್ಕೂ ಟೀ ,

ಕಾಫಿ ಜೊತೆಗೆ ಮತ್ತು ಹಾಲಿನ ಜೊತೆಗೆ ಬೆರೆಸಿಕೊಂಡು ಕುಡಿಯಬೇಡಿ . ಇದರಿಂದ ದೇಹದಲ್ಲಿ ಉಷ್ಣ ಜಾಸ್ತಿ ಆಗುತ್ತದೆ , ಕಾಯಿಲೆಗಳಿಗೆ ಅವಕಾಶ ಮಾಡಿಕೊಡುತ್ತದೆ . ಇವೆಲ್ಲ ಆಹಾರಗಳನ್ನು ಜೇನುತುಪ್ಪದ ಜೊತೆಗೆ ಮಿಶ್ರಣ ಮಾಡಿಕೊಂಡು ಸೇವಿಸಬಾರದು . ಜೇನುತುಪ್ಪವನ್ನು ತಿನ್ನುವುದಾದರೆ ಎಲ್ಲಾ ಆಹಾರವನ್ನು ಸೇವಿಸಿದ ನಂತರ ಎರಡು ಮೂರು ಗಂಟೆಗಳ ಕಾಲ ಬಿಟ್ಟು ಜೇನುತುಪ್ಪವನ್ನು ತಿನ್ನಿ .ಇಲ್ಲದಿದ್ದರೆ ದೇಹದಲ್ಲಿ ಅಡ್ಡ ಪರಿಣಾಮ ಉಂಟಾಗುತ್ತದೆ .ದೇಹದಲ್ಲಿ ಅತಿಯಾದ ಉಷ್ಣತೆ , honey

ವಾಕರಿಕೆ ,ಹೃದಯಕ್ಕೆ ಸಂಬಂಧಿಸಿದ ಅಂದರೆ ವಾಂತಿ ,ಅಲರ್ಜಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ . ಹಾಗೆ ಬಿಸಿ ನೀರಿನಲ್ಲಿ ಜೇನುತುಪ್ಪವನ್ನು ಮಿಶ್ರಣ ಮಾಡಿ ಕೊಡುವುದರಿಂದ ನಮ್ಮ ಕಿಡ್ನಿಯ ಮೇಲೆ ದುಷ್ಪರಿಣಾಮಗಳು ಬೀರುತ್ತವೆ .ತಕ್ಷಣವಾಗಿ ಇದು ಯಾವುದು ಗೊತ್ತಾಗದೆ ಇಲ್ಲದಿದ್ದರೂ ಕ್ರಮೇಣವಾಗಿ ನಮ್ಮ ಕಿಡ್ನಿಯ ಮೇಲೆ ಒತ್ತಡ ಬೀರುತ್ತದೆ .ಹಾಗೆ ನಮ್ಮ ಹೃದಯಕ್ಕೆ ಕೂಡ ಒಳ್ಳೆಯದಲ್ಲ .

ಜೇನುತುಪ್ಪ ,ಬಿಸಿ ನೀರು ,ನಿಂಬೆ ಹಣ್ಣಿನ ರಸ ಮಿಶ್ರಣ ಒಳ್ಳೆಯದಲ್ಲ . ಇದರಿಂದ ಚರ್ಮದ ತೊಂದರೆ ಇನ್ನೂ ಹೆಚ್ಚಾಗುತ್ತದೆ . ಹಾಗಾಗಿ ತುಂಬಾ ಬಿಸಿ ಇರುವ ನೀರಿನಲ್ಲಿ ಜೇನುತುಪ್ಪವನ್ನು ಹಾಕಬೇಡಿ. ನೀರು ತಣ್ಣಗಾಗಿ ಅದರಲ್ಲಿರುವ ಬಿಸಿ ಆವಿ ಎಲ್ಲಾ ಹೋದಾಗ ಜೇನು ತುಪ್ಪವನ್ನು ಬೆರೆಸಿ ಕುಡಿಯಬಹುದು . ಹಾಗೇ ಬಿಸಿಯಾದ ಹಾಲಿನಲ್ಲಿ ಕೂಡ ಜೇನುತುಪ್ಪವನ್ನು ಬೆರೆಸಿ ಕುಡಿಯಬಾರದು .honey

ಹಾಲಿನಲ್ಲಿ ಜೇನುತುಪ್ಪವನ್ನು ಬೆರೆಸಿ ಕುಡಿಯುವುದರಿಂದ ತುಂಬಾ ಪ್ರಯೋಜನಗಳಿವೆ. ಆದರೆ ಬೆಚ್ಚಗಿರುವ ಹಾಲಿಗೆ ಜೇನುತುಪ್ಪ ಬೆರಸಿ ಕುಡಿಯಬೇಕು. ಅಥವಾ ತಣ್ಣಗಾಗಿರುವ ಹಾಲಿಗೆ ಜೇನು ತುಪ್ಪ ಬೆರಸಿ ಕುಡಿಯಬಹುದು ಎಂದು ಹೇಳಲಾಗಿದೆ. ಹೀಗೆ ನಾವು ತಿಳಿಸಿರುವ ವಿಧಾನದಲ್ಲಿ ಜೇನುತುಪ್ಪವನ್ನು ತೆಗೆದುಕೊಳ್ಳಬಹುದು .

Leave A Reply

Your email address will not be published.