Ultimate magazine theme for WordPress.

Peanut ನೆನೆಸಿಟ್ಟ ಶೇಂಗಾ ಶಕ್ತಿಶಾಲಿ ಔಷಧಿ

0 439

Peanut : health benifits of Peanut ಇವತ್ತಿನ ವಿಷಯ ಬಡವರ ಬಾದಾಮಿ ಶೇಂಗಾ ಬೀಜ. ಇದನ್ನು ಕಡಲೆಕಾಯಿ ಅಂತೀರಾ, ಶೇಂಗಾ ಬೀಜ ಅಂತೀರಾ, ನಿಮ್ಮ ನಿಮ್ಮ ಪ್ರಾಂತ್ಯದಲ್ಲಿ ಬೇರೆ ಬೇರೆ ತರಹದ ಹೆಸರು ಇದಕ್ಕೆ ಇದೆ. ನಮ್ಮ ಚರಕ ಸಮಿತಿಯಲ್ಲಿ ಚರಕ ಮಹರ್ಷಿಗಳು ಏನ್ ಹೇಳಿದ್ದಾರೆ ಅಂತಂದ್ರೆ, ಚರಕ ಅಂದ್ರೆ ಏನು? ಆಕ್ಚುಲಿ ಚರತಿ ಈತಿ ಚರಕ. ಯಾರು ಒಂದು ಸ್ಥಾನದಲ್ಲಿ ಸ್ಥಿರವಾಗಿ ಉಳಿಯಲ್ಲ,

ಯಾವಾಗಲೂ ಮೂವ್ಮೆಂಟ್ ಅಲ್ಲಿ ಇರ್ತಾರೆ ಅವರಿಗೆ ಚರಕ ಅಂತ ಹೇಳ್ತಾರೆ. ಚರಕ ಅನ್ನೋದು ನಿಜವಾಗಲೂ ಅವರ ತಂದೆ ತಾಯಿ ಇಟ್ಟಿರೋ ಹೆಸರು ಹೌದೋ ಅಲ್ಲವೋ ಗೊತ್ತಿಲ್ಲ. ಜನಸಾಮಾನ್ಯರು ಎಲ್ಲರೂ ಕೂಡ ಆ ಋಶಿಗೆ ಚರಕ, ಚರಕ, ಚರಕ ಅಂತ ಹೇಳಿ ಕರೆದುಕೊಳ್ಳುತ್ತಾ ಬಂದರು. ಹಾಗಾಗಿ ಚರಕ ಅಂತ ಹೆಸರು ಬಂತು. ಚರಕ ಅಂತಂದ್ರೆ ಚರತಿ ಇತಿ ಚರಕ. ಯಾವ ಋಷಿ ಅಂದ್ರೆ ಆ ಋಷಿ ಯಾವತ್ತೂ ಕೂಡ ಒಂದು ಪ್ರಾಂತ್ಯದಲ್ಲಿ ನಿಲ್ತಾ ಇರಲಿಲ್ಲ, ಒಂದು ಊರಿನಲ್ಲಿ ನಿಲ್ತಾ ಇರಲಿಲ್ಲ. Peanut

ತನ್ನ ವೈದ್ಯಕೀಯ ಜ್ಞಾನವನ್ನು ದೇಶದಾದ್ಯಂತ ಪ್ರಚಾರ ಮಾಡುವುದು, ಪಸರಿಸುವುದೇ ಅವನ ಜೀವನದ ಧ್ಯೇಯವಾಗಿದ್ದರಿಂದ ಎಲ್ಲಾ ಕಡೆ ಓಡಾಡ್ತಾ ಇದ್ದಿದ್ರಿಂದ ಅವನಿಗೆ ಅನ್ವರ್ಥನಾಮವಾಗಿ ಚರಕ ಅಂತ ಹೆಸರು ಬಂದಿದ್ದೆ ವಿನಹ ತಂದೆ ತಾಯಿ ಇಟ್ಟ ಹೆಸರು ಹೌದು ಅಲ್ಲವೋ ಗೊತ್ತಿಲ್ಲ. ಇವತ್ತು ಆ ಚರಕ ಮಹರ್ಷಿಗಳು ಹೇಳಿರೋವಂತ ಒಂದು ವಿಷಯ ಏನು ಅಂತ ಅಂದ್ರೆ, ನೀವು ನನ್ನ ಚರಕ ಸಮಿತಿಯಲ್ಲಿ ಒಂದು ದ್ರವ್ಯವನ್ನ ಒಂದು ಕಾಯಿಲೆಗೆ ಬಳಕೆ ಮಾಡಿ

ಅಂತ ಹೇಳಿದೀನಿ ಅಂತ ಅಂದ್ರೆ, ನೀವು ಅದಕ್ಕೆ ಕಟ್ಟುಬಿದ್ದು ಅದನ್ನೇ ತಗೊಂಡ್ ಬಂದು ಬಳಕೆ ಮಾಡಬೇಕು ಅಂತ ಏನಿಲ್ಲ. ಈಗ ನಾನಿರೋದು ಕರ್ನಾಟಕದಲ್ಲಿ. ಕೆಲವೊಂದು ದ್ರವ್ಯಗಳು ಹಿಮಾಲಯ ಪರ್ವತದಲ್ಲಿ ಸಿಗುತ್ತವೆ ಅಂತ ಅಂದ್ರೆ ನಾವು ಹಿಮಾಲಯಕ್ಕೆ ಹೋಗಿ ತರಬೇಕು ಅಂತ ಇಲ್ಲ. ಕೆಲವು ಕೇರಳದಲ್ಲಿ ಸಿಗುತ್ತವೆ ಅಂತಂದ್ರೆ ಕೇರಳಕ್ಕೆ ಹೋಗಿ ತರಬೇಕು ಅಂತ ಏನಿಲ್ಲ. Peanut

ಅದೇ ಗುಣ ಧರ್ಮ ಇರುವಂತಹ ದ್ರವ್ಯಗಳು ನಿಮ್ಮ ಪ್ರಾಂತ್ಯದಲ್ಲಿ ಕೂಡ ಸಿಗುತ್ತವೆ. ಅದೇ ಗುಣ ಧರ್ಮ ಇರುವಂತಹ ದ್ರವ್ಯಗಳನ್ನು ಬಳಕೆ ಮಾಡಿ ನೀವು ಖಾಯಿಲೆಯನ್ನು ವಾಸಿ ಮಾಡಬಹುದು. ಆ ನಿಟ್ಟಿನಲ್ಲಿ ನಾನು ಎಕ್ಸ್ಪ್ಲೈನ್ ಮಾಡುವುದಾದರೆ, ಇವತ್ತು ಬಾದಾಮ್ ತಿನ್ನಿ, ಬಾದಾಮ್ ತಿನ್ನಿ ಅದ್ರಲ್ಲಿ ಆ ತರದ ವಿಟಮಿನ್ ಇದೆ, ಈ ತರದ ಪ್ರೋಟೀನ್ ಇದೆ, ಆ ತರದ ಕಾರ್ಬೋಹೈಡ್ರೇಟ್ಸ್ ಇದೆ ಅಂತ ಹೇಳ್ತಾರಲ್ಲ. ನಮ್ಮ ಭಾರತದಲ್ಲಿ ನಮ್ಮ ಭಾರತದಂತಹ ಡೆವಲಪಿಂಗ್ ಕಂಟ್ರೀಸ್ ಅಲ್ಲಿ ಎಷ್ಟು ಜನರು ಶಕ್ತರಾಗಿದ್ದಾರೆ

ಬಾದಾಮಿಯನ್ನು ಕೊಂಡು ತಿನ್ನಲಿಕ್ಕೆ? ಸೋ ನೀವು ಬಾದಾಮಿಯನ್ನೇ ತಿನ್ನಬೇಕು ಅಂತೇನಿಲ್ಲ. ಬಾದಾಮಿಯ ಗುಣ ಧರ್ಮಗಳನ್ನು ಹೊಂದಿರುವಂತಹ ಬಡವರ ಬಾದಾಮಿ ಅಂತ ಹೆಸರು ಪಡೆದಿರುವಂತ ಶೇಂಗಾ ಬೀಜವನ್ನು ಯಾಕೆ ಬಳಕೆ ಮಾಡಬಾರದು. ಹೀಗೆ ನಾನು ಹೇಳ್ತಾ ಇರೋದು ಅಲ್ಲ ಚರಕ ಮಹರ್ಷಿಗಳೇ ಹೇಳಿ ಆಗಿದೆ. ಬಡವರ ಬಾದಾಮಿ ಆಗಿರುವ ಶೇಂಗಾ ಬೀಜವನ್ನು ಬಳಕೆ ಮಾಡಬಹುದು.

ಯಾಕೆ? ಎಷ್ಟು? ಯಾವಾಗ? ಯಾರು? ಯಾವ ಪ್ರಮಾಣದಲ್ಲಿ ಅನ್ನೋ ವಿಚಾರವಾಗಿ ವಿಸ್ತೃತವಾದಂತಹ ಮಾಹಿತಿಯನ್ನು ಕೊಡುತ್ತೇವೆ. ಶೇಂಗಾ ಬೀಜ ಇದು ರಿದ್ಯ ಅಂತ ಹೇಳ್ತಾರೆ. ಯಾವೆಲ್ಲ ಬೇಳೆ ಕಾಳುಗಳು ಎಣ್ಣೆಯನ್ನು ಉತ್ಪತ್ತಿ ಮಾಡುತ್ತವೆ, ಶೇಂಗಾ ಬೀಜ ಆಗಿರಬಹುದು, ಎಳ್ಳಾಗಿರಬಹುದು, ಕುಸುವೆ ಆಗಿರಬಹುದು, ಎಕ್ಸೆಟ್ರಾ, ಎಕ್ಸೆಟ್ರಾ, ಎಕ್ಸೆಟ್ರಾ. Peanut

ಯಾವೆಲ್ಲದರಲ್ಲಿ ತೈಲದ ಅಂಶ ಅಥವಾ ಎಣ್ಣೆಯ ಅಂಶ ಇರುತ್ತದೆ ಅವೆಲ್ಲವೂ ಕೂಡ ರಿದ್ಯ ದ್ರವ್ಯ. ರಿದ್ಯ ಅಂತಂದ್ರೆ ಹೃದಯಕ್ಕೆ ಹಿತಕಾರಕ. ಎಣ್ಣೆಯನ್ನು ಬಳಕೆ ಮಾಡಿದರೆ ಕೊಲೆಸ್ಟ್ರಾಲ್ ಜಾಸ್ತಿ ಆಗುತ್ತೆ ಅಂತ ಹೇಳ್ತಾರಲ್ಲ ಸರ್ ನೀವು ಎಣ್ಣೆ ಉತ್ಪತ್ತಿ ಮಾಡುವಂತ ಶೇಂಗಾ ಬೀಜ ರಿದ್ಯ, ಹೃದಯಕ್ಕೆ ಒಳ್ಳೆಯದು ಅಂತ ಹೇಳುತ್ತೀರಲ್ಲ ಏನಿದು ಕಾಂಟ್ರವರ್ಸಿ ಅಂತ ತಮ್ಮಲ್ಲಿ ಪ್ರಶ್ನೆ ಬರೋದು ಸಹಜ.

ಅದನ್ನು ಕೂಡ ನಾನು ಸ್ವಾಗತಿಸಿ ಎಲ್ಲದಕ್ಕೂ ಉತ್ತರ ಕೊಡುತ್ತೇನೆ. ಹೃದಯ ರೋಗಗಳು ಸಾಮಾನ್ಯವಾಗಿ ಬರೋದು ಯಾವಾಗ ಗೊತ್ತಾ? ರಕ್ತ ಸಂಚಾರ ಸರಾಗವಾಗಿ ಆಗದೆ ಇದ್ದಾಗ. ನೀವು ಕೇಳಿದಿರಾ ರಕ್ತ ಹೆಪ್ಪು ಕಟ್ಟಿದೆ ಹಾರ್ಟ್ ನಲ್ಲಿ, ರಕ್ತ ಬ್ಲಾಕ್ ಆಗಿದೆ ಹಾರ್ಟ್ ನಲ್ಲಿ, ರಕ್ತ ಸರಾಗವಾಗಿ ಸಂಚಾರ ಆಗ್ತಾ ಇಲ್ಲ ಹಾರ್ಟ್ ನಲ್ಲಿ. ಸೊ ಇವತ್ತು ಮಾಡ್ರನ್ ಸೈನ್ಸ್ ನಲ್ಲಿ ರಕ್ತ ಸರಾಗವಾಗಿ ಸಂಚಾರ ಆಗಲಿಕ್ಕೆ ಬ್ಲಡ್ ಥಿನ್ನರ್ ಅಂತ ಕೊಡುತ್ತಾರೆ. ರಕ್ತ ನೀರಾಗಲಿಕ್ಕೆ ಅಂತಾನೆ ಕೊಡ್ತಾರೆ Peanut

ಈ ಮೆಡಿಸಿನ್ಸ್ ಗಳನ್ನು. ಹಾಗಾದ್ರೆ ಯಾಕೆ ಇದು ಅಂತಂದ್ರೆ ರಕ್ತ ಸರಾಗವಾಗಿ ರಕ್ತನಾಳಗಳಲ್ಲಿ, ಹೃದಯದಲ್ಲಿ ಸಂಚಾರ ಆಗ್ತಾ ಇಲ್ಲ. ರಕ್ತನಾಳದ ಒಳಪದರದಲ್ಲಿ ಸ್ನಿಗ್ಧತೆಯ ಕೊರತೆಯಿಂದ ಲ್ಯೂಬ್ರಿಕೆಂಟ್ ಇಲ್ದೆ ಇರೋದ್ರಿಂದ ರಕ್ತ ಸರಾಗವಾಗಿ ಹರಿಯಲ್ಲ. ಸೋ ಈ ಬೇಳೆಕಾಳುಗಳಲ್ಲಿ ಯಾವೆಲ್ಲದರಲ್ಲಿ ಎಣ್ಣೆ ಅಂಶ ಇರುತ್ತದೆ ಫಾರ್ ಎಗ್ಸಾಂಪಲ್ ಇವತ್ತು ತಗೊಂಡಿರುವಂತಹ ಸಬ್ಜೆಕ್ಟ್ ಶೇಂಗಾ ಬೀಜ ಆಗಿರುವುದರಿಂದ ಶೇಂಗಾ ಬೀಜದಲ್ಲಿ ಎಣ್ಣೆಯ ಅಂಶ ಇರೋದ್ರಿಂದ ಅದನ್ನು ನೀವು ಬಳಕೆ ಮಾಡಿದರೆ

ಇದು ಆ ರಕ್ತನಾಳಗಳ ಒಳ ಪದರಿನ ಮೇಲೆ ಒಂದು ಲ್ಯೂಬ್ರಿಕೆಂಟ್ ಅನ್ನ ಫಾರ್ಮ್ ಮಾಡುತ್ತದೆ. ಒಂದು ಸ್ನಿಗ್ಧ ಪದಾರ್ಥವನ್ನು ಫಾರ್ಮ್ ಮಾಡುತ್ತದೆ. ಹೀಗೆ ಮಾಡಿದಾಗ ರಕ್ತ ಅಲ್ಲಲ್ಲೇ ಬ್ಲಾಕ್ ಆಗಲ್ಲ. ನಿಧಾನ ಗತಿಯಲ್ಲಿ ಚಲಾವಣೆ ಆಗಲ್ಲ. ಫ್ರೀಯಾಗಿ, ಸರಾಗವಾಗಿ ಚಿಕ್ಕ ಚಿಕ್ಕ ಒಂದು ರಕ್ತನಾಳಗಳಲ್ಲಿ ಕೂಡ ಶ್ರೋತಸ್ ಗಳಲ್ಲಿ ನಮ್ಮ ಸಂಸ್ಕೃತದಲ್ಲಿ ಆಯುರ್ವೇದ ಭಾಷೆಯಲ್ಲಿ ಶ್ರೋತಸ್ ಅಂತ ಹೇಳ್ತೀವಿ. ಯಾವುದರಲ್ಲಿ ಚಲಾವಣೆ ಆಗ್ತದಲ್ಲ ಅದರ ಒಳಪದರಿನಲ್ಲಿ ಒಂದು ಲುಬ್ರಿಕಂಟ್ಟ್ ಅನ್ನ ಫಾರ್ಮ್ ಮಾಡುತ್ತವೆ.

ಸೊ ಈ ರಿದ್ಯ ಅಂತ ಯಾಕೆ ಹೇಳಿದ್ರು ಅಂತ ಇವಾಗ ನಿಮಗೆ ಅರ್ಥ ಆಯ್ತಾ.. ಹೃದಯ ಯಾವಾಗ ಚೆನ್ನಾಗಿರುತ್ತದೆ ಅಂತಂದ್ರೆ, ಫಾರ್ ಎಗ್ಜಾಂಪಲ್ ಒಂದು ಮೋಟರ್. ಮೋಟರ್ ನಿಮ್ಮದು ಯಾವಾಗ ಒಂದು ಲೈಫ್ ಬರುತ್ತೆ ಅಂತ ಅಂದ್ರೆ, ಪಂಪ್ ಮಾಡಿದಂತಹ ನೀರು ಪೈಪ್ ಮೂಲಕ ಸರಾಗವಾಗಿ ಹರಿದಾಗ. ಒಂದು ವೇಳೆ ಪೈಪನ್ನ ಮಡಚಿಟ್ಟುಕೊಳ್ಳಿ ಅಥವಾ ಪೈಪ್ ಅನ್ನ ಬ್ಲಾಕ್ ಮಾಡಿ ಮೋಟಾರ್ ಆನ್ ಮಾಡಿ.

ಏನಾಗುತ್ತದೆ, ನೀರು ಹೊರಗಡೆ ಬರದೆ ಇದ್ರೆ ಆ ಒಂದು ಪ್ರೆಶರ್, ಆ ಟೆನ್ಶನ್ನು, ಆ ಹೊಡೆತ ಮೋಟಾರ್ ಮೇಲೆ ಬೀಳ್ತದೋ ಇಲ್ವೋ? ಆವಾಗ್ಲೇ ಹಾರ್ಟ್ ವೀಕ್ ಆಗೋದು, ಆವಾಗ್ಲೇ ಮೋಟರ್ ಫೇಲ್ ಆಗೋದು, ಅವಾಗ್ಲೇ ಮೋಟರ್ ಬರ್ನ್ ಆಗೋದು, ಅವಾಗಲೇ ಮೋಟರಿನ ಪುಟ್ಬಾಲ್ ಹಾಳಾಗೋದು. ಅದೇ ತರ ಹೃದಯ ನಮ್ಮ ದೇಹಕ್ಕೆ ಸಪ್ಲೈ ಮಾಡಿದಂತಹ ರಕ್ತವನ್ನ ಪಂಪ್ ಮಾಡುವಂತಹ ಮೋಟರ್. ಸೊ ರಕ್ತನಾಳಗಳು ಸರಾಗವಾಗಿದ್ದು, ಸ್ವಚ್ಛವಾಗಿದ್ದು ಎಲ್ಲಾ ರಕ್ತನಾಳಗಳಲ್ಲೂ

ಕೂಡ ರಕ್ತ ಸರಾಗವಾಗಿ ಸಂಚಾರವಾಗುತ್ತಿದೆ ಅಂತಂದ್ರೆ ಹೃದಯಕ್ಕೆ ಒತ್ತಡ ಬೀಳಲ್ಲ. ಹೃದಯಕ್ಕೆ ಒತ್ತಡ ಬೀಳಲ್ಲ ಅಂತ ಅಂದ್ರೆ ಬಿಪಿ ಬರಲ್ಲ. ಬಿಪಿ ಬರಲ್ಲ ಅಂತಂದ್ರೆ ಹೃದಯ ಸಂಬಂಧಿ ಕಾಯಿಲೆಗಳು ಬರಲ್ಲ. ಬಿಪಿ ಒಂದೇ ಅಲ್ಲ ವೆರಿಕೋಸ್ ಸಮಸ್ಯೆ, ಬ್ರೈನ್ ಸ್ಟ್ರೋಕ್, ಪ್ಯಾರಲಿಸಿಸ್ ಬರಲ್ಲ. ಅಷ್ಟೇ ಅಲ್ಲ ಲೈಂಗಿಕ ಸಮಸ್ಯೆ ಬರಲ್ಲ. ಪುರುಷರಲ್ಲಿ ನಿಮಿರು ದೌರ್ಬಲ್ಯ ಯಾಕೆ ಕಾಣಿಸಿಕೊಳ್ಳುತ್ತದೆ? ಲಿಂಗಕ್ಕೆ ಸಂಚಾರವಾದಂತಹ ರಕ್ತನಾಳಗಳಲ್ಲಿ ರಕ್ತ ಸರಾಗವಾಗಿ ಹರಿದೇ ಇದ್ದಾಗ ಲಿಂಗದ ದೌರ್ಬಲ್ಯತೆ ಪುರುಷರಲ್ಲಿ ಕಾಣ್ತದೆ.

ಇದೆಲ್ಲದಕ್ಕೂ ಸಾರಸಗಟಾಗಿ ಬಳಕೆ ಮಾಡುವಂತಹ, ಬಹಳ ಸುಲಭ ಬೆಲೆಯಲ್ಲಿ ಲಭ್ಯ ಇರುವಂತಹ, ಬೆಳೆಕಾಳುಗಳಲ್ಲಿ ಒಂದಾಗಿರುವಂತಹ ಶೇಂಗಾ ಅಥವಾ ಕಡಲೆಕಾಯಿ ಯಾಕೆ ಬಳಕೆ ಮಾಡಬಾರದು ಅಲ್ವಾ.. ಹಾಗಾದ್ರೆ ಎಷ್ಟು ಬಳಕೆ ಮಾಡುತ್ತೀರಿ? ಒಂದು ಮುಷ್ಟಿಯಷ್ಟು. ಹೆಂಗ್ ಬಳಕೆ ಮಾಡ್ತೀರಿ? ನೆನೆಸಿಟ್ಟು ಬಳಕೆ ಮಾಡ್ರಿ. ನೆನೆಸಿಟ್ಟು ಯಾಕೆ ಬಳಕೆ ಮಾಡಬೇಕು? Peanut

ಹಂಗೆ ಯಾಕೆ ಬಳಕೆ ಮಾಡಬಾರದು? ಹಂಗೆನೂ ಬಳಕೆ ಮಾಡಬಹುದು. ನೆನೆಸಿದಾಗ ಏನಾಗುತ್ತೆ ಗೊತ್ತಾ? ಸಾಂದ್ರೀಕರಣ ಅಂತ ಹೇಳ್ತಾರೆ. ಸಾ ಇಂದ್ರೀಕರಣ ಅಂತ ಹೇಳ್ತಾರೆ. ಈ ಬೇಳೆಕಾಳುಗಳಲ್ಲಿ, ಬೀಜಗಳಲ್ಲಿ ಜೀವ ಇರುತ್ತದೆ. ನೀವು 10 ವರ್ಷ ಬೆಳೆಕಾಳುಗಳನ್ನ ಪ್ರಿಸರ್ವ ಮಾಡಿಟ್ಟರೆ, 10 ವರ್ಷ ಕೂಡ ನಿಮ್ಮ ಮನೆಯಲ್ಲಿ ಬೆಳೆ ಕಾಳನ್ನ ಇಟ್ರು ಕೂಡ ಅದು ಸತ್ತೋಗಿರಲ್ಲ ಅದರಲ್ಲಿ ಜೀವ ಇರುತ್ತದೆ. ಆದರೆ ಅದು ಸುಪ್ತಾವಸ್ಥೆಯಲ್ಲಿ ಇರುತ್ತದೆ. ಯಾವಾಗ ಅದನ್ನ ನೆನೆಸ್ತೀರಿ, ನೆನಸಿದಾಗ ಮೊಳಕೆ ಬರುತ್ತದೆ.

ಆಗ ಸುಪ್ತಾವಸ್ಥೆಯಲ್ಲಿ ಇದ್ದಂತಹ ಜೀವ ಅವಸ್ಥೆಗೆ ಬರುತ್ತದೆ. ನಿರ್ಚೀವವಾಗಿರುವಂತಹ ಬೀಜ ಜೀವಂತವಾಗುತ್ತದೆ. ಅದನ್ನು ಜೀವಂತಗೊಳಿಸಿ ತಿಂದಾಗ ನಿಮ್ಮ ಜೀವ ವೃದ್ಧಿಯಾಗುತ್ತದೆ. ಅದರ ಎನರ್ಜಿ ಡಬಲ್ ಆಗುತ್ತದೆ, ತ್ರಿಬಲ್ ಆಗುತ್ತದೆ. ಸೋ ಈ ಬೇಳೆ ಕಾಳುಗಳನ್ನು ನೆನೆಸಿ, ಅದನ್ನು ಮೊಳಕೆ ತರಿಸಿ ತಿಂದರೆ ಅದರ ಗುಣ ವರ್ಧನೆಯಾಗುತ್ತದೆ. ಗುಣ ವರ್ಧನೆಯಾದ ಒಂದು ಶೇಂಗಾ ಕಾಳನ್ನ ತಿಂದ್ರೆ ನೀವು 10 ಕಾಳಿನ ಫಲವನ್ನು ಪಡೆಯುತ್ತೀರಿ ಅನ್ನೋದಾದ್ರೆ ಯಾಕೆ ಈ ರೀತಿ ಬಳಕೆ ಮಾಡಬಾರದು ಅಲ್ವಾ.

ಯಾವುದನ್ನೇ ಆಗಲಿ ನಮ್ಮ ಆಯುರ್ವೇದದಲ್ಲಿ ಸಾಮಾನ್ಯವಾಗಿ ನಾವು ಹೇಳೋದು, ಆಹಾರಗಳನ್ನೇ ಔಷಧಿಗಳನ್ನಾಗಿ ಬಳಕೆ ಮಾಡಿ ಅಂತ. ಆಹಾರದ ಸಮಯದಲ್ಲಿ ತಿಂದ್ರೆ ಆಹಾರವಾಗುತ್ತದೆ. ಬೆಳಿಗ್ಗೆ ಅಥವಾ ಸಂಜೆಯ ಸಮಯದಲ್ಲಿ ತಿಂದರೆ ಆಹಾರಗಳೇ ಔಷಧಿಗಳಾಗುತ್ತವೆ. ಶೇಂಗಾ ಬೀಜವನ್ನು ಬೇಯಿಸಿಕೊಂಡು ತಿಂದರೆ ಆಹಾರವಾಗುತ್ತದೆ. ಮೊಳಕೆ ತರಿಸಿಕೊಂಡು ತಿಂದರೆ ಔಷಧಿಯಾಗುತ್ತದೆ. ಸೋ ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ಮೊಳಕೆ ತರಿಸಿರುವಂತಹ ಶೇಂಗಾ ಬೀಜವನ್ನು ಒಂದು ಮುಷ್ಟಿಯಷ್ಟು ತಿನ್ನಬೇಕು.

ಅದಕ್ಕೂ ಮೊದಲು ನಿಮ್ಮ ಪ್ರಕೃತಿಯನ್ನು ಸ್ವಲ್ಪ ಅನಲೈಸ್ ಮಾಡ್ಕೊಳ್ಳಿ. ನೀವು ವಾತ ಪ್ರಕೃತಿಯವರಾಗಿದ್ದರೆ ಡೈರೆಕ್ಟ್ ತಿನ್ನಿ. ಪಿತ್ತ ಪ್ರಕೃತಿಯವರಾಗಿದ್ದರೆ ತುಪ್ಪದ ಜೊತೆಗೆ ತಿನ್ನಿ. ಕಫ ಪ್ರಕೃತಿಯವರಾಗಿದ್ದರೆ ಜೇನನ್ನ ಹಾಕಿ, ಇಲ್ಲ ಜೋನಿ ಬೆಲ್ಲದ ಜೊತೆಗೆ ತಿನ್ನಿ. ನಿಮಗೆ ಗೊತ್ತಿರಬಹುದು, ನಮ್ಮ ಹಳೆ ಕಾಲದಲ್ಲಿ ರಾತ್ರಿ ಊಟ ಆದ ನಂತರ ಬೆಲ್ಲ ಮತ್ತು ಶೇಂಗಾವನ್ನು ತಿನ್ನುವಂತಹ ಅಭ್ಯಾಸ ಇತ್ತು. ಇನ್ನು ಕೆಲವರು ಬೇಜಾರಾದಾಗ ತಿನ್ನಲ್ಲಿಕ್ಕೆ ಅಂತ ಶೇಂಗಾ ಮತ್ತು ಬೆಲ್ಲವನ್ನು ಜೇಬಿನಲ್ಲಿ ಇಟ್ಟಿಕೊಳ್ಳುತ್ತಿದ್ದರು.

ಆವಾಗ ಇದೆ ಸ್ನಾಕ್ಸ್ ಆಗಿತ್ತು. ಇವಾಗ ಕುರ್ಕುರೆ, ಚಿಪ್ಸು, ಬಿಂಗೋ ಅಂತೆಲ್ಲ ತಿಂತಿರಲ್ಲ, ಆತರದ ಸ್ನಾಕ್ಸ್ ಶೇಂಗಾ ಮತ್ತು ಬೆಲ್ಲ ಆಗಿರುತ್ತಿತ್ತು. ಇದನ್ನ ಈ ರೀತಿ ಈ ಪ್ರಮಾಣದಲ್ಲಿ ಈ ಬೆಳಗಿನ ಜಾವ ಅಥವಾ ಸಾಯಂಕಾಲದ ಸಮಯದಲ್ಲಿ ಬಳಕೆ ಮಾಡಿದರೆ ಇದೆ ಆಹಾರ ನಿಮಗೆ ಔಷಧಿ ಆಗುತ್ತದೆ. ವೆರಿಕೋಸ್ ಅನ್ನು ವಾಸಿ ಮಾಡುತ್ತದೆ. ಸ್ಟ್ರೋಕ್ಕನ್ನು ತಡೆಗಟ್ಟುತ್ತದೆ, ರಕ್ತ ಸಂಚಾರ ಸರಾಗವಾಗಿ ಆಗುವಂತೆ ಮಾಡುತ್ತದೆ. ಪುರುಷರಲ್ಲಿ ಆಗುವಂತಹ ನಿಮಿರು ದೌರ್ಬಲ್ಯವನ್ನು ಕೂಡ ನಿರ್ನಾಮ ಮಾಡುತ್ತದೆ. Peanut

ಪುರುಷರಷ್ಟೇ ಅಲ್ಲ ಮಹಿಳೆಯರು ಕೂಡ ಇದನ್ನು ಬಳಕೆ ಮಾಡಬಹುದು. ಮಕ್ಕಳಿಗೆ ಇದು ಅತ್ಯವಶ್ಯ. ನೆನಪಿನ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ದೇಹದಲ್ಲಿರುವ ಎಲ್ಲಾ ರಕ್ತನಾಳಗಳು ರಕ್ತ ಸಂಚಾರವನ್ನು ಸರಾಗವಾಗಿ ನಡೆಸುತ್ತವೆ. ನಿಮ್ಮ ಕುತ್ತಿಗೆಯ ಕೆಳಗಿರುವ ರಕ್ತನಾಳಗಳು ದೊಡ್ಡದಾಗಿದೆ ಆದರೆ ನಿಮ್ಮ ಬ್ರೈನ್ ನಲ್ಲಿರುವ ರಕ್ತನಾಳಗಳು ಮೈನೋಲ್ಟ್ ಚಾನೆಲ್ ನಲ್ಲಿ ರಕ್ತ ಸಂಚಾರ ಆಗಬೇಕು ಅಂದ್ರೆ ಅದರಲ್ಲಿ ಸ್ನಿಗ್ಧತೆ, ಲ್ಯೂಬ್ರಿಕಂಟ್ ಅತೀ ಅವಶ್ಯ.

ಯಾವಾಗ ಮೈನೋಲ್ಟ್ ಚಾನೆಲ್ ನಲ್ಲಿ ರಕ್ತ ಸಂಚಾರ ಆಗಲ್ಲ ಆಗ ಮಸ್ತಿಷ್ಕದ ಬೆಳವಣಿಗೆ ಹಾಗೂ ನೆನಪಿನ ಶಕ್ತಿಯಲ್ಲಿ ಕುಂಠಿತ ಮಕ್ಕಳಲ್ಲಿ ಆಗುವಂತಹ ಸಾಧ್ಯತೆ ಇರುತ್ತದೆ. ಸೋ ಮಕ್ಕಳ ನೆನಪಿನ ಶಕ್ತಿ ಜಾಸ್ತಿ ಆಗಬೇಕು, ಪ್ರಚಂಡ ಮೇಧಾವಿ ಆಗಬೇಕು ಅಂದ್ರೆ ಶೇಂಗಾ ಬೀಜವನ್ನು ತಿನ್ನಿಸಲು ಸ್ಟಾರ್ಟ್ ಮಾಡಿರಿ. ರಕ್ತ ಸಂಚಾರ ಮೆದುಳಿಗೆ ಜಾಸ್ತಿ ಆಗುತ್ತದೆ.

ಬೆಳವಣಿಗೆ ಆಗುವಂತಹ ವಯಸ್ಸಿನಲ್ಲಿಯೇ ಮೆದುಳಿನ ಬೆಳವಣಿಗೆ ಯಥೇಚ್ಛವಾಗಿಗಳು ಮಾಡಲಿಕ್ಕೆ ಸಾಧ್ಯ. ವೃದ್ಧರೂ ಕೂಡ ಇದನ್ನು ಬಳಕೆ ಮಾಡಬಹುದು. ವೃದ್ಧರಿಗೆ ಇದು ಬಹಳ ಮುಖ್ಯ. ಸಿಕ್ಸ್ಟಿ ಇಯರ್ಸ್ ಆದ ನಂತರ ನೆನಪಿನ ಶಕ್ತಿ ಕಡಿಮೆ ಆಗುತ್ತದೆ. ಇಟ್ಟಿರುವಂತ ಸಾಮಾನುಗಳನ್ನು ಮರೆತುಬಿಡುತ್ತಾರೆ. ಎಲ್ಲಿ ಇಟ್ಟೆ ಅನ್ನೋದು ನೆನಪಿರುವುದಿಲ್ಲ. Peanut

ಇದು ಮಸ್ತಿಷ್ಕದಲ್ಲಿ ರಕ್ತ ಸಂಚಾರದ ಕೊರತೆಯಿಂದ ಆಗುವಂತದ್ದು. ಇನ್ನು ಗರ್ಭಿಣಿ ಸ್ತ್ರೀಯರು ಕೂಡ ಇದನ್ನು ಬಳಕೆ ಮಾಡಬಹುದು. ಬಾಣಂತಿಯರು ಬಳಕೆ ಮಾಡಬಹುದು. ಯಾಕೆ ಬಾದಾಮಿನೇ ಬೇಕು, ಬಾದಾಮಿನೆ ಬೇಕು ಅಂತ ಕಷ್ಟಪಟ್ಟು ತರುತ್ತೀರಾ? ಶೇಂಗವನ್ನೇ ಬಾದಾಮಿಯ ರೂಪದಲ್ಲಿ ಗುಣ ವರ್ಧನೆಯನ್ನು ಮಾಡಿಕೊಂಡು ಬಳಕೆ ಮಾಡುವಂತಹ ವಿಧಿ ವಿಧಾನವನ್ನು ಗ್ರಂಥಾಧಾರಿತವಾಗಿ ಇವತ್ತು ಹೇಳಿದ್ದೇನೆ. Peanut

ಬಳಕೆ ಮಾಡಿ. ಇದನ್ನು ನೆನೆಸಿ, ಮೊಳಕೆ ತರಿಸಿ, ತಿನ್ನುವಷ್ಟು ಸಮಯ ಇಲ್ಲ ಅನ್ನೋದಾದರೆ ತೊಂದರೆ ಇಲ್ಲ. ನಿಮ್ಮ ಹತ್ತಿರದ ಆಯುರ್ವೇದ ವೈದ್ಯರನ್ನು ಭೇಟಿ ಮಾಡಿ. ಇದೇ ದ್ರವ್ಯಗಳನ್ನು ಬಳಸಿ, ಸಂಸ್ಕರಿಸಿ, ರೆಡಿಮೇಡ್ ಔಷಧಿಗಳನ್ನು ಕೊಡುತ್ತಾರೆ. ನೀವು ಅದೇ ವೈದ್ಯರು, ಇದೇ ವೈದ್ಯರು ಅಂತೇನಿಲ್ಲ. ಯಾವುದಾದರೂ ಆಯುರ್ವೇದ ವೈದ್ಯರನ್ನು ಭೇಟಿ ಮಾಡಿ, ಲಾಭವನ್ನು ಪಡೆದುಕೊಳ್ಳಿ

Leave A Reply

Your email address will not be published.