Ultimate magazine theme for WordPress.

Pitta Dosha ಪಿತ್ತಕ್ಕೆ ಮನೆಮದ್ದು

0 473

Pitta Dosha In Kannada ಪಿತ್ತಕ್ಕೆ ಮನೆ ಮದ್ದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಆಯುರ್ವೇದದಲ್ಲಿ ಪಿತ್ತವು ತ್ರಿದೋಷದ ಒಂದು ಅಂಶ. ತ್ರಿದೋಷಗಳಲ್ಲಿ ವಾತ, ಪಿತ್ತ, ಕಫ ಎಂದು ಮೂರು ದೋಷಗಳಿವೆ. ಮನುಷ್ಯ ಆರೋಗ್ಯವಾಗಿರಬೇಕಾದರೇ ತ್ರಿದೋಷಗಳು ಸಮನಾಗಿರಬೇಕು.

ಆ ತ್ರಿದೋಷಗಳಲ್ಲಿ ಇಂದಿನ ಲೇಖನದಲ್ಲಿ ಪಿತ್ತದ ಬಗ್ಗೆ ತಿಳಿಸಿಕೊಡುತ್ತೇವೆ. ಪಿತ್ತ ಎಂದರೆ ನಿಮಗೆ ಅರ್ಥವಾಗುವ ರೀತಿಯಲ್ಲಿ ಹೇಳಬೇಕಾದರೇ ಆಸಿಡ್ ಅಥವಾ ಉಷ್ಣಾಂಶ ಎಂದು ಹೇಳಬಹುದು. ದೇಹಕ್ಕೆ ಪಿತ್ತವು ಬಹಳ ಮುಖ್ಯ. ವ್ಯಕ್ತಿಯು ಬದುಕಬೇಕಾದರೇ ಪಿತ್ತ ಇರಲೇಬೇಕು. ಪಿತ್ತ ಇದ್ದರೇ ಮಾತ್ರ ವ್ಯಕ್ತಿಯು ಜೀವಂತವಾಗಿದ್ದಾನೆಂದು ಅರ್ಥ. ಪಿತ್ತದ ಅಂಶವು ಕಡಿಮೆ ಇದ್ದರೂ ಹಾನಿಕಾರಕ, Pitta Dosha

ಅತೀಯಾದರೂ ಹಾನಿಕಾರಕವಾಗಿರುತ್ತದೆ. ಆಯುರ್ವೇದದಲ್ಲಿ ಪಿತ್ತದಲ್ಲಿ ಮೂರು ವ್ಯಾಧಿಗಳು ಇವೆ. ವಾತಚ ವ್ಯಾಧಿ, ಪಿತ್ತಚ ವ್ಯಾಧಿ, ಕಫಚ ವ್ಯಾಧಿ ಎಂದು ಮೂರು ಭಾಗಗಳಾಗಿ ವಿಂಗಡಣೆ ಮಾಡಲಾಗಿದೆ. ಪಿತ್ತಚ ವ್ಯಾಧಿ ಬಗ್ಗೆ ಹೇಳುವುದಾದರೇ ಪಿತ್ತ ವೃದ್ಧಿಯಾದರೇ ಮತ್ತು ಕಡಿಮೆಯಾದರೇ ಕಾಯಿಲೆಗಳು ಬರುತ್ತವೆ. ಪಿತ್ತ ಪ್ರಕೋಪವಾಗಲು ಕಾರಣಗಳೇನು? ಪಿತ್ತ ಪ್ರಕೋಪದಿಂದಾಗುವ ಕಾಯಿಲೆಗಳು ಯಾವುವು ? ಅದರ ಚಿಕಿತ್ಸೆಯ ಬಗ್ಗೆ ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.

ಪಿತ್ತ ಹೆಚ್ಚು ಆಗಲು ಕಾರಣ ಏನೆಂದರೆ ಪಿತ್ತವೃದ್ದಿಕರ ಆಹಾರ, ವಿಹಾರ, ವಿಚಾರಗಳು. ಪಿತ್ತ ವೃದ್ಧಿಕರ ಆಹಾರ ಯಾವುದು ಎಂದರೆ ಕಾಫಿ, ಟೀ, ಜಂಕ್ ಫುಡ್ಸ್ ಹೆಚ್ಚಾಗಿ ಮಸಾಲೆಯನ್ನು ಬಳಸುವುದು, ಹೆಚ್ಚಾಗಿ ಖಾರ ಪದಾರ್ಥಗಳನ್ನು ತಿನ್ನುವುದು. ಪಿತ್ತ ವೃದ್ಧಿಕರ ವಿಹಾರ ಯಾವುದು ಎಂದರೆ ಹೆಚ್ಚು ಬಿಸಿಲಿನಲ್ಲಿ ಕೆಲಸ ಮಾಡುವುದು, ಹೆಚ್ಚು ಉಷ್ಣವಿರುವ ಕಾರ್ಖಾನೆಗಳಲ್ಲಿ ಕೆಲಸ ಮಾಡುವುದು, ಹೆಚ್ಚು ಶಬ್ಧವಿರುವ ಕಾರ್ಖಾನೆಗಳಲ್ಲಿ ಕೆಲಸ ಮಾಡುವುದು ಇದು ಪಿತ್ತ ವೃದ್ಧಿಕರ ವಿಹಾರ. Pitta Dosha

ಪಿತ್ತ ವೃದ್ಧಿಕರ ವಿಚಾರ ಯಾವುದು ಎಂದರೆ ಹೆಚ್ಚಾಗಿ ಸಿಟ್ಟು ಮಾಡಿಕೊಳ್ಳುವುದು, ಹೆಚ್ಚಾಗಿ ಬೇಜಾರು ಮಾಡಿಕೊಳ್ಳುವುದು. ಕೂಗಾಡುವುದು ಈ ತರಹದ ಸ್ವಭಾವ ಇರುವವರಿಗೆ ಪಿತ್ತ ಪ್ರಕೋಪಕ್ಕೆ ಬರುವುದು ಸಾಮಾನ್ಯವಾಗಿದೆ. ಪಿತ್ತ ಪ್ರಕೋಪದ ಲಕ್ಷಣಗಳೇನೆಂದರೇ ಕಣ್ಣು ಕೆಂಪಾಗಿರುತ್ತದೆ, ಸಿಟ್ಟು ಮುಖದಲ್ಲಿ ಕಾಣಿಸುತ್ತಿರುತ್ತದೆ. ಬಹಳ ಬೇಗ ಸಿಟ್ಟು ಬರುತ್ತದೆ.

ಇಂತಹ ಲಕ್ಷಣಗಳು ಪಿತ್ತ ಹೆಚ್ಚಾಗಿರುವವರಲ್ಲಿ ಕಂಡುಬರುತ್ತದೆ. ಇದಕ್ಕೆ ಚಿಕಿತ್ಸೆ ಏನೆಂದರೇ ಪಿತ್ತವೃದ್ದಿಕರ ಆಹಾರ, ವಿಹಾರ, ವಿಚಾರಗಳನ್ನ ಬಿಟ್ಟುಬಿಡುವುದೇ ಇದಕ್ಕೆ ಚಿಕಿತ್ಸೆಯಾಗಿದೆ. ದೇಹದಲ್ಲಿ ಪಿತ್ತ ಕಡಿಮೆ ಮಾಡಲು ಮಜ್ಜಿಗೆ ಮತ್ತು ಮೊಸರನ್ನು ಹೆಚ್ಚು ಸೇವಿಸಿ, ಹಾಲು ಮತ್ತು ತುಪ್ಪವನ್ನು ಸೇವಿಸಿ. ಸೌತೆಕಾಯಿ, ಎಳನೀರನ್ನು ಬಳಸಿ. ದಿನನಿತ್ಯದ ಆಹಾರದಲ್ಲಿ ಇವುಗಳನ್ನ ಸೇವಿಸಿದ್ದೇ ಆದ್ದಲ್ಲೀ ಪಿತ್ತ ಶಮನವಾಗುತ್ತದೆ. ಪಿತ್ತದ ವ್ಯಾಧಿಗಳು ಅಸಿಡಿಟಿ, ಹೊಟ್ಟೆಯಲ್ಲಿ ಉರಿ, Pitta Dosha

ಸಂಕಟ, ಕಣ್ಣು ಉರಿಯಾಗುವುದು, ಚರ್ಮ ರೋಗಗಳು ಬರುವುದು, ಉರಿ ಮೂತ್ರ ಆಗುವುದು, ಮೂತ್ರದಲ್ಲಿ ರಕ್ತ ಹೋಗುವುದು ಆಗಿರಬಹುದು, ಹೆಣ್ಣು ಮಕ್ಕಳಲ್ಲಿ ಬಿಳಿ ಮುಟ್ಟಾಗಿರಬಹುದು, ಕಿವಿಯಲ್ಲಿ ಉರಿ, ಅಂಗಾಲು ಮತ್ತು ಅಂಗೈನಲ್ಲಿ ಉರಿ, ಕೂದಲು ಉದರುವುದು ಆಗಿರಬಹುದು. ವಯಸ್ಸಿಗೆ ಮುಂಚಿತವಾಗಿ ಕೂದಲು ಬೆಳ್ಳಗಾಗುವುದು. ಇಂತಹ ಆಹಾರ, ವಿಹಾರ, ವಿಚಾರಗಳನ್ನು ರೂಢಿಸಿಕೊಂಡಿದ್ದೇ ಆಗಿದ್ದಲ್ಲೀ ಇಂತಹ ಪಿತ್ತದ ಸಮಸ್ಯೆಗಳಿಂದ ದೂರವಿರಬಹುದು. ಹೆಚ್ಚು ಪಿತ್ತದ ಸಮಸ್ಯೆಗಳಿಂದ ಬಳಲುತ್ತಿರುವವರು ಹತ್ತಿರದ ಆಯುರ್ವೇದ ವೈದ್ಯರನ್ನು ಭೇಟಿ ಮಾಡಿ ಅವರ ಸಲಹೆ ಮೇರೆಗೆ ಔಷಧಿಗಳನ್ನ ತೆಗೆದುಕೊಳ್ಳಬೇಕಾಗುತ್ತದೆ. Pitta Dosha

Leave A Reply

Your email address will not be published.