Ultimate magazine theme for WordPress.

vastu right direction ಗಡಿಯಾರ ಕ್ಯಾಲೆಂಡರ್ ಈ ದಿಕ್ಕಿಗೆ

0 611

right direction for clock calender in home as per vastu ಸ್ನೇಹಿತರೇ ನಮ್ಮ ವಾಸ್ತುಶಾಸ್ತ್ರದ ಅನುಸಾರವಾಗಿ ಮನೆಯಲ್ಲಿರುವ ಪ್ರತಿಯೊಂದು ವಸ್ತುಗಳಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕ ಎರಡು ಪ್ರಕಾರದ ಶಕ್ತಿಗಳು ಇರುತ್ತವೆ. ಅವುಗಳನ್ನ ಸರಿಯಾದ ಸ್ಥಾನ ಅಥವಾ ಸ್ಥಳದಲ್ಲಿ ಇಡಲಿಲ್ಲವೆಂದರೆ ಈ ವಸ್ತುಗಳು ನಕಾರಾತ್ಮಕ ಶಕ್ತಿಯನ್ನು ಹರಡಿಸುತ್ತವೆ. ಈ ವಸ್ತುಗಳನ್ನ ಸರಿಯಾದ ಸ್ಥಾನದಲ್ಲಿ ಇಟ್ಟರೆ ಇವುಗಳು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬುತ್ತವೆ.

ಇದರಿಂದ ಮನೆಯಲ್ಲಿನ ಸದಸ್ಯರ ಉನ್ನತಿಯೂ ಆಗುತ್ತದೆ. ಸುಖ ಸಂಮೃದ್ಧಿಯೂ ಹೆಚ್ಚಾಗುತ್ತದೆ. ಇಂದಿನ ವಿಜ್ಞಾನವೂ ಒಪ್ಪಿಕೊಂಡಿದೆ ಅದು ಮನೆಯಲ್ಲಿರುವ ಪ್ರತಿಯೊಂದು ವಸ್ತುಗಳು ಶಕ್ತಿಯ ತರಂಗಗಳನ್ನು ಬಿಡುತ್ತವೆ. ಇವುಗಳ ಪ್ರಭಾವ ಮನುಷ್ಯನ ಜೀವನದ ಮೇಲೆ ಬೀರುತ್ತವೆ. ಇದೇ ರೀತಿಯಾಗಿ ಕೆಲವು ವಸ್ತುಗಳಿವೆ. ಇವುಗಳ ಪ್ರಭಾವ ಮನುಷ್ಯನ ಜೀವನದ ಮೇಲೆ ಹೆಚ್ಚಾಗಿ ಬೀರುತ್ತದೆ. right direction

ಈ ವಸ್ತುಗಳು ನಮಗೆ ಸಮಯದ ಬಗ್ಗೆ ತಿಳಿಸಿಕೊಡುತ್ತವೆ. ಈ ವಸ್ತುಗಳ ಸಹಾಯದಿಂದ ಶುಭ ಮತ್ತು ಅಶುಭ ಸಮಯದ ಬಗ್ಗೆ ತಿಳಿಯಬಹುದು. ಇವುಗಳ ನಮ್ಮ ಜೀವನದ ಒಳ್ಳೆಯ ಮತ್ತು ಕೆಟ್ಟ ಸಮಯದ ಬಗ್ಗೆ ಲೆಕ್ಕಾಚಾರಗಳನ್ನ ಹೇಳುತ್ತವೆ. ಈ ವಸ್ತುಗಳು ಗಡಿಯಾರ ಮತ್ತು ಕ್ಯಾಲೆಂಡರ್ಗಳಾಗಿವೆ. ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ಗಡಿಯಾರ ಹಾಗೂ ಕ್ಯಾಲೆಂಡರ್ಗಳನ್ನು ಬಳಸುತ್ತಾರೆ. right direction

ಗಡಿಯಾರ ನಮಗೆ ಕಳೆದು ಹೋದ ಸಮಯದ ಬಗ್ಗೆ ಮುಂಬರುವ ಸಮಯದ ಬಗ್ಗೆ ಸೂಚನೆಗಳನ್ನ ಕೊಡುತ್ತವೆ. ನಮ್ಮ ಜೀವನದಲ್ಲಿ ಅಧಿಕವಾಗಿ ಸಮಯಕ್ಕೆ ಮಹತ್ವವಿದೆ. ಸಮಯವೇ ನಮ್ಮ ಜೀವನ ಚಕ್ರವನ್ನು ನಡೆಸುತ್ತವೆ. ಪ್ರತಿಯೊಬ್ಬರ ಸಮಯವು ಒಂದೇ ರೀತಿಯಾಗಿರುವುದಿಲ್ಲ. ಪ್ರತಿಯೊಬ್ಬರ ಜೀವನದಲ್ಲಿ ಒಳ್ಳೆಯ ಮತ್ತು ಕೆಟ್ಟ ಸಮಯಗಳೆರಡು ಬರುತ್ತಿರುತ್ತವೆ. ಸಮಯ ಚಕ್ರವೂ ಯಾವಾಗಲೂ ನಡೆಯುತ್ತಿರುತ್ತವೆ.

ಇದು ಯಾರಿಗೋಸ್ಕರವೂ ನಿಲ್ಲುವುದಿಲ್ಲ. ಆದರೇ ಶಾಸ್ತ್ರಗಳ ಅನುಸಾರವಾಗಿ ಆಚರಣೆಗಳನ್ನ ಮಾಡಿ ನಮ್ಮ ಸಮಯವನ್ನು ಶಕ್ತಿಶಾಲಿಯನ್ನಾಗಿಸಬಹುದು. ವಾಸ್ತುಶಾಸ್ತ್ರದ ಪ್ರಕಾರ ನಿಯಮಗಳನ್ನ ಪಾಲಿಸಿಕೊಂಡು ನಾವು ನಮ್ಮ ಜೀವನವನ್ನು ಇನ್ನಷ್ಟು ಉತ್ತಮವಾಗಿಸಬಹುದು. ವಾಸ್ತುವಿನ ಅನುಸಾರವಾಗಿ ಗೋಡೆಯ ಮೇಲೆ ಅಂಟಿಕೊಂಡಿರುವಂತಹ ಗಡಿಯಾರವು ತುಂಬಾ ಮಹತ್ವಪೂರ್ಣವಾದ ಸಂಕೇತವನ್ನು ಕೊಡುತ್ತವೆ.

ಒಂದು ವೇಳೆ ಗಡಿಯಾರವನ್ನು ಸರಿಯಾದ ದಿಕ್ಕಿನಲ್ಲಿ, ಸರಿಯಾದ ಸ್ಥಾನದಲ್ಲಿ ಅಳವಡಿಸಿದ್ದರೇ ಇದರಿಂದ ನಮ್ಮೆಲ್ಲರ ಜೀವನದಲ್ಲಿ ಹಲವಾರು ಅಧಿಕ ಶುಭಲಾಭಗಳು ಸಿಗುತ್ತವೆ. ಈ ಲೇಖನದಲ್ಲಿ ಗಡಿಯಾರ ಮತ್ತು ಕ್ಯಾಲೆಂಡರ್ನ ಸರಿಯಾದ ದಿಕ್ಕು, ಸರಿಯಾದ ಸ್ಥಾನದ ಬಗ್ಗೆ ತಿಳಿಸಲಾಗಿದೆ. ಒಂದು ವೇಳೆ ವಾಸ್ತು ನಿಯಮಗಳನ್ನ ಪಾಲಿಸಿಕೊಂಡು ನೀವು ಗಡಿಯಾರ ಮತ್ತು ಕ್ಯಾಲೆಂಡರ್ ಅನ್ನ ಅವುಗಳ ಸರಿಯಾದ ದಿಕ್ಕಿನಲ್ಲಿಟ್ಟರೆ ಸ್ವತಃ ಒಳ್ಳೆಯ ಬದಲಾವಣೆ ನಿಮ್ಮ ಅನುಭವಕ್ಕೆ ಬರುತ್ತದೆ. right direction

ನಿಮ್ಮ ಜೀವನದ ಸಮಸ್ಯೆಗಳು ತಕ್ಷಣವೇ ದೂರವಾಗುವುದನ್ನ ಕಾಣುವಿರಿ. ವಾಸ್ತುಶಾಸ್ತ್ರದ ಪ್ರಕಾರ ಗಡಿಯಾರವನ್ನು ತಪ್ಪಾದ ದಿಕ್ಕಿನಲ್ಲಿರಿಸಿದರೆ ಇದರ ಪರಿಣಾಮ ನಕಾರಾತ್ಮಕವಾಗಿರುತ್ತದೆ. ವಾಸ್ತುಶಾಸ್ತ್ರದ ಅನುಸಾರವಾಗಿ ಗಡಿಯಾರದ ಆಕಾರ ಗೋಲಾಕಾರವಾಗಿ ಅಥವಾ ಅಂಡಾಕಾರದಲ್ಲಿ ಇದ್ದರೆ ಉತ್ತಮವಾಗಿರುತ್ತದೆ. ಗಡಿಯಾರಗಳು ಚೌಕಾಕಾರ ಅಥವ ಆಯಾತಾಕಾರದಲ್ಲಿ ಇರಬಾರದು. ಚೂಪಾದ ಅಥವಾ ಅರಿತವಾದ ಕೋನಗಳು ಇರಬಾರದು. ಗಡಿಯಾರದಲ್ಲಿ ದೇವರ ಪೋಟೋ ಇರುವ ಗಡಿಯಾರವನ್ನು ತರಬಾರದು.

ಈಗಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ದೇವರ ಪೋಟೋ ಇರುವ ಗಡಿಯಾರಗಳು ಬಂದಿವೆ. ಆದರೆ ಮರೆತರೂ ಸಹ ಇಂತಹ ಗಡಿಯಾರವನ್ನು ಖರೀದಿಸಬೇಡಿ. ಗಡಿಯಾರದಲ್ಲಿರುವ ಪೋಟೋಗೆ ಹೂವನ್ನು ಮುಡಿಸಲು ಆಗುವುದಿಲ್ಲ ಮತ್ತು ಪೂಜಿಸಲು ಸಾಧ್ಯವಿಲ್ಲ. ಜೊತೆಗೆ ಗಡಿಯಾರದಲ್ಲಿ ಹಲವಾರು ದಿನ ಧೂಳು ಇರುತ್ತದೆ. ಇದರಿಂದ ದೇವರಿಗೆ ಅವಮಾನ ಮಾಡಿದಂತೆ ಆಗುತ್ತದೆ. ಈ ಕಾರಣದಿಂದಾಗಿ ಗಡಿಯಾರದಲ್ಲಿ ದೇವರು ವಾಸ ಮಾಡುವುದಿಲ್ಲ. ಬದಲಾಗಿ ಇಲ್ಲಿ ನಕಾರಾತ್ಮಕ ಶಕ್ತಿಗಳ ವಾಸವಾಗುತ್ತದೆ.

ನಿಂತು ಹೋದ ಗಡಿಯಾರ ಮನೆಯಲ್ಲಿ ಇರಬಾರದು. ವಾಸ್ತುಶಾಸ್ತ್ರ ಪ್ರಕಾರ ನಿಮ್ಮ ಮನೆಯ ಗೋಡೆಯ ಮೇಲೆ ಇರುವ ಗಡಿಯಾರವು ಯಾವತ್ತೂ ನಿಂತು ಹೋಗಬಾರದು. ನಿಂತು ಹೋದ ಗಡಿಯಾರವನ್ನು ಇರಿಸಿದರೆ ಅಶುಭ ಫಲ ಸಿಗುತ್ತದೆ. ಗಡಿಯಾರ ಯಾವತ್ತಿಗೂ ಸರಿಯಾದ ಸಮಯಕ್ಕೆ ಇರಬೇಕು. ಬೇಕಾದರೇ ನೀವು ಸಮಯವನ್ನು ಸ್ವಲ್ಪ ಮುಂದೆ ಇರಿಸಬಹುದು. right direction

ಆದರೇ ಯಾವತ್ತೂ ಸಮಯವನ್ನು ಹಿಂದೆ ಇಡಬಾರದು. ಯಾವ ಗಡಿಯಾರ ಸಮಯಕ್ಕಿಂತ ಹಿಂದೆ ನಡೆಯುತ್ತದೆಯೋ ಅಂತಹ ಮನೆಯಲ್ಲಿರುವ ಜನರು ಯಾವತ್ತಿಗೂ ಎಲ್ಲಾ ಕಾರ್ಯಗಳಲ್ಲಿ ಹಿನ್ನಡೆಯಲ್ಲಿರುತ್ತಾರೆ. ಇವರಲ್ಲಿ ವಿಕಾಸವಾಗುವುದಿಲ್ಲ. ವಾಸ್ತುಶಾಸ್ತ್ರದ ಅನುಸಾರವಾಗಿ ಗಡಿಯಾರವನ್ನು ಯಾವತ್ತಿಗೂ ದಕ್ಷಿಣ ದಿಕ್ಕಿನಲ್ಲಿ ಅಳವಡಿಸಬಾರದು. ದಕ್ಷಿಣ ದಿಕ್ಕನ್ನು ಮೃತುವಿನ ದಿಕ್ಕು ಎಂದು ತಿಳಿಯಲಾಗಿದೆ. ಈ ಗೋಡೆಗಳ ಮೇಲೆ ಗಡಿಯಾರವನ್ನು ಇರಿಸಿದರೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಒಂದು ವೇಳೆ ಗಡಿಯಾರವನ್ನು ದಕ್ಷಿಣ ದಿಕ್ಕಿನಲ್ಲಿ ಇರಿಸಿದರೆ ಗಡಿಯಾರವನ್ನ ನೋಡುವವರ ಮುಖ ದಕ್ಷಿಣ ದಿಕ್ಕಿನತ್ತ ಇರುತ್ತದೆ. ಇದನ್ನ ಅಶುಭವೆಂದು ತಿಳಿಯಲಾಗಿದೆ. ದಕ್ಷಿಣ ನಿಲ್ಲುವಂತಹ ದಿಕ್ಕು ಆಗಿರುತ್ತದೆ. ಹಾಗಾಗಿ ಇಲ್ಲಿ ಸಮಯ ಸೂಚಕ ವಸ್ತುಗಳನ್ನ ಇಡಬಾರದು, ಇದರಿಂದ ಮನೆಯಲ್ಲಿರುವ ಜನರ ಅವಕಾಶಗಳು ನಿಂತು ಹೋಗುತ್ತವೆ.

ಮತ್ತು ಮನೆಯ ಮುಖ್ಯ ಸದಸ್ಯರ ಮೇಲೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಗಡಿಯಾರವನ್ನು ಪೂರ್ವ ಮತ್ತು ಉತ್ತರ ದಿಕ್ಕಿನ ಗೋಡೆಯ ಮೇಲೆ ಅಂಟಿಸಬೇಕು. ಗಡಿಯಾರವನ್ನು ಯಾವತ್ತಿಗೂ ಮುಖ್ಯದ್ವಾರದ ಮೇಲೆ ಅಥವಾ ಅದರ ಆಚೆ ಯಾವತ್ತೂ ಅಂಟಿಸಬಾರದು. ನಂತರ ಕ್ಯಾಲೆಂಡರ್ ಬಗ್ಗೆ ಹೇಳುವುದಾದರೇ ಕ್ಯಾಲೆಂಡರ್ ಶುಭ ಮತ್ತು ಅಶುಭಗಳ ಬಗ್ಗೆ ತಿಳಿಸಿಕೊಡುತ್ತವೆ. right direction

ಹಾಗಾಗಿ ಕ್ಯಾಲೆಂಡರ್ ಅನ್ನು ಅಳವಡಿಸಲು ಶುಭ ದಿಕ್ಕನ್ನೇ ಆಯ್ಕೆ ಮಾಡಿಕೊಳ್ಳಬೇಕು. ವಾಸ್ತುಶಾಸ್ತ್ರದ ಪ್ರಕಾರ ಕ್ಯಾಲೆಂಡರ್ ಅನ್ನು ಅಳವಡಿಸಲು ಪೂರ್ವ ದಿಕ್ಕು ಅಥವಾ ಉತ್ತರ ದಿಕ್ಕು ಅತೀ ಉತ್ತಮವೆಂದು ತಿಳಿಸಿದ್ದಾರೆ. ಪೂರ್ವದಿಕ್ಕಿನತ್ತ ಕ್ಯಾಲೆಂಡರ್ ಅನ್ನು ಅಳವಡಿಸಿದರೆ ಮನುಷ್ಯನಲ್ಲಿ ಪ್ರಗತಿಯಾಗುತ್ತದೆ. ಈ ದಿಕ್ಕಿನಲ್ಲಿ ಉದಯಿಸುತ್ತಿರುವ ಸೂರ್ಯನ ಚಿತ್ರವನ್ನ ಅಂಟಿಸಿದರೆ ಶುಭ ಫಲಗಳು ಸಿಗುತ್ತವೆ.

ಉತ್ತರ ದಿಕ್ಕಿನಲ್ಲಿ ಹಚ್ಚ ಹಸಿರಿರುವ ಕ್ಯಾಲೆಂಡರ್ ಅನ್ನು ಅಂಟಿಸಿದರೆ ಒಳ್ಳೆಯದು. ಕ್ಯಾಲೆಂಡರ್ನಲ್ಲಿ ಹಿಂಸಾತ್ಮಕ ಪ್ರಾಣಿ ಅಥವಾ ದುಃಖವಿರುವ ಮುಖ ಇರುವ ಕ್ಯಾಲೆಂಡರ್ ಅನ್ನು ಅಂಟಿಸಬಾರದು. ಮನೆಯಲ್ಲಿ ನಕಾರಾತ್ಮಕ ಶಕ್ತಿ ಸಂಚರಿಸುವಂತೆ ಮಾಡುತ್ತವೆ. ಯಾವತ್ತಿಗೂ ಹಳೇ ಕ್ಯಾಲೆಂಡರ್ ಮೇಲೆ ಹೊಸ ಕ್ಯಾಲೆಂಡರ್ಅನ್ನು ಹಾಕಬೇಡಿ. ಇದರಿಂದಲೂ ಕೂಡ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತವೆ.

Leave A Reply

Your email address will not be published.