Ultimate magazine theme for WordPress.

Tula Rashi 2024 ವರ್ಷ ಭವಿಷ್ಯ ತುಲಾ ರಾಶಿಯ ಭವಿಷ್ಯ

0 12,278

Tula Rashi Bhavishya New Year 2024 ಸ್ನೇಹಿತರೇ ಇಂದಿನ ಲೇಖನದಲ್ಲಿ 2024ರ ತುಲಾರಾಶಿಯ ಬಗ್ಗೆ ತಿಳಿಸಿಕೊಡುತ್ತೇವೆ. ತುಲಾರಾಶಿಯ ಜನ್ಮ ನಕ್ಷತ್ರಗಳು ಚಿತ್ತನಕ್ಷತ್ರದ 3 ಮತ್ತು 4ನೇ ಚರಣ, ಸ್ವಾತಿ ನಕ್ಷತ್ರದ 4 ಚರಣಗಳು, ವಿಶಾಖ ನಕ್ಷತ್ರದ ಮೊದಲ 3 ಚರಣಗಳಾಗಿರುತ್ತವೆ. ತುಲಾರಾಶಿಯು ತಕ್ಕಡಿಯ ಲಾಂಛನವನ್ನು ಹೊಂದಿದೆ. ಕ್ರೂರ ಸ್ವಭಾವವಿರುತ್ತದೆ. ಶುಭ್ರವರ್ಣದ ರಾಶಿ ಮತ್ತು ಪುರುಷಲಿಂಗದ ರಾಶಿಯಾಗಿರುತ್ತದೆ.

ಪಶ್ಚಿಮದಿಕ್ಕುನ್ನು ಹೋಲುವಂತಹ ರಾಶಿಯಾಗಿದೆ. ರಾಶಿಯ ತತ್ತ್ವ ಚರ ಆಗಿದೆ. ಇದು ವಾಯುತತ್ವದ ರಾಶಿ ಇದು. ರಾಶಿಯ ಅಧಿಪತಿ ಶುಕ್ರಗ್ರಹವಾಗಿದೆ. ಈ ರಾಶಿಯ ರತ್ನ ವಜ್ರ, ಅದೃಷ್ಟದ ಬಣ್ಣ ಬಿಳಿ ಮತ್ತು ನೀಲಿಯಾಗಿರುತ್ತದೆ. ಅದೃಷ್ಟದ ದಿನಗಳು ಶುಕ್ರವಾರ ಮತ್ತು ಸೋಮವಾರ ಆಗಿರುತ್ತದೆ. ಅದೃಷ್ಟದ ದೇವತೆ ಶ್ರೀಮಹಾಲಕ್ಷ್ಮಿ ಆಗಿದೆ. ನಿಮ್ಮ ಅದೃಷ್ಟದ ಸಂಖ್ಯೆಗಳು ಯಾವುವು ಎಂದರೆ 4,6,7,9 ಆಗಿದೆ. ಅದೃಷ್ಟದ ದಿನಾಂಕಗಳು 6,15, 24 ನಿಮಗೆ ಅದೃಷ್ಟವನ್ನು ತಂದುಕೊಡುವ ದಿನಾಂಕಗಳಾಗಿವೆ. Tula Rashi

ಮಿತ್ರರಾಶಿಗಳು ಮಿಥುನ ಮತ್ತುಕಟಕ, ಕುಂಭರಾಶಿಯಾಗಿದ್ದರೇ, ಶತೃರಾಶಿ ಸಿಂಹರಾಶಿಯಾಗಿದೆ. ತುಲಾರಾಶಿಯನ್ನು ಹೊಂದಿರುವ ವ್ಯಕ್ತಿಗಳು ವಿಶೇಷವಾದ ಗುಣವನ್ನು ಹೊಂದಿರುತ್ತಾರೆ ಅಂದರೆ ಇವರು ಅನುಭವದ ಭಂಡಾರವೆಂದರೆ ತಪ್ಪಾಗಲಾರದು. ವ್ಯಾಪಾರ ಮತ್ತು ಉದ್ಯೋಗದಲ್ಲಿ ವಿಶೇಷವಾದ ತಂತ್ರಜ್ಞಾನ ತುಲಾರಾಶಿಯವರಿಗೆ ಇರುತ್ತದೆ. ಯೋಜನೆ ಮಾಡದೇ ಯಾವುದೇ ಕೆಲಸವನ್ನು ಮಾಡುವುದಿಲ್ಲ. ತಿರುಗಾಟ ಹೆಚ್ಚು ಇರುತ್ತದೆ. Tula Rashi

ಪ್ರಾಪಂಚಿಕ ಸುಖದಲ್ಲಿ ಹೆಚ್ಚು ಆಸಕ್ತಿ ಇರುತ್ತದೆ. ಇವರನ್ನು ಯಾರು ನಂಬಿರುತ್ತಾರೋ ಅವರು ಎಂದಿಗೂ ಕೈ ಬಿಡುವ ವ್ಯಕ್ತಿಗಳಲ್ಲ. ಎಲ್ಲರನ್ನು ಪ್ರೀತಿಸುವ ವ್ಯಕ್ತಿತ್ವವುಳ್ಳವರು. ಜೀವನದಲ್ಲಿ ಏನೇ ಕಷ್ಟಬಂದರೂ ಛಲಗಾರರು, ಕುಗ್ಗದೇ ಧೈರ್ಯವಾಗಿ ಎದುರಿಸುವಂತಹವರು. ಗುರುವು ಮೇಷರಾಶಿಯಲ್ಲಿ ಸಂಚರಿಸುವ ಸಂದರ್ಭದಲ್ಲಿ ನಿಮ್ಮ ರಾಶಿಗೆ ಏಳನೇಯವನಾಗಿರುತ್ತಾನೆ.

ನಿಮ್ಮ ರಾಶಿಗೆ ತುಂಬಾ ಚೆನ್ನಾಗಿರುತ್ತಾನೆ. ಇದರಿಂದ ಹಣಕಾಸಿನಲ್ಲಿ ಬಹಳಷ್ಟು ಸುಧಾರಣೆಗಳು ಕಂಡುಬರುತ್ತದೆ. ಯಾವುದೇ ಉದ್ಯೋಗ, ವ್ಯವಹಾರದಲ್ಲಿ ಬಹಳಷ್ಟು ಪ್ರಗತಿಯನ್ನು ಸಾಧಿಸುತ್ತೀರಿ. ಸಂತಾನದ ಅಪೇಕ್ಷೆ ಇದ್ದರೇ ಸಂತಾನ ಭಾಗ್ಯವಿದೆ. ವಿವಾಹದ ಬಗ್ಗೆ ಯೋಚನೆ ಮಾಡುತ್ತಿದ್ದರೇ ವಿವಾಹದ ಯೋಗಗಳು ಕೂಡಿಬರುತ್ತದೆ. ಈ ಸಂದರ್ಭದಲ್ಲಿ ಅದ್ಭುತವಾದ ಫಲಗಳು ನಿಮಗೆ ಸಿಗುತ್ತದೆ. Tula Rashi

ಗುರುವು ಮೇ 1ರ ನಂತರ ವೃಷಭರಾಶಿಗೆ ಪ್ರವೇಶ ಮಾಡುತ್ತಾನೆ ಆ ಸಮಯದಲ್ಲಿ ನಿಮಗೆ ಎಂಟನೇ ಸ್ಥಾನದಲ್ಲಿರುತ್ತದೆ. ಆ ಸಮಯದಲ್ಲಿ ಗುರುವಿನ ಪ್ರಭಾವ ನಿಮಗೆ ಅಷ್ಟಾಗಿ ಇರುವುದಿಲ್ಲ. ಆರೋಗ್ಯದಲ್ಲಿ ಏರುಪೇರಾಗುತ್ತದೆ ಆದ್ದರಿಂದ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ದೊಡ್ಡ ವ್ಯವಹಾರ ಮಾಡುವುದಾಗಲಿ, ಹಣಕಾಸಿನ ವ್ಯವಹಾರ ಕೊಡುಕೊಳ್ಳುವಿಕೆ,

ಆಸ್ತಿ ವ್ಯವಹಾರ ಮಾಡುವಲ್ಲಿ, ಅಗ್ರಿಮೆಂಟ್ ಮಾಡುವ ವಿಚಾರದಲ್ಲಿ ಎಚ್ಚರಿಕೆ ಇರಲಿ. ಉದ್ಯೋಗದ ವಿಚಾರದಲ್ಲಿ ಎಚ್ಚರ ಮತ್ತು ಹಣಕಾಸಿನ ಲೆಕ್ಕಚಾರದಲ್ಲಿ ಪರಿಪೂರ್ಣತೆ ಇದ್ದರೇ ಅನುಕೂಲಕರವಾದ ಫಲ ಸಿಗುತ್ತದೆ. ಅಧಿಕಾರಿಗಳಿಂದ ಕೆಲವೊಂದು ಸಮಸ್ಯೆಗಳಿದ್ದರೂ ಕೂಡ ತಾಳ್ಮೆಯಿಂದ ಬುದ್ಧಿವಂತಿಕೆಯಿಂದ ನಿಭಾಯಿಸಿ.
ಶನಿಗ್ರಹವು ಕುಂಭರಾಶಿಯಲ್ಲಿ ಸಂಚರಿಸುವ ಸಂದರ್ಭದಲ್ಲಿ 5ನೇಯವನಾಗಿರುತ್ತಾನೆ. ಅಂದರೆ ಶನಿಯು ಪಂಚಮಸ್ಥಾನದಲ್ಲಿರುತ್ತಾನೆ. Tula Rashi

ಕೆಲವೊಂದು ಚಿಂತೆಗೀಡುಮಾಡುತ್ತಾನೆ. ಸಮಸ್ಯೆಗಳು, ಕಮಿಟ್ಮೆಂಟ್ ಗಳು, ಗೊಂದಲಗಳು ಈ ಸಮಯದಲ್ಲಿ ಹೆಚ್ಚು ಇರುತ್ತದೆ. ಜವಾಬ್ದಾರಿಗಳನ್ನ ಯಾವ ರೀತಿ ನಿಭಾಯಿಸಬೇಕೆನ್ನುವ ಚಿಂತೆ ಕಾಡುವ ಸಾಧ್ಯತೆಗಳಿವೆ. ಕುಟುಂಬದ ವಿಚಾರದ ಬಗ್ಗೆ ಸಣ್ಣ ಪುಟ್ಟ ಕಿರಿಕಿರಿಗಳು ಇರುತ್ತವೆ. ದುಷ್ಟ ಜನರ ಸಹವಾಸಗಳನ್ನು ಬಿಡಬೇಕಾಗುತ್ತದೆ. ಕೆಟ್ಟ ಚಟಗಳು ಇದ್ದರೇ ಅದರಿಂದ ಹೊರಗಡೆ ಬರಬೇಕಾಗುತ್ತದೆ. ಬಹಳ ತಾಳ್ಮೆ ಮತ್ತು ಬುದ್ಧಿವಂತಿಕೆಯಿಂದ ನಡೆದುಕೊಳ್ಳಬೇಕಾಗುತ್ತದೆ. Tula Rashi

ತುಲಾರಾಶಿಯವರು ಆದಷ್ಟು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿಕೊಳ್ಳಿ. ವಿದ್ಯಾರ್ಥಿಗಳಿಗೆ ಅವರ ನೆನಪಿನ ಶಕ್ತಿಯ ಮೇಲೆ ಪರಿಣಾಮಬೀರುತ್ತದೆ. ಖರ್ಚುನ್ನು ಕಡಿಮೆ ಮಾಡಿ. ಶನಿಯ ಪ್ರಭಾವವನ್ನು ತಪ್ಪಿಸಲು ಶನಿಶಾಂತಿಯನ್ನು ಮಾಡಿಸಿಕೊಳ್ಳಿ. ರಾಹುಕೇತುಗಳು ಮೀನಾ ಮತ್ತು ಕನ್ಯಾದಲ್ಲಿ ಸಂಚರಿಸುವಾಗ ಕ್ರಮವಾಗಿ 6 ಮತ್ತು 12 ನೇ ಸ್ಥಾನದಲ್ಲಿರುವಂತದ್ದು, ರಾಹು ಶುಭ ಫಲಗಳನ್ನು ತಂದುಕೊಡುತ್ತಾನೆ. ಶತೃಗಳು ಕಡಿಮೆಯಾಗುತ್ತಾರೆ. ಜನ ಕಿರಿಕಿರಿ ಕಡಿಮೆಯಾಗುತ್ತದೆ.

ನೀವು ಮಾಡುವ ಕೆಲಸಗಳಲ್ಲಿ ಅಭಿವೃದ್ಧಿ ಕಂಡುಬರುತ್ತದೆ. ರಾಹುವಿನಿಂದ ಒಳ್ಳೆಯ ಫಲಗಳು ಸಿಗುತ್ತವೆ. ಕೇತು ವ್ಯಯಸ್ಥಾನದಲ್ಲಿರುವ ಸಂದರ್ಭದಲ್ಲಿ ಅಧಿಕವಾದ ಖರ್ಚು ಆಗುತ್ತದೆ. ಹೊಸ ಹೊಸ ಯೋಚನೆಗಳು ಮತ್ತು ಯೋಜನೆಗಳು ಉಂಟಾಗುತ್ತದೆ. ಆದರೆ ಹಣಕಾಸಿನ ವಿಚಾರದಲ್ಲಿ ಕೆಲವೊಂದು ಸಮಸ್ಯೆಗಳು ಉಂಟಾಗುತ್ತವೆ. ಗಲಾಟೆ, ಗೊಂದಲಗಳನ್ನು ನಿಮ್ಮ ಮೇಲೆ ಎಳೆದುಕೊಳ್ಳಬೇಡಿ. Tula Rashi

ಸಾಧ್ಯವಾದರೇ ರಾಹುಕೇತು ಶಾಂತಿಯನ್ನು ಮಾಡಿಸಿ. 2024ರಲ್ಲಿ ನಿಮಗೆ ಒಳ್ಳೆಯ ಫಲಗಳೇ ಇವೆ ಆದರೇ ಹಣದ ಉಳಿತಾಯ ಮತ್ತು ಜನರ ವಿಚಾರದಲ್ಲಿ ಎಚ್ಚರಿಕೆಯಿಂದ ಇದ್ದರೇ ಉತ್ತಮ. ಕೆಲಸಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಿ, ಆರೋಗ್ಯದ ಕಡೆ ಗಮನ ಕೊಡಿ ಹೀಗೆ ಮಾಡಿದರೇ ಒಳ್ಳೆಯ ಫಲಗಳು ಸಿಗುತ್ತವೆ. ಆಂಜನೇಯನಿಗೆ ಅರ್ಚನೆ ಮಾಡಿಸಿ, ಆಂಜನೇಯನಿಗೆ ಎಳ್ಳೆಣ್ಣೆಯನ್ನು ಅರ್ಪಿಸಿ. ಕಾಳಹಸ್ತಿ ಮತ್ತು ತಿರುಪತಿಯ ದರ್ಶನ ಮಾಡಿರಿ ನಿಮಗೆ ಒಳ್ಳೆಯ ಫಲಗಳು ಸಿಗುತ್ತವೆ.

Leave A Reply

Your email address will not be published.