Ultimate magazine theme for WordPress.

Vrishchik 2024 ವರ್ಷ ಭವಿಷ್ಯ ವೃಶ್ಚಿಕ ರಾಶಿಯ ಭವಿಷ್ಯ

0 573

Vrishchik Rashi Bhavishya New Year 2024 ಸ್ನೇಹಿತರೇ 2024ನೇ ಇಸವಿಯ ವೃಶ್ಚಿಕ ರಾಶಿಯ ಬಗ್ಗೆ ವರ್ಷ ಭವಿಷ್ಯವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ವೃಶ್ಚಿ ಕ ರಾಶಿಯ ಜನ್ಮ ನಕ್ಷತ್ರಗಳಾದ ವಿಶಾಖ ನಕ್ಷತ್ರದ 4ನೇ ಚರಣ, ಅನುರಾಧ ನಕ್ಷತ್ರದ 4 ಚರಣ, ಜ್ಯೇಷ್ಠ ನಕ್ಷತ್ರದ 4 ಚರಣಗಳು ಸೇರಿರುವ ವೃಶ್ಚಿಕರಾಶಿಯ ಲಾಂಛನ ಚೇಳು. ಇದರ ಸ್ವಭಾವ ಸೌಮ್ಯವಾಗಿರುತ್ತದೆ. ಬ್ರಾಹ್ಮಣ ವರ್ಣ, ಸ್ತ್ರೀಲಿಂಗದ ರಾಶಿಯಾಗಿದೆ. ಉತ್ತರ ದಿಕ್ಕನ್ನ ಪ್ರತಿಪಾದಿಸುವಂತಹ ರಾಶಿಯಾಗಿದೆ. ರಾಶಿಯ ತತ್ವ ಸ್ಥಿರವಾಗಿರುವಂತದ್ದು, ಜಲ ತತ್ವದ ರಾಶಿಯಾಗಿದೆ.

ರಾಶಿಯ ಅಧಿಪತಿ ಕುಜಗ್ರಹವಾಗಿದೆ. ರಾಶಿಯ ರತ್ನ ಹವಳ, ಅದೃಷ್ಟದ ಬಣ್ಣ ಕೆಂಪು ಮತ್ತು ಕಿತ್ತಳೆಯಾಗಿರುತ್ತದೆ. ಅದೃಷ್ಟದ ವಾರ ಮಂಗಳವಾರ ಮತ್ತು ಗುರುವಾರ, ಅದೃಷ್ಟದ ದೇವತೆ ಶಿವ ಮತ್ತು ಆಂಜನೇಯಸ್ವಾಮಿಯಾಗಿದೆ. ಅದೃಷ್ಟದ ದಿನಾಂಕಗಳು 9,8,27, ಅದೃಷ್ಟದ ಸಂಖ್ಯೆ 3,7,9, ಆಗಿದೆ. ಮಿತ್ರರಾಶಿಗಳು ಕಟಕ ಮತ್ತು ಮೀನಾರಾಶಿಗಳಾಗಿವೆ.

ಸಿಂಹ, ಮೇಷ, ಧನುಸ್ಸು ರಾಶಿ ಶತೃರಾಶಿಯಾಗಿದೆ. ವೃಶ್ಚಿಕ ರಾಶಿಯವರು ಸತ್ಯವಂತರು, ನ್ಯಾಯವಂತರು, ವಿದ್ಯಾವಂತರು, ಬುದ್ದಿವಂತರು, ತಾಳ್ಮೆಯನ್ನು ಹೊಂದಿರುವಂತಹವರು. ಯಾವುದೇ ಕೆಲಸವನ್ನು ಶ್ರದ್ಧೆಯಿಂದ ಮಾಡಿ ಮುಗಿಸುವಂತಹ ವ್ಯಕ್ತಿಗಳು. ಯಾವುದೇ ಕೆಲಸವನ್ನು ಮಾಡಬೇಕಾದರೇ ಆತ್ಮವಿಶ್ವಾಸದಿಂದ ಮಾಡಿ ಮುಗಿಸುತ್ತಾರೆ. Vrishchik

ಯಾವುದೇ ವಿಷಯದ ಬಗ್ಗೆ ನಿರರ್ಗಳವಾಗಿ ಮಾತಾನಾಡುವ ಬುದ್ದಿವಂತಿಕೆಯನ್ನು ಹೊಂದಿರುತ್ತಾರೆ. ಇವರು ಲೆಕ್ಕಾಚಾರ ಮಾಡುವ ಸ್ವಭಾವ ಹೊಂದಿದ್ದರೂ ಖರ್ಚು ಮಾಡಿಬಿಡುತ್ತಾರೆ. ಐಷರಾಮಿ ವಸ್ತುಗಳನ್ನು ಖರೀದಿ ಮಾಡುತ್ತಾರೆ. ವೃಶ್ಚಿಕ ರಾಶಿಯವರು ಯಾವ ಕ್ಷೇತ್ರ ಅಥವಾ ಊರಿನಲ್ಲಿದ್ದರೂ ಪ್ರಮುಖವಾದ ಪಾತ್ರವನ್ನು ನಿರ್ವಹಿಸುವಂತಹ ವ್ಯಕ್ತಿಗಳಾಗಿರುತ್ತಾರೆ. ಅಧಿಕಾರಿಗಳ ಸ್ಥಾನವನ್ನು ಅಲಂಕರಿಸುವಂತಹ ಸಾಮರ್ಥ್ಯವಿರುತ್ತದೆ. ವೃಶ್ಚಿಕ ರಾಶಿಯ ವ್ಯಕ್ತಿಗಳು ಯಾವುದೇ

ತೀರ್ಮಾನವನ್ನು ನ್ಯಾಯಯುತವಾಗಿ ಬಗೆಹರಿಸುತ್ತಾರೆ. ವೃಶ್ಚಿಕ ರಾಶಿಯವರಿಗೆ 2024ನೇ ಇಸವಿಯಲ್ಲಿ ಗುರು ಮೇಷರಾಶಿಯಲ್ಲಿ ಸಂಚರಿಸುವಾಗ ನಿಮ್ಮ ರಾಶಿಗೆ 6ನೇ ಸ್ಥಾನದಲ್ಲಿರುತ್ತಾನೆ. ಆ ಸಮಯದಲ್ಲಿ ಗುರುವಿನ ಪ್ರಭಾವ ನಿಮ್ಮ ಮೇಲೆ ಇರುವುದಿಲ್ಲ. ಸಣ್ಣ ಪುಟ್ಟ ಕೆಲಸಗಳಿಗೂ ವಿಘ್ನಗಳಾಗಬಹುದು. ಕುಟುಂಬದಲ್ಲಿ ಅಶಾಂತಿಗಳು, ಚಿಂತನೆಗಳು, ದೂರದೃಷ್ಠಿ ಇರುತ್ತದೆ. ಆ ಸಮಸ್ಯೆಗಳನ್ನ ಯಾವ ರೀತಿ ಸರಿಪಡಿಸಬೇಕು ಎಂಬ ಚಿಂತನೆಗಳು ನಿಮ್ಮ ಮನಸ್ಸಿನಲ್ಲಿ ಇರುತ್ತದೆ. Vrishchik

ಇನ್ನು ಆರೋಗ್ಯ, ಮನೆಯ ವಿಚಾರವಾಗಿ ಮತ್ತು ಹಣಕಾಸಿನ ವಿಷಯದಲ್ಲಿ ನಿಮಗೆ ಎಷ್ಟೇ ದುಡ್ಡು ಬರುತ್ತಿದ್ದರೂ ಖರ್ಚಾಗುತ್ತದೆ. ಕೆಲವರಿಗೆ ಸಾಲದಂತಹ ಸಮಸ್ಯೆಗಳು ಬರುತ್ತವೆ. ಕೆಲವರಿಗೆ ಮಕ್ಕಳ ವಿಷಯದಲ್ಲಿ ಬೇಸರ,ಕಿರಿಕಿರಿ ಇರುತ್ತದೆ. ಗುರುವು ಮೇ 1ರ ನಂತರ ವೃಷಭರಾಶಿಗೆ ಗುರು ಬರುವುದರಿಂದ 7ನೇ ಮನೆಗೆ ಗುರು ಬರುವುದರಿಂದ ಗುರುವಿನ ಪ್ರಭಾವ ನಿಮ್ಮ ಮೇಲೆ ಬೀಳುತ್ತದೆ. Vrishchik

ಈ ಕಾರಣದಿಂದಾಗಿ ಆರ್ಥಿಕವಾಗಿ ಚೇತರಿಕೆ ಇರುತ್ತದೆ. ವ್ಯಾಪಾರ ವಹಿವಾಟಿನಲ್ಲಿ ಲಾಭವಾಗುತ್ತದೆ. ಹಣಕಾಸಿನಲ್ಲಿ ಉತ್ತಮವಾದ ಪ್ರಗತಿಯನ್ನು ಸಾಧಿಸುತ್ತೀರಿ. ಉದ್ಯೋಗದಲ್ಲಿ ಅಭಿವೃದ್ಧಿಯಾಗುತ್ತದೆ. ವಿವಾಹದ ಯೋಗ ಮತ್ತು ಸಂತಾನದ ಫಲಗಳು ಸಿಗುವ ಸಾಧ್ಯತೆ ಇದೆ. ವ್ಯಾಪಾರ ವಹಿವಾಟಿನಲ್ಲಿ ಅಂದುಕೊಂಡ ರೀತಿಯಲ್ಲಿ ಫಲ ಸಿಗುತ್ತದೆ. ಧನಪ್ರಾಪ್ತಿಯ ಯೋಗ ಸಿಗುತ್ತದೆ. ಶನಿಗ್ರಹದ ಪ್ರಭಾವ ಹೇಗಿರುತ್ತದೆಂದರೆ ಶನಿಗ್ರಹವು ಮಕರರಾಶಿಯಲ್ಲಿ ಸಂಚರಿಸುವುದರಿಂದ ಮತ್ತು

ನಿಮ್ಮ ರಾಶಿಗೆ 4ನೇ ಸ್ಥಾನದಲ್ಲಿರುವುದರಿಂದ ಕುಟುಂಬದಲ್ಲಿ ಗೊಂದಲಗಳು, ತೊಂದರೆಗಳು, ಅಂದುಕೊಂಡ ಕೆಲಸಗಳು ಅಂದುಕೊಂಡಂತೆ ನಡೆಯುತ್ತಿಲ್ಲವಲ್ಲ ಚಿಂತೆ ನಿಮ್ಮನ್ನು ಬಾಧಿಸುವಂತಹ ಸಾಧ್ಯತೆಗಳಿವೆ. ನಿಮ್ಮ ಬಳಿ ಇರುವ ದುಡ್ಡನ್ನು ಸರಿಯಾಗಿ ವಿನಿಯೋಗಿಸಿಕೊಳ್ಳಬೇಕು. ಬೇರೆಯವರ ಮೇಲೆ ಅವಲಂಬಿಸಬೇಡಿ, ಏನೇ ಕೆಲಸ ಮಾಡಿದರೂ ಸ್ವಂತ ಮಾಡಿದರೇ ಉತ್ತಮ. ಹಣಕಾಸು ಮತ್ತು ಜನರ ವಿಚಾರದಲ್ಲಿ ಮತ್ತು ಕೆಲಸ ಕಾರ್ಯದಲ್ಲಿ ಎಚ್ಚರಿಕೆ ಇರಲಿ. Vrishchik

ಕೆಲಸಕ್ಕೆ ಹೆಚ್ಚು ಗಮನವನ್ನು ಕೊಡಿ. ಅನಾವಶ್ಯಕವಾಗಿ ಸಮಯವನ್ನು ವ್ಯರ್ಥ ಮಾಡಬೇಡಿ. ವಿದ್ಯಾರ್ಥಿಗಳು ಸಮಯಕ್ಕೆ ಒಳ್ಳೆಯ ಮಹತ್ವ ಕೊಟ್ಟರೇ ನಿಮಗೇ ಒಳ್ಳೆಯ ಫಲಗಳು ಸಿಗುತ್ತದೆ. ಸಾಧ್ಯವಾದರೇ ಶನಿಶಾಂತಿಯನ್ನು ಮಾಡಿಸಿ. ರಾಹುಕೇತುವಿನ ಪ್ರಭಾವ ನಿಮ್ಮ ಮೇಲೆ ಹೇಗಿದೆ ಎಂದರೆ ರಾಹು ಕೇತು ಮೀನಾ ಮತ್ತು ಕನ್ಯಾರಾಶಿಯಲ್ಲಿ ಸಂಚರಿಸುವ ಸಂದರ್ಭದಲ್ಲಿ ಕ್ರಮವಾಗಿ 5 ಮತ್ತು 11ನೇ ಸ್ಥಾನದಲ್ಲಿರುತ್ತಾರೆ. ಕೇತು ಶುಭ ಫಲಗಳನ್ನು ನೀಡುತ್ತಾನೆ. ಏಕೆಂದರೆ ಧನಲಾಭವಾಗುವ ಸಾಧ್ಯತೆಗಳು ಇರುತ್ತದೆ.

ಕೇತುವಿನಿಂದ ಹಣಕಾಸಿನ ಪ್ರಗತಿ ಕಂಡುಬರುತ್ತದೆ ಆದರೇ ರಾಹುವಿನಿಂದ ಸ್ವಲ್ಪ ಆರೋಗ್ಯಕ್ಕೆ ಸಂಬಂಧಪಟ್ಟ ಚಿಂತೆ ಇರುತ್ತದೆ ಹಾಗಾಗಿ ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ವಹಿಸಿ ಮತ್ತು ಮಕ್ಕಳ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ನಿಮಗೆ ಅವಶ್ಯಕವಾಗಿದ್ದರೇ ಮಾತ್ರ ಪ್ರಯಾಣ ಮಾಡಿರಿ. ಪತಿ ಮತ್ತು ಪತ್ನಿ ವಿಚಾರದಲ್ಲಿ ದ್ವಂದ್ವವಿರುತ್ತದೆ, ಭಿನ್ನಾಭಿಪ್ರಾಯಗಳು ಇರುತ್ತದೆ ಕೂತು ಮಾತಾಡಿ ಸರಿಮಾಡಿಕೊಳ್ಳಿ. ರಾಹುಕೇತುವಿನ ಶಾಂತಿ ಅಥವಾ ನವಗ್ರಹ ಶಾಂತಿಯನ್ನು

ಮಾಡಿಸುವಂತದ್ದು ಬಹಳಷ್ಟು ಒಳ್ಳೆಯ ಫಲಗಳು ನಿಮಗೆ ಸಿಗುತ್ತದೆ. ಒಟ್ಟಾರೆಯಾಗಿ 2024ನೇ ಇಸವಿ ಶುಭಫಲಗಳೇ ಹೆಚ್ಚಾಗಿರುತ್ತದೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರವೇನೆಂದರೆ ಪವಿತ್ರ ಕ್ಷೇತ್ರಗಳಲ್ಲಿ ನಾಗಹೋಮವನ್ನು ಮಾಡಿಸಿ, ಮಹಾ ರುದ್ರ ಮಂತ್ರವನ್ನು ಪಠಣವನ್ನು ಮಾಡಿರಿ ಜೊತೆಗೆ ದೇವಸ್ಥಾನದಲ್ಲಿ ಮಾಡುವಂತಹ ಸರ್ಪ ಶಾಂತಿಗೆ ನಿಮ್ಮ ಕೈಲಾದಷ್ಟು ನೆರವನ್ನು ನೀಡಿರಿ. ಕೇಸರಿ ತಿಲಕವನ್ನು ಧಾರಣೆಮಾಡಿಕೊಳ್ಳಿ. ಈ ರೀತಿಯಾದ ಸುಲಭವಾದ ಪರಿಹಾರವನ್ನು ಮಾಡಿಕೊಂಡರೇ ನಿಮ್ಮ ಸಮಸ್ಯೆಗಳು ಆದಷ್ಟು ಕಡಿಮೆಯಾಗುತ್ತದೆ.

Leave A Reply

Your email address will not be published.