Ultimate magazine theme for WordPress.

best day for head bath ವಾರದ ಈ ದಿನ ಸ್ನಾನ ಮಾಡಿದರೆ

0 355

best day for head bath astrology ವಾರದಲ್ಲಿ ಕೆಲವು ದಿನಗಳಲ್ಲಿ ವಿವಾಹಿತ ಮಹಿಳೆಯರು ತಮ್ಮ ತಲೆ ಕೂದಲನ್ನು ತೊಳೆಯಬಾರದು. ಒಂದು ವೇಳೆ ವಿವಾಹಿತ ಮಹಿಳೆಯರು ಈ ದಿನಗಳಲಿ ತಲೆಯ ಸ್ನಾನ ಮಾಡಿದರೇ ಆಕೆಯ ಗಂಡನು ಸಾಕಷ್ಟು ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆಯಂತೆ. ಆಕೆಯ ಗಂಡ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳನ್ನು ಎದುರಿಸುವುದರ ಜೊತೆಗೆ ಆಕೆಯ ಮಕ್ಕಳು ಮತ್ತು ಕುಟುಂಬ ಕೂಡ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾದರೇ ಯಾವ ದಿನ ವಿವಾಹಿತ ಮಹಿಳೆಯರು ತಲೆ ಕೂದಲನ್ನು ತೊಳೆಯಬಾರದು ಎಂಬುದನ್ನು ತಿಳಿಸಿಕೊಡುತ್ತೇವೆ.

ಸೋಮವಾರದ ದಿನ ವಿವಾಹಿತ ಮಹಿಳೆಯರು ತಲೆಕೂದಲನ್ನು ತೊಳೆದುಕೊಳ್ಳುವುದರಿಂದ ಆಕೆಯ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಆಕೆಯ ಮಕ್ಕಳು ಬಿಕ್ಕಟ್ಟಿನ ಜೀವನವನ್ನು ನಡೆಸಬೇಕಾಗುತ್ತದೆ. ಮಹಿಳೆ ಮಾಡುವ ಈ ಚಿಕ್ಕ ತಪ್ಪಿನಿಂದ ಆರ್ಥಿಕ ಸಮಸ್ಯೆಯಿಂದ ಬಳಲಬೇಕಾಗುತ್ತದೆ. ಆದ್ದರಿಂದ ಮಹಿಳೆಯರು ಸೋಮವಾರದ ದಿನ ಯಾವುದೇ ಕಾರಣಕ್ಕೂ ತಲೆಕೂದಲನ್ನು ತೊಳೆಯದೇ ಇರುವುದು ಉತ್ತಮ. best day

ತಲೆ ಸ್ನಾನ ಮತ್ತು ಕೂದಲನ್ನು ಕಟ್ಟುಮಾಡುವುದು ಮಂಗಳವಾದ ನಿಷೇಧವಿದೆ. ಮಂಗಳಗ್ರಹದ ಪ್ರಭಾವಕ್ಕೆ ಒಳಗಾದವರೂ ಈ ನೀತಿಯನ್ನು ಪಾಲಿಸಬೇಕಾಗುತ್ತದೆ. ಬುಧವಾರ ಕನ್ಯೆಯರು ತಲೆ ಕೂದಲನ್ನು ತೊಳೆಯಬಾರದು. ಒಂದು ವೇಳೆ ನಿಮ್ಮ ಮನೆಯ ಹೆಣ್ಣು ಮಕ್ಕಳು ತಲೆ ಕೂದಲನ್ನು ತೊಳೆಯುತ್ತಿದ್ದರೇ ನಿಲ್ಲಿಸಬೇಕು ಏಕೆಂದರೆ ಕನ್ಯೆಯರು ಬುಧವಾರ ತಲೆಕೂದಲನ್ನು ತೊಳೆಯುವುದರಿಂದ ಆಕೆಯ ಸಹೋದರನ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ.

ಹಿಂದೂ ಧರ್ಮದ ನಂಬಿಕೆಯ ಪ್ರಕಾರ ಒಬ್ಬ ಮಗ ಇರುವ ತಾಯಂದಿರು ಬುಧವಾರ ತಲೆಸ್ನಾನ ಮಾಡಬಾರದು. ಹೀಗೆ ಮಾಡಿದರೇ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ. ಇನ್ನು ಗಂಡು ಮಗು ಪಡೆಯಬೇಕೆಂಬ ಹಂಬಲವುಳ್ಳ ಹೊಸದಾಗಿ ಮದುವೆಯಾಗಿರುವವರು ಬುಧವಾರ ತಲೆಸ್ನಾನ ಮಾಡುವುದು ಒಳ್ಳೆಯದು. best day

ಆದರೇ ಹೆಣ್ಣು ಮಕ್ಕಳನ್ನು ಹೊಂದಿರುವ ತಾಯಂದಿರು ಬುಧವಾರ ತಲೆಸ್ನಾನ ಮಾಡುವುದು ಒಳ್ಳೆಯದಲ್ಲ. ಇದು ಮಗಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಗುರುವಾರ ವಿವಾಹಿತ ಮಹಿಳೆಯರು ತಲೆಕೂದಲನ್ನು ತೊಳೆಯಬಾರದು, ಒಂದು ವೇಳೆ ಗುರುವಾರ ತಲೆಯ ಸ್ನಾನ ಮಾಡಿದರೇ ಆತನ ಗಂಡನ ಆಯಸ್ಸು ಕಡಿಮೆಯಾಗುತ್ತಂತೆ. ಹೀಗಾಗಿ ವಿವಾಹಿತ ಮಹಿಳೆಯರು ಮರೆತುಕೂಡ ಈ ಕೆಲಸ ಮಾಡಬಾರದು. ಮಹಿಳೆಯರು ತಮ್ಮ ಉಗುರು ಮತ್ತು ತಲೆಕೂದಲನ್ನ ಕತ್ತರಿಸಬಾರದು.

ತಲೆಸ್ನಾನ ಮಾಡಿದ ನಂತರ ಕೂದಲನ್ನು ಒಣಗಿಸಿ ಎತ್ತಿಕಟ್ಟಿ ನಂತರವೇ ದೇವರಿಗೆ ಪೂಜೆಯನ್ನು ಮಾಡಬೇಕು. ಒದ್ದೆಕೂದಲನ್ನು ಬಿಟ್ಟು ಕೊಂಡು ಮನೆತುಂಬಾ ಓಡಾಡಬಾರದು. ತಲೆಸ್ನಾನ ಮಾಡಿದ ನಂತರ ತಪ್ಪದೇ ಹಣೆಯ ಮೇಲೆ ಕುಂಕುಮವನ್ನು ಇಟ್ಟುಕೊಂಡು ದೇವರ ಪೂಜೆಯನ್ನು ಮಾಡಬೇಕು. ತಲೆಗೆ ಎಣ್ಣೆ ಹಾಕಿಕೊಂಡು ಸ್ನಾನ ಮಾಡಿದರೇ ಅದನ್ನು ಅಭ್ಯಂಜನ ಸ್ನಾನ ಎನ್ನಲಾಗುತ್ತದೆ. best day

ಅದನ್ನು ಮೂರು ಸಂದರ್ಭದಲ್ಲಿ ಮಾತ್ರ ಮಾಡಬೇಕಾಗುತ್ತದೆ. ತಲೆ ಸ್ನಾನವನ್ನು ಭಾನುವಾರ, ಬುಧವಾರ, ಮಂಗಳವಾರದ ದಿನ ಯಾವುದೇ ಕಾರಣಕ್ಕೂ ಮಾಡಬಾರದು. ಇದರಿಂದ ದೋಷ ಉಂಟಾಗುತ್ತದೆ. ನಮ್ಮಲ್ಲಿರುವ ಸಿರಿಸಂಪತ್ತು ನಶಿಸುತ್ತದೆ. ಯಾವುದಾದರೂ ಸಂದಿಗ್ನಪರಿಸ್ಥಿತಿಯಲ್ಲಿ ಮಾತ್ರ ಮಾಡಬಹುದು ಆದರೇ ಕೆಲವೊಂದು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಬಾನುವಾರ ತಲೆಸ್ನಾನ ಮಾಡಬೇಕಾಗಿರುವುದು ಎದುರಾದಾಗ ತಲೆಸ್ನಾನ ಮಾಡುವ ನೀರಿನಲ್ಲಿ ಸ್ವಲ್ಪ ಗುಲಾಬಿ ಹೂವಿನ

ದಳಗಳನ್ನು ಹಾಕಿ ನಂತರ ತಲೆ ಸ್ನಾನ ಮಾಡಬೇಕಾಗುತ್ತದೆ. ಹೀಗೆ ಮಾಡುವುದರಿಂದ ಯಾವುದೇ ದೋಷ ಉಂಟಾಗುವುದಿಲ್ಲ. ಮಂಗಳವಾರದ ದಿನ ತಲೆ ಸ್ನಾನ ಮಾಡಬೇಕಾದರೇ ಸ್ವಲ್ಪ ಹುತ್ತದ ಮಣ್ಣನ್ನು ತೆಗೆದುಕೊಂಡು ತಲೆ ಹಾಗೂ ಮೈಗೆ ಸವರಿಕೊಂಡ ನಂತರ ತಲೆ ಸ್ನಾನ ಮಾಡುವುದರಿಂದ ಎದುರಾಗಬಹುದಾದ ದೋಷ ನಿವಾರಣೆಯಾಗುತ್ತದೆ. ಗುರುವಾರದ ದಿನ ತಲೆಸ್ನಾನ ಮಾಡಬೇಕಾದ ಸಂದರ್ಭ ಬಂದರೆ ಮಣ್ಣಿನ ಸಮೇತವಾಗಿ ಗರಿಕೆಯನ್ನು ಕಿತ್ತುಕೊಂಡು, best day

ಗರಿಕೆಯನ್ನು ನೀರಿಗೆ, ಗರಿಕೆಯ ಮಣ್ಣನ್ನು ಮೈಗೆ ಸವರಿಕೊಂಡ ನಂತರ ತಲೆಸ್ನಾನ ಮಾಡುವುದರಿಂದ ಯಾವುದೇ ರೀತಿಯ ದೋಷ ದರಿದ್ರ ಉಂಟಾಗುವುದಿಲ್ಲ. ಹೀಗೆ ತಲೆಸ್ನಾನದ ವಿಷಯದಲ್ಲಿ ಕೆಲವೊಂದು ನಿಯಮಗಳನ್ನ ಅನುಸರಣೆಮಾಡಿಕೊಂಡು ವಾರದ ಮೂರು ದಿನದಲ್ಲಿ ತಲೆಸ್ನಾನ ಮಾಡಿದರೇ ಒಳ್ಳೆಯದು. ಹೆಣ್ಣು ಮಕ್ಕಳಿಗೆ ಉತ್ತಮ ಫಲಗಳು ಪ್ರಾಪ್ತಿಯಾಗುತ್ತದೆ. ಹಿಂದೂ ಧರ್ಮದ ಪ್ರಕಾರ ಹೆಣ್ಣು ಮಕ್ಕಳು ಬುಧವಾರ, ಶುಕ್ರವಾರ, ಶನಿವಾರ ತಲೆಸ್ನಾನ ಮಾಡಿದರೇ ಶುಭವಾಗುತ್ತದೆ.

Leave A Reply

Your email address will not be published.