Ultimate magazine theme for WordPress.

BROOM ಪೊರಕೆ ಈ ದಿಕ್ಕಿನಲ್ಲಿಟ್ರೆ ಶ್ರೀಮಂತಿಕೆ

0 13,261

BROOM STICK vastu ಪೊರಕೆಯನ್ನು ಈ ದಿಕ್ಕಿನಲ್ಲಿ ಇಟ್ಟರೇ ಹಣ ಕೋಟಿಗಳಲ್ಲಿ ಬರುತ್ತದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಿರಬೇಕೆಂದರೆ ಮನೆಯನ್ನ ಶುಭ್ರವಾಗಿಟ್ಟುಕೊಳ್ಳಬೇಕು. ಮನೆಯಲ್ಲಿ ಕಸ ಗುಡಿಸಲು ಒಂದು ಪದ್ದತಿ ಇದೆ. ಬೆಳಿಗ್ಗೆ ಎದ್ದ ತಕ್ಷಣ ಮನೆಯ ಕಸವನ್ನು ಗುಡಿಸಿ ಶುಭ್ರವಾಗಿಟ್ಟುಕೊಳ್ಳಬೇಕು. ಮನೆಯ ಕಸವನ್ನು ಗುಡಿಸುವ ಪೊರಕೆ ನಮ್ಮ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಶಾಸ್ತ್ರಗಳಲ್ಲಿ ಮನೆಯಲ್ಲಿ ಪೊರಕೆಯನ್ನು ಯಾವ ದಿಕ್ಕಿನಲ್ಲಿ ಇಡಬೇಕೆಂದು ಹೇಳಲಾಗಿದೆ.

ಶಾಸ್ತ್ರದಕಾರ ಪೊರಕೆಯನ್ನು ಲಕ್ಷ್ಮಿದೇವಿಗೆ ಹೋಲಿಸಲಾಗಿದೆ. ಪೊರಕೆಯನ್ನು ಕಾಲಿನಿಂದ ಒದೆಯಬಾರದು. ಅಪ್ಪಿತಪ್ಪಿಯೂ ಪೊರಕೆಗೆ ಕಾಲು ತಾಕಿದರೂ ಲಕ್ಷ್ಮಿದೇವಿಯಲ್ಲಿ ಕ್ಷಮೆ ಕೇಳಬೇಕು. ಹಾಳಾಗಿರುವ ಪೊರಕೆಯನ್ನು ಹೊರಹಾಕಬೇಕು ಮತ್ತು ತುಂಬಾ ದಿನ ಒಂದೇ ಪೊರಕೆಯನ್ನು ಬಳಕೆ ಮಾಡಬಾರದು. ಇನ್ನೊಂದು ಮುಖ್ಯವಾದ ವಿಷಯವೇನೆಂದರೆ ಸಂಜೆಯಾದ ನಂತರ ಮನೆಯ ಕಸವನ್ನು ಮನೆಯಿಂದ ಹೊರಹಾಕಬಾರದು. ಹೀಗೆ ಮಾಡಿದರೇ BROOM STICK vastu

ನಮ್ಮ ಮನೆಯ ಲಕ್ಷ್ಮಿ ಹೊರಗಡೆ ಹೋಗುತ್ತಾಳೆಂಬ ನಂಬಿಕೆ ಇದೆ. ಶನಿವಾರವು ಹೊಸ ಪೊರಕೆಯನ್ನ ಬಳಸಲು ಶುಭದಿನವಾಗಿದೆ. ಪೊರಕೆಯನ್ನು ಖರೀದಿಸಲು ಶುಭದಿನಗಳು ಮಂಗಳವಾರ, ಶನಿವಾರ ಮತ್ತು ಭಾನುವಾರ ಈ ದಿನಗಳಲ್ಲಿ ಪೊರಕೆಗಳನ್ನು ಖರೀದಿ ಮಾಡಬಹುದು. ಸೋಮವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ ಈ ದಿನಗಳಲ್ಲಿ ಯಾವುದೇ ಕಾರಣಕ್ಕೂ ಹೊಸ ಪೊರಕೆಯನ್ನ ಖರೀದಿ ಮಾಡಬಾರದು. ಒಂದು ವೇಳೆ ಖರೀದಿ ಮಾಡಿದ್ದೇ ಆದರೇ ಮನೆಯಲ್ಲಿ ಹಣದ ಸಮಸ್ಯೆ ಹೆಚ್ಚಾಗುತ್ತದೆ. BROOM STICK vastu

ನಿಮ್ಮ ಮನೆಗೆ ಹಬ್ಬಹರಿದಿನಗಳಲ್ಲಿ ಪೊರಕೆಯನ್ನು ತಂದರೆ ಶುಭದಾಯಕವಾಗಿರುತ್ತದೆ. ಪೊರಕೆಯನ್ನು ಈಶಾನ್ಯ ದಿಕ್ಕು ಅಥವಾ ದೇವರ ಮೂಲೆಯಲ್ಲಿ ಪೊರಕೆಯನ್ನು ಇಡಬೇಡಿ. ಈಶಾನ್ಯ ಮೂಲೆಯಲ್ಲಿ ದೇವರನ್ನು ಇಟ್ಟು ಪೂಜೆ ಮಾಡಲಾಗುತ್ತದೆ. ಅಂತಹ ಸ್ಥಳಗಳಲ್ಲಿ ಪೊರಕೆಯನ್ನು ಇಟ್ಟರೆ ಅಶುಭ. ಮನೆಯ ನೈರುತ್ಯ ಮೂಲೆಯಲ್ಲಿ ಪೊರಕೆಯನ್ನು ಇಡುವುದು ಸೂಕ್ತ. ನೈರುತ್ಯ ಮೂಲೆಯನ್ನು ಮಾಲೀಕನ ಮೂಲೆ ಎಂದು ಹೇಳಲಾಗುತ್ತದೆ. ಮನೆಯ ಮಾಲೀಕನ ಅಭಿವೃದ್ಧಿಯಾಗಬೇಕು, ಕೆಲಸದಲ್ಲಿ ಯಶಸ್ಸು ಪಡೆಯಬೇಕೆಂದರೆ ಈ ಮೂಲೆಯಲ್ಲಿ ಪೊರಕೆಯನ್ನ ಇಡಬೇಕು. ನಿಮ್ಮ ಮನೆಯಲ್ಲಿ ಲಕ್ಷ್ಮಿದೇವಿಯು ನೆಲೆಸುತ್ತಾಳೆ. BROOM STICK vastu

ಪೊರಕೆಯನ್ನು ಎಲ್ಲರಿಗೂ ಕಾಣುವ ಹಾಗೇ ಇಡಬಾರದು. ಒಂದು ವೇಳೆ ಹಾಗೇ ಇಟ್ಟರೇ ಅದು ಅಪಶಕುನ. ಹಾಗಾಗಿ ಯಾರಿಗೂ ಕಾಣದ ಜಾಗದಲ್ಲಿ ಮುಚ್ಚಿ ಇಡಬೇಕು. ಪೊರಕೆಯನ್ನು ಮಂಚದ ಕೆಳಗೆ ಇಡಬೇಡಿ. ಪೊರಕೆಯನ್ನು ಅಡುಗೆ ಮನೆಯಲ್ಲೂ ಇಡಬಾರದು. ಒಂದು ವೇಳೆ ಇಟ್ಟರೇ ಅಡುಗೆಗೆ ಬಳಸುವ ಸಾಮಾಗ್ರಿಗಳು ಬೇಗ ಖಾಲಿಯಾಗುತ್ತವೆ ಹಾಗೂ ಅಡುಗೆಯಲ್ಲಿ ರುಚಿ ಕೂಡ ಕಡಿಮೆಯಾಗುತ್ತದೆ. ನಿಮ್ಮ ಮನೆಯಲ್ಲಿರುವ ಸದಸ್ಯರು ಹೊರಗಡೆ ಕೆಲಸಕ್ಕೆ ಹೋಗುವಾಗ ಯಾವುದೇ ಕಾರಣಕ್ಕು ಅವರು ಹೋದ ತಕ್ಷಣ ಕಸವನ್ನು ಗುಡಿಸಬಾರದು. ಪೊರಕೆಯನ್ನು ಉದ್ದವಾಗಿ ನಿಲ್ಲಿಸಬೇಡಿ. ಅದು ಅಪಶಕುನ. BROOM STICK vastu

ನೀವು ಹೊಸ ಮನೆಯ ಗೃಹಪ್ರವೇಶ ಮಾಡುತ್ತಿದ್ದರೇ ನಿಮ್ಮ ಜೊತೆಗೆ ಪೊರಕೆಯನ್ನು ಇಡಿದುಕೊಂಡು ಗೃಹಪ್ರವೇಶ ಮಾಡಿ ಇದರಿಂದ ನಿಮ್ಮ ಹೊಸ ಮನೆ ಅದೃಷ್ಟವನ್ನು ತಂದುಕೊಡುತ್ತದೆ. ನಿಮ್ಮ ಮನೆ ಸದಾಕಾಲ ಸುಖ, ಸಂಮೃದ್ಧಿಯಿಂದ ಕೂಡಿರುತ್ತದೆ. ಸೂರ್ಯಾಸ್ತದ ಸಮಯದಲ್ಲಿ ಹೊಸ ಪೊರಕೆಯನ್ನು ಮನೆಗೆ ತರಬಾರದು. ಇದು ಪ್ರಾಶಸ್ತ್ಯವಾದ ಸಮಯವಲ್ಲ. ನೀವು ಕೆಟ್ಟ ಸಮಯದಿಂದ ಪಾರಾಗಬೇಕಾದರೇ ರಾತ್ರಿ ಸಮಯದಲ್ಲಿ ನಿಮ್ಮ ಮನೆಯ ಬಾಗಿಲ ಮುಂದೆ ಪೊರಕೆಯನ್ನು ಇಡಬೇಕು. ರಾತ್ರಿ ಸಮಯದಲ್ಲಿ ಮಾತ್ರ ಇಡಬೇಕು, ಬೆಳಿಗ್ಗೆ ಸಮಯದಲ್ಲಿ ಬೇರೆಯವರು ನೋಡಬಾರದು.

ಮಹಾಲಕ್ಷ್ಮಿ ನಿಮ್ಮ ಮನೆಯಲ್ಲಿ ಸದಾ ನೆಲೆಸಬೇಕೆಂದರೇ ಬ್ರಾಹ್ಮಿ ಮುಹೂರ್ತದಲ್ಲಿ ಯಾವುದಾದರೂ ದೇವಸ್ಥಾನಕ್ಕೆ ಎರಡು ಪೊರಕೆಗಳನ್ನು ಇಟ್ಟುಬರಬೇಕು. ಈ ರೀತಿ ಮಾಡಿದ್ದೇ ಆದರೇ ನಿಮ್ಮ ಜೀವನವೇ ಬದಲಾಗುತ್ತದೆ. ಮಂದಿರಗಳಲ್ಲಿ ಪೊರಕೆಗಳನ್ನು ದಾನ ಮಾಡುವುದರಿಂದ ಶುಭವಾಗುತ್ತದೆ. ಪೊರಕೆಗಳನ್ನು ಹಬ್ಬಹರಿದಿನಗಳಲ್ಲಿ, ಗ್ರಹಣದ ಸಂದರ್ಭಗಳಲ್ಲಿ ದಾನಮಾಡಬಹುದು. BROOM STICK vastu

ಶುಕ್ರವಾರದಂದು ಪೊರಕೆಯನ್ನು ದಾನಮಾಡಬೇಕು. ದಾನ ಮಾಡುವ ದಿನ ಹಿಂದಿನ ಹೊಸ ಪೊರಕೆಯನ್ನು ತರಬೇಕು ಮತ್ತು ಬೇರೆಯವರಿಗೆ ಅದು ತಿಳಿಯದಂತೆ ದಾನಮಾಡಬೇಕು. ಪೊರಕೆಯನ್ನು ಲಕ್ಷ್ಮಿ ಸ್ವರೂಪ ಎಂದು ಹೇಳುತ್ತಾರೆ. ಆದ್ದರಿಂದ ಪೊರಕೆಯನ್ನು ದಾನ ಮಾಡುವುದರಿಂದ ನಿಮ್ಮ ಮನೆಯಲ್ಲಿ ಲಕ್ಷ್ಮಿಯ ಆಗಮನವಾಗುತ್ತದೆ. ಹಣದ ಸಮಸ್ಯೆ ದೂರವಾಗುತ್ತದೆ.

Leave A Reply

Your email address will not be published.