Ultimate magazine theme for WordPress.

Dhanu ಧನುರ್ ರಾಶಿಯ ಮಾಸ ಭವಿಷ್ಯ

0 404

Dhanu Rashi Bhavishya ಜನವರಿ ತಿಂಗಳ ಧನುರ್ ರಾಶಿಯ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಹೊಸ ವರ್ಷದ ತಿಂಗಳಿನಲ್ಲಿ ಏನೆಲ್ಲಾ ಸವಾಲುಗಳಿವೆ? ಏನೆಲ್ಲಾ ಲಾಭಗಳಿವೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಧನುಸ್ಸು ರಾಶಿಯವರ ರಾಶಿಯ ಅಧಿಪತಿ ಗುರುವಾಗಿರುವುದರಿಂದ ಅದೃಷ್ಟದ ದಿನ ಗುರುವಾರ ಮತ್ತು ಭಾನುವಾರ. ಅದೃಷ್ಟದ ದೇವರು ಮಹಾವಿಷ್ಣು.

ಅದೃಷ್ಟದ ಸಂಖ್ಯೆಗಳು 3,1,4 ಮತ್ತು 5 ಆದರೇ ಅದೃಷ್ಟದ ದಿನಾಂಕಗಳು 3,12,21,30 ಆಗಿರುತ್ತವೆ. ಅದೃಷ್ಟದ ರತ್ನ ಪುಷ್ಯರಾಗವಾಗಿದೆ. ಹಳದಿ ಮತ್ತು ಕೆಂಪು ನಿಮ್ಮ ಅದೃಷ್ಟದ ಬಣ್ಣವಾಗಿರುತ್ತದೆ. ಮೇಷ ಮತ್ತು ಸಿಂಹರಾಶಿಯು ಮಿತ್ರರಾಶಿಗಳಾಗಿವೆ. ಕಟಕ, ವೃಶ್ಚಿಕ, ಮೀನಾ ರಾಶಿ ಶತೃರಾಶಿಗಳಾಗಿವೆ. ಸ್ವತಂತ್ರವಾಗಿ, ಯಾರ ಅಂಗುಇಲ್ಲದೇ, ಯಾರ ಅಧೀನದಲ್ಲಿ ಇಲ್ಲದೇ ಇರಬೇಕೆನ್ನುವ ವ್ಯಕ್ತಿತ್ವವನ್ನು ಧನುರ್ ರಾಶಿಯವರು ಹೊಂದಿರುತ್ತಾರೆ ಜೊತೆಗೆ ವಿದ್ವಾಂಸರಾಗಿದ್ದು ಬಹಳಷ್ಟು ವಿಷಯಗಳ ಬಗ್ಗೆ ಅಧ್ಯಯನ ಮಾಡಿರುವಂತಹವರು

ಮತ್ತು ಯಾರೇ ಏನೇ ಹೇಳಿದರೂ ತಕ್ಷಣವೇ ಗ್ರಹಿಕೆ ಮಾಡಿಕೊಳ್ಳುವಂತಹ ವ್ಯಕ್ತಿತ್ವ ಇವರದ್ದಾಗಿದೆ. ಅಧ್ಯಯನಶೀಲರು, ಅನುಭಾವಿಗಳು ಆಗಿರುವ ಈ ಧನುಸ್ಸು ರಾಶಿಯವರಿಗೆ ಜನವರಿ ತಿಂಗಳು 2024ರಲ್ಲಿ ಫಲಗಳು ಹೇಗಿವೆ ಎಂದರೆ ಗುರು ಮತ್ತು ಶನಿ ಪರಮಾತ್ಮನ ಅನುಗ್ರಹ ಉತ್ತಮವಾಗಿ ಕೂಡಿರುತ್ತದೆ. ಏನೇ ಕಷ್ಟವಿದ್ದರೂ, ಜಂಜಾಟವಿದ್ದರೂ ಒಂದು ತಕ್ಕಮಟ್ಟಿಗೆ ಎದುರಿಸುವಂತಹ ಮಾನಸಿಕವಾದ ಸ್ಥೈರ್ಯ ಇರುತ್ತದೆ. ತು್ಬಾ ಶ್ರಮಜೀವಿಗಳಾಗಿರುವುದರಿಂದ ಕಷ್ಟಪಟ್ಟು ಕೆಲಸ ಮಾಡುವುದರಿಂದ Dhanu

ಹೆಚ್ಚಿನ ಆರ್ಥಿಕ ಅಭಿವೃದ್ಧಿ ಕಂಡುಬರುತ್ತದೆ. ಮನೆಯಲ್ಲಿ ಯಾವುದೇ ಶುಭಕಾರ್ಯಗಳನ್ನು ಮಾಡುವಂತದ್ದು ಅಥವಾ ಬೇರೆ ಕಡೆಯಿಂದ ಶುಭ ಕಾರ್ಯಗಳನ್ನು ಕೇಳುವುದು ಮತ್ತು ಮಧ್ಯಸ್ಥಿಕೆ ವಹಿಸಿ ಯಾವುದಾದರೂ ಶುಭಕಾರ್ಯಗಳನ್ನು ನಡೆಸುವುದು ಇರುತ್ತದೆ. ಬೇರೆಯವರಿಗೆ ಸಹಾಯ ಮಾಡುವಂತಹವರು ಆಗಿರುವುದರಿಂದ ಬಹಳಷ್ಟು ಧರ್ಮ ಕಾರ್ಯಗಳನ್ನು ನಡೆಸಿಕೊಡುವಂತಹ ಅವಕಾಶಗಳು ಈ ತಿಂಗಳಿನಲ್ಲಿ ಬರುತ್ತದೆ. ಈ ತಿಂಗಳಿನಲ್ಲಿ ಮದುವೆಯ ಯೋಗಗಳು ಕಂಡುಬರುತ್ತದೆ.

ಹೊಸ ಉದ್ಯೋಗವನ್ನು ಪ್ರಾರಂಭ ಮಾಡುವಂತದ್ದು, ನಿಮ್ಮ ಓದಿಗೆ ತಕ್ಕನಾದ ಉದ್ಯೋಗಗಳು ಸಿಗುವ ಸೂಚನೆಗಳಿವೆ. ಸರ್ಕಾರಿ ಮತ್ತು ಅರೆ ಸರ್ಕಾರಿ ಕೆಲಸಗಾರರಿಗೆ ಬಡ್ತಿ ಯೋಗಗಳು ಮತ್ತು ಒಳ್ಳೆಯ ಅವಕಾಶಗಳು ಕಂಡುಬರುತ್ತಿದೆ ಮತ್ತು ಸಿಕ್ಕಿರುವಂತಹ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡಾಗ ಒಳ್ಳೆಯ ಫಲಗಳು ಸಿಗುತ್ತದೆ. ನೀವು ಧೈರ್ಯವಾಗಿ ಮುನ್ನುಗ್ಗಿದರೇ ಅಂದುಕೊಂಡಿರುವ ಕಾರ್ಯಗಳು ಯಶಸ್ವಿಯಾಗುತ್ತದೆ ಮತ್ತು ಲಾಭವು ಸಿಗುತ್ತದೆ. Dhanu

ವ್ಯಾಪಾರಿಗಳು ಯಾವುದೇ ತರಹದ ವ್ಯಾಪಾರ ಮಾಡಿದರೂ ಅಂದರೆ ಚಿಕ್ಕ ವ್ಯಾಪಾರ ಮಾಡಿದರೂ ಸರಿಯೇ, ದೊಡ್ಡ ಪ್ರಮಾಣದ ವ್ಯಾಪಾರ ಮಾಡಿದರೂ ಸರಿಯೇ ಹೆಚ್ಚಿನ ಪ್ರಮಾಣದಲ್ಲಿ ಲಾಭಗಳು ಸಿಗುತ್ತದೆ. ಹೊಸ ವ್ಯಾಪಾರದತ್ತ ಒಲವು ಕಂಡುಬರುತ್ತದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಬಹಳಷ್ಟು ಆಸಕ್ತಿ ಇರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿ ಸಿಗುತ್ತದೆ. ರಾಜಕಾರಣಿಗಳಿಗೆ ಮತ್ತು ಸಂಘ ಸಂಸ್ಥೆಗಳನ್ನು ನಡೆಸುತ್ತಿರುವವರಿಗೆ ಒಳ್ಳೆಯ ಸನ್ಮಾನಗಳು ಸಿಗುತ್ತದೆ.

ಧನುರ್ ರಾಶಿಯವರು ಯಾವುದೇ ಕೆಲಸದಲ್ಲಿದ್ದರೂ ಕೆಲಸವನ್ನು ಪ್ರೀತಿಸುವುದರಿಂದ ಗೌರವ ಸಿಗುತ್ತದೆ. ಆದರೇ ಈ ಮಧ್ಯೆ ನಿಮ್ಮನ್ನು ಅರ್ಥ ಮಾಡಿಕೊಳ್ಳುವವರು ತುಂಬಾ ಕಡಿಮೆ ಇರುತ್ತಾರೆ. ಅಪಾರ್ಥ ಮಾಡಿಕೊಳ್ಳುವವರು ತುಂಬಾ ಇರುತ್ತಾರೆ. ನೀವು ಎಚ್ಚರಿಕೆಯಿಂದ ಕೆಲಸ ಮಾಡಿದರೇ ಒಳ್ಳೆದಾಗುತ್ತದೆ. ನೀವು ಮಾಡುವಂತಹ ಕೆಲಸಗಳಿಗೆ ಮೇಲಾಧಿಕಾರಿಗಳಿಂದ ಪ್ರಶಂಸೆಯನ್ನು ಪಡೆಯುತ್ತೀರಿ. ಆರೋಗ್ಯವಿಚಾರಕ್ಕೆ ಬಂದರೆ ಎದೆ ಉರಿ, ವಾತ, ಪಿತ್ತದಂತಹ ಸಮಸ್ಯೆಗಳು ಕಂಡುಬರುವ ಸಾಧ್ಯತೆ ಇರುತ್ತದೆ Dhanu

ಸ್ವಲ್ಪ ಆರೋಗ್ಯದ ವಿಷಯದಲ್ಲಿ ಎಚ್ಚರಿಕೆವಹಿಸಬೇಕಾಗುತ್ತದೆ. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ, ನಿದ್ದೆಯನ್ನು ಮಾಡಿರಿ. ನೀವು ಸ್ತ್ರೀಯಾಗಿದ್ದರೇ ಪುರುಷ ವರ್ಗದಿಂದ, ಪುರುಷರಾಗಿದ್ದರೇ ಸ್ತ್ರೀವರ್ಗದಿಂದ ಬಹಳಷ್ಟು ಒಳ್ಳೆಯ ಫಲಗಳು ಸಿಗುತ್ತದೆ. ದಾಂಪತ್ಯ ಜೀವನದಲ್ಲಿ ಬಹಳಷ್ಟು ಹೊಂದಾಣಿಕೆ ಕಂಡುಬರುತ್ತದೆ. ಪ್ರೇಮಿಗಳಾಗಿದ್ದರೇ ಹೊಂದಾಣಿಕೆ ಕಂಡುಬರುತ್ತದೆ.

ಆಕಸ್ಮಿಕವಾದಂತಹ ಧನಲಾಭಗಳು ಈ ತಿಂಗಳಿನಲ್ಲಿ ಕಂಡುಬರುತ್ತದೆ. ಶತೃಗಳನ್ನು ನಿಗ್ರಹಿಸುವಂತಹ ಸಾಮರ್ಥ್ಯವಿರುತ್ತದೆ. ನಿಮ್ಮ ಬಳಿ ಇರುವ ಹಣಕಾಸನ್ನು ನೋಡಿ ಖರ್ಚು ಮಾಡಿದರೇ ಬಹಳ ಒಳ್ಳೆಯ ಫಲಗಳು ಸಿಗುತ್ತದೆ. ಧನುಸ್ಸು ರಾಶಿಯವರು ಸುಬ್ರಮಣ್ಯ ಸ್ವಾಮಿಯ ದರ್ಶನದಿಂದ ಬಹಳಷ್ಟು ಒಳ್ಳೆಯ ಫಲಗಳು ಸಿಗುತ್ತದೆ. ಜೊತೆಗೆ ನವನಾಗ ಮಂತ್ರವನ್ನು ಪಠಣ ಮಾಡುವುದರಿಂದ ಒಳ್ಳೆಯದಾಗುತ್ತದೆ. ಮನೆದೇವರ ಮೂಲಮಂತ್ರವನ್ನು ಪಠಣ ಮಾಡಿಕೊಳ್ಳಿ ಅದ್ಭುತವಾದ ಫಲಗಳು ಸಿಗುತ್ತದೆ. Dhanu

Leave A Reply

Your email address will not be published.