Ultimate magazine theme for WordPress.

Drink for Diabetes ಡಯಾಬಿಟಿಸ್ ಇರುವವರಿಗೆ

0 330

Drink for Diabetes ಡಯಾಬಿಟಿಸ್ ಅನ್ನು ನಿವಾರಣೆ ಮಾಡುವ ಅದ್ಭುತವಾದ ಜ್ಯೂಸ್ ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಸಕ್ಕರೆ ಕಾಯಿಲೆಯನ್ನು ಎರಡು ಪ್ರಕಾರದ ವಿಭಾಗಗಳನ್ನು ಮಾಡಬಹುದು. ಟೈಮ್ 1 ಡಯಾಬಿಟಿಸ್, ಟೈಪ್ 2 ಡಯಾಬಿಟಿಸ್. ಟೈಪ್ 1 ಡಯಾಬಿಟಿಸ್ ಬಹಳ ಬೇಗ ರಿವರ್ಸ್ ಆಗುತ್ತದೆ. ಟೈಪ್ 2 ಡಯಾಬಿಟಿಸ್ ಅನ್ನು ಕೂಡ ಯೋಗದ ಮೂಲಕ ಆಯುರ್ವೇದ ಚಿಕಿತ್ಸೆಯ ಮೂಲಕ ರಿವರ್ಸ್ ಮಾಡಿಕೊಳ್ಳಬಹುದು. ಟೈಪ್ 1 ಡಯಾಬಿಟಿಸ್ ಅನ್ನು ಕ್ಯೂರ್ ಮಾಡಿಕೊಳ್ಳಬಹುದು ಇಲ್ಲವೇ ಅದರ ದುಷ್ಪರಿಣಾಮಗಳನ್ನು ತಡೆಗಟ್ಟಬಹುದು.

ಟೈಪ್ 1 ಡಯಾಬಿಟಿಸ್ ಅಂದರೆ ಇನ್ಸುಲಿನ್ ಉತ್ಪಾದನೆ ಆಗುವುದಿಲ್ಲ. ಪ್ಯಾಂಕ್ರಿಯಾಸಿಸ್ ಎಂಬ ಗ್ರಂಥಿ ಇರುತ್ತದೆ ಅಲ್ಲಿ ಬೀಟಾ ಸೆಲ್ಗಳಿಂದ ಇನ್ಸುಲಿನ್ ಉತ್ಪಾದನೆ ಆಗುತ್ತದೆ. ಈ ಜೀವಕೋಶಗಳಿಂದ ಇನ್ಸುಲಿನ್ ಉತ್ಪಾದನೆಯಾಗದೇ ಇರಲು ಕಾರಣವೇನೆಂದರೆ ರೋಗಪ್ರತಿರೋಧಕ ಶಕ್ತಿಯು ಬೀಟಾ ಜೀವಕೋಶಗಳ ಮೇಲೆ ವಿರುದ್ಧವಾಗಿ ಆಕ್ರಮಣ ಮಾಡುತ್ತದೆ. Drink for Diabetes

ಈ ರೀತಿಯ ದಾಳಿಯಿಂದಾಗಿ ಡಯಾಬಿಟಿಸ್ ಬರುತ್ತದೆ. ಈ ಸಮಸ್ಯೆ ಬಂದಾಗ ರೋಗಪ್ರತಿರೋಧಕ ಶಕ್ತಿಯನ್ನು ಸಮತೋಲನದಲ್ಲಿಟ್ಟುಕೊಳ್ಳಬೇಕು. ಟೈಪ್ 2 ಡಯಾಬಿಟಿಸ್ ಬಗ್ಗೆ ನೋಡುವುದಾದರೇ ಇನ್ಸುಲಿನ್ ಉತ್ಪಾದನೆ ಆಗುತ್ತಿರುತ್ತದೆ. ನಾವು ತಿಂದಂತಹ ಆಹಾರವು ಗ್ಲೋಕೋಸ್ ಗ್ಲೈಕೋಜನ್ ಆಗಿ ಪರಿವರ್ತನೆಯಾಗುತ್ತದೆ. ಇನ್ಸುಲಿನ್ ನ ಕೆಲಸ ಜೀವಕೋಶಗಳಿಗೆ ಪೋಷಕಾಂಶಗಳು ಹೋಗುವಂತಹ ಕೆಲಸವನ್ನು ಮಾಡುತ್ತದೆ. ಇನ್ಸುಲಿನ್ ಸರಿಯಾಗಿ ಕೆಲಸ ಮಾಡದೇ ಇದ್ದಾಗ ಅದು ಗ್ಲೋಕೋಸ್ ರಕ್ತದಲ್ಲಿ ಉಳಿದು ಟೈಪ್ 2 ಡಯಾಬಿಟಿಸ್ ಆಗುತ್ತದೆ.

ಪೋಷಕಾಂಶವು ಸೆಲ್ ನ ಒಳಗಡೆ ಹೋಗಲು ಆಗುವುದಿಲ್ಲ. ಈ ಎರಡು ಪ್ರಕಾರದ ಡಯಾಬಿಟಿಸ್ ನಿಯಂತ್ರಣ ಮಾಡುವ ಜ್ಯೂಸ್ ಅನ್ನು ಇಲ್ಲಿ ತಿಳಿಸಿಕೊಡುತ್ತೇವೆ. ನಮ್ಮ ದೇಹದಲ್ಲಿರುವ ರೋಗನಿರೋಧಕ ಶಕ್ತಿಯನ್ನು ಚುರುಕುಗೊಳಿಸುತ್ತದೆ ಮತ್ತಿ ಕ್ರಿಯಾಶೀಲ ಮಾಡುತ್ತದೆ. ದೇಹದ ಅಸಮತೋಲನ ಸರಿ ಆಗಿರಬೇಕೆಂದರೆ ದೇಹದ ಜೀವಕೋಶಗಳು ಸ್ವಚ್ಛವಾಗಬೇಕು ನೈಟ್ರಿಕ್ ಆಸಿಡ್, ಆಂಟಿಆಕ್ಸಿಡೆಂಟ್ ಗಳು ಹೆಚ್ಚಾಗಿರುವ ಜ್ಯೂಸ್ ಅನ್ನು ಹೆಚ್ಚಾಗಿ ಸೇವನೆ ಮಾಡಬೇಕು. Drink for Diabetes

ಸೋರೆಕಾಯಿ ಜ್ಯೂಸ್, ಗರಕೆ ಜ್ಯೂಸ್, ಬೆಟ್ಟದ ನೆಲ್ಲಿಕಾಯಿ ಜ್ಯೂಸ್, ಬೂದುಕುಂಬಳಕಾಯಿ ಜ್ಯೂಸ್ಗಳ ಸೇವನೆ ಮಾಡಬೇಕು. ಈ ಜ್ಯೂಸ್ ಹೇಗೆ ತಯಾರಿ ಮಾಡುವುದೆಂದರೆ 8ರಿಂದ 10 ತಂಗಡಿ ಹೂವುಗಳ ದಳಗಳನ್ನು ಹಾಕಬೇಕು ಮತ್ತು ಬಿಲ್ವಪತ್ರೆ ಎಲೆಗಳನ್ನ ಮೂರರಿಂದ ನಾಲ್ಕು ಎಲೆಗಳನ್ನು ಹಾಕಬೇಕು. ನಿತ್ಯ ಪುಷ್ಪ ಅಥವಾ ಅದರ ಗಿಡದ ಎಲೆಗಳನ್ನು ಹಾಕಿ ಜ್ಯೂಸ್ ತಯಾರು ಮಾಡಿ ಸೇವನೆ ಮಾಡುವುದರಿಂದ ಅದರಲ್ಲಿರುವ ಅದ್ಭುತವಾದ ಶಕ್ತಿ ಡಯಾಬಿಟಿಸ್ ಅನ್ನು ಕಂಟ್ರೋಲ್ ಮಾಡುತ್ತದೆ.

ತಂಗಡಿ ಹೂವು ಮತ್ತು ಬಿಲ್ವಪತ್ರೆ ಎಲೆಯು ಮಧುಮೇಹವನ್ನು ರಿವರ್ಸ್ ಮಾಡುತ್ತದೆ. ಎಲ್ಲಾ ರೀತಿಯ ಔಷಧೀಯ ತತ್ತ್ವಗಳು ಇದರಲ್ಲಿ ಅಡಕವಾಗಿರುತ್ತದೆ. ಈ ಮೇಲೆ ಹೇಳಿರುವ ಜ್ಯೂಸ್ ಗಳಲ್ಲಿ ಒಂದೊಂದು ಜ್ಯೂಸ್ ಅನ್ನು ಕನಿಷ್ಠ ಒಂದೊಂದು ತಿಂಗಳು ಸೇವನೆ ಮಾಡಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದು ಒಳ್ಳೆಯದು. ಈ ಜ್ಯೂಸ್ ಗಳನ್ನು ಸುಮಾರು 200 ರಿಂದ 250 ಎಂಎಲ್ ವರೆಗೆ ಸೇವನೆ ಮಾಡಬಹುದು. ಸಣ್ಣ ಮಕ್ಕಳಿಗೆ ಶುಗರ್ ಬಂದರೇ 50ಎಂಎಲ್ ನಿಂದ 60 ಎಂಎಲ್ ವರೆಗೆ ಈ ಜ್ಯೂಸ್ ಗಳನ್ನು ಕೊಡಬಹುದು. Drink for Diabetes

ಕಿಡ್ನಿ ಸಮಸ್ಯೆ ಇರುವವರು, ಗರ್ಭಿಣಿ ಸ್ತ್ರೀಯರು, ಸ್ತನಪಾನ ಮಾಡುವ ಸ್ತ್ರೀಯರು ಈ ಜ್ಯೂಸ್ ಗಳನ್ನು ಸೇವನೆ ಮಾಡಬಾರದು, ಉಳಿದಂತೆ ಎಲ್ಲರೂ ಈ ಜ್ಯೂಸ್ ಗಳನ್ನು ಸೇವನೆ ಮಾಡಬಹುದು. ಇದರ ಸೇವನೆಯ ಜೊತೆಗೆ ವ್ಯಾಯಾಮವನ್ನು ರೂಢಿಸಿಕೊಂಡರೇ ಟೈಪ್ 1, ಟೈಪ್ 2 ಡಯಾಬಿಟಿಸ್ ಬಹಳ ಬೇಗ ನಿವಾರಣೆಯಾಗುತ್ತದೆ. ಮಣ್ಣಿನಲ್ಲಿ ವಾಕಿಂಗ್ ಮಾಡುವುದು ಬಹಳ ಮುಖ್ಯ. ಜೊತೆಗೆ ನಮ್ಮ ಫ್ಯಾಟ್ ಮೆಟಾಬಾಲಿಸಂ ಕ್ರಿಯಾಶೀಲವಾಗಿ ಮಧುಮೇಹದ ಸೈಡ್ ಎಫೆಕ್ಟ್ ನಿವಾರಣೆಯಾಗುತ್ತದೆ. Drink for Diabetes

Leave A Reply

Your email address will not be published.