Ultimate magazine theme for WordPress.

Custard Apple ಸೀತಾಫಲ ಲಾಭಗಳು

0 281

Health Benefits of Custard Apple ಸೀತಾಫಲದ ಅದ್ಭುತವಾದ ಲಾಭಗಳನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಯಾವುದೇ ಹಣ್ಣುಗಳನ್ನು ತಿನ್ನಬೇಕಾದರೇ ಅವುಗಳ ಸೀಜನ್ ನಲ್ಲಿ ತಿನ್ನಬೇಕು. ಅವುಗಳನ್ನ ನೈಸರ್ಗಿಕವಾಗಿ ಸಿಗುವ ಹಣ್ಣನ್ನು ತಿನ್ನಲು ರೂಢಿಮಾಡಿಕೊಳ್ಳಬೇಕು. ಸೀತಾಫಲದಲ್ಲಿ ವಿಟಮಿನ್ ಸಿ ಅಂಶವೂ ಹೇರಳವಾಗಿ ಸಿಗುತ್ತದೆ. ಈ ಹಣ್ಣು ವಿಟಮಿನ್ ಸಿ ಜೊತೆಗೆ ಪೊಟಾಷಿಯಂ,

ಮೆಗ್ನೇಷಿಯಂ, ಕ್ಯಾಲ್ಸಿಯಂ, ಐರನ್, ಜಿಂಕ್, ಫ್ಲೆವನೈಡ್, ಥಯಾಮಿನ್ ಮತ್ತು ಫೈಬರ್ ಅಂಶ,ವಿಟಮಿನ್ ಕೆ, ವಿಟಮಿನ್ ಬಿ6, ವಿಟಮಿನ್ ಬಿ2,ವಿಟಮಿನ್ ಬಿ1,ಹೀಗೆ ಹಲವಾರು ರೀತಿಯ ಪೋಷಕಾಂಶಗಳನ್ನು ಹೊಂದಿದೆ. ಇದು ಸಾತ್ವಿಕ ಆಹಾರ, ಮತ್ತು ಮಧುರಗುಣವನ್ನು ಹೊಂದಿದೆ. ಆಯುರ್ವೇದದ ಪ್ರಕಾರ ಶೀತವೀರ್ಯದ್ರವ್ಯಗುಣವನ್ನು ಹೊಂದಿದೆ. Custard Apple

ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು, ಬೆಳಿಗ್ಗೆ ಅಥವಾ ಮಧ್ಯಾಹ್ನ ಸೇವನೆ ಮಾಡಬೇಕು. ಆಯುರ್ವೇದ ಸಿದ್ಧಾಂತದ ಪ್ರಕಾರ ರಾತ್ರಿಯ ವೇಳೆಯಲ್ಲಿ ಹಣ್ಣುಗಳ ಸೇವನೆಯು ನಿಷೇಧವಾಗಿದೆ. ರಾತ್ರಿಯ ವೇಳೆಯಲ್ಲಿ ಸೇವನೆ ಮಾಡುವುದರಿಂದ ಕಫದ ಸಮಸ್ಯೆ ಉಂಟಾಗುತ್ತದೆ. ಹಣ್ಣುಗಳನ್ನು ಬೆಳಿಗ್ಗೆ ಮತ್ತು ಮಧ್ಯಾಹ್ನ ಸೇವನೆ ಮಾಡುವುದರಿಂದ ವಾತ ಪಿತ್ತ ಶಮನವಾಗುತ್ತದೆ. ಈ ಹಣ್ಣಿನಲ್ಲಿರುವ ವಿಟಮಿನ್ಗಳು ಅನೇಕ ಪ್ರಯೋಜನಕಾರಿಯಾಗಿದೆ ಮತ್ತು ರೋಗಪ್ರತಿರೋಧಕ ಶಕ್ತಿಯ ಅಸಮತೋಲವನ್ನು

ಈ ಹಣ್ಣು ನಿವಾರಿಸುತ್ತದೆ. ವಿಟಮಿನ್ ಸಿ ನಮ್ಮ ಶರೀರದ ಅಸ್ಥಿ ಮಂಡಲವನ್ನು ಗಟ್ಟಿಗೊಳಿಸಲು ಇದು ಕೆಲಸ ಮಾಡುತ್ತದೆ. ವಿಟಮಿನ್ ಸಿ ಯಿಂದ ನಮ್ಮ ಶರೀರದ ನರಗಳು ಗಟ್ಟಿಗೊಳ್ಳುತ್ತವೆ ಮತ್ತು ರಕ್ತ ಶುದ್ದೀಕರಣವಾಗುತ್ತದೆ. ಕಣ್ಣುಗಳಿಗೆ ಬರುವಂತಹ ಹಲವಾರು ಕಾಯಿಲೆಗಳಿಂದ ಇದು ನಮ್ಮನ್ನು ರಕ್ಷಣೆ ಮಾಡುತ್ತದೆ. ಹೃದಯಾ, ಲಿವರ್ ಅನ್ನು ಸ್ವಚ್ಛವಾಗಿಡುತ್ತದೆ. ಹೃದಯಾಘಾತವನ್ನು ತಡೆಗಟ್ಟುತ್ತದೆ.ಈ ಹಣ್ಣನ್ನು ಸೇವನೆಯಿಂದ ನಮಗೆ ಚರ್ಮದ ಸಮಸ್ಯೆ ಬರುವುದಿಲ್ಲ. Custard Apple

ಈ ಹಣ್ಣು ನಮ್ಮ ಚರ್ಮಕ್ಕೆ ಅತೀ ಮುಖ್ಯವಾದ ಅಂಶವನ್ನು ತುಂಬುತ್ತದೆ. ಈ ಹಣ್ಣು ಚರ್ಮಕ್ಕೆ ಆರೋಗ್ಯ ಮತ್ತು ಕಾಂತಿಯನ್ನು ಕೊಡುತ್ತದೆ ಮತ್ತು ಮಲಬದ್ಧತೆಯ ಸಮಸ್ಯೆಯು ನಿವಾರಣೆಯಾಗುತ್ತದೆ. ಯಾರಿಗೆ ಕ್ಯಾನ್ಸರ್ ಕಾಯಿಲೆ ಬಂದಿರುತ್ತದೆಯೋ ಅಂತಹವರು ಈ ಹಣ್ಣನ್ನು ನಿಯಮಿತವಾಗಿ ಸೇವನೆಯನ್ನ ಮಾಡಿದರೇ ಕ್ಯಾನ್ಸರ್ ಕಾರಕ ಜೀವಕೋಶಗಳನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ಮುಂದೆ ಕ್ಯಾನ್ಸರ್ ಕಾಯಿಲೆ ಬರಬಾರದೆಂದರೆ ಕ್ರಮಬದ್ಧವಾಗಿ ಈ ಹಣ್ಣನ್ನು ಸೇವನೆ ಮಾಡಿದರೇ ಒಳ್ಳೆಯದು.

ಈ ಹಣ್ಣು ಇತಿಹಾಸವನ್ನು ಹೊಂದಿದೆ. ಸೀಜನ್ ನಲ್ಲಿ ಈ ಹಣ್ಣನ್ನು ತಪ್ಪದೇ ಸೇವನೆ ಮಾಡಿ ರೋಗದಿಂದ ಮುಕ್ತಿ ಹೊಂದಿರಿ. ಈ ಹಣ್ಣನ್ನು ಒಂದು ಅಥವಾ ಎರಡು ಹಣ್ಣನ್ನು ತಿನ್ನಬಹುದು. ಸಕ್ಕರೆ ಕಾಯಿಲೆ ಇರುವವರು ಈ ಹಣ್ಣನ್ನು ಸೇವನೆ ಮಾಡಬಹುದು. ಹೃದಯ ಸಮಸ್ಯೆ ಇರುವವರು ಕೂಡ ತಿನ್ನಬಹುದು. ಕಿಡ್ನಿ ಸಮಸ್ಯೆ ಇರುವವರು ವೈದ್ಯರ ಸಲಹೆಯ ಮೇರೆಗೆ ಸೇವನೆ ಮಾಡಬೇಕು. ಗರ್ಭಿಣಿ ಸ್ತ್ರೀಯರು ಕೂಡ ಸೇವನೆ ಮಾಡಬಹುದು. ಮಕ್ಕಳಿಂದ ವೃದ್ಧರವರೆಗೂ ಈ ಹಣ್ಣನ್ನು ತಿನ್ನಬಹುದು. Custard Apple

ಆದರೇ ಯಾರಿಗೆ ಬಹಳ ಕೋಲ್ಡ್ ಆಗುತ್ತಿರುತ್ತದೆಯೋ ಮತ್ತು ಕಫದ ಸಮಸ್ಯೆ, ಶೀತದ ಸಮಸ್ಯೆ, ಅಸ್ತಮ ಸಮಸ್ಯೆ, ಕೆಮ್ಮು, ದಮ್ಮು ಇರುತ್ತದೆಯೋ ಇಂತಹವರು ಇದನ್ನು ಸೇವನೆ ಮಾಡಬಾರದು. ಏಕೆಂದರೆ ಆಯುರ್ವೇದದ ಪ್ರಕಾರ ಶೀತವೀರ್ಯಗುಣ ಧರ್ಮವನ್ನು ಹೊಂದಿದೆ. ಇಷ್ಟು ಮುಂಜಾಗ್ರತೆ ವಹಿಸಿ ಈ ಹಣ್ಣನ್ನು ಎಲ್ಲರೂ ಸೇವನೆ ಮಾಡುವುದರಿಂದ ಆರೋಗ್ಯದ ಲಾಭ ತಿಳಿಯುತ್ತದೆ.

ಈ ಹಣ್ಣಿನಿಂದ ರಕ್ತದ ಶಕ್ತಿ ಹೆಚ್ಚಾಗಿ, ರಕ್ತ ಶುದ್ದೀಕರಣವಾಗುವ ದಿವ್ಯ ವರದಾನವೆಂದು ಹೇಳಬಹುದು. ಈ ಹಣ್ಣನ್ನು ಸೀಜನ್ ನಲ್ಲಿ ಬೆಳಿಗ್ಗೆ, ಮಧ್ಯಾಹ್ನ ಆಹಾರ ಸೇವನೆ ಮಾಡುವುದಕ್ಕೆ ಮೊದಲು ಸೇವನೆ ಮಾಡಿರಿ. ಜ್ಯೂಸ್ ರೂಪದಲ್ಲಿ ಸೇವನೆ ಮಾಡುವವರು ಐಸ್ ಮತ್ತು ಸಕ್ಕರೆಯನ್ನು ಹಾಕಬೇಡಿ. ಐಸ್, ಸಕ್ಕರೆ ಹಾಕಿದರೇ ಅದು ವಿಷವಾಗುತ್ತದೆ. Custard Apple

Leave A Reply

Your email address will not be published.