Ultimate magazine theme for WordPress.

Kanya Rashi2024 ವರ್ಷ ಭವಿಷ್ಯ ಕನ್ಯಾ ರಾಶಿಯ ಭವಿಷ್ಯ ಬದಲಾಯಿಸಿಕೊಳ್ಳುವ ಸಮಯ

0 13,832

Kanya Rashi bhavishya New year 2024 ಸ್ನೇಹಿತರೇ 2024ರ ಕನ್ಯಾರಾಶಿಯವರ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಕನ್ಯಾರಾಶಿಯ ಜನ್ಮ ನಕ್ಷತ್ರಗಳು ಉತ್ತರ ನಕ್ಷತ್ರದ 2,3,4ನೇ ಚರಣ, ಹಸ್ತ ನಕ್ಷತ್ರದ 4 ಚರಣಗಳು, ಚಿತ್ತ ನಕ್ಷತ್ರದ ಮೊದಲೆರೆಡು ನಕ್ಷತ್ರಗಳಾಗಿವೆ. ಕನ್ಯೆಯ ಚಿತ್ರವನ್ನು ಹೊಂದಿರುವ ಲಾಂಭನವನ್ನು ಕನ್ಯಾರಾಶಿಯು ಹೊಂದಿದೆ. ಇದು ಸ್ತ್ರೀಲಿಂಗದ ರಾಶಿಯಾಗಿದೆ. ದಕ್ಷಿಣ ದಿಕ್ಕು ಜೊತೆಗೆ

ಈ ರಾಶಿಯ ತತ್ವ ಉಭಯ ಹಾಗೂ ಭೂಮಿಯ ತತ್ವವಾಗಿದೆ. ರಾಶಿಯ ಅಧಿಪತಿ ಬುಧಗ್ರಹ. ಈ ರಾಶಿಯ ರತ್ನ ಪಚ್ಚೆ. ಈ ರಾಶಿಯು ಸೌಮ್ಯ ಸ್ವಭಾವದ ರಾಶಿಯಾಗಿದೆ. ಅದೃಷ್ಟ ಬಣ್ಣ ಹಳದಿ ಮತ್ತು ಹಸಿರು ಆಗಿದೆ. ಅದೃಷ್ಟದ ದಿನಗಳು ಬುಧವಾರ ಹಾಗೂ ಸೋಮವಾರ. ಅದೃಷ್ಟ ದೇವರು ವಿಘ್ನವಿನಾಶಕ ಗಣೇಶ. ಅದೃಷ್ಟದ ದಿನಾಂಕ 5,14,23 ಉಪಯುಕ್ತವಾದ ದಿನಾಂಕಗಳಾಗಿವೆ. Kanya Rashi

ಜೊತೆಗೆ ಅದೃಷ್ಟದ ಸಂಖ್ಯೆಗಳು 2,3,5,6,7 ನಿಮಗೆ ಬಹಳ ಉಪಯುಕ್ತವಾಗಿರುವಂತಹ ಅದೃಷ್ಟದ ಸಂಖ್ಯೆಗಳಾಗಿವೆ. ಮಿತ್ರರಾಶಿ ಮೇಷ, ಮಿಥುನ, ಸಿಂಹ ಆಗಿದೆ. ಶತೃ ರಾಶಿ ಕಟಕರಾಶಿಯಾಗಿದೆ. ತಾಳ್ಮೆ ಮತ್ತು ಸಹನೆಯು ಕನ್ಯಾ ರಾಶಿಯವರ ಆಸ್ತಿ ಎನ್ನಬಹುದು. ದುಡಿಮೆಯಲ್ಲಿ ಕಷ್ಟಪಟ್ಟು, ಇಷ್ಟಪಟ್ಟು ಕೆಲಸವನ್ನು ಮಾಡುತ್ತಾರೆ. ಹಣಕ್ಕಾಗಿ ಸಮಸ್ಯೆಗಳು ಬಂದರೂ ಅದನ್ನು ಯಾವುದಾದರೂ ರೂಪದಲ್ಲಿ ಸರಿಮಾಡಿಕೊಳ್ಳುತ್ತಾರೆ. ಸಮಯ ಪ್ರಜ್ಞೆ ಎನ್ನುವುದು ಇವರಿಗೆ ಚೆನ್ನಾಗಿ ಇರುತ್ತದೆ.

ಜಟಿಲವಾದ ಸಮಸ್ಯೆಗಳನ್ನ ಸುಲಭವಾಗಿ ಬಿಡಿಸಿಕೊಳ್ಳುತ್ತಾರೆ. ಬೇರೆಯವರ ಮೇಲೆ ನಂಬಿಕೆ ಕಡಿಮೆ ಇರುತ್ತದೆ, ನಿಮ್ಮ ಮೇಲೆ ನಿಮಗೆ ನಂಬಿಕೆ ಹೆಚ್ಚಾಗಿರುತ್ತದೆ. ಗುರುಗೋಚಾರ ಫಲ ಯಾವ ರೀತಿ ಇದೆ ಎಂದರೆ ಗುರು 8ನೇ ಸ್ಥಾನದಲ್ಲಿರುತ್ತಾನೆ. ಗುರುವಿನ ಪ್ರಭಾವ ನಿಮಗೆ ಅಷ್ಟಾಗಿ ಇರುವುದಿಲ್ಲ. ಇದರಿಂದ ಹಣಕಾಸಿನ ಸಮಸ್ಯೆಗಳು, ಆರೋಗ್ಯದ ಸಮಸ್ಯೆಗಳು, ಬಂಧು ಬಾಂಧವರ ಹತ್ತಿರ ಸಣ್ಣ ಪುಟ್ಟ ವಿಷಯಗಳಲ್ಲಿ ಮನಸ್ಥಾಪ ಬರುತ್ತದೆ ಆದ್ದರಿಂದ ಎಚ್ಚರವಾಗಿರಿ. ಜನರ ಜೊತೆ ಮಾತನಾಡುವಾಗ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಬೇಕಾಗುತ್ತದೆ.

ಗುರುವಿನ ಪ್ರಭಾವ ಇಲ್ಲದೇ ಇದ್ದಾಗ ನೀವು ಮಾಡುವಂತಹ ಕೆಲಸಗಳಲ್ಲಿ ಜಾಣ್ಮೆ, ಬುದ್ದಿವಂತಿಕೆ, ಎಚ್ಚರಿಕೆ ಇರಬೇಕಾಗುತ್ತದೆ. ಕುಟುಂಬದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಿ. ಮೇ 1ನೇ ತಾರೀಖಿನ ನಂತರ ಗುರು 9ನೇ ಮನೆಗೆ ಪ್ರವೇಶ ಮಾಡುತ್ತಾನೆ ಇದರಿಂದ ನಿಮಗೆ ಸಂಪೂರ್ಣವಾಗಿ ಗುರುವಿನ ಅನುಗ್ರಹವಿರುತ್ತದೆ. ಗುರುವಿನ ಪ್ರಭಾವ ಚೆನ್ನಾಗಿದ್ದಾಗ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿಯಾಗುತ್ತದೆ. ಹಣಕಾಸಿನಲ್ಲಿ ಅಭಿವೃದ್ಧಿಯಾಗುತ್ತದೆ. ಕೋರ್ಟ್ ಕಚೇರಿಗಳ ವ್ಯವಹಾರಗಳು ಸುಲಲಿತವಾಗಿ ಆಗುತ್ತದೆ. Kanya Rashi

ನಿಂತು ಹೋದ ಕೆಲಸಗಳು ಸುಲಭವಾಗಿ ಪ್ರಾರಂಭವಾಗುತ್ತದೆ. ಕೆಲಸ ಸಿಗುವಂತದ್ದು, ಮಕ್ಕಳ ವಿಷಯದಲ್ಲಿ ಒಳ್ಳೆಯ ಫಲ ಸಿಗುತ್ತದೆ. ವಿದ್ಯಾರ್ಥಿಗಳಿಗೆ ಅತ್ಯುತ್ತಮವಾದ ಫಲಗಳು ಸಿಗುತ್ತದೆ. ವಿವಾಹದ ಯೋಗಗಳು ಮತ್ತು ಮಕ್ಕಳಿಲ್ಲದವರಿಗೆ ಮಕ್ಕಳಭಾಗ್ಯವಿದೆ. ಗುರುವಿನ ಪ್ರಭಾವದಿಂದ ಸಂತೋಷ ಮತ್ತು ಸಂಮೃದ್ಧಿ ಬರುತ್ತದೆ.
ಶನಿಯ ಪ್ರಭಾವ ಯಾವ ರೀತಿ ಇರುತ್ತದೆ ಎಂದರೆ ಶನಿಗ್ರಹವು ಕುಂಭರಾಶಿಯಲ್ಲಿ ಸಂಚರಿಸುವ ಸಂದರ್ಭದಲ್ಲಿ 7ನೇ ಮನೆಯಲ್ಲಿರುತ್ತಾನೆ. Kanya Rashi

ಪತಿ, ಪತ್ನಿಯ ವಿಚಾರದಲ್ಲಿ ಸಣ್ಣಪುಟ್ಟ ವಿರಸಗಳು, ಭಿನ್ನಾಭಿಪ್ರಾಯಗಳು ಇರುತ್ತವೆ ಅದನ್ನು ತಾಳ್ಮೆಯಿಂದ ಸರಿಮಾಡಿಕೊಳ್ಳಬೇಕಾಗುತ್ತದೆ. ಅನಾವಶ್ಯಕ ತಿರುಗಾಟವನ್ನು ಮಾಡಬೇಡಿ. ಕುಟುಂಬದಲ್ಲಿ ಕಲಹಗಳು ಬಂದರೆ ಅದನ್ನು ಅಲ್ಲಿಯೇ ಸರಿಮಾಡಿಕೊಳ್ಳಿ. ದುಡ್ಡನ್ನು ಉಳಿತಾಯ ಮಾಡಿ ಸಾಲವನ್ನು ಮಾಡಬೇಡಿ. ಶನಿ ಗ್ರಹದ ಪ್ರಭಾವ ನಿಮ್ಮ ಮೇಲೆ ಇರುವುದರಿಂದ ನೀವು ಯಾವ ಕೆಲಸ ಮಾಡುತ್ತಿದ್ದರೂ ಹೆಚ್ಚು ಗಮನ ಕೊಟ್ಟು ಮಾಡಬೇಕು. ರಾಹುಕೇತುಗಳ ಪ್ರಭಾವ ಹೇಗಿರುತ್ತದೆಂದರೆ

2024ರಲ್ಲಿ ಮೀನಾ ಮತ್ತು ಕನ್ಯಾರಾಶಿಯಲ್ಲಿ ಇರುವ ಸಂದರ್ಭದಲ್ಲಿ ಮಾನಸಿಕವಾಗಿ ವೈರಾಗ್ಯಗಳು, ಮನಸ್ಸಿನಲ್ಲಿ ಚಿಂತೆ, ಅಂದುಕೊಂಡಿದ್ದಂತಹ ಕೆಲಸಗಳು ಆಗುತ್ತೋ ಇಲ್ಲವೋ ದ್ವಂದ್ವವಾದಂತಹ ಯೋಚನೆಗಳು ನಿಮ್ಮ ಮನಸ್ಸಿನಲ್ಲಿ ಕಂಡುಬರುತ್ತವೆ. ಕೆಲವರಿಗೆ ಆಸ್ತಿವಿಚಾರಕ್ಕೆ ಸಂಬಂಧಪಟ್ಟಂತೆ ಕಲಹಗಳು ಕಂಡುಬರುತ್ತವೆ ಹಾಗಾಗಿ ಅದನ್ನು ಚಾಣಾಕ್ಷತನದಿಂದ ಸರಿಮಾಡಿಕೊಳ್ಳಿ. ವಾಹನದಲ್ಲಿ ಎಚ್ಚರಿಕೆ ಇರಲಿ, ಆದಷ್ಟು ಕುಟುಂಬದಲ್ಲಿ ಶಾಂತಿಯ ವಾತಾವರಣ ಸೃಷ್ಠಿ ಮಾಡಿ. Kanya Rashi

ನರಗಳಿಗೆ ಸಂಬಂಧಪಟ್ಟಂತಹ ಸಮಸ್ಯೆಗಳು ಬರುವ ಸಾಧ್ಯತೆ ಇರುತ್ತದೆ. ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡಿ. ದುಷ್ಟಜನರ ಸಹವಾಸ ಮತ್ತು ಕೆಟ್ಟ ಚಟಗಳಿಂದ ಹೊರಬರುವ ಪ್ರಯತ್ನ ಮಾಡಿರಿ. ಸಾಧ್ಯವಾದರೇ ರಾಹುಕೇತುಗಳ ಅಥವಾ ನವಗ್ರಹಗಳ ಶಾಂತಿಯನ್ನು ಮಾಡಿಸಿ. ಮೃತ್ಯುಂಜಯನ ಮಂತ್ರವನ್ನು ಪಠಣ ಮಾಡಿಕೊಳ್ಳಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಜಯದುರ್ಗಾ ಹೋಮವನ್ನು ಮಾಡಿಸಲು ಪ್ರಯತ್ನಿಸಿ. ಪ್ರತೀ ಸೋಮವಾರ ಶಿವನಿಗೆ ರುದ್ರಾಭಿಷೇಕ ಮಾಡಿರಿ. ನಿಮ್ಮ ಮನೆಯ ಸುತ್ತಮುತ್ತ ಪಶುಪ್ರಾಣಿಗಳಿಗೆ ಆಹಾರವನ್ನು ನೀಡಿರಿ.

Leave A Reply

Your email address will not be published.