Ultimate magazine theme for WordPress.

Karka Rashi ಕಟಕ ರಾಶಿಯ ಮಾಸ ಭವಿಷ್ಯ

0 6,425

Karka Rashi Bhavishya January 2024 ಜನವರಿ ತಿಂಗಳ ಕಟಕ ರಾಶಿಯ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಹೊಸ ವರ್ಷದ ತಿಂಗಳಿನಲ್ಲಿ ಏನೆಲ್ಲಾ ಸವಾಲುಗಳಿವೆ? ಏನೆಲ್ಲಾ ಲಾಭಗಳಿವೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಕಟಕ ರಾಶಿಯ ಅದೃಷ್ಟದ ದೇವರು ಶಿವ, ಅದೃಷ್ಟದ ಸಂಖ್ಯೆ 3,7,1 ಹಾಗೂ 4 ಆಗಿದೆ. ಅದೃಷ್ಟದ ದಿನಾಂಕ 2,11,20 ಹಾಗೂ 29 ಆಗಿದೆ. ನಿಮ್ಮ ರಾಶಿಯ ರಾಶ್ಯಾಧಿಪತಿ ಚಂದ್ರ ರಾಶಿಯ ಅಧಿಪತಿಯಾಗಿದ್ದಾನೆ. ಬಿಳಿ ಮತ್ತು ಕೆಂಪು ಅದೃಷ್ಟದ ಬಣ್ಣವಾಗಿದೆ.

ಸೋಮವಾರ ಮತ್ತು ಭಾನುವಾರ ಅದೃಷ್ಟದ ದಿನಗಳಾಗಿರುತ್ತವೆ. ಮಿತ್ರ ರಾಶಿಗಳು ವೃಶ್ಚಿಕ, ಮೀನ, ತುಲಾರಾಶಿಗಳು. ಮೇಷ, ಸಿಂಹ, ಧನು, ಮಿಥುನ ರಾಶಿಗಳು ನಿಮಗೆ ಶತೃರಾಶಿಗಳಾಗಿವೆ. ಕಟಕರಾಶಿಯವರು ವ್ಯವಹಾರದಲ್ಲಿ ಜ್ಞಾನಿಗಳು, ಚುರುಕಾಗಿರುವ ವ್ಯಕ್ತಿತ್ವವನ್ನ ಹೊಂದಿರುವಂತಹವರು. ಯಾರಿಗೇ ನೋವಾದರೂ ಅವರಿಗೆ ಸ್ಪಂದಿಸುವ ಗುಣವನ್ನು ಹೊಂದಿರುತ್ತಾರೆ. ಕಟಕ ರಾಶಿಯವರಿಗೆ ಜನವರಿ ತಿಂಗಳಿನಲ್ಲಿ ಏನೆಲ್ಲಾ ಫಲಗಳು ಸಿಗುತ್ತಿವೆ ಎಂದರೆ ಈ ತಿಂಗಳಿನಲ್ಲಿ ಏನೇ ಸಮಸ್ಯೆ, Karka Rashi

ಸವಾಲುಗಳು ಇದ್ದರೂ ಅದನ್ನು ಎದುರಿಸುವಂತಹ ವ್ಯಕ್ತಿಗಳು ಕಟಕರಾಶಿಯವರಾಗಿರುತ್ತಾರೆ. ಏಕೆಂದರೆ ಕಟಕರಾಶಿಯವರು ತೆಗೆದುಕೊಳ್ಳುವ ತೀರ್ಮಾನದ ಮೇಲೆ ಯಶಸ್ಸು ಅವಲಂಬಿತವಾಗಿರುತ್ತದೆ. ದುಡುಕಿನಿಂದ ಬಹಳಷ್ಟು ಕಷ್ಟಗಳಿಗೆ ಸಿಲುಕಿಕೊಳ್ಳುತ್ತೀರಿ ಆದ್ದರಿಂದ ಸೂಕ್ತವಾದ ಮಾರ್ಗದರ್ಶನವನ್ನು ತೆಗೆದುಕೊಂಡು ಮುಂದುವರೆಯಿರಿ. ಈ ತಿಂಗಳಿನಲ್ಲಿ ಬೆಲೆ ಬಾಳುವ ವಸ್ತುವನ್ನು ಖರೀದಿ ಮಾಡಲು ಯೋಜನೆ ಮಾಡಿಕೊಂಡಿದ್ದರೇ ನಿಮ್ಮ ಆರ್ಥಿಕ ಸ್ಥಿತಿಗತಿಗಳನ್ನು ಯೋಚನೆ ಮಾಡಿಕೊಂಡು

ತೀರ್ಮಾನ ತೆಗೆದುಕೊಳ್ಳುವಂತದ್ದು ಒಳ್ಳೆಯದು. ವಿದ್ಯಾರ್ಥಿಗಳಿಗೆ ಈ ತಿಂಗಳಿನಲ್ಲಿ ಎಷ್ಟೇ ಓದಿದರೂ ನೆನಪಿನಲ್ಲಿ ಇರುವುದಿಲ್ಲ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಂದುಕೊಂಡಂತೆ ಫಲಿತಾಂಶ ಬರುವುದಿಲ್ಲ. ನೀವು ಹೆಚ್ಚಿನ ಪರಿಶ್ರಮವನ್ನು ಹಾಕಿದರೇ ಮಾತ್ರ ನೀವು ಅಂದುಕೊಂಡಿದಂತಹ ಫಲಿತಾಂಶ ಸಿಗುತ್ತದೆ. ಮದುವೆ ವಿಚಾರದಲ್ಲಿ ಸ್ವಲ್ಪ ವಿಳಂಬವಾಗುತ್ತದೆ. ಸರ್ಕಾರಿ ಮತ್ತು ಅರೆಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮತ್ತು ವಕೀಲರಿಗೆ, ಪೋಲೀಸ್ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಆದಾಯವನ್ನು Karka Rashi

ನಿರೀಕ್ಷೆ ಮಾಡಬಹುದು. ಯಾವುದೇ ವ್ಯಾಪಾರ ವ್ಯವಹಾರ ಮಾಡಿದರೂ ಯಶಸ್ಸು ಸಿಗುತ್ತದೆ. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಯಾವುದೋ ಲೇವಾದೇವಿ ಮಾಡುತ್ತಿದ್ದರೇ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಒಳ್ಳೆಯ ಫಲಗಳು ಸಿಗುವ ನಿರೀಕ್ಷೆಯಲ್ಲಿದೆ. ವಿಶೇಷವಾಗಿ ರಾಜಕಾರಣಿಗಳಿಗೆ, ಸಾರ್ವಜನಿಕ ಸೇವೆ ಮಾಡುತ್ತಿರುವವರಿಗೆ, ಸಂಘಸಂಸ್ಥೆಗಳನ್ನು ನಡೆಸುತ್ತಿರುವವರಿಗೆ

ಒಳ್ಳೆಯ ಅವಕಾಶಗಳಿವೆ. ಹಣಕಾಸಿನ ವಹಿವಾಟು ನಡೆಸುವವರು ಬಹಳಷ್ಟು ಎಚ್ಚರಿಕೆಯನ್ನು ವಹಿಸಬೇಕು. ಆರೋಗ್ಯ ವಿಚಾರದಲ್ಲಿ ಸಣ್ಣ ಪುಟ್ಟ ಸಮಸ್ಯೆ ಬಂದರೂ ಅದನ್ನು ನಿರ್ಲಕ್ಷ್ಯ ಮಾಡಬಾರದು. ಆರೋಗ್ಯ ವಿಷಯದಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸಬೇಕಾಗುತ್ತದೆ. ಹೋಟೆಲ್, ಬೇಕರಿ ಕೆಲಸ ಮಾಡುತ್ತಿರುವವರಿಗೆ ಕಾಂಪಿಟೇಷನ್ ಹೆಚ್ಚು ಇರುತ್ತದೆ. ಶಾಲಾ-ಕಾಲೇಜು ನಡೆಸುತ್ತಿರುವವರಿಗೆ ಒಳ್ಳೆಯ ಮಟ್ಟದಲ್ಲಿ ಸಾಗುತ್ತದೆ. ವೈದ್ಯರಿಗೆ ಒಳ್ಳೆಯ ಗೌರವ ಸಿಗುತ್ತದೆ. Karka Rashi

ಕೆಲವು ವಿದ್ಯಾರ್ಥಿಗಳಿಗೆ ಸಂಶೋಧನೆ ಮಾಡಲು ಮತ್ತು ವ್ಯಾಪಾರಿಗಳಿಗೆ ವಿದೇಶಕ್ಕೆ ಹೋಗುವುದು ಕಂಡುಬರುತ್ತಿದೆ. ಕಟಕರಾಶಿಯವರು ಏನೇ ಉದ್ಯೋಗ ಮಾಡಿದರೂ ಚೆನ್ನಾಗಿದೆ ಆದರೇ ಚಾಲೆಂಜ್ ಗಳ ನಡುವೆ ಏರಿಳಿತಗಳು ಇವೆ. ಅದನ್ನು ಸಮಾಧಾನವಾಗಿ ನಿಭಾಯಿಸಿಕೊಂಡು ಹೋದರೇ ಖಂಡಿತವಾಗಿ ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಯಶಸ್ಸನ್ನು ಪಡೆದುಕೊಳ್ಳಬಹುದು.

ಒಳ್ಳೆಯ ಫಲಗಳು ನಿಮಗೆ ಸಿಗಬೇಕಾದರೇ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳಬೇಕು. ಗಣಪತಿಗೆ ಗರಿಕೆಯನ್ನು ಅರ್ಪಿಸುವುದು, ಸೂರ್ಯನಾರಾಯಣನಿಗೆ ಅರ್ಗ್ಯವನ್ನು ಕೊಡುವುದರಿಂದ ನಿಮಗೆ ಅನುಕೂಲಕರವಾದ ಫಲಗಳು ಸಿಗುತ್ತವೆ. ಆಂಜನೇಯಸ್ವಾಮಿಯನ್ನು ಪೂಜಿಸಿ, ಮನೆಯಲ್ಲಿ ಕಾಮಧೇನುವಿನ ಫೋಟೋವನ್ನು ಹಾಕಿರಿ ಇದರಿಂದ ಅದ್ಭುತವಾದ ಫಲಗಳು ಸಿಗುತ್ತವೆ. Karka Rashi

Leave A Reply

Your email address will not be published.