Ultimate magazine theme for WordPress.

Nitya Pushpa ನಿತ್ಯ ಕಣಗಿಲೆ ( ಸದಾ ಪುಷ್ಪ

0 451

Nitya Pushpa health tips ಬಟ್ಟಲು ಪುಷ್ಪ ಅಥವಾ ನಿತ್ಯ ಕಣಗಿಲೆ ಗಿಡದ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಈ ಗಿಡದ ಹೂ, ಎಲೆ, ಕಾಂಡವು ಆರೋಗ್ಯದ ಭಂಡಾರವನ್ನೇ ಒಳಗೊಂಡಿದೆ. ಇವು ಅದ್ಭುತವಾದ ಕ್ಷಾರಗುಣಗಳನ್ನು ಹೊಂದಿರುವಂತಹ ಸಸ್ಯ. ಆಮ್ಲಗುಣಗಳಿಂದ ದೇಹಕ್ಕೆ ಏನೆಲ್ಲಾ ಹಾನಿಯಾಗುತ್ತವೆಯೋ ಅಂತಹ ಸಮಸ್ಯೆಗಳಿಂದ ಈ ಗಿಡವು ನಮ್ಮನ್ನು ರಕ್ಷಣೆ ಮಾಡುತ್ತದೆ.

ಮಧುಮೇಹದಿಂದ ಬರುವ ಹಲವು ಸಮಸ್ಯೆಗಳು ಈ ಸಸ್ಯದಿಂದ ಗುಣವಾಗುತ್ತದೆ. ಮಧುಮೇಹದಿಂದ ಬಾಯಾರಿಕೆ ಹೆಚ್ಚಾಗುವುದು, ಮೂತ್ರವು ಪದೇ ಪದೇ ಹೋಗುವುದು, ತುಂಬಾ ಹಸಿವು ಆಗುವುದು ಈ ರೀತಿಯ ಸಮಸ್ಯೆಯು ಮಧುಮೇಹದಿಂದ ಉಂಟಾಗುತ್ತದೆ. ಈ ಸಸ್ಯವನ್ನು ಬಳಸುವುದರಿಂದ ಹೊಟ್ಟೆಯಲ್ಲಿ ಕ್ಷಾರೀಯತೆ ಮತ್ತು ಆಮ್ಲೀಯತೆಯು ಸಮತೋಲನದಲ್ಲಿರುತ್ತದೆ. Nitya Pushpa

ಕೊಬ್ಬು ಅಥವಾ ಕೊಲೆಸ್ಟ್ರಾಲ್ ಹೆಚ್ಚು ಇರುವವರು ಈ ಸಸ್ಯವನ್ನು ಬಳಸಬಹುದು. ಈ ಸಸ್ಯವನ್ನು ಹೇಗೆ ಬಳಸಬೇಕೆಂದರೆ ಈ ಗಿಡದ ಎಲೆ ಅಥವಾ ಹೂವುಗಳನ್ನು ಚೆನ್ನಾಗಿ ಅರೆಯಬೇಕು. ಇದರ ಪ್ರಮಾಣವು ಎರಡು ಸ್ಪೂನ್ ನಷ್ಟು ಆಗುವವರೆಗೆ ಅರೆಯಬೇಕು ನಂತರ ಮೂರು ಗ್ಲಾಸ್ ನೀರಿಗೆ ಹಾಕಿ ಕುದಿಸಬೇಕು. ಅಂದರೆ 600 ಎಂಎಲ್ ಅಷ್ಟು ನೀರು ತೆಗೆದುಕೊಳ್ಳಬೇಕು ಅದು ಚೆನ್ನಾಗಿ ಕುದ್ದು 300 ಎಂಎಲ್ ಆಗುತ್ತದೆ. ಈ 300 ಎಂಎಲ್ ಅನ್ನು ಬೆಳಿಗ್ಗೆ 100 ಎಂಎಲ್, ಮಧ್ಯಾಹ್ನ 100 ಎಂಎಲ್, Nitya Pushpa

ರಾತ್ರಿ 100 ಎಂಎಲ್ ನಷ್ಟು ತೆಗೆದುಕೊಳ್ಳಬೇಕು. ಈ ರೀತಿಯಾಗಿ 9 ದಿನಗಳವರೆಗೆ ಶೋಧಿಸಿಕೊಂಡು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು. ಕ್ಯಾನ್ಸರ್ ಸಮಸ್ಯೆ ಇರುವವರು ಐದು ಆರು ತಿಂಗಳವರೆಗೆ ಇದನ್ನು ದಿನಕ್ಕೆ ಒಂದು ಬಾರಿ ಸೇವನೆ ಮಾಡಿದರೇ ಸಾಕು. ಇದರಲ್ಲಿ ರೆಡ್ ಮತ್ತು ಬಿಳಿ ಕಲರ್ ಗಿಡವಿರುತ್ತದೆ. ರೆಡ್ ಕಲರ್ ಗಿಂತ ಬಿಳಿ ಕಲರ್ ನ ಗಿಡವು ಹೆಚ್ಚು ಔಷಧೀಯ ಗುಣಗಳನ್ನು ಹೊಂದಿರುತ್ತದೆ. ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಎರಡು ಮೂರು ಎಲೆಗಳನ್ನು ಬೇಕಾದರೂ ಸೇವನೆ ಮಾಡಬಹುದು.

ಕೆಲವರಿಗೆ ಹುಳುಕಡ್ಡಿ, ಮೈಯಲ್ಲಿ ಪಿತ್ತದ ಗಂದೆಗಳು ಮತ್ತು ಬೆವರುಸಾಲೆ ಆಗುತ್ತಿರುತ್ತದೆ ಅಂತಹವರು ಈ ಎಲೆಯನ್ನು ಚೆನ್ನಾಗಿ ಅರೆದು ಕೊಬ್ಬರಿ ಎಣ್ಣೆಯ ಜೊತೆ ಸೇರಿಸಿ ಮೈಗೆಲ್ಲಾ ಲೇಪನ ಮಾಡಿ ಒಂದು ಗಂಟೆ ಬಿಟ್ಟು ಉಗುರುಬೆಚ್ಚಗಿನ ನೀರು ಅಥವಾ ತಣ್ಣೀರಿನ ಸ್ನಾನ ಮಾಡಿದರೇ ಚರ್ಮದ ಸಮಸ್ಯೆಗಳು ನಿವಾರಣೆಯಾಗುತ್ತದೆ. ಕೂದಲು ಉದುರುವ ಸಮಸ್ಯೆಗೆ ಈ ಎಲೆ ಮತ್ತು ಹೂವನ್ನು ಪೇಸ್ಟ್ ಮಾಡಿ ಕೂದಲಿಗೆ ಹಚ್ಚಿ,

ಒಂದು ಗಂಟೆಯ ನಂತರ ಸೀಗೆಕಾಯಿ, ಶ್ಯಾಂಪೂ ಬಳಸದೇ ಹಾಗೆಯೇ ತಲೆಯನ್ನು ತೊಳೆಯಬೇಕು, ಕೂದಲು ಚೆನ್ನಾಗಿ ಒಣಗಿದ ಮೇಲೆ ಒಂದು ಗಂಟೆಯ ನಂತರ ಶುದ್ಧ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಳ್ಳಬೇಕು, ಇದರಿಂದ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುತ್ತದೆ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದಲ್ಲಿರುವ ಮೊಡವೆ ಮತ್ತು ಕಪ್ಪುಕಲೆಗಳು ನಿವಾರಣೆಯಾಗುತ್ತವೆ. Nitya Pushpa

Leave A Reply

Your email address will not be published.