Ultimate magazine theme for WordPress.

Tulasi ಒಳ್ಳೆಯ ಸಮಯ ಆರಂಭ ಆಗುವ ಮುನ್ನ 3 ಸೂಚನೆ

0 343

Tulasi gives 3 good signs good time ಸ್ನೇಹಿತರೇ ನಿಮಗೆ ಒಳ್ಳೆಯ ಸಮಯ ಪ್ರಾರಂಭವಾಗುವ ಮೊದಲು ತುಳಸಿ ಈ ಮೂರು ಸೂಚನೆಯನ್ನು ನೀಡುತ್ತದೆ. ಹಿಂಧೂ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷ ಮಹತ್ವವಿದೆ. ತುಳಸಿ ಗಿಡಕ್ಕೆ ಪೂಜೆ ಪುನಸ್ಕಾರಗಳು ಸಲ್ಲುತ್ತದೆ. ತುಳಸಿ ದೇವಿಯನ್ನು ಲಕ್ಷ್ಮಿದೇವಿಯ ರೂಪವೆಂದು ಹೇಳಲಾಗುತ್ತದೆ. ತುಳಸಿ ಗಿಡ ಇರುವ ಮನೆಯಲ್ಲಿ ದೇವಾನುದೇವತೆಗಳು ವಾಸಿಸುತ್ತಾರೆ.

ಭಗವಾನ್ ವಿಷ್ಣುವಿನ ಪೂಜೆಯಲ್ಲಿ ತುಳಸಿಯನ್ನು ಸೇರಿಸದಿದ್ದರೇ ಪೂಜೆಯು ಪರಿಪೂರ್ಣವಾಗುವುದಿಲ್ಲ ಎಂಬ ನಂಬಿಕೆಯೂ ಇದೆ. ತುಳಸಿ ಗಿಡವು ಮುಂಬರುವ ಅಹಿತಕರ ಘಟನೆಗಳನ್ನು ತಿಳಿಸುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ತುಳಸಿ ಗಿಡವು ನಮ್ಮ ಮನೆಯ ಎಲ್ಲಾ ದೋಷಗಳನ್ನು ಹೋಗಲಾಡಿಸುತ್ತದೆ. ನಿಮ್ಮ ಮನೆಯ ಆರೋಗ್ಯ, ಸಂಮೃದ್ಧಿ ಎರಡು ತುಳಸಿ ಗಿಡದ ಮೇಲೆ ನಿಂತಿರುತ್ತದೆ. Tulasi

ನಿಮ್ಮ ಮನೆಯ ತುಳಸಿ ಗಿಡವು ಅಕಸ್ಮಾತ್ ಒಣಗಿ ಹೋದರೇ ಅದು ನಿಮ್ಮ ಮನೆಯಲ್ಲಿ ಸಮಸ್ಯೆಗಳು ಆರಂಭವಾಗುವ ಸೂಚನೆಯಾಗಿದೆ ಮತ್ತು ವಿಷ್ಣುವಿನ ಕೃಪೆ ನಿಮ್ಮ ಮನೆಯ ಮೇಲೆ ಇಲ್ಲವೆಂದು ತಿಳಿಯುತ್ತದೆ. ಇದಕ್ಕೆ ಜ್ಯೋತಿಷ್ಯದ ಸಹಾಯದಿಂದ ಪರಿಹಾರವನ್ನು ತೆಗೆದುಕೊಳ್ಳಿ. ತುಳಸಿ ವಾಸಿಸುವ ಮನೆಗೆ ಏನಾದರೂ ಕಷ್ಟಗಳು ಎದುರಾದರೇ ಆ ತಾಪವನ್ನು ಮೊದಲು ತುಳಸಿ ತನ್ನತ್ತ ಸೆಳೆದುಕೊಳ್ಳುತ್ತದೆ, ಹಾಗಾಗಿ ತುಳಸಿ ಇದ್ದಕ್ಕಿದ್ದಾಗೆ ತುಳಸಿ ಒಣಗಿ ಹೋಗುತ್ತದೆ ಇದರಿಂದ ಮನೆಗೆ ಅಶುಭ ಸಂಭವಿಸಲಿದೆ ಎಂದು ಅರ್ಥ.

ಹೊಸ ತುಳಸಿ ಗಿಡ ನೆಟ್ಟರೇ ಒಣಗಿ ಹೋದರೇ ಮನೆಯಲ್ಲಿ ಪಿತೃದೋಷವಿದೆ ಎಂದು ಅರ್ಥ. ಪಿತೃದೋಷದಿಂದಾಗಿ ಮನೆಯಲ್ಲಿ ಹಾಗಾಗ ಜಗಳಗಳು ನಡೆಯುತ್ತವೆ. ಆ ಸಮಯದಲ್ಲಿ ಪಿತೃದೋಷವನ್ನು ಜ್ಯೋತಿಷಿಗಳ ಸಹಾಯದಿಂದ ಪರಿಹಾರ ಮಾಡಿಕೊಳ್ಳಬೇಕು. ನಿಮ್ಮ ಮನೆಯಲ್ಲಿರುವ ತುಳಸಿ ಗಿಡವು ಹಸಿರು ಬಣ್ಣಕ್ಕೆ ತಿರುಗಿದರೆ ಅಥವಾ ಹೆಚ್ಚು ದಟ್ಟವಾಗಿ ತಿರುಗಿದರೇ ಅದನ್ನು ಮಂಗಳಕರವೆಂದು ಪರಿಗಣಿಸಬೇಕು. Tulasi

ತುಳಸಿ ಗಿಡವು ಹಚ್ಚಹಸಿರಾಗಿದ್ದರೇ ಮತ್ತು ಹೂವುಗಳು ಬಿಡಲು ಪ್ರಾರಂಭಿಸಿದರೇ ಮನೆಗೆ ಸಂತೋಷ, ಸಂಮೃದ್ಧಿ ಬರಲಿದೆ. ಈ ಸೂಚನೆಗಳು ಕಾಣಿಸಿದರೇ ಮನೆಯಲ್ಲಿ ಭಗವಾನ್ ವಿಷ್ಣು ಮತ್ತು ತಾಯಿ ಲಕ್ಷ್ಮಿದೇವಿಯ ಅನುಗ್ರಹ ನಿಮ್ಮ ಮೇಲೆ ಇದೆ ಎಂದು ಅರ್ಥ. ತುಳಸಿ ಗಿಡಕ್ಕೆ ನೀರು ಎರೆಯದಿದ್ದರೂ ಹಚ್ಚಹಸಿರಾಗಿದ್ದರೇ ಆ ಮನೆಯವರಿಗೆಲ್ಲ ಅದೃಷ್ಟ ಕೂಡಿ ಬರುತ್ತದೆಯಂತೆ. ತುಳಸಿ ಗಿಡದಲ್ಲಿ ಮತ್ತೊಂದು ಸಸಿ ಅದರ ಪಕ್ಕದಲ್ಲಿ ಬೆಳೆದರೆ ಆ ಮನೆಯ ಸದಸ್ಯರು ತಾವು ಅಂದುಕೊಂಡಿದ್ದನ್ನು ಸಾಧಿಸುತ್ತಾರಂತೆ. ಹಾಗಾಗಿ ತುಳಸಿ ಗಿಡ ಹಚ್ಚಹಸಿರಾಗಿರುವ ಮನೆಯಲ್ಲಿ ಯಾವಾಗಲೂ ಸದಾ ಸಂತೋಷ ತುಂಬಿರುತ್ತದೆ.

ತುಳಸಿ ಗಿಡದ ಎಲೆಗಳ ಬಣ್ಣ ಒಮ್ಮೆ ಬದಲಾದರೇ ಆ ಮನೆಯ ಸದಸ್ಯರ ಪೈಕಿ ಯಾರಾದರೂ ಒಬ್ಬರೂ ಮಾಯಾಮಾಟದಂತಹ ಪ್ರಯೋಗಕ್ಕೆ ಬಲಿಯಾಗುತ್ತಾರೆ. ಪ್ರತಿದಿನ ನೀರು ಹಾಕಿ ತುಳಸಿ ಗಿಡವನ್ನು ಪೋಷಣೆ ಮಾಡಿದರೂ ತುಳಸಿ ಗಿಡದ ಎಲೆಗಳು ಒಣಗಿ ಹೋಗುತ್ತಿದ್ದರೇ ಆ ಮನೆಯ ಯಜಮಾನ ಅನಾರೋಗ್ಯ ಪೀಡಿತನಾಗುತ್ತಾನಂತೆ, ಯಾವುದೇ ಕಾರಣದಿಂದ ತುಳಸಿ ಗಿಡ ಒಣಗುತ್ತಿದ್ದರೇ ಚೆನ್ನಾಗಿ ನೀರು ಹಾಕಿ ನೋಡಿಕೊಳ್ಳಬೇಕು. Tulasi

ಇನ್ನು ಯಾರ ಮನೆಯ ಮುಂದೆ ತುಳಸಿ ಗಿಡ ಇರುತ್ತದೆಯೋ ಯಾವುದೇ ರೀತಿಯ ದಾರಿದ್ರ್ಯ ಹಾಗೂ ದುಷ್ಟಶಕ್ತಿಗಳು ಬರುವುದಿಲ್ಲ ಎಂದು ಹೇಳಲಾಗುತ್ತದೆ. ಪ್ರತಿದಿನ ತುಳಸಿ ಗಿಡವನ್ನ ಪೂಜೆ ಮಾಡುವವರು ಏಳು ಜನ್ಮದವರೆವಿಗೂ ಸೌಭಾಗ್ಯವತಿಯಾಗಿರುತ್ತಾರೆ. ಹಾಗೆಯೇ ಯಾರ ಮನೆಯಲ್ಲಿ ತುಳಸಿ ಗಿಡವನ್ನು ಪೂಜೆ ಮಾಡುತ್ತಾರೋ ಅವರ ಮನೆಯಲ್ಲಿ ಜಗಳ, ಕದನಗಳು ಇರುವುದಿಲ್ಲ. ಅಂತಹ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ.
ಮನೆಯಲ್ಲಿ ಯಾವುದೇ ಸಮಸ್ಯೆ ಇದ್ದರೂ ಪ್ರತಿ ಅಮಾವಾಸ್ಯೆಯ ದಿನ

ಅಥವಾ ಪ್ರತೀ ಶುಕ್ರವಾರದ ದಿನ ಸಂಜೆ ತುಪ್ಪದ ದೀಪವನ್ನು ಹಚ್ಚಬೇಕು. ತುಳಸಿ ಗಿಡಕ್ಕೆ ಪೂಜೆ ಮಾಡಿದ ನಂತರ 11 ಸುತ್ತು ಪ್ರದಕ್ಷಿಣೆ ಹಾಕುವುದರಿಂದ ಮನೆಯಲ್ಲಿ ಲಕ್ಷ್ಮಿ ಕಟಾಕ್ಷ ಪ್ರಾಪ್ತಿಯಾಗುತ್ತದೆ ಹಾಗೆಯೇ ಮನೆಯಲ್ಲಿ ಯಾವುದೇ ಸಮಸ್ಯೆ ಇದ್ದರೂ ಕೂಡ ನಿವಾರಣೆಯಾಗುತ್ತದೆ. ತುಳಸಿ ಕಟ್ಟೆಗೆ ಪೂಜೆ ಮಾಡುವ ಸಂದರ್ಭದಲ್ಲಿ ದೇವರ ಮನೆಯಲ್ಲಿ ಒಂದು ರೂಪಾಯಿಯ ನಾಣ್ಯವನ್ನು ಇಟ್ಟು ಪೂಜೆ ಮಾಡಿ ನಂತರ ತುಳಸಿ ಕಟ್ಟೆ ಇರುವ ಮಣ್ಣಿನಲ್ಲಿ ಹಾಕಿ ಮುಚ್ಚುವುದರಿಂದ ಮನೆಯಲ್ಲಿ ಎಷ್ಟೇ ಆರ್ಥಿಕ ಸಮಸ್ಯೆ ಇದ್ದರೂ ಪರಿಹಾರವಾಗುತ್ತದೆ. ಅನಾರೋಗ್ಯದ ಸಮಸ್ಯೆಯಿಂದ ಪ್ರತಿದಿನ ಬಳಲುತ್ತಿದ್ದರೇ ಈ ಸಮಸ್ಯೆಯಿಂದ ಹೊರಬರಲು ಪ್ರತಿದಿನ ತುಳಸಿ ಕಟ್ಟೆಯನ್ನು ಪೂಜೆ ಮಾಡುವುದು ಸೂಕ್ತ. Tulasi
ಒಣಗಿದ ತುಳಸಿ ಗಿಡವನ್ನು ಎಂದಿಗೂ ಮನೆಯಲ್ಲಿ ಇಟ್ಟುಕೊಳ್ಳಬಾರದು. ಇದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಒಣಗಿದ ತುಳಸಿ ಗಿಡವನ್ನು ಪವಿತ್ರ ಜಾಗದಲ್ಲಿ ಅಥವಾ ಬಾವಿಯಲ್ಲಿ ಹಾಕಬಹುದು ನಂತರ ನಿಮ್ಮ ಮನೆಯ ತುಳಸಿ ಕಟ್ಟೆಯಲ್ಲಿ ಹೊಸ ಸಸಿಯನ್ನು ನೆಡಬೇಕು. ಜ್ಯೋತಿಷಿಗಳ ಪ್ರಕಾರ ಬುಧನ ವಕ್ರದೃಷ್ಠಿಯ ಕಾರಣದಿಂದಾಗಿ ತುಳಸಿ ಗಿಡ ಒಣಗುತ್ತದೆ ಏಕೆಂದರೆ ಬುಧ ಗ್ರಹವು ಹಸಿರು ಬಣ್ಣವನ್ನು ಸೂಚಿಸುತ್ತದೆ. ಬುಧನು ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳೆರೆಡನ್ನು ನೀಡುತ್ತಾನೆ.

ಬುಧನ ಪರಿಣಾಮವಾಗಿಯೇ ತುಳಸಿ ಗಿಡದಲ್ಲಿ ಹೂವು ಬಿಡುತ್ತದೆ. ತುಳಸಿ ಗಿಡವು ವಾಸ್ತು ಸಮಸ್ಯೆಯ ಕೆಟ್ಟ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ವಾಸ್ತು ಶಾಸ್ತ್ರ ಪ್ರಕಾರ ಮನೆಯಲ್ಲಿ ತುಳಸಿಯನ್ನು ನೆಡಲು ಉತ್ತರ, ಈಶಾನ್ಯ ಅಥವಾ ಪೂರ್ವ ದಿಕ್ಕನ್ನು ಆರಿಸಿಕೊಳ್ಳಬೇಕು. ಈ ದಿಕ್ಕಿನಲ್ಲಿ ತುಳಸಿಯನ್ನು ನೆಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಪಸರಿಸುತ್ತದೆ. ನೈರುತ್ಯ ದಿಕ್ಕು ಕೂಡ ತುಳಸಿ ನೆಡಲು ಉತ್ತಮ ದಿಕ್ಕಾಗಿದೆ. ದಕ್ಷಿಣ ದಿಕ್ಕಿನಲ್ಲಿ ತುಳಸಿಯನ್ನು ನೆಡಬೇಡಿ ಇದು ಹಾನಿಯನ್ನುಂಟುಮಾಡುತ್ತದೆ.

Leave A Reply

Your email address will not be published.